Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
Budget 2026: ಬಜೆಟ್ ಕುರಿತ ಕೆಲವು ಅಚ್ಚರಿಯ ಮಾಹಿತಿಗಳು ನಿಮಗೆ ಗೊತ್ತಾ?
2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಸಕಲ ಸಿದ್ದತೆಗಳು ನಡೆದಿವೆ. ಫೆಬ್ರವರಿ 1ರ ಭಾನುವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಮಂಡಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಬಜೆಟ್ ಗಾತ್ರ ದಾಖಲೆ ಪ್ರಮಾಣದಲ್ಲಿದೆ ಎನ್ನಲಾಗಿದೆ. ಹಾಗೆ ಆರ್ಥಿಕ ಅಭಿವೃದ್ಧಿಗೆ ಪೂರಕ ಬಜೆಟ್ ಎನ್ನಲಾಗಿದೆ. ಈ ಸಮಯದಲ್ಲಿ ಜನಸಾಮಾನ್ಯರು ಬಜೆಟ್ ಮೂಲಕ ಹಲವು ಅಂಶಗಳ ಮೇಲೆ ಅದರ ಪ್ರಭಾವವನ್ನು ನಿರೀಕ್ಷಿಸಬಹುದು.
ಫೆಬ್ರವರಿ 1 ರಂದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸತತ ಒಂಬತ್ತನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಇದು ಅತ್ಯಂತ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವರು ಎಂಬ ಕೀರ್ತಿ ಪಡೆಯಲಿದ್ದಾರೆ. ಹಾಗೆ ಈ ಬಾರಿ ಕೂಡ ಹಲವು ವಲಯಗಳಿಗೆ ಬರಪೂರ ಕೊಡುಗೆಗಳು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಯಾವೆಲ್ಲಾ ತೆರಿಗೆ ಹೆಚ್ಚಳವಾಗಲಿದೆ? ಯಾವೆಲ್ಲಾ ವಸ್ತು ತೆರಿಗೆ ಮುಕ್ತವಾಗಲಿದೆ? ಯಾರಿಗೆ ಹೊಸ ಟ್ಯಾಕ್ಸ್ ಅನ್ವಯವಾಗುತ್ತಿದೆ ಎಂಬ ಕುರಿತ ಕುತೂಹಲಕ್ಕೆ ಸದ್ಯವೇ ತೆರೆ ಬೀಳಲಿದೆ.

ನಾವಿಂದು ಈ ಬಜೆಟ್ ಕುರಿತಾದ ಕೆಲವು ಅಚ್ಚರಿಯ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಹಾಗೆ ಈ ಬಜೆಟ್ ಮಂಡನೆಗೂ ಮೊದಲು ಇತಿಹಾಸದ ಪುಟ ಸೇರಿರುವ ಹಲವು ಬಜೆಟ್ ವಿಚಾರಗಳ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ.
ಭಾರತದ ಮೊದಲ ಬಜೆಟ್ ಅನ್ನು ಏಪ್ರಿಲ್ 7, 1860 ರಂದು ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಮಂಡಿಸಿದರು. ಸ್ವಾತಂತ್ರ್ಯದ ನಂತರ, ದೇಶದ ಮೊದಲ ವಾರ್ಷಿಕ ಬಜೆಟ್ ಅನ್ನು ಫೆಬ್ರವರಿ 28, 1948 ರಂದು ಅಂದಿನ ಹಣಕಾಸು ಸಚಿವ ಆರ್. ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದರು. 1999 ರ ವರೆಗೆ ಕೇಂದ್ರ ಬಜೆಟ್ ಅನ್ನು ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಘೋಷಿಸಲಾಗುತ್ತಿತ್ತು.
1973-74ರ ಕಾಲದಲ್ಲಿ ಮಂಡಿಸಲಾಗಿದ್ದ ಬಜೆಟ್ ಅನ್ನು ಬ್ಲಾಕ್ ಬಜೆಟ್, ಕಪ್ಪು ಬಜೆಟ್ ಎಂದು ಕರೆಯಲಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಮಂಡಿಸಲಾಗಿದ್ದ ಬಜೆಟ್ ಇದಾಗಿತ್ತು. ಈ ಬಜೆಟ್ ಬೃಹತ್ ಹಣಕಾಸಿನ ಕೊರತೆ ಮತ್ತು ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸುವಂತಹ ದಿಟ್ಟ ಕ್ರಮಗಳನ್ನು ಪ್ರತಿಬಿಂಬಿಸಿತು.
ಹಾಗೆ ಅತೀ ದೊಡ್ಡ ಬಜೆಟ್ ಭಾಷಣ ಮಾಡಿರುವ ಕೀರ್ತಿ ದಿವಂಗತ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಹಣಕಾಸು ಸಚಿವರಾಗಿದ್ದ ಅವರು 1991 ರ ಬಜೆಟ್‌ನಲ್ಲಿ 18,604 ಪದಗಳನ್ನು ಬಳಸಿದ್ದರು. ಅರುಣ್ ಜೇಟ್ಲಿ ಅವರ 2018 ರ ಭಾಷಣವು ಈ ದೊಡ್ಡ ಬಜೆಟ್ ಹತ್ತಿರಕ್ಕೆ ಬಂದಿತ್ತು. ಆದರೆ ಸುದೀರ್ಘ ಬಜೆಟ್ ಮಂಡಿಸಿದ್ದು ನಿರ್ಮಲಾ ಸೀತಾರಾಮನ್ ಅವರು, 2020-21ನೇ ಸಾಲಿನ ಕೋವಿಡ್ ಸಮಯದಲ್ಲಿ ಅವರು ಬರೋಬ್ಬರಿ 2 ಗಂಟೆ 42 ನಿಮಿಷಗಳ
ಅವಧಿಯ ವಿಷಯದಲ್ಲಿ, ನಿರ್ಮಲಾ ಸೀತಾರಾಮನ್ 2020-21 ರ ಬಜೆಟ್ ಪ್ರಸ್ತುತಿಯ ಸಮಯದಲ್ಲಿ ಎರಡು ಗಂಟೆ 42 ನಿಮಿಷಗಳ ಕಾಲ ಮಾತನಾಡುವ ಮೂಲಕ ದಾಖಲೆಯನ್ನು ಹೊಂದಿದ್ದಾರೆ. ಹಾಗೆ 2024 ರಲ್ಲಿ ಸೀತಾರಾಮನ್ ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿದರು, ಸತತ ಏಳು ಬಜೆಟ್‌ಗಳನ್ನು ಮಂಡಿಸಿದ ಮೊದಲ ಹಣಕಾಸು ಸಚಿವರಾದರು. ಸದ್ಯ ಅವರೀಗ 9ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಇನ್ನೊಂದು ಕಡೆ 1977ರಲ್ಲಿ ಅಂದಿನ ಹಿರುಭಾಯಿ ಮುಲ್ಚಿಭಾಯ್ ಪಟೇಲ್ ಕೇವಲ 800 ಪದಗಳ ಒಳಗೊಂಡ ಅತ್ಯಂತ ಸಣ್ಣ ಬಜೆಟ್ ಮಂಡಿಸಿದ್ದರು.
2021-22ರಿಂದ ಬಜೆಟ್ ಸಂಪೂರ್ಣ ಡಿಜಿಟಲ್ ಆಗಿದೆ. ಇದಕ್ಕೂ ಮೊದಲು ಬಜೆಟ್ ಪ್ರತಿಗಳನ್ನು ಲಾರಿಗಳಲ್ಲಿ ತರಲಾಗುತ್ತಿತ್ತು. ಆದ್ರೆ ಡಿಜಿಟಲ್ ಮೂಲಕ ಈಗ ಟ್ಯಾಬ್‌ಗಳ ಹಿಡಿದು ನಾಯಕರು ಸಂಸತ್ತಿನೊಳಗೆ ಕಾಣಿಸಿಕೊಳ್ಳುತ್ತಾರೆ.



Click it and Unblock the Notifications