Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಏಪ್ರಿಲ್‌ನಲ್ಲಿ ಬುಧ-ಶುಕ್ರ ಯುತಿ: ಈ 5 ರಾಶಿಯವರು ಸ್ವಲ್ಪ ಜಾಗ್ರತೆ
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ದೈಹಿಕ ಸಂತೋಷ ಮತ್ತು ಅನುಕೂಲತೆಯ ಅಂಶ ಎಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಶುಕ್ರವು ಮೇಷ ರಾಶಿಯಲ್ಲಿ ಸಾಗುತ್ತಿದ್ದು ಏಪ್ರಿಲ್ ಆರಂಭದ ವಾರದಲ್ಲೇ ವೃಷಭ ರಾಶಿಗೆ ಪ್ರವೇಶ ಪಡೆಯಲಿದ್ದಾನೆ. ಏಪ್ರಿಲ್‌ನಲ್ಲಿ ಅನೇಕ ಗ್ರಹಗಳ ರಾಶಿಯು ಬದಲಾಗಲಿದೆ.
ಈ ಸಮಯದಲ್ಲಿ ಈ ಐದು ರಾಶಿಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಲಿದೆ. ಏಕೆಂದರೆ ಈ ತಿಂಗಳಲ್ಲಿ ಸಿಂಹ ರಾಶಿಯ ಅಧಿಪತಿಯಾದ ಸೂರ್ಯನೂ ರಾಹುವಿನ ಜೊತೆಗೆ ಮೇಷ ರಾಶಿಯಲ್ಲಿರುತ್ತಾನೆ. ಹಾಗಾದ್ರೆ ಏಪ್ರಿಲ್ ನಲ್ಲಿ ಗ್ರಹಗಳ ಬದಲಾವಣೆಯಿಂದ ಯಾವ ರಾಶಿಚಕ್ರದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಅನ್ನೋದನ್ನ ತಿಳಿಯೋಣ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಏಪ್ರಿಲ್ ತಿಂಗಳು ಮಧ್ಯಮ ಫಲ ನೀಡುತ್ತೆ ಅಂತಾನೇ ಹೇಳಬಹುದು. ಈ ಸಮಯದಲ್ಲಿ ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಕೆಲವು ಗುಪ್ತ ಶತ್ರುಗಳಿಂದಾಗಿ ನಿಮ್ಮ ಕಾರ್ಯಗಳಿಗೆ ತೊಂದರೆ ಉಂಟಾಗಬಹುದು. ಈ ವೇಳೆ ನಿಮ್ಮ ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಹೂಡಿಕೆ ಮಾಡೋದಕ್ಕೆ ಇದು ಉತ್ತಮ ಸಮಯವಲ್ಲ. ಆರ್ಥಿಕ ಜೀವನದಲ್ಲಿ ನೀವು ಏರಿಳಿತಗಳನ್ನು ಕಾಣುತ್ತೀರಿ. ಹೀಗಾಗಿ ಖರ್ಚಿನ ಮೇಲೆ ನಿಗಾ ಇದ್ದರೆ ಒಳ್ಳೆಯದು.
ತುಲಾ ರಾಶಿ
ತುಲಾ ರಾಶಿಯವರಿಗೆ ಏಪ್ರಿಲ್ ತಿಂಗಳು ಫಲಪ್ರದವಾಗಿಲ್ಲ. ಒಡಹುಟ್ಟಿದವರೊಂದಿಗೆ ಕಲಹ ಉಂಟಾಗುತ್ತದೆ. ಆಗೋಗ್ಯದ ಕಡೆಗೆ ಗಮನವಿರಲಿ. ಉದ್ಯೋಗಿಗಳಿಗೆ ಬಡ್ತಿ ಸಿಗೋದು ಮತ್ತು ಸಂಬಳದಲ್ಲಿ ವಿಳಂಬವಾಗಬಹುದು. ಇನ್ನೂ ನಿಮ್ಮ ಆತ್ತೆ ಜೊತೆಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುತ್ತೀರಿ. ಆದರೆ ಯಾವುದೇ ಕಾರಣಕ್ಕೂ ವಾದಿಸಲು ಹೋಗಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಏಪ್ರಿಲ್ ತಿಂಗಳಲ್ಲಿ ಪ್ರತಿಕೂಲ ಫಲಿತಾಂಶಗಳನ್ನು ಎದುರಿಸಬೇಕಾಗಬಹುದು. ನೀವು ವೃತ್ತಿಪರ ಜೀವನದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಪ್ರಯಾಣ ಮಾಡುವಾಗ ಜಾಗರೂಕರಾಗಿರಿ ಮತ್ತು ಹಣದ ಬಗ್ಗೆ ಎಚ್ಚರಿಕೆಯಿಂದಿರಿ. ಈ ಸಮಯದಲ್ಲಿ ಹಣದ ವಹಿವಾಟು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ವೃಶ್ಚಿಕ ರಾಶಿಯವರು ತಮ್ಮ ಪೋಷಕರ ಆರೋಗ್ಯದ ಬಗ್ಗೆ ಕೂಡ ಕಾಳಜಿ ಮಾಡೋದು ಮುಖ್ಯ. ಇನ್ನೂ ನಿಮ್ಮ ಸಂಗಾತಿಯೊಂದಿಗಿನ ತಪ್ಪು ತಿಳುವಳಿಕೆಯು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ಆದ್ದರಿಂದ ಮಾತಿನ ಮೂಲಕ ಎಲ್ಲವನ್ನೂ ಬಗೆ ಹರಿಸಿದರೆ ಉತ್ತಮ.
ಧನು ರಾಶಿ
ಧನು ರಾಶಿಯವರಿಗೆ ಏಪ್ರಿಲ್ ತಿಂಗಳು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಉದ್ಯೋಗವನ್ನು ಹುಡುಕುತ್ತಿರುವ ಯುವಕರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಏಕಾಗ್ರತೆ ವಹಿಸದೇ ಹೋದರೆ ಭವಿಷ್ಯದಲ್ಲಿ ಅಪಾಯ ಎದುರಾಗುತ್ತದೆ. ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗುತ್ತದೆ. ಎಚ್ಚರಿಕೆಯಿಂದಿದ್ದರೆ ಒಳ್ಳೆಯದು.
ಮಕರ ರಾಶಿ
ಮಕರ ರಾಶಿಯವರು ಏಪ್ರಿಲ್ ತಿಂಗಳಲ್ಲಿ ಅಷ್ಟೊಂದು ಫಲ ಪ್ರದವಾಗಿಲ್ಲ. ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದ ಬಗ್ಗೆ ಯಾರ ಜೊತೆಗೆ ಚರ್ಚಿಸೋದಕ್ಕೆ ಹೋಗಬೇಡಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೂ ಈ ಅವಧಿಯಲ್ಲಿ ಉದ್ಯೋಗಿಗಳ ಕಾರ್ಯಕ್ಷಮತೆಯಲ್ಲಿ ಕ್ಷೀಣಿಸಬಹುದು. ಇದರಿಂದ ಅಧಿಕಾರಿಗಳಿಂದ ನಿಂದನೆಗೊಳಗಾಗುವ ಸಾಧ್ಯತೆಗಳಿದೆ.



Click it and Unblock the Notifications


