Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಈ ಮೂವರು ಸುಂದರಿಯರಲ್ಲಿ ಒಬ್ಬಾಕೆ ಏಲಿಯನ್..! ಯಾರು ಎಂದು ಗುರುತಿಸುವಿರಾ?
ನಾವು ಆನ್‌ಲೈನ್‌ನಲ್ಲಿ ನಿತ್ಯ ಒಂದಲ್ಲಾ ಒಂದು ಬ್ರೈನ್ ಟೀಸರ್ ಅಥವಾ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ನೋಡುತ್ತಿರುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಈ ಫೋಟೋಗಳು ಎಲ್ಲರ ತಲೆಗೆ ಹುಳ ಬಿಡುತ್ತವೆ. ಚಿತ್ರದಲ್ಲಿ ಅಡಗಿರುವ ಪ್ರಶ್ನೆಯನ್ನ ಬಗೆಹರಿಸುವ ಸವಾಲು ನಿಮ್ಮ ಮುಂದೆ ಇಡಲಿವೆ. ಆದರೆ ಈ ಸಾವಾಲುಗಳನ್ನು ಬಗೆಹರಿಸುವುದು ಅಷ್ಟೊಂದು ಸುಲಭವಲ್ಲ.
ನಾವು ಈ ಚಿತ್ರಗಳನ್ನು ಎಷ್ಟು ನೋಡಿದರೂ ಕೂಡ ಅವು ನಮಗೆ ಉತ್ತರ ಸಿಗುವ ಬದಲು ಮತ್ತಷ್ಟು ಪ್ರಶ್ನೆಗಳನ್ನ ನಮ್ಮ ಮುಂದಿಡುತ್ತವೆ, ಅಲ್ಲಿ ಅಡಗಿರುವ ಉತ್ತರ ಹುಡುಕಲು ಪರದಾಡಬೇಕಾಗುತ್ತದೆ. ಹಾಗೆ ಇಲ್ಲೊಂದು ಫೋಟೋ ಸಹ ವೈರಲ್ ಆಗಿದೆ. ಹಾಗಾದ್ರೆ ಏನಿದು ಹೊಸ ಚಿತ್ರ, ಇದರಲ್ಲಿ ಅಡಗಿರುವ ಸವಾಲು ಏನು ಎಂಬುದನ್ನು ನೋಡೋಣ.

(Image: Pinterest)
ಈ ವೈರಲ್ ಆಗಿರುವ ಚಿತ್ರದಲ್ಲಿ ಮೂವರು ಯುವತಿಯರನ್ನು ನೋಡಬಹುದು. ಸುಂದರವಾದ ಅಪ್ಸರೆಯಂತಹ ರೂಪ ಹೊಂದಿರುವ ಮೂವರು ನಿಂತಿರುವ ಚಿತ್ರ ಇದಾಗಿದೆ. ಈ ಮೂವರಲ್ಲಿ ಇಬ್ಬರು ಮಾನವರು ಒಬ್ಬಾಕೆ ಏಲಿಯನ್ ಎಂದು ಹೇಳಲಾಗಿದೆ. ಹಾಗಾದ್ರೆ ಆ ಏಲಿಯನ್ ಯಾರು? ಹೌದು ಈ ಚಿತ್ರದಲ್ಲಿ ಅಡಗಿರುವ ಏಲಿಯನ್ ಗುರುತಿಸುವುದೇ ಇಲ್ಲಿನ ಸವಾಲಾಗಿದೆ.
ಮೇಲ್ನೋಟಕ್ಕೆ ಈ ಚಿತ್ರದಲ್ಲಿರುವ ಮೂವರು ಸುಂದರ ಯುವತಿಯರು ಸಹ ಮಾನವರಂತೆ ಕಾಣುತ್ತಾರೆ, ಆದರೆ ಇದರಲ್ಲಿ ಒಬ್ಬಾಕೆ ಏಲಿಯನ್. ನಿಮ್ಮ ಕಣ್ಣಿಗೆ ಇದೊಂದು ದೊಡ್ಡ ಸವಾಲಿನ ಚಿತ್ರವಾಗಿದೆ. ಏಕೆಂದರೆ ಇದರಲ್ಲಿ ಯಾರು ಏಲಿಯನ್ ಎಂಬುದನ್ನು ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ. ಮೂವರು ಸುಂದರಿಯರು ನೋಡಲು ಒಂದೇ ರೀತಿ ಕಾಣುತ್ತಾರೆ.
ಆದ್ರೆ ನೀವು ಗಮನವಿಟ್ಟು ನೋಡಿದಾಗ ಈ ಮೂವರಲ್ಲಿ ಒಬ್ಬಾಕೆ ಏಲಿಯನ್ ಎಂಬುದಂತು ತಿಳಿಯುತ್ತದೆ. ನೀವು ಸಹ ಯಾರು ಏಲಿಯನ್ ಎಂಬುದನ್ನು ಹುಡುಕಲು ಪ್ರಯತ್ನಿಸಿ ನೋಡಿ. ಇದರಿಂದ ನಿಮ್ಮ ಬುದ್ಧಿ ಶಕ್ತಿಗೂ ಒಂದಿಷ್ಟು ಕೆಲಸ ಕೊಡಿ. ಮೆದುಳಿಗೆ ಸ್ವಲ್ಪ ವ್ಯಾಯಾಮ ಮಾಡಿಸಿದಂತೆ ಆಗಲಿದೆ. ಆದರೆ ಎಷ್ಟು ಹುಡುಕಿದರು ಉತ್ತರ ಸಿಗದಿದ್ದರೆ ನಾವು ಉತ್ತರ ಹೇಳುತ್ತೇವೆ ನೋಡಿ.
ಮೂವರಲ್ಲಿ ಏಲಿಯನ್ ಯಾರು?
ಈ ಮೂರು ಸುಂದರಿಯರ ಚಿತ್ರದಲ್ಲಿ ಒಬ್ಬಾಕೆ ಏಲಿಯನ್ ಯಾರು ಎಂಬುದನ್ನು ಗುರುತಿಸುವಲ್ಲಿ ನೀವು ಸೋತಿದ್ದರೆ ನಾವು ಹೇಳುತ್ತೇವೆ ನೋಡಿ. ಈ ಮೂವರಲ್ಲಿ ಕೆಂಪು ಬಟ್ಟೆ ಧರಿಸಿ ಬಲ ಬದಿಯಲ್ಲಿ ನಿಂತಿರುವ ಸುಂದರ ಯುವತಿಯೇ ಏಲಿಯನ್. ಅರೇ ಅದು ಹೇಗೆ ಆಕೆಯನ್ನು ಏಲಿಯನ್ ಎಂದು ಗುರುತಿಸಬಹುದು ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು.
ಇಂತಹ ಸವಾಲು ಚಿತ್ರದಲ್ಲಿ ಸಣ್ಣದೊಂದು ಸುಳಿವು ನೀಡಿರುತ್ತಾರೆ ಅಷ್ಟೆ ನಾವು ಅದನ್ನು ಗುರುತಿಸಬೇಕು. ಈ ಚಿತ್ರದಲ್ಲಿ ನಾವು ಈ ಕೆಂಪು ಬಟ್ಟೆ ಧರಿಸಿರುವ ಯುವತಿಯ ಕೈ ಬೆರಳಿನ ಬಣ್ಣ ಗಮನಿಸಬಹುದು. ಒಂದು ಬೆರಳಿನ ಬಣ್ಣ ನೀಲಿಯಾಗಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾವೆಲ್ಲಾ ನೋಡಿದಂತೆ ಏಲಿಯನ್‌ಗಳ ಮೈ ಬಣ್ಣ ನೀಲಿಯಾಗಿರುವುದನ್ನು ನಾವು ನೋಡಬಹುದು. ಇಲ್ಲಿಯೂ ಕೂಡ ನೀಲಿ ಬಣ್ಣದ ಕೈ ಬೆರಳನ್ನು ನೋಡಬಹುದು. ಹೀಗಾಗಿ ಕೆಂಪು ಬಣ್ಣದ ಬಟ್ಟೆ ಹಾಕಿಕೊಂಡಿರುವಾಕೆ ಇಲ್ಲಿ ಏಲಿಯನ್ ಎಂದು ಗುರುತಿಸಬಹುದು.
ನಾವು ಉತ್ತರಿಸುವ ಮುನ್ನವೇ ನೀವಾಗಿಯೇ ಏಲಿಯನ್ ಅನ್ನು ಗುರುತಿಸಿದ್ದರೆ ನಿಮ್ಮ ಬುದ್ದಿಶಕ್ತಿ, ಕಣ್ಣಿನ ದೃಷ್ಟಿ ಎನ್ನಾಗಿ ಕೆಲಸ ಮಾಡುತ್ತಿದೆ ಎಂಬ ಅರ್ಥ ಹಾಗೆ ನಿಮಗೆ ತಾಳ್ಮೆಯು ಹೆಚ್ಚಾಗಿದೆ ಎಂದು ಅರ್ಥೈಸಬಹುದು. ಇಂತಹ ಹತ್ತಾರು ಬ್ರೈನ್ ಟೀಸರ್ ಅನ್ನು ನೀವು ಆಗಾಗ ಬಗೆಹರಿಸುತ್ತಿದ್ದರೆ ನಿಮಗೆ ಹೆಚ್ಚಿನ ತಾಳ್ಮೆ ಹಾಗೆ ಬುದ್ದಿ ಚುರುಕಾಗುವ ಒಂದು ವ್ಯಾಯಾಮವಾಗಿರಲಿದೆ.



Click it and Unblock the Notifications
