Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
50 ವರ್ಷದ ಬಳಿಕ ಹೊಸ ಬ್ಲಡ್ ಗ್ರೂಪ್..! ಗರ್ಭಿಣಿ ನೀಡಿದ್ದ ರಕ್ತದ ಮಾದರಿಯಲ್ಲಿ ಪತ್ತೆ!
ಯಾರಾದರು ಮಾನವನ ರಕ್ತದಲ್ಲಿ ಎಷ್ಟು ವಿಧವಿದೆ ಎಂದು ಕೇಳಿದರೆ 4 ಎಂದು ಸುಲಭವಾಗಿ ಹೇಳುತ್ತಿದ್ದೆವು. ಆದ್ರೆ ಇನ್ನು ಮುಂದೆ ಈ ಉತ್ತರ 5 ಎಂದು ಹೇಳಬೇಕಿದೆ. 4 ವಿಧದ ರಕ್ತದ ಗುಂಪಿನಲ್ಲಿ 8 ಮಾದರಿ ರಕ್ತವನ್ನು ನಾವು ನೋಡಬಹುದು. ಆದ್ರೆ ಈಗ ಈ ಗುಂಪಿಗೆ ಹೊಸದಾಗಿ ಮತ್ತೊಂದು ರಕ್ತದ ಗುಂಪು ಸೇರಿಕೊಂಡಿದೆ. ಈ ಕುರಿತ ಅತೀ ದೊಡ್ಡ ಅನ್ವೇಷಣೆಯಾಗಿದೆ.
ಬರೋಬ್ಬರಿ 50 ವರ್ಷದ ಬಳಿಕ ಹೊಸದೊಂದು ರಕ್ತದ ಮಾದರಿಯನ್ನು ತಜ್ಞರು ಪತ್ತೆ ಮಾಡಿದ್ದಾರೆ. ಹಾಗೆ ಇದು ಒಂದು ರಾತ್ರಿಯಲ್ಲಿ ಪತ್ತೆ ಮಾಡಿರುವುದಲ್ಲ, ನಿರಂತರ ಅಧ್ಯಯನದ ಮೂಲಕ ಅಂತಿಮ ನಿರ್ಧಾರಕ್ಕೆ ಬರಲಾಗಿದ್ದು, ಹೊಸದೊಂದು ಮಾದರಿಯನ್ನು ಜನರ ಮುಂದಿಡಲಾಗಿದೆ. ಸಾಮಾನ್ಯವಾಗಿ A, B, AB, O ರಕ್ತದ ಗುಂಪು ನೀವು ಕೇಳಿರುತ್ತೀರಿ.

ಈ ಹೊಸ ರಕ್ತದ ಮಾದರಿಯಲ್ಲಿ ಈಗ ABO ಮಾದರಿ ಸೇರಿಕೊಂಡಿದೆ. ಮೂರು ಬಗೆಯ ರಕ್ತದ ಸಂಯೋಗವು ಈ ಹೊಸ ರಕ್ತದ ಮಾದರಿಗೆ ಕಾರಣವಾಗಿದೆ ಎಂದು ವೈದ್ಯರು ವಿವರಿಸುತ್ತಾರೆ. 1972ರಲ್ಲಿ ಗರ್ಭಿಣಿಯೊಬ್ಬರ ರಕ್ತದ ಮಾದರಿಯಲ್ಲಿ ಹೊಸ ಸಂಯೋಗವು ಕಂಡುಬಂದಿತ್ತು. ಆದ್ರೆ ತಕ್ಷಣಕ್ಕೆ ಇದು ಹೊಸ ಮಾದರಿ ಎಂದು ಪರಿಗಣಿಸಲು ಸಾಧ್ಯವಿರಲಿಲ್ಲ. ಬರೋಬ್ಬರಿ 50 ವರ್ಷ ಈ ಮಾದರಿ ಹಾಗೂ ಸಂಯೋಗದ ಕುರಿತು ಅಧ್ಯಯನ ನಡೆಸಿ ಈಗ ಅಂತಿಮ ಫಲಿತಾಂಶ ಹೊರಬಿದ್ದಿದೆ.
1972 ರಲ್ಲಿ ಗರ್ಭಿಣಿ ಮಹಿಳೆ ನೀಡಿದ್ದ ರಕ್ತದಲ್ಲಿ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಮೇಲ್ಮೈ ಅಣುವು ಕಂಡುಬಂದಿರಲಿಲ್ಲ. ಆದ್ರೆ ಇದಕ್ಕೆ ಕಾರಣ ಏನಿರಬಹುದು ಎಂಬುದನ್ನು ಪತ್ತೆ ಮಾಡಲು ತಜ್ಞರು ಪರೀಕ್ಷೆಗೆ ಇಳಿದಿದ್ದರು. ನಂತರ UK ಮತ್ತು ಇಸ್ರೇಲ್‌ನ ಸಂಶೋಧಕರು ಮಾನವರಲ್ಲಿ ಹೊಸ ರಕ್ತದ ಗುಂಪಿನ ವ್ಯವಸ್ಥೆಯನ್ನು ವಿವರಿಸಲು ಮುಂದಾಗಿರುವುದಲ್ಲದೆ ಈ ಕುರಿತ ಅಧ್ಯಯನ ವರದಿಯನ್ನು ಪ್ರಕಟಿಸಿದ್ದಾರೆ.
ಹಿಂದಿನ ಸಂಶೋಧನೆಯು 99.9 ಪ್ರತಿಶತಕ್ಕಿಂತಲೂ ಹೆಚ್ಚಿನವರು 1972ರಲ್ಲಿ ಗರ್ಭಿಣಿಯ ರಕ್ತದ ಮಾದರಿಯಲ್ಲಿ ನಾಪತ್ತೆಯಾಗಿದ್ದ AnWj ಪ್ರತಿಜನಕವನ್ನು ಹೊಂದಿದ್ದಾರೆಂದು ಕಂಡುಹಿಡಿದಿದೆ. ಈ ಪ್ರತಿಜನಕವು ಮೈಲಿನ್ ಮತ್ತು ಲಿಂಫೋಸೈಟ್ ಪ್ರೋಟೀನ್‌ನಲ್ಲಿ ಮಾತ್ರ ಬದುಕುಳಿಯುತ್ತದೆ. ಆದ್ರೆ ಈ ಪ್ರತಿಜನಕ ಇಲ್ಲದೆ ಇರುವ ರಕ್ತದ ಗುಂಪನ್ನು MAL ರಕ್ತದ ಗುಂಪು ಎಂದು ಕರೆಯಲಾಗುತ್ತದೆ.
ಯಾರಾದರೂ ತಮ್ಮ MAL (Myelin and Lymphocyte Protein gene) ಜೀನ್‌ಗಳ ಎರಡೂ ನಕಲು ರೂಪಾಂತರ ಹೊಂದಿದ್ದರೆ ಅಂತವರಲ್ಲಿ ಪಾತ್ರವೇ ಈ AnWj ನೆಗೆಟಿವ್ ಬ್ಲಡ್ ಗ್ರೂಪ್ ಕಂಡುಬರುತ್ತದೆ, ಗರ್ಭಿಣಿಯ ರಕ್ತದ ಮಾದರಿಯೂ ಕೂಡ ಇದೇ ಸಂಯೋಗದಿಂದ ಮಾಡಲ್ಪಟ್ಟಿದೆ. ಪ್ರಮುಖ ಬ್ಲಡ್ ಗ್ರೂಪ್‌ನಲ್ಲಿರುವಂತೆ ಪಾಸಿಟಿವ್ ಹಾಗೂ ನೆಗೆಟಿವ್ ಮಾದರಿಯನ್ನು ಕೂಡ ಕಂಡುಕೊಳ್ಳಲಾಗಿದೆ.
ಸದ್ಯ ಈ ಹೊಸ ಬ್ಲಡ್ ಗ್ರೂಪ್ ಕುರಿತಂತೆ ಇನ್ನು ಪರೀಕ್ಷೆಗಳು ನಡೆಯುತ್ತಿದೆ. ಇದಕ್ಕೂ ಮೊದಲು ಬಾಂಬೆ ಬ್ಲಡ್ ಗ್ರೂಪ್ ಎಂಬ ವಿಭಿನ್ನ ಬ್ಲಡ್ ಗ್ರೂಪ್ ಒಂದು ವರದಿಯಾಗಿತ್ತು, ಇದು ಅಪರೂಪದಲ್ಲಿ ಅಪರೂಪದ ಬ್ಲಡ್ ಗ್ರೂಪ್ ಆಗಿತ್ತು. ದೆಹಲಿಯ ಇನ್ಸ್ ಟಿಟ್ಯೂಟ್ ಆಫ್ ಲಿವರ್ ಮತ್ತು ಬಿಲಿಯರ್ ಸೈನ್ಸ್ ಈ ಅಪರೂಪದ ಬ್ಲಡ್ ಗ್ರೂಪ್ ಪತ್ತೆ ಮಾಡಿತ್ತು.
ಈ ಬಾಂಬೆ ಬ್ಲಡ್ ಗ್ರೂಪ್ ಕೇವಲ 0.0004% ಮಾತ್ರ ಇದೆ. ಭಾರತದಲ್ಲಿ ಸುಮಾರು 10,000 ಜನರಲ್ಲಿ ಒಬ್ಬರು ಈ ಬಾಂಬೆ ಬ್ಲಡ್ ಗ್ರೂಪ್ ಹೊಂದಿರುತ್ತಾರೆ ಎಂದು ತಿಳಿದುಬಂದಿದೆ. ಇದನ್ನು ಕೂಡ ABO ರಕ್ತದ ಗುಂಪು ಎಂದು ಕೂಡ ಕರೆಯುತ್ತಾರೆ.



Click it and Unblock the Notifications