Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಬುದ್ಧ ಪೂರ್ಣಿಮಾ 2023 : ಈ ರಾಶಿಗಳಿಗೆ ಶುಭ ಫಲವನ್ನು ಹೊತ್ತು ತರಲಿದೆ
ವೈಶಾಖ ಮಾಸದ ಹುಣ್ಣಿಮೆಯ ದಿನದಂದು ಗೌತಮ ಬುದ್ಧನ ಜ್ಮನ ಹಾಗೂ ಜ್ಞಾನೋದಯವಾದ ದಿನವನ್ನು ಸ್ಮರಿಸಲಾಗುತ್ತದೆ. ಈ ದಿನವನ್ನು ಬುದ್ಧ ಪೂರ್ಣಿಮಾವೆಂದು ದೇಶದಾದ್ಯಂತ ಆಚರಣೆ ಮಾಡಲಾಗುತ್ತದೆ. ಮೇ 5 ರಂದು ಬುದ್ಧ ಪೂರ್ಣಿಮಾವನ್ನು ಆಚರಣೆ ಮಾಡಲಾಗುತ್ತಿದ್ದು, ಅಪರೂಪವೆಂಬಂತೆ ಇದೇ ದಿನ ಈ ವರ್ಷದ ಮೊದಲ ಚಂದ್ರ ಗ್ರಹಣವು ಸಂಭವಿಸುತ್ತಿದೆ. ಇದರ ಪರಿಣಾಮವಾಗಿ ಕೆಲ ರಾಶಿಗಳು ಶುಭ ಫಲವನ್ನು ನಿರೀಕ್ಷೇ ಮಾಡಬಹುದಾಗಿದೆ. ಹಾಗಾದ್ರೆ ಆ ರಾಶಿಗಳು ಯಾವುದು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಬುದ್ಧ ಪೂರ್ಣಿಮಾದ ದಿನವೇ ಚಂದ್ರ ಗ್ರಹಣ ಸಂಭವಿಸುತ್ತಿರೋದ್ರಿಂದ ಇದರಿಂದ ಮೇಷ ರಾಶಿಯವರು ಶುಭ ಫಲವನ್ನು ನಿರೀಕ್ಷೆ ಮಾಡಬಹುದು. ನೀವು ಅಂದುಕೊಂಡ ಎಲ್ಲಾ ಕೆಲಸಗಳು ನೆರವೇರಲಿದೆ. ವ್ಯಾಪಾರಿಗಳು ತಮ್ಮ ಉದ್ಯಮದಲ್ಲಿ ಯಶಸ್ಸು ಕಾಣುತ್ತೀರಿ. ಇನ್ನೂ ಉದ್ಯೋಗದಲ್ಲಿ ಉತ್ತಮ ಫಲ ನಿರೀಕ್ಷೇ ಮಾಡಬಹುದು. ಜೊತೆಗೆ ಉದ್ಯೋಗ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಇನ್ನೂ ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದು ಒಳ್ಳೆಯ ಸಮಯ.

ಸಿಂಹ ರಾಶಿ
ಚಂದ್ರ ಗ್ರಹಣದ ಪ್ರಭಾವವು ಸಿಂಹ ರಾಶಿಯವರ ಮೇಲೆ ಧನಾತ್ಮಕ ಪರಿಣಾಮವನ್ನೇ ಬೀರಲಿದೆ. ಈ ಸಂದರ್ಭದಲ್ಲಿ ನೀವು ಕೈ ಹಾಕಿದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಕಾಣುತ್ತೀರಿ. ಉದ್ಯಮವನ್ನು ಆರಂಭಿಸಬೇಕು ಎನ್ನುವವರಿಗೆ ಇದು ಉತ್ತಮ ಸಮಯ. ಇಷ್ಟು ದಿನ ಬಗೆಹರಿಯದ ಕಾನೂನಿನ ಸಮಸ್ಯೆಗಳು ಬಗೆ ಹರಿಯುತ್ತದೆ. ನಿಮ್ಮ ಆಲೋಚನೆಗಳೆಲ್ಲವೂ ಸಕಾರಾತ್ಮಕವಾಗಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಆಧ್ಯಾತ್ಮಿಕ ಪ್ರಜ್ಞೆ ಹೆಚ್ಚಾಗುತ್ತದೆ.
ಮಕರ ರಾಶಿ
ಮೇ 5 ರಂದು ಮೊದಲ ಚಂದ್ರ ಗ್ರಹಣ ಸಂಭವಿಸುತ್ತಿದ್ದು, ಆ ದಿನ ಬುದ್ಧ ಪೂರ್ಣಿಮಾವನ್ನು ಆಚರಣೆ ಮಾಡಲಾಗ್ತಿದೆ. ಇದು ಮಹರ ರಾಶಿಯವರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ವಿಶೇಷವಾದ ಪ್ರಗತಿಯನ್ನು ಸಾಧಿಸುತ್ತೀರಿ. ಇಷ್ಟು ದಿನ ನೀವು ಕೆಲಸದಲ್ಲಿ ಬಡ್ತಿಗಾಗಿ ಪ್ರಯತ್ನಿಸುತ್ತಿದ್ದರೆ ಈ ಬಾರಿ ಬಡ್ತಿ ಸಿಗುವ ಸಾಧ್ಯತೆ ಇದೆ. ಜವಾಬ್ದಾರಿಯೊಂದು ನಿಮ್ಮ ಹೆಗಲೇರುತ್ತದೆ. ಇದರಿಂದ ನಿಮ್ಮ ಭವಿಷ್ಯಕ್ಕೆ ಒಳ್ಳೆಯದೇ ಆಗಲಿದೆ.
ಯಾರೆಲ್ಲಾ ಆಸ್ತಿಯ ಮೇಲೆ ಹೂಡಿಕೆ ಮಾಡಬೇಕು ಎಂದಿದ್ದೀರಿ ಅವರಿಗೆಲ್ಲಾ ಇದು ಉತ್ತಮ ಸಮಯ. ಆಸ್ತಿಯ ಹೂಡಿಕೆ ಭವಿಷ್ಯದಲ್ಲಿ ನಿಮಗೆ ಪ್ರಯೋಜನಕ್ಕೆ ಬರಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ನಿರೀಕ್ಷೇ ಮಾಡಬಹುದು. ಆರೋಗ್ಯ ಉತ್ತಮವಾಗಿರಲಿದೆ. ಸಂಗಾತಿಯೊಂದಿಗೆ ಸುಮಧುರ ಸಮಯವನ್ನು ಕಳೆಯುತ್ತೀರಿ.



Click it and Unblock the Notifications
