Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
Budget 2024: ನಾಳೆ ಬಜೆಟ್ ಮಂಡಿಸಲಿದ್ದಾರೆ ಸೀತಾರಾಮನ್..! ಬಜೆಟ್ ಕುರಿತ ಅಚ್ಚರಿಯ ವಿಚಾರಗಳಿವು..!!
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25 ನೇ ಹಣಕಾಸು ವರ್ಷದ ಬಜೆಟ್ ಮಂಡನೆನೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ಅವರ 7ನೇ ಕೇಂದ್ರ ಬಜೆಟ್ ಆಗಿದ್ದು, ಈ ಬಾರಿಯ ಬಜೆಟ್ ಮೇಲೆ ಭಾರೀ ಕುತೂಹಲವಿದೆ.
2019 ರಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡ ಸೀತಾರಾಮನ್, ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರು. ಈ ವರ್ಷವೇ ಚುನಾವಣೆ ನಡೆದ ಕಾರಣ ಈಗ ಮತ್ತೊಂದು ಬಜೆಟ್ ಮಂಡಿಸಲಾಗುತ್ತಿದೆ.
ಬಜೆಟ್‌ನಲ್ಲಿ ವರ್ಷದ ರೂಪುರೇಷೆ ಏನು? ಈ ವರ್ಷ ಯಾವೆಲ್ಲಾ ವಸ್ತುಗಳ ಮೇಲೆ ತರಿಗೆ ವಿನಾಯಿತಿ ನೀಡಲಾಗುತ್ತೆ. ಯಾವೆಲ್ಲಾ ವಸ್ತು ತುಟ್ಟಿಯಾಗುತ್ತೆ ಎಂಬುದಕ್ಕೆ ನಾಳೆ ತೆರೆಬೀಳಲಿದೆ. ನಾಳೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇನ್ನು ಬಜೆಟ್ ಕುರಿತ ಒಂದಿಷ್ಟು ಅಚ್ಚರಿಯ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಸ್ವತಂತ್ರ ಭಾರತದ ಮೊಟ್ಟಮೊದಲ ಬಜೆಟ್ ಅನ್ನು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ನವೆಂಬರ್ 26, 1947 ರಂದು ಮಂಡಿಸಿದ್ದರು. ಇದು ದೇಶದ ಮೊಟ್ಟ ಮೊದಲ ಬಜೆಟ್ ಆಗಿತ್ತು. ಈ ಬಜೆಟ್ ಕೇವಲ 197.39 ಕೋಟಿ ರೂಪಾಯಿಯ ಬಜೆಟ್ ಆಗಿತ್ತು. ಈ ಬಜೆಟ್‌ನ ಶೇ.46ರಷ್ಟು ಹಣ ರಕ್ಷಣಾ ವಲಯಕ್ಕೆ ಮೀಸಲಿಲಾಯಿತು. ಅಂದರೆ ಸುಮಾರು 92 ಕೋಟಿ ರೂಪಾಯಿ ರಕ್ಷಣಾ ವಲಯಕ್ಕೆ ನೀಡಲಾಗಿತ್ತು.
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅಧಿಕಾರಾವಧಿಯಲ್ಲಿ ಹಣಕಾಸು ಸಚಿವರಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಆದರೆ ಈ ಸ್ಥಾನವನ್ನ ಸಚಿವೆ ನಿರ್ಮಲಾ ಸೀತಾರಾಮನ್ ಪಡೆದಿದ್ದಾರೆ.
ಎರಡನೇ ಅತಿ ಹೆಚ್ಚು ಬಜೆಟ್‌ಗಳು
ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು 9 ಬಾರಿ ಕೇಂದ್ರ ಬಜೆಟ್ ಅನ್ನು ಮಂಡಿಸಿದರು, ಮೊದಲ ಬಾರಿಗೆ ಮಾರ್ಚ್ 19, 1996 ರಂದು ಮತ್ತು ಅವರ ಕೊನೆಯ ಬಜೆಟ್ 2014 ರಲ್ಲಿ ಮಂಡಿಸಿದ್ದಾರೆ.
ಸುದೀರ್ಘ ಬಜೆಟ್ ಭಾಷಣ ಮಾಡಿದ್ದು ಯಾರು?
ಸೀತಾರಾಮನ್ ಫೆಬ್ರವರಿ 1, 2020 ರಂದು 2 ಗಂಟೆ 40 ನಿಮಿಷಗಳ ಅವಧಿಯ ದೀರ್ಘವಾದ ಬಜೆಟ್ ಅನ್ನು ಮಂಡಿಸಿದರು. ಪ್ರಸ್ತುತ ಹಣಕಾಸು ಸಚಿವರು ಎರಡು ಪುಟಗಳು ಬಾಕಿ ಇರುವಾಗ ತಮ್ಮ ಬಜೆಟ್ ಭಾಷಣವನ್ನು ಮೊಟಕುಗೊಳಿಸಬೇಕಾಯಿತು. ಇದು ಅತ್ಯಂತ ಸುದೀರ್ಘ ಬಜೆಟ್ ಭಾಷಣ ಎನಿಸಿಕೊಂಡಿದೆ.
ಅತಿ ಚಿಕ್ಕ ಬಜೆಟ್ ಭಾಷಣ ಮಾಡಿದ್ದು ಯಾರು?
1977 ರಲ್ಲಿ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರ ಮಧ್ಯಂತರ ಬಜೆಟ್ ಭಾಷಣವು ಕೇವಲ 800 ಪದಗಳ ಹೊಂದಿದ್ದಲ್ಲದೆ ಅತ್ಯಂತ ಕಡಿಮೆ ಅವಧಿಗೆ ಮುಕ್ತಾಯಗೊಂಡಿತ್ತು.
ಇದಕ್ಕೂ ಮುನ್ನ ಫೆಬ್ರವರಿ ಕೊನೆಯ ದಿನ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಇದು ಬ್ರಿಟೀಷ್ ಕಾಲಮಾನಕ್ಕೆ ಸರಿಯಾಗಿರಬೇಕು ಎಂದು ಮಾಡಲಾಗುತ್ತಿತ್ತು. 1999ರಲ್ಲಿ ಈ ಬಜೆಟ್ ಮಂಡನೆ ಸಮಯವನ್ನು ಬದಲಾಯಿತಿ ಬೆಳಗ್ಗೆ 11 ಗಂಟೆಗೆ ಮಂಡಿಸಲು ಮುಂದಾದರು. ಅಲ್ಲಿಂದ ಯಾವಾಗಲು ಬಜೆಟ್ ಬೆಳಗ್ಗೆ 11 ಗಂಟೆಗೆ ಮಂಡಿಸಲಾಗುತ್ತದೆ.
ಈ ವರ್ಷದ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆ ಮಾಡಲಾಗಿತ್ತು. ಆದರೆ ಈಗ ಲೋಕಸಭೆ ಚುನಾವಣೆ ಮುಗಿದು, ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತಿದೆ.



Click it and Unblock the Notifications
