Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮರಳಿನಲ್ಲಿ ಹಪ್ಪಳ ಹುರಿದ ಯೋಧ.. ! ಇವರ ತ್ಯಾಗಕ್ಕೆ ಸಲಾಮ್..!
ಯೋಧರು ಗಡಿಯಲ್ಲಿ ಎಂತಹ ಪರಿಸ್ಥಿತಿಯಲ್ಲಿ ದೇಶ ಕಾಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಮಳೆ, ಚಳಿ, ಬಿಸಿಲು ಏನನ್ನೂ ನೋಡದೆ ಅವರು ದೇಶದ ರಕ್ಷಣೆಗೆ ಗಡಿಯಲ್ಲಿ ಗನ್ ಹಿಡಿದು ನಿಂತಿರುತ್ತಾರೆ. ಯಾವಾಗ ಏನು ಸಂಭವಿಸುತ್ತದೆ ಎಂಬುದು ಸ್ವತಃ ಅವರಿಗೇ ತಿಳಿಯದಿರುವ ಸ್ಥಿತಿ ಇದು.
ಇನ್ನು ಗಡಿ ರೇಖೆಯಲ್ಲಿ ಎಂತಹ ತಾಪಮಾನ ಇರುತ್ತೆ ಅನ್ನೋದು ನಿಮಗೆಲ್ಲಾ ತಿಳಿಸಿದೆ. ಕಾಶ್ಮೀರದಲ್ಲಿ ಹಿಮದಿಂದ ಕೂಡಿದ್ದರೆ ಇನ್ನೂ ಕೆಲವು ಕಡೆ ಮರುಭೂಮಿಯಲ್ಲಿ ಸೈನಿಕರು ಬದುಕಬೇಕಾಗುತ್ತದೆ. ಇದಕ್ಕಿಂತ ಕಷ್ಟಕರ ಕೆಲಸವೇ ಇಲ್ಲ ಎಂಬ ಭಾವನೆಯಂತು ನಿಮ್ಮಲ್ಲಿ ಬಂದಿರುತ್ತೆ.

ಇದೀಗ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೈನಿಕನೊಬ್ಬ ಹಪ್ಪಳವನ್ನು ಮರಳಿನಲ್ಲಿ ಹುರಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಉತ್ತರ ಭಾರತದಲ್ಲಿ ಬಿಸಿಗಾಳಿ ಹಿನ್ನೆಲೆ ಹಲವು ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ರಾಜಸ್ಥಾನದಲ್ಲಿ ಈ ತಾಪಮಾನ ಏರಿಕೆಯಾಗಿದೆ.
ಈ ನಡುವೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ರಾಜಸ್ಥಾನದ ಬಿಕಾನೇರ್‌ನಲ್ಲಿ ಸುಡುವ ಮರಳಿನಲ್ಲಿ ಆತ ಹಪ್ಪಳ ಹಾಕಿ ಅದನ್ನು ಹುರಿದಿದ್ದಾನೆ. @FrontalForce ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಬಿಎಸ್‌ಎಫ್ ಯೋಧ ಬಿಸಿಲಿನಿಂದ ರಕ್ಷಣೆ ಪಡೆಯಲು ತನ್ನ ದೇಹವನ್ನು ಸಂಪೂರ್ಣವಾಗಿ ಮುಂಚಿಕೊಂಡಿದ್ದಾನೆ.
ಅಲ್ಲದೆ ಒಂದು ಹಪ್ಪಳವನ್ನು ತೆಗೆದು ಮರಳಿನಲ್ಲಿಟ್ಟು ಅದರ ಮೇಲೆ ಮರಳು ಮುಚ್ಚುತ್ತಾನೆ. ಒಂದು ನಿಮಿಷ ಬಿಟ್ಟು ಹಪ್ಪಳವನ್ನು ಹೊರಗೆ ತೆಗೆದಾಗ ಅದು ಹುರಿದಿರುತ್ತದೆ. ಬಳಿಕ ಅದನ್ನು ಆತ ಸುಲಭವಾಗಿ ಮುರಿದು ಹಾಕುತ್ತಾನೆ. ಇದರಲ್ಲಿ ಆತ ಅಲ್ಲಿ ಎಷ್ಟು ತಾಪಮಾನ ಇದೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾನೆ.
ಬಿಕಾನೇರ್, ರಾಜಸ್ಥಾನದ ಅತ್ಯಂತ ಹೆಚ್ಚು ತಾಪಮಾನವಿರುವ ನಗರಗಳಲ್ಲಿ ಒಂದಾಗಿದೆ, ಈ ವರ್ಷ 46 ಡಿಗ್ರಿ ತಾಪಮಾನ ಅಲ್ಲಿ ದಾಖಲಾಗಿದೆ. ಬಿಎಸ್ಎಫ್ ಯೋಧರು ಎದುರಿಸುತ್ತಿರುವ ತೀವ್ರತರವಾದ ಬಿಸಿ ಗಾಳಿ ಮತ್ತು ಕಠಿಣ ಪರಿಸ್ಥಿತಿ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಂಗಾನಗರ, ಬಿಕಾನೇರ್, ಜೈಸಲ್ಮೇರ್, ಬಾರ್ಮರ್‌ನಿಂದ ರಾಜಸ್ಥಾನದ ಪಶ್ಚಿಮ ವಲಯವು ಬಿಎಸ್‌ಎಫ್ ಸೈನಿಕರು ಗಡಿ ಹಂಚಿಕೊಂಡಿರುವ ಪ್ರದೇಶದಲ್ಲಿ ಕಾವಲು ಕಾಯುತ್ತಾರೆ. ಆದರೆ ಈ ಪ್ರದೇಶವು ಅತ್ಯಂತ ಹೆಚ್ಚು ತಾಪಮಾನ ಇರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಇಂತಹ ಕಠಿಣ ಪರಿಸ್ಥಿತಿಯನ್ನೂ ಲೆಕ್ಕಿಸದೆ ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಯೋಧನ ಆತ್ಮಸ್ಥೈರ್ಯಕ್ಕೆ ಮೆಚ್ಚುಗೆ ಕೇಳಿಬಂದಿದೆ.
ಭಾರತೀಯ ಯೋಧನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆತನ ಕಷ್ಟಕ್ಕೆ ನೆಟ್ಟಿಗರು ಮರುಕ ವ್ಯಕ್ತಡಿಸಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ದೇಶ ಕಾಯುವ ಇಂತಹ ಹೀರೋಗಳಿಗೆ ನಿಜವಾದ ಸೆಲ್ಯೂಟ್ ಮಾಡಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇದಿಷ್ಟೇ ಅಲ್ಲ ಇತ್ತ ಸಿಯಾಚಿನ್ ಪ್ರದೇಶದಲ್ಲಿ ಗಡಿ ಕಾಯುವ ಯೋಧರು ಹಿಮದಲ್ಲಿ ಮೈ ಕೊರೆಯುವ ರಕ್ತ ಹೆಪ್ಪುಗಟ್ಟುವಂತಹ ಪರಿಸ್ಥಿತಿಯಲ್ಲೂ ದೇಶ ಕಾಯಲು ನಿಂತಿರುತ್ತಾರೆ. ಸಿಯಾಚಿನ್ ಅತ್ಯಂತ ಎತ್ತರದ ಯುದ್ಧಭೂಮಿಯಾಗಿದ್ದು, ಭಾರತೀಯ ಯೋಧರು ಅಲ್ಲಿಯೂ ಗನ್ ಹಿಡಿದು ರಕ್ಷಣೆಗೆ ನಿಂತಿರುವುದು ಭಾರೀ ಪ್ರಶಂಸೆಗೆ ಕಾರಣವಾಗಿದೆ.
ಇತ್ತೀಚಿಗೆ ಭಾರತದ ಹವಾಮಾನ ಇಲಾಖೆ (IMD) ಮೇ 25ರ ವರೆಗೆ ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ತೀವ್ರತರವಾದ ಬಿಸಿಗಾಳಿ ಬೀಸಲಿದೆ ಎಂಬ ಮುನ್ಸೂಚನೆ ನೀಡಿದೆ. ಜೋಧ್‌ಪುರ ಮತ್ತು ಬಿಕಾನೇರ್‌ಗೆ ಬಿಸಿ ಗಾಳಿಯ ಹಿನ್ನೆಲೆ ರೆಡ್ ಅಲರ್ಟ್ ಅನ್ನು ನೀಡಲಾಗಿದೆ, ಪಿಲಾನಿ ಮುಂದಿನ 28 ರೊಳಗೆ 48 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ.



Click it and Unblock the Notifications
