Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸಹೋದರ-ಸಹೋದರಿಯರು ಸೇರಿ ಕಟ್ಟಿ ಬೆಳೆಸಿದ ಸಂಸ್ಥೆಗಳಿವು..!
ಈ ರಕ್ಷಾ ಬಂಧನದಂದು ನಿಮ್ಮ ಸಹೋದರಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತೀರಿ. ಒಡಹುಟ್ಟಿದವರ ಸಂಬಂಧ ಅಂದರೆ ಅದೊಂದು ಅದೃಷ್ಟದ ಸಂಬಂಧವಂತೆ. ತಂದೆ-ತಾಯಿಯ ನಂತರ ಒಡಹುಟ್ಟಿದವರೇ ಇಡೀ ಜೀವನದಲ್ಲಿ ಜೊತೆಯಾಗಿರುತ್ತಾರೆ. ಹೀಗಾಗಿ ಈ ರಾಖಿ ಹಬ್ಬಕ್ಕೆ ಮಹತ್ವ ಬಂದಿದೆ. ಆದ್ರೆ ನಿಮಗೆ ಗೊತ್ತಾ ಈ ಒಡಹುಟ್ಟಿದವರು ಸೇರಿಕೊಂಡು ಕಟ್ಟಿದ ಉದ್ಯಮಗಳಿಂದು ದೊಡ್ಡ ಕಂಪನಿಗಳಾಗಿ ಬೆಳೆದಿವೆ.
ಮನೆ ಮಂದಿಯೇ ಸೇರಿ ಸ್ಟಾರ್ಟ್‌ಅಪ್ ಕಟ್ಟಿ ಬೆಳೆಸಿದವರ ಕಥೆ ನೀವು ಕೇಳಿದ್ದೀರಾ? ಅಣ್ಣ-ತಮ್ಮ, ಅಕ್ಕ-ತಂಗಿ ಹೀಗೆ ಸಹೋದರ-ಸಹೋದರಿಯರೇ ಸೇರಿ ಕಟ್ಟಿದ ಸಂಸ್ಥೆಗಳ ಕಥೆ ನಾವಿಂದು ತಿಳಿಯೋಣ.

ಸ್ತುತಿ ಗುಪ್ತಾ ಮತ್ತು ಅಗ್ನಿಂ ಗುಪ್ತಾ
ಆಯುರ್ವೇದ ಉತ್ಪನ್ನಗಳ ಮಾರುಕಟ್ಟೆಗೆ ಇಳಿದ ಸಹೋದರ ಸಹೋದರಿ ತಮ್ಮ ತಂದೆಯ ನಷ್ಟದ ಕಂಪನಿಯನ್ನ ಕಟ್ಟಿ ಬೆಳೆಸಿದರು. ಅಮೃತಮ್ ಎಂಬ ಆಯುರ್ವೇದ ಕಂಪನಿಯನ್ನ ಕಟ್ಟಿದ ಅವರು, 10 ವರ್ಷಗಳಲ್ಲಿ ಬರೋಬ್ಬರಿ 250ರಷ್ಟು ಲಾಭದಾಯಕ ಕಂಪನಿಯಾಗಿ ಪರಿವರ್ತಿಸಿದರು.
10 ವರ್ಷಗಳಿಂದ ವೈದ್ಯಕೀಯ ಮಳಿಗೆಗಳು ಮತ್ತು ವೈದ್ಯರಿಗೆ ಗಿಡಮೂಲಿಕೆ ಔಷಧಿಗಳನ್ನು ಪೂರೈಸುವುದರಿಂದ, ಈ ಜೋಡಿಯು ಕುಟುಂಬದ ವ್ಯವಹಾರವನ್ನು ಪುನರುಜ್ಜೀವನಗೊಳಿಸಿತು. ನಂತರ ತಮ್ಮದೇ ಸ್ವಂತ ವೆಬ್‌ಸೈಟ್ ತೆರೆದು ಆ ಮೂಲಕ ತಮ್ಮ ಉತ್ಪನ್ನಗಳ ಮಾರಾಟ ಆರಂಭಿಸಿದರು.
ಅಲ್ಮಾಸ್ ನಂದಾ ಮತ್ತು ಅಮೀನ್ ವಿರ್ಜಿ
ಮಹಿಳೆಯರಿಗೆ ಆರಾಮದಾಯಕ ಪಾದರಕ್ಷೆಗಳ ತಯಾರಕ ಕಂಪನಿ ತೆರೆದ ಇವರಿಬ್ಬರು Inc.5 ಎಂಬ ಸಂಸ್ಥೆ ಹುಟ್ಟುಹಾಕಿದರು. ಹೀಲ್ಸ್‌ಗಳು, ಶೂಗಳು, ಟ್ರೆಂಡಿ ಲುಕ್ ನೀಡುವ ಸ್ಯಾಂಡಲ್‌ಗಳಿಗೆ ಈ ಸಂಸ್ಥೆ ಬಹುಬೇಗ ಹೆಸರು ಗಳಿಸಿತು.
ದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಕಾನ್ಪುರ, ಲಕ್ನೋ ಮತ್ತು ಪುಣೆ ಸೇರಿದಂತೆ ಟೈರ್ I ಮತ್ತು ಟೈರ್ II ನಗರಗಳಲ್ಲಿ ಈಗ ಇದರ ಔಟ್‌ಲೆಟ್‌ಗಳ ತೆರೆಯಲಾಗಿದೆ. ವಾರ್ಷಿಕವಾಗಿ ಈ ಕಂಪನಿ 163 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ನೇಹಾ ಕನೋಡಿಯಾ ಮತ್ತು ಗೋಗಾಗಾ ಕನೋಡಿಯಾ
ಟಿಂಡರ್, ಬಂಬಲ್ ರೀತಿಯ ಡೇಟಿಂಗ್ ಆಪ್ ಅನ್ನು ಈ ಇಬ್ಬರು ಸಹೋದರ ಸಹೋದರಿ ಕಂಡುಕೊಂಡರು. ಇದಕ್ಕೆ ಗೋಗಾಗಾ (GoGaga) ಎಂದು ಹೆಸರಿಟ್ಟರು. ಇಬ್ಬರು ಬೆಂಗಳೂರಿನಲ್ಲಿ 2018ರಲ್ಲಿ ಈ ಕಂಪನಿ ಹುಟ್ಟುಹಾಕಿದರು. ಇವರು ಭವಿಷ್ಯದಲ್ಲಿ ಸರಿಯಾದ ಜೋಡಿಗಳನ್ನು ಹುಡುಕಲು ಸಹಾಯವಾಗುವಂತೆ ಈ ಆಪ್ ಡೆವಲೋಪ್ ಮಾಡಿದ್ದರು. ಹೀಗಾಗಿ ಬಹುಬೇಗ ಪ್ರಸಿದ್ಧಿ ಪಡೆದು 40 ಸಾವಿರಕ್ಕೂ ಅಧಿಕ ಮಂದಿ ಆರಂಭದಲ್ಲಿ ಚಂದಾದಾರರಾಗಿದ್ದರು.
ರೋಹನ್ ಶರ್ಮಾ ಮತ್ತು ಪ್ರಾಕ್ಷಿ ಶರ್ಮಾ
ಈ ಇಬ್ಬರು ಸಹೋದರ ಸಹೋದರಿ ಆಭರಣದ ಮೇಲೆ ಬಂಡವಾಳ ಹೂಡಿಕೆ ಮಾಡಿ ಎಲ್ಲರ ಗಮನ ಸೆಳೆದರು. ಇವರು ಆರ್‌ಕೆ ಜ್ಯುವೆಲರ್ಸ್ ಎಂಬ ಕಂಪನಿ ಕಟ್ಟಿದರು. 1995 ರಲ್ಲಿ ದೆಹಲಿಯಲ್ಲಿ RK ಜ್ಯುವೆಲರ್ಸ್ ಅನ್ನು ಸ್ಥಾಪಿಸಿದರು ಮತ್ತು ಮಾರುಕಟ್ಟೆಯಲ್ಲಿ ಅತ್ಯುತ್ತಮವಾದ ಚಿನ್ನ ಮತ್ತು ವಜ್ರದ ಆಭರಣ ವಿನ್ಯಾಸಗಳೊಂದಿಗೆ ಹೆಸರಾದರು.
2011 ರಲ್ಲಿ, ಈ ವ್ಯಾಪಾರವನ್ನು ಇಬ್ಬರು ಸಹೋದರ ಸಹೋದರಿ ವಹಿಸಿಕೊಂಡರು. ಇದಕ್ಕೂ ಮೊದಲು ತಂದೆ ತಾಯಿ ಈ ಉದ್ಯಮ ಕಟ್ಟಿದ್ದರು, ಆದರೆ ಅಣ್ಣ ಹಾಗೂ ತಂಗಿಯ ಆಡಳಿತದ ಬಳಿಕ ಉದ್ಯಮವಾಗಿ ಬೆಳೆಯಿತು. ಮನೆ ಮಾತಾಗಿತ್ತು. ಸದ್ಯದಲ್ಲೇ ಅವರು ದಕ್ಷಿಣ ಭಾರತದಲ್ಲಿ ತಮ್ಮ ಶಾಖೆಗಳ ತೆರೆದು ಕಲ್ಯಾಣ್, ಮಲಬಾರ್, ಸುಲ್ತಾನ್, ಭೀಮಾ, ಆಭರಣ ಸೇರಿ ಹಲವು ಬ್ರಾಂಡ್‌ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಇದಿಷ್ಟೇ ಅಲ್ಲ ಇನ್ನೂ ಹತ್ತಾರು ಸಂಸ್ಥೆಗಳನ್ನು ಸಹೋದರ-ಸಹೋದರಿಯರು ಸೇರಿ ಕಟ್ಟಿ ಬೆಳೆಸಿದ ಉದಾಹರಣೆಗಳು ನಮ್ಮ ನಡುವೆಯೇ ಇವೆ.



Click it and Unblock the Notifications
