Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ಫೋಟೋದಲ್ಲಿ ಎಷ್ಟು ಪ್ರಾಣಿಗಳಿವೆ..? ಉತ್ತರ ಹುಡುಕುವಿರಾ?
ಸಾಮಾಜಿಕ ಜಾಲತಾಣಗಳಲ್ಲಿ ಆಪ್ಟಿಕಲ್ ಇಲ್ಯೂಷನ್‌ಗೆ ಸಂಬಂಧಿಸಿದ ಹತ್ತು ಹಲವು ಫೋಟೋಗಳು ಹರಿದಾಡುತ್ತಿರುತ್ತವೆ. ಅದ್ರಲ್ಲು ಕೆಲವೊಂದು ನಿಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಆಪ್ಟಿಕಲ್ ಇಲ್ಯೂಷನ್ ಒಂದು ಉತ್ತಮ ಮಿದುಳಿನ ವ್ಯಾಯಾಮವಾಗಿದ್ದು ಅದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಬಹಳ ಸಹಾಯಕವಾಗಿದೆ.
ಆಪ್ಟಿಕಲ್ ಇಲ್ಯೂಷನ್‌ಗಳು ನಿಮ್ಮ ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು ಮತ್ತು ಸೃಜನಶೀಲ ಚಿಂತನೆಯನ್ನು ಉತ್ತೇಜಿಸಬಹುದು. ಈ ಚಟುವಟಿಕೆಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮೆಮೊರಿ ಸುಧಾರಿಸಲು ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಮೆದುಳನ್ನು ಸಕ್ರಿಯವಾಗಿ ಮತ್ತು ತೊಡಗಿಸಿಕೊಳ್ಳಲು ಅವು ಉತ್ತಮ ಮಾರ್ಗವಾಗಿದೆ.
ಅದೇ ರೀತಿ ಇಲ್ಲೊಂದು ಫೋಟೊ ಸಹ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ನೋಡುಗರ ತಲೆ ಕೆಡಿಸಿದೆ. ಹೌದು ಇಲ್ಲೊಂದು ಫೋಟೋದಲ್ಲಿ ಒಟ್ಟು ಎಷ್ಟು ಪ್ರಾಣಿಗಳಿವೆ ಎಂದು ಕಂಡು ಹಿಡಿಯಿರಿ ಎಂಬ ಸವಾಲಿನ ಪ್ರಶ್ನೆಯೊಂದಿಗೆ ಹರಿಬಿಡಲಾಗಿದೆ.

ಈ ಚಿತ್ರದಲ್ಲಿ ನೀವು ನೋಡುತ್ತಿರುವುದು ಒಂದರ ಒಳಗೊಂದು ಪ್ರಾಣಿ ಅವಿತಿರುವ ಫೋಟೋ ಇದಾಗಿದೆ. ಇದರಲ್ಲಿ ಎಷ್ಟು ಪ್ರಾಣಿ ಇದೆ ಎಂಬುದನ್ನು ಪತ್ತೆ ಮಾಡುವುದೇ ನಿಮ್ಮ ಸವಾಲಾಗಿದೆ. ಮೊದಲು ನೀವು ಈ ಫೋಟೋ ನೋಡಿದಾಗ ಮೇಲ್ನೋಟಕ್ಕೆ ಒಂದಿಷ್ಟು ಪ್ರಾಣಿಗಳ ಕಾಣಿಸಬಹುದು. ಆದರೆ ಇದರಲ್ಲಿ ಎಷ್ಟು ಪ್ರಾಣಿಗಳಿ ಅಡಗಿವೆ ಎಂಬುದನ್ನು ಪತ್ತೆ ಮಾಡುವಲ್ಲಿ ಹಲವರು ಎಡುವಿದ್ದಾರೆ.
ಎಕ್ಸ್‌ನಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗುತ್ತಿದೆ. ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಈ ಫೋಟೊ ವೀಕ್ಚಿಸಿದ್ದು ಹಲವರು ತಮ್ಮ ಅನುಭವಕ್ಕೆ ಬಂದ ಉತ್ತರ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ 4 ಪ್ರಾಣಿಗಳಿವೆ ಎಂಬುದರಿಂದ ಹಿಡಿದು 11 ಪ್ರಾಣಿ ಇವೆ ಎಂಬ ಅಚ್ಚರಿಯ ಉತ್ತರವೂ ಈ ಫೋಟೋಗೆ ಬಂದಿದೆ.
ನೀವೆಷ್ಟು ಪ್ರಾಣಿ ಗುರುತಿಸಿದ್ದೀರಿ?
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬ್ರೈನ್ ಟೀಸರ್ ಗೇಮ್‌ಗಳು ಕೇಂದ್ರ ನರಮಂಡಲದ ಮೇಲೆ ಅನುಕೂಲಕರವಾಗಿ ಪರಿಣಾಮ ಬೀರುತ್ತವೆ ಮತ್ತು ಒತ್ತಡದ ಮಾರ್ಗವನ್ನು ಸಕ್ರಿಯಗೊಳಿಸುತ್ತವೆ ಎಂದು ಕಂಡುಕೊಳ್ಳಲಾಗಿದೆ.
ಸಂಶೋಧನೆಯ ಆಧಾರದ ಮೇಲೆ, ಆಟಗಾರರ ಗಮನವು ತರ್ಕದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಬ್ರೈನ್ಟೀಸರ್ ಆಟಗಳನ್ನು ಆಡುವಾಗ ಉಂಟಾಗುವ ಒತ್ತಡವನ್ನು ಮಿತಿಗೊಳಿಸುತ್ತದೆ.
ಹಾಗಾದ್ರೆ ನೀವು ಈ ಫೋಟೋದಲ್ಲಿ ನಿಮಗೆ ಎಷ್ಟು ಪ್ರಾಣಿಗಳು ಕಾಣಿಸುತ್ತಿವೆ ಎಂಬುದನ್ನು ಲೆಕ್ಕ ಹಾಕಿ ನೋಡಿ.
ಅಚ್ಚರಿ ಎಂದರೆ ಒಬ್ಬೊಬ್ಬರಿಗೆ ಒಂದೊಂದು ಸಂಖ್ಯೆಯಲ್ಲಿ ಪ್ರಾಣಿಗಳು ಸಿಕ್ಕಿವೆ. ಅದರಲ್ಲಿ ಕೆಲವರು ಒಂದೊಂದು ಬಾರಿ ಒಂದೊಂದು ಸಂಖ್ಯೆ ಹೇಳಿದ್ದಾರೆ. ಆದ್ರೆ ಇದರಲ್ಲಿ ಎಷ್ಟು ಪ್ರಾಣಿಗಳು ಅಡಗಿವೆ ಎಂಬುದಕ್ಕೆ ಸರಿಯಾದ ಉತ್ತರ ನೀಡಿದವರ ಸಂಖ್ಯೆ ಬಹಳ ಕಡಿಮೆಯಾಗಿದೆ.
ನಿಮ್ಮ ಕಣ್ಣು ಇಲ್ಲಿ ನಿಮಗೆ ಮೋಸ ಮಾಡಬಹುದು. ಏಕೆಂದರೆ ಇದರಲ್ಲಿ ಎಷ್ಟು ಪ್ರಾಣಿಗಳಿವೆ ಎಂಬುದನ್ನು ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಇದರಲ್ಲಿ ದೊಡ್ಡದಾದ ಒಂದು ಕರಡಿ, ಹಸು, ತೋಳ, ಮೊಲ, ಗಿಳಿ ಹಾಗೂ ಒಂದು ಇಲಿ ನಿಮಗೆ ಕಾಣಿಸಬಹುದು. ಆದರೆ ಇದರಲ್ಲಿ ಇನ್ನೆಷ್ಟು ಪ್ರಾಣಿ ಅಡಗಿವೆ ಎಂಬುದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಪ್ರಶ್ನೆ ನೆಟ್ಟಿಗರಲ್ಲಿ ಕಾಡುತ್ತಲೇ ಇದೆ.



Click it and Unblock the Notifications
