Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮುಖದಲ್ಲಿ ಕಲೆ ಇದ್ದರೂ ಮದುವೆಗೆ ಒಪ್ಪಿದ ವೈದ್ಯ..! ಯುವತಿ ಕಣ್ಣೀರು..!
ಹುಡುಗರು ತಾವು ಮದುವೆಯಾಗುವ ಹುಡುಗಿಯರ ಬಗ್ಗೆ ಕನಸು ಕಟ್ಟಿಕೊಂಡಿತ್ತಾರೆ. ಹುಡುಗಿಯರು ಸಹ ಇದಕ್ಕಿಂತ ಭಿನ್ನವೇನಿಲ್ಲ ಎಲ್ಲರಲ್ಲೂ ತಮ್ಮ ಜೊತೆಗಾರರು ಹೀಗಿರಬೇಕು ಎಂಬ ಕಲ್ಪನೆಯಂತು ಇದ್ದೇ ಇರುತ್ತೆ. ಇನ್ನು ಸೌಂದರ್ಯದ ವಿಚಾರಕ್ಕೆ ಬಂದರು ಸಹ ಇದೆ ರೀತಿ ತಾವು ಮದುವೆಯಾಗುವ ಹುಡುಗ, ಗುಡುಗಿ ಸುಂದರವಾಗಿರಬೇಕು ಎಂಬ ಆಸೆ ಇರುತ್ತೆ.
ಈ ರೀತಿ ಆಸೆ ಇಟ್ಟುಕೊಳ್ಳುವುದು ಸಹ ಸಹಜವೆ. ಇದರಲ್ಲಿ ತಪ್ಪೇನು ಇಲ್ಲ. ಆದರೆ ಕೆಲವೊಂದು ಬಾರಿ ಹುಡುಗಿ ಸುಂದರವಾಗಿಲ್ಲ ಅಂತಲೋ, ಹುಡುಗ ಸುಂದರವಾಗಿಲ್ಲ ಅಂತಲೋ ಮದುವೆ ಮುರಿದು ಬೀಳುವುದು ಅಥವಾ ಮದುವೆ ನಿಶ್ಚಯವಾಗದೇ ಇರುವುದು ನಾವು ನೋಡಬಹುದು.

ಸುಂದರ ಮುಖ ಹೊಂದಿಲ್ಲ ಎಂಬ ಕಾರಣಕ್ಕೆ ಹುಡುಗಿ ವರ್ಷಗಳ ಕಳೆದರು ಮದುವೆಯಾಗದೆ ಉಳಿಯುವುದು ಅವರಲ್ಲಿ ಮಾನಸಿಕ ನೆಮ್ಮದಿ ಹಾಲಾಗುವಂತೆ ಮಾಡುತ್ತದೆ. ಇಂತಹ ಹಲವು ಉದಾಹರಣೆಗಳು ನಮ್ಮ ನಡುವೆ ಇದೆ. ಇದೇ ರೀತಿ ಇಲ್ಲೊಂದು ಕಡೆಯು ಸಹ ಯುವತಿಯೊಬ್ಬಳ ಮುಖದ ಮೇಲೆ ಕಜ್ಜಿಗಳಿದ್ದರೂ ಆಕೆಯನ್ನು ವಿವಾಹವಾಗಲು ಯುವಕ ಮುಂದೆ ಬಂದ ಕಾರಣ ಆಕೆ ಕಣ್ಣೀರಿಟ್ಟ ವಿಡಿಯೋ ವೈರಲ್ ಆಗಿದೆ.
ಮುಖದ ಮೇಲಿನ ಕಲೆಗಳಿಂದ ಆಕೆ ಎಲ್ಲಾ ಹುಡುಗರಿಂದ ನಿರಾಕರಣೆಗೊಂಡಿದ್ದಳು. ಹೀಗಾಗಿ ಮದುವೆಯಾಗುವ ಆಸೆಯನ್ನೇ ಬಿಟ್ಟಿದ್ದಳು. ಆದರೆ ವೈದ್ಯರೊಬ್ಬರ ಆಕೆಯ ಮದುವೆಗೆ ಒಪ್ಪಿದ್ದರಿಂದ ಆಕೆಯ ಖುಷಿಯಲ್ಲಿ ಕಣ್ಣೀರು ಹಾಕಿದ್ದಾಳೆ.
ವಧುವಿನ ಉಡುಪಿನಲ್ಲಿರುವ ಯುವತಿಯ ಮುಖದಲ್ಲಿ ಸಂತೋಷದ ಕಣ್ಣೀರು ಹರಿಯುತ್ತದೆ. ತನ್ನ ಮುಖದ ಮೇಲಿನ ಗುರುತುಗಳಿಂದಾಗಿ ನಿರಾಕರಣೆಗಳ ನೋಡಿ ನೋಡಿ ಬೇಸತ್ತಿದ್ದ ಆಕೆಗೆ ನಿಜವಾದ ಪ್ರೀತಿ ಸಿಕ್ಕ ಖುಷಿಯಲ್ಲಿ ತೇಲಾಡಿದ್ದಾಳೆ. ಅವಳು ತನ್ನನ್ನು ತಾನು ಹೇಗಿದ್ದಾನೋ ಹಾಗೆಯೇ ಸ್ವೀಕರಿಸುವ ವೈದ್ಯನನ್ನು ಮದುವೆಯಾಗುತ್ತಿದ್ದೇನೆ ಎನ್ನುತ್ತಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ ಮತ್ತು ಲೈಕ್ ಮಾಡಿದ್ದಾರೆ.
ವಿಡಿಯೋದಲ್ಲಿ ವಧು-ವರರು ಹೆಮ್ಮೆಯಿಂದ ಮದುವೆ ಕುರಿತು ಮಾತನಾಡಿದ್ದಾರೆ. "ನಾನು ಹೇಗೆ ಕಾಣುತ್ತೇನೆ ಎಂಬ ಕಾರಣದಿಂದ ನಾನು ಹುಡುಗನ ಹುಡುಕಲು ಹೆಣಗಾಡಿದ್ದೇನೆ. ಆದರೆ ಇಂದು ನಾನು ನನ್ನ ನ್ಯೂನತೆಗಳನ್ನು ಮೀರಿ ಕಾಣುವ ದಯೆಯ ವೈದ್ಯರನ್ನು ಮದುವೆಯಾಗುತ್ತಿದ್ದೇನೆ ಎಂದು ಅವಳು ಹಿಂದೆ ನಡೆದಿದ್ದ ಕಹಿ ಘಟನೆಗಳ ನೆನೆಯುತ್ತಿದ್ದಾಳೆ. ಆಕೆಗೆ ಈ ವೇಳೆ ಸಂತೋಷದ ಕಣ್ಣೀರು ಬರುತ್ತಿದೆ.
ಈ ವಿಡಿಯೋವನ್ನು ಮೊದಲು ಮೇಕಪ್ ಆರ್ಟಿಸ್ಟ್ ಅನುಪ್ರೀತ್ ಬಕ್ಷಿ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆದ ಬಳಿಕ 52 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ ಲಕ್ಷ ಲಕ್ಷ ಲೈಕ್ಸ್‌ಗಳು ವಿಡಿಯೋಗೆ ಬಂದಿವೆ. ಅವರ ಇಬ್ಬರ ಪ್ರೀತಿಗೆ ಬಹುಪರಾಕ್ ಕೇಳಿಬಂದಿದೆ. ಇಬ್ಬರ ಜೋಡಿ ಕಂಡು ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಹೀಗೆ ನೂರು ಕಾಲ ಬದುಕಿ ಬಾಳಲಿ ಎಂದು ಹಲವರು ಹಾರೈಸುತ್ತಿದ್ದಾರೆ.
ಈ ಹೊಗಳಿಕೆಯ ನಡುವೆಯೂ ಆಕೆಯನ್ನು ಮದುವೆಯಾಗಲು ನಿರಾಕರಿಸಿದ ಜನರ ವಿರುದ್ಧ ಟೀಕೆ, ಆಕ್ರೋಶ ಕೇಳಿಬಂದಿದೆ. ಮಹಿಳೆಯ ನೋಟದ ಆಧಾರದ ಮೇಳೆ ಆಕೆಯ ಗುಣ ಅಳೆಯಲು ಸಾಧ್ಯವಿಲ್ಲ. ಮುಖದಲ್ಲಿ ಕಲೆಗಳಿದ್ದ ಮಾತ್ರಕ್ಕೆ ಆಕೆ ಎಲ್ಲಾ ಪ್ರೀತಿ, ಮದುವೆಯಿಂದ ವಂಚಿತಳಾಗಬೇಕೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಆಕೆಯ ಮುಖದಲ್ಲಿ ಕಲೆ ಇದ್ದರೂ ಕೂಡ ಮದುವೆಯಾಗಲು ಒಪ್ಪಿದ ವೈದ್ಯರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಾಹ್ಯ ಸೌಂದರ್ಯಕ್ಕಿಂತಲೂ ಅಂತರಾಳವನ್ನು ಅರಿತುಕೊಳ್ಳುವ ಇಂತಹ ಮಂದಿ ಸಿಗುವುದು ಅಪರೂಪ ಎಂಬ ಅಭಿಪ್ರಾಯ ಕೇಳಿಬಂದಿದೆ.



Click it and Unblock the Notifications
