Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಮಲಯಾಳಂ ಚಿತ್ರದಲ್ಲಿ ಗಮನ ಸೆಳೆದ ಕೊಡವ ಹಾಡು!: 24 ಗಂಟೆಯೊಳಗಡೆಯೇ ಟಾಪ್ ಟ್ರೆಂಡಿಂಗ್‌ನಲ್ಲಿದೆ ಈ ಹಾಡು
ಮಲಯಾಳಂ ಚಿತ್ರದಲ್ಲಿ ಕೊಡವ ಭಾಷೆಯ ಹಾಡು ಈಗ ಸಕತ್ ಟ್ರೆಂಡ್ ಆಗುತ್ತಿದೆ. ಬರಿ ಒಂದೆರಡು ಲೈನ್‌ಗಳಲ್ಲ ಇಡೀ ಹಾಡು ಕೊಡುವ ಭಾಷೆಯಲ್ಲಿದೆ, ಅಲ್ಲದೆ ಡ್ಯಾನ್ಸ್ ಸ್ಟೆಪ್ಸ್‌ಗೆ ಹೇಳಿ ಮಾಡಿಸಿದ ಹಾಡಿನಂತಿದೆ. ಈ ಹಾಡಿನಲ್ಲಿ ಕೊಡವರ ಮದುವೆ ಆಚರಣೆ ಅವರು ಧರಿಸುವ ಸಾಂಪ್ರದಾಯ ಉಡುಗೆ ಹೀಗೆ ಎಲ್ಲದರ ಚಿತ್ರಣ ಈ ಹಾಡಿನಲ್ಲಿದ್ದು ಮಲಯಾಳಂ ಚಿತ್ರದ ಈ ಹಾಡು ಕೊಡವರ ಮನಗೆದ್ದಿದೆ.

ಮಂಗಲ..... ಬೋಜಿರ ಮಂಗಲ ಎಂದು ಹಾಡು ಶುರುವಾಗುತ್ತದೆ. ಮಂಗಲ ಎಂದರೆ ಕೊಡವ ಭಾಷೆಯಲ್ಲಿ ಮದುವೆ ಎಂದರ್ಥ, ಇನ್ನು ಅಲ್ಲಿ ಹೆಣ್ಮಕ್ಕಳನ್ನು ಬೋಜಿ ಅಂತ ಪ್ರೀತಿಯಿಂದ ಕರೆಯುವುದುಂಟು, ಮನೆ ಹೆಣ್ಮಕ್ಕಳ ಬಗ್ಗೆ ಹೇಳುವಾಗ ನಂಗಡ ಬೋಜಿ (ನಮ್ಮ ಮಗಳು) ಎಂದು ಹೇಳುತ್ತಾರೆ. ಕೊಡವ ಭಾಷೆಯಲ್ಲಿ ಮದುವೆ ಬಗ್ಗೆ ವರ್ಣಿಸುತ್ತಾ ಈ ಹಾಡು ಹೇಳಲಾಗಿದೆ.
ಉಡುಪುಗಳು ಕೂಡ ಕೊಡವರಂತೆ ಧರಿಸಿದ್ದರೆ ಈ ಹಾಡಿಗೆ ಮಾಡಿರುವ ಡ್ಯಾನ್ಸ್ ಇನ್ನೂ ಸೂಪರ್ ಆಗಿರುತ್ತಿತ್ತು. ಒಂದು ದೃಶ್ಯದಲ್ಲಿ ಕೊಡವ ಉಡುಪು ತೋರಿಸಲಾಗಿದೆ, ನಂತರ ಎಲ್ಲರೂ ಕೋಟು, ಸೆಲ್ವಾರ್ , ಗೌನ್ ಅಂತ ಕಾಣಬಹುದು. ಆದರೆ ಕೊಡವರ ಮದುವೆಗೆ ಹೋದರೆ ಅಲ್ಲಿ ಸಾಂಪ್ರದಾಯಕ ಉಡುಪು ಧರಿಸಿದಂಥ ಹೆಣ್ಮಕ್ಕಳೇ ಕಣ್ಣಿಗೆ ಬೀಳುತ್ತಾರೆ. ಅವರು ಉಡುಪು, ಅವರು ಧರಿಸುವ ಆಭರಣಗಳು ಕೂಡ ಭಿನ್ನವಾಗಿರುತ್ತದೆ. ಕೈಗೆ ಹಾಕುವ ಬಳೆ, ತಾಳಿಸರ, ಕೊಕ್ಕೆ ತಾತಿ, ಜೋಮಾಲೆ ಹೀಗೆ ಪ್ರತಿಯೊಂದರಲ್ಲಿಯೂ ತಮ್ಮ ಸಂಪ್ರದಾಯ ಪಾಲಿಸುತ್ತಾರೆ, ಅದು ಈ ಹಾಡಿನಲ್ಲಿಸ್ವಲ್ಪ ಮಿಸ್ ಆಗಿದೆ, ಅದು ಬಿಟ್ಟರೆ ಹಾಡು ಸೂಪರ್ ಆಗಿದೆ, ಕೇರಳದವರಿಗೆ ಈ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ಇಷ್ಟಪಟ್ಟಿದ್ದಾರೆ, ಹೀಗೆ ಕೇರಳದಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಹಾಡು ಸದ್ದು ಮಾಡುತ್ತಿದೆ.
ಕನ್ನಡ ಚಲನ ಚಿತ್ರದಲ್ಲಿಯೂ ಕೊಡವ ಭಾಷೆಯ ಹಾಡಿದೆ, ಅಲ್ಲದೆ ಆ ಹಾಡಿಗೂ ಎಲ್ಲರ ಫೇವರೆಟ್ ಹಾಡಾಗಿದೆ, ಈ ಹಾಡು ಕೇಳದ ಕನ್ನಡಿಗರೇ ಇರಲ್ಲ....
ಮಡಿಕೇರಿ ಸಿಪಾಯಿ...ಈ ಈ ಈ
ಮುತ್ತ್ ತಾತ್ ಮರೆಲ್..ಊಊಊ
ಮಡಿಕೇರಿ ಸಿಪಾಯಿ...ಈ ಈ ಈ
ಮುತ್ತ್ ತಾತ್ ಮರೆಲ್..ಊಊಊ
ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ ದುಂಬಾ ಚಾಯಿ
ದುಂಬಾ...ಚಾಯಿ
ಚಾಯಿಕರ್ತಿ ಮೂಡಿಕ್..ಊಊ
ನಾ ಮುತ್ತ್ ಟ್ಟ ಮರೆಲ್..ಊಊಊ
ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ ದುಂಬಾ ಚಾಯಿ
ದುಂಬಾ...ಚಾಯಿ
ಎಂಬ ಈ ಹಾಡನ್ನು ಯಾರು ತಾನೆ ಕೇಳಿಲ್ಲ ಹೇಳಿ... ವಿಷ್ಣುವರ್ಧನ್-ಸುಹಾಸಿನಿ ಅಭಿನಯದ ಈ ಹಾಡನ್ನು ಎಸ್‌ಪಿಬಿ ಹಾಗೂ ಚಿತ್ರಾಮ್ಮ ಹಾಡಿದ್ದಾರೆ.
ಕೊಡವರ ಮದುವೆ ಆಚರಣೆ ತುಂಬಾ ಭಿನ್ನವಾಗಿರುತ್ತೆ
ಕೊಡವ ಸ್ನೇಹಿತರ ಮದುವೆ ಆಮಂತ್ರಣ ಸಿಕ್ಕರೆ ಖಂಡಿತ ಮಿಸ್ ಮಾಡದೆ ಹೋಗಿ ಅವರ ಆಚರಣೆಗಳನ್ನು ಗಮನಿಸಿ ತುಂಬಾ ಭಿನ್ನವಾಗಿರುತ್ತದೆ. ಅಲ್ಲದೆ ಕೊಡವರು ತಮ್ಮ ಸಂಪ್ರದಾಯದವನ್ನು ಮದುವೆಯಲ್ಲಿ ಚಾಚೂ ತಪ್ಪದೆ ಪಾಲಿಸುತ್ತಾರೆ ಕೂಡ. ಕೊಡವರ ಮದುವೆಯಲ್ಲಿ ಮಧುಮಗ ಮತ್ತು ಮಧುಮಗಳ ಕೊಡವರ ಸಾಂಪ್ರದಾಯಕ ಉಡುಗೆಯಲ್ಲಿಯೇ ಗಮನ ಸೆಳೆಯುತ್ತಾರೆ.
ಕೊಡವ ಮದುವೆಯಲ್ಲಿ ಓಲಗ ಹೈಲೈಟ್ಸ್
ಅವರ ಮದುವೆಯಲ್ಲಿ ಓಲಗದವರು ಇರಲೇಬೇಕು ಅಲ್ಲದೆ ಅವರು ಕೊಡವ ವಾದ್ಯವನ್ನೇ ನುಡಿಸುತ್ತಾರೆ. ಕೊಡವ ವಾಲಗ ಕಿವಿಗೆ ಬೀಳುತ್ತಿದ್ದಂತೆ ಹೆಂಗಸರು-ಗಂಡಸರು ಮಕ್ಕಳು ಎಲ್ಲರೂ ವಾಲಗಕ್ಕೆ ತಕಜ್ಕ ಹೆಜ್ಜೆ ಹಾಕಿ ಕುಣಿಯುತ್ತಾರೆ. ಕೂರ್ಗ್ ಓಲಗ ಅಂತ ಯೂಟ್ಯೂಬ್ಸ್‌ನಲ್ಲಿ ನೋಡಿದರೆ ಅವರ ವಿಭಿನ್ನ ನೃತ್ಯ ಶೈಲಿ ಕೂಡ ನೋಡಬಹುದು. ಹೀಗೆ ಮದುವೆಯಲ್ಲಿ ಹಾಡು, ನೃತ್ಯದಿಂದ ಹಡಿದು ಪ್ರತಿಯೊಂದರಲ್ಲಿಯೂ ತಮ್ಮದೇ ಆದ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ.



Click it and Unblock the Notifications