Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಜೇಡರ ಹುಳುಗಳ ಮಳೆಯಾಗುವುದು ನೋಡಿದ್ದೀರಾ..? ಇಲ್ಲಿದೆ ಭಯ ಹುಟ್ಟಿಸೋ ವಿಡಿಯೋ
ಕೆಲವೊಮ್ಮೆ ಈ ಭೂಮಿಯಲ್ಲಿ ಏನೆಲ್ಲಾ ವಿಚಿತ್ರಗಳು ಸಂಭವಿಸುತ್ತವೆ ಅಂದ್ರೆ ನಮ್ಮ ಕಣ್ಣನ್ನೇ ನಾವು ನಂಬಲು ಆಗುವುದಿಲ್ಲ. ಅದರಲ್ಲೂ ಆಕಾಶದಲ್ಲಿ ನಡೆಯುವ ವಿದ್ಯಮಾನಗಳು ನಮಗೆ ಅಚ್ಚರಿ ತರುವುದು ಹೊಸದಲ್ಲ. ಹಾಗೆ ನಾವು ಆಕಾಶದಿಂದ ಆಗುವ ಕೆಲವು ವಿಚತ್ರ ಮಳೆಗಳ ಕುರಿತು ನೋಡಿದ್ದೇವೆ, ಕೇಳಿದ್ದೇವೆ. ಮೀನಿನ ಮಳೆ, ಹುಳುಗಳ ಮಳೆ, ಆಲಿಕಲ್ಲು ಮಳೆ, ಬೂದಿ ಮಳೆ, ಹೀಗೆ ಹಲವು ರೀತಿಯ ವಿಚಿತ್ರ ಮಳೆಗಳ ನೀವು ಕೇಳಿರಬಹುದು.
ಇನ್ನು ಎಂದಾದರು ನೀವು ಜೇಡರ ಹುಳುಗಳ ಮಳೆ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಹೌದು ಅಚ್ಚರಿಯ ಘಟನೆಯೊಂದರಲ್ಲಿ ಆಕಾಶದಲ್ಲಿ ನೂರಾರು ಜೇಡರ ಹುಳುಗಳು ತೇಲಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ನೋಡುಗರ ಮೈ ನಡುಗಿಸಿದೆ. ಅದರಲ್ಲೂ ಇಷ್ಟೊಂದು ಜೇಡರ ಹುಳುಗಳನ್ನು ಒಂದೇ ಕಡೆ ಕಂಡು ಜನರು ಹುಬ್ಬೇರಿಸಿದ್ದಾರೆ.

ಈ ವಿದ್ಯಮಾನವನ್ನು ಸ್ಪೈಡರ್ ಅಪೋಕ್ಯಾಲಿಪ್ಸ್ ಸೀಸನ್ ಎಂದು ಕರೆಯಲಾಗುತ್ತದೆ. ಈ ವೇಳೆ ನೂರಾರು ಜೇಡರ ಹುಳುಗಳು ಸರದಿಯಲ್ಲಿ ವಲಸೆ ಹೊರಟಂತೆ ಒಂದರ ಹಿಂದೆ ಒಂದು ಹೊರಬರುತ್ತಿರುತ್ತದೆ. ಇದನ್ನು ನೋಡಲು ಜೇಡರ ಹುಳುಗಳ ಮಳೆಯಂತೆ ಕಾಣಿಸುತ್ತದೆ. ಸಾಮಾನ್ಯವಾಗಿ ಈ ವಿದ್ಯಮಾನವು ಬ್ರೆಜಿಲ್‌ನಲ್ಲಿ ಪ್ರತಿ ವರ್ಷ ನಡೆಯುತ್ತದೆ ಎನ್ನಲಾಗಿದೆ. ಡಿಸೆಂಬರ್‌ನಿಂದ ಮಾರ್ಚ್ ನಡುವಿನ ಸಮಯದಲ್ಲಿ ಈ ಸ್ಪೈಡರ್ ಅಪೋಕ್ಯಾಲಿಪ್ಸ್ ವಿದ್ಯಮಾನ ನಡೆಯಲಿದೆ.
ಅನೇಕ ಮಂದಿ ಬ್ರೆಜಿಲ್‌ನ ಈ ಬೆಚ್ಚಿ ಬೀಳಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೆ ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಕೂಡ ವಿವರಿಸಿದ್ದಾರೆ. ಆದರೆ ಇಂತಹ ವಿಚಿತ್ರ ಮೊದಲ ಬಾರಿಗೆ ನೋಡಿದ ಮಂದಿ ಮಾತ್ರ ಶಾಕ್‌ಗೆ ಒಳಗಾಗಿದ್ದಾರೆ. ಈ ಜೇಡರ ಹುಳುಗಳು ಮಾನವರಿಗೆ ಯಾವುದೇ ಹಾನಿ ಮಾಡುವುದಿಲ್ಲವಂತೆ.
ಈ ವಿಡಿಯೋವನ್ನು ಗೆನ್ನಡಿ ಸಿಮನೋವ್ಸ್ಕಿ ಎಂಬ ಎಕ್ಸ್ ಖಾತೆ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಹಾಗೆ ಬ್ರೆಜಿಲ್‌ನಲ್ಲಿ ಜೇಡಗಳು ಆಕಾಶವನ್ನು ಆಕ್ರಮಿಸಿಕೊಂಡಿವೆ. ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಶೀತ ವಾತಾವರಣ ಹಾಗೂ ಉಷ್ಣ ವಾತಾವರಣದ ನಡುವಿನ ಸಂದರ್ಭದಲ್ಲಿ ಈ ವಿದ್ಯಮಾನ ನಡೆಯಲಿದೆಯಂತೆ. ಅವು ಆಕಾಶದೆತ್ತರಕ್ಕೆ ಬಲೆಯನ್ನು ನಿರ್ಮಿಸಿ ಅದರ ಮೇಲೆ ಓಡಾಡುತ್ತವೆ. ಇದೊಂದು ವಲಸೆಯ ಪ್ರಕ್ರಿಯೆ ಇರಬಹುದು ಎಂದಿದ್ದಾರೆ.
ಜೇಡರ ಹುಳುಗಳು ತಮ್ಮ ಬಲೆಯನ್ನು ಈ ರೀತಿಯ ರಚನೆಯನ್ನಾಗಿ ಮಾಡುತ್ತವೆ, ಹೆಚ್ಚಾಗಿ ಹೆಣ್ಣು ಜೇಡಗಳು ಸಂತಾನೋತ್ಪತ್ತಿ ಪ್ರಕ್ರಿಯೆ ಇರಬಹುದು ಎಂದು ಕೂಡ ಅಂದಾಜಿಸಲಾಗಿದೆ. ಆದರೆ ಈ ಅಪರೂಪದ ವಿದ್ಯಮಾನ ನೋಡಿದ ಮಂದಿ ನಿಜಕ್ಕೂ ಶಾಕ್‌ಗೆ ಒಳಾಗಿದ್ದಾರೆ. ಬೇರೊಂದು ಗ್ರಹದಿಂದ ಈ ಹುಳುಗಳು ಭೂಮಿ ಮೇಲೆ ಇಳಿಯುತ್ತಿರುವಂತೆ ಕಾಣಿಸುತ್ತಿದೆ ಎಂದು ಅಚ್ಚರಿ ಹೊರಹಾಕಿದ್ದಾರೆ.
ಎಲ್ಲಾ ಜೇಡಗಳು ಒಂದೇ ರೀತಿ ಕಾಣಿಸುತ್ತವೆ. ಹಾಗೆ ಮಳೆ ಬಂದಂತೆ ಕಾಣಿಸುತ್ತದೆ. ಸ್ವಲ್ಪ ಸಮಯದ ಬಳಿಕ ಇವು ಹಣೆದಿರುವ ಬಲೆಯ ಸಹಾಯದಿಂದ ಮತ್ತೆ ಮರಗಳಲ್ಲಿನ ಎಲೆಗಳ ನಡವೆ ಮರೆಯಾಗುತ್ತವೆ ಎನ್ನಲಾಗಿದೆ. ಆದರೆ ಇಷ್ಟೊಂದು ಜೇಡರ ಹುಳುಗಳು ಎಲ್ಲಿ ಅಡಗಿರುತ್ತವೆ ಎಂಬುದು ನೋಡುಗರಲ್ಲಿ ಅಚ್ಚರಿ ಹುಟ್ಟಿಸಿದೆ.
ಹಾಗೆ ಬ್ರೆಜಿಲ್‌ನ ಈ ವಿದ್ಯಮಾನ ನೋಡಿದ ಬಳಕೆದಾರರು ಈ ಸ್ಥಳ ಯಾವುದು? ಅಲ್ಲಿಂದ ಮತ್ತಷ್ಟು ದೂರ ಸಾಗುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಜೇಡರ ಮಳೆಯಾದರೆ ಮುಂದೆ ಮಾನವ ಭೂಮಿ ತೊರೆದು ಹೋಗಬೇಕಾದ ಸ್ಥಿತಿ ಬರಬಹುದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
