Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸತ್ತು ಬದುಕಿದ 50 ವರ್ಷದ ಮಹಿಳೆ: 24 ನಿಮಿಷದಲ್ಲಿ ಆಕೆ ಕಂಡಿದ್ದೇನು?
ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಏನಾಗುತ್ತದೆ ಎಂಬುದು ಶತಮಾನಗಳಿಂದ ಬಗೆಹರಿಯದ ವಿಚಾರವಾಗಿದೆ. ಈಗಲೂ ವಿಜ್ಞಾನಿಗಳು ಈ ಕುರಿತಾಗಿ ವಿಶ್ಲೇಷಣೆಗಳು, ಅಧ್ಯಯನಗಳ ನಡೆಸುತ್ತಲೇ ಇದ್ದಾರೆ. ಆದರೂ ಮೃತಪಟ್ಟ ಬಳಿಕ ಆತ್ಮದ ಕಥೆ ಏನು? ಹಾಗೆ ನಮ್ಮ ಮೆದುಳಿನಲ್ಲಿ ಯಾವ ರೀತಿಯ ವಿದ್ಯಮಾನಗಳು ನಡೆಯಲಿವೆ ಎಂಬುದರ ಕುರಿತು ವಿವರಣೆ ಪಡೆಯಲು ಇಂದಿಗೂ ಪ್ರಯತ್ನಿಸಲಾಗುತ್ತಿದೆ.
ಹಾಗೆ ಸಾವಿನ ನಂತರ ವ್ಯಕ್ತಿಯಲ್ಲಿ ಯಾವ ರೀತಿಯ ವಿದ್ಯಮಾನ ನಡೆಯಲಿದೆ. ಕೊನೆಯ ಕ್ಷಣದಲ್ಲಿ ಏನೆಲ್ಲಾ ಆಗಲಿದೆ ಎಂಬುದು ಕೂಡ ಇಂದಿಗೂ ವಿಸ್ಮಯಕಾರಿ ಸಂಗತಿಯಾಗಿ ಉಳಿದಿದೆ. ಆದ್ರೆ ಇಲ್ಲೊಬ್ಬಕಾಕೆ ಈಗ ಸಾವಿನ ಕದ ತಟ್ಟಿಬಂದು ಆ ಸಮಯದಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿದ್ದಾಳೆ.

ಸ್ಪೇನ್‌ನ ಆಂಡಲೂಸಿಯಾದ 50 ವರ್ಷದ ಮಹಿಳೆ ಮೃತಪಟ್ಟು ಮತ್ತೆ ಮರುಜೀವ ಪಡೆದು ಅಚ್ಚರಿ ಮೂಡಿಸಿದರು. ಅದರಲ್ಲೂ ಆಕೆ 24 ನಿಮಿಷಗಳ ಕಾಲ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿದ್ದಾರೆ. ಸಮಾಜಶಾಸ್ತ್ರಜ್ಞೆ ಹಾಗೂ ಪತ್ರಕರ್ತೆಯಾಗಿರುವ ಟೆಸ್ಸಾ ರೊಮೆರೊ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು. ವೈದ್ಯರು ಕೂಡ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದರು.
ಆದರೆ ಸತತ ಪ್ರಯತ್ನದ ಬಳಿಕ ಆಕೆಯ ನಾಡಿ ಮಿಡಿತ ಕಾಣಿಸಿಕೊಂಡಿತು. ಬಳಿಕ ಆಕೆಗೆ ಮತ್ತೆ ವೈದ್ಯಕೀಯ ಆರೈಕೆಗೆ ಒಳಪಡಿಸಲಾಗಿತ್ತು. ನಂತರ ಟೆಸ್ಸಾ ಅವರು ಆ 24 ನಿಮಿಷದಲ್ಲಿ ಆಳವಾದ ಶಾಂತಿ ಮತ್ತು ನೈಜವಾದ ಜೀವನ ಅನುಭವಿಸಿದೆ ಎಂದು ಹೇಳಿಕೊಂಡಿದ್ದಾರೆ. ನೋವು, ದುಃಖ, ಮುಕ್ತವಾದ ಸಮಯವನ್ನು ಕಳೆದಿದ್ದೇನೆ. ತಲೆ ಮತ್ತು ಭುಜದ ಮೇಲಿಂದ ದೊಡ್ಡ ಭಾರವೊಂದನ್ನು ಇಳಿಸಿದಂತಹ ಅನುಭವವಾಯಿತು ಎಂದು ಕೂಡ ಹೇಳಿಕೊಂಡಿದ್ದಾರೆ.
ನಾನು ಸತ್ತಿದ್ದೇನೆಂದು ನನಗೆ ತಿಳಿದಿರಲಿಲ್ಲ. ನನ್ನ ಸುತ್ತಲಿನ ಯಾರಿಗೂ ಕಾಣಿಸದ ಕಾರಣ ನಾನು ತುಂಬಾ ಜೀವಂತವಾಗಿದ್ದೇನೆ ಎಂದು ಭಾವಿಸಿದೆ ಎಂದು ಅವಳು ತನ್ನ ಪುಸ್ತಕದಲ್ಲಿ ಬರೆದಿದ್ದಾಳೆ. ಟೆಸ್ಸಾ ತನ್ನ ಅನುಭವವು ಕನಸಾಗಲಿ ಅಥವಾ ಭ್ರಮೆಯಾಗಲಿ ಅಲ್ಲ, ಅದು ಮತ್ತೊಂದು ಜಗತ್ತಿನ ಮುಖಾಮುಖಿ ಎಂದು ಹೇಳಿದ್ದಾಳೆ. ಆದರೆ ಹಿಂದೆ ಇಂತಹ ಯಾವುದೇ ರೀತಿಯ ಅನುಭವವನ್ನು ಕೂಡ ಆಕೆ ಕನಸಿನಲ್ಲಿಯೂ ಕಂಡಿರಲಿಲ್ಲವಂತೆ.
ಈ 24 ನಿಮಿಷದಲ್ಲಿ ಸಮಯ ಬಹಳ ನಿಧಾನವಾಗಿ ಚಲಿಸಿದಂತಹ ಅನುಭವ ಹಾಗೆ ಭಾವನೆಗಳು ಆಳವಾದವು ಆದ್ರೆ ಎಲ್ಲವೂ ಅರ್ಥಪೂರ್ಣವಾಗಿತ್ತು, ಅದು ನೆನಪಿನಲ್ಲಿ ಉಳಿಯುವಂತಹ ವಿದ್ಯಮಾನಗಳು ಎಂದು ಆಕೆ ಹೇಳಿಕೊಂಡಿದ್ದಾಳೆ.
ಟೆಸ್ಸಾ ಸಾವಿಗೂ ಮೊದಲು ಅನಾರೋಗ್ಯದಿಂದ ಬಳಲುತ್ತಿದ್ದಳು, ಆದ್ರೆ ಆಕೆಗೆ ಇದ್ದ ಕಾಯಿಲೆ ಯಾವುದು ಎಂಬುದನ್ನು ವೈದ್ಯರು ಕೂಡ ಪತ್ತೆ ಮಾಡಲು ಆಗಿರಲಿಲ್ಲ. ಹಲವು ಬಾರಿ ಹಲವು ರೀತಿಯ ಚಿಕಿತ್ಸೆಗಳಿಗೆ ಪರೀಕ್ಷೆಗೆ ಒಳಗಾದರು ಆಕೆಯಲ್ಲಿರುವ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲು ಆಗಿರಲಿಲ್ಲ. ಆಕೆಯ ದೈಹಿಕ ರೋಗ ಲಕ್ಷಣಗಳು ಆಕೆಯ ಭಾವನಾತ್ಮಕ ಸಮಸ್ಯೆಗೆ ಸಂಬಂಧಿಸಿರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರು.
ಆಕೆಯ ಪ್ರಕಾರ ನಾವು ಸತ್ತಾಗಲು ಕೂಡ ಒಂಟಿಯಾಗಿರುವುದಿಲ್ಲ, ಇದು ನಾನು ಕಲಿತುಕೊಂಡ ಅಮೂಲ್ಯವಾದ ವಿಚಾರವಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ನಾನು ಈ 24 ನಿಮಿಷದಲ್ಲಿ ಒಂದೊಂದೇ ನೈಜ ವಿಚಾರಗಳ, ಮಾತುಗಳ ತನ್ನೊಳಗೆ ಹುಟ್ಟಿಕೊಂಡ ಸತ್ಯಗಳ ಅರಿಯಲು ಮುಂದಾಗಿದ್ದೆ. ಅದೊಂದು ಬೇರೆಯ ಪ್ರಪಂಚ, ಅಲ್ಲಿ ಸತ್ಯ ಬಿಟ್ಟು ಬೇರೇನು ಇಲ್ಲ ಎಂಬುದು ಆಕೆಯ ನುಡಿಯಾಗಿದೆ. ಸದ್ಯ ಆಕೆ ಮೃತಪಟ್ಟ ಬಳಿಕ ನಡೆದ ಆ 24 ನಿಮಿಷಗಳ ಘಟನಾವಳಿಗಳನ್ನು ಪುಸ್ತಕವಾಗಿ ಹೊರತಂದಿದ್ದಾಳೆ. ಮೃತಪಟ್ಟಾಗ ಏನೆಲ್ಲಾ ಸಂಭವಿಸಲಿದೆ ಎಂಬುದನ್ನು ಪತ್ತೆ ಮಾಡುತ್ತಿದ್ದ ವಿಜ್ಞಾನಿಗಳು ಕೂಡ ಟೆಸ್ಸಾ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿದ್ದಾರೆ.



Click it and Unblock the Notifications