ಬಾಲಿವುಡ್ ಹೀ-ಮ್ಯಾನ್ ನಟ ಧರ್ಮೇಂದ್ರ ನಿಧನ; ಸೂಪರ್ ಹಿಟ್ ಸಿನಿಮಾಗಳು ಯಾವುದು? ಆಸ್ತಿ ಎಷ್ಟಿದೆ?

ಬಾಲಿವುಡ್ ಹೀಮ್ಯಾನ್ ನಟ ಧರ್ಮೇಂದ್ರ ಅನಾರೋಗ್ಯ ಹಿನ್ನೆಲೆ ಇಂದು ನಿಧನರಾಗಿದ್ದಾರೆ. ಅವರು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 6 ದಶಕಗಳಿಗೂ ಹೆಚ್ಚು ಸಮಯ ಅವರು ಬಾಲಿವುಡ್ ಸಿನಿಮಾಗಾಗಿ ಶ್ರಮಿಸಿದ್ದಾರೆ. ಈಗ ಅವರ ಪತ್ನಿ ಹೇಮಾ ಮಾಲಿನಿ, ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಮತ್ತು ಪುತ್ರಿಯರಾದ ಇಶಾ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ.

ಧರ್ಮೇಂದ್ರ ಅವರನ್ನು ಈ ತಿಂಗಳ ಆರಂಭದಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ನವೆಂಬರ್ 12 ರಂದು ಅವರ ಆರೋಗ್ಯ ಸುಧಾರಣೆ ಹಿನ್ನೆಲೆ ಮನೆಗೆ ಕರೆತರಲಾಗಿತ್ತು, ಹಾಗೆ ಮನೆಯಲ್ಲೇ ಚಿಕಿತ್ಸೆ ಮುಂದುವರೆದಿತ್ತು. ಆದ್ರೆ ಈಗ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Bollywood Actor Dharmendra Passes Away

ಬಾಲಿವುಡ್ ಸಿನಿಮಾದಲ್ಲಿ ದಂತೆಕಥೆಯಾದ ಧರ್ಮೇಂದ್ರ

ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ನಟ ಧರ್ಮೇಂದ್ರ ಅವರು ಪಂಜಾಬ್‌ನ ಹಳ್ಳಿಯಲ್ಲಿ 1935ರಲ್ಲಿ ಕೇವಲ್ ಕ್ರಿಶನ್ ಡಿಯೋಲ್ ಜನನವಾಯಿತು. ಅವರ ತಂದೆ ಪಂಜಾಬ್‌ನ ಶಾಲೆಯೊಂದರಲ್ಲಿ ಹೆಡ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಪುತ್ರ ಕೂಡ ತನ್ನಂತೆ ಶಿಕ್ಷಕನಾಗಬೇಕು ಎಂಬ ಆಸೆ ಅವರದ್ದಾಗಿತ್ತು. ಆದ್ರೆ ಅವರು ಚಿಕ್ಕವರಿದ್ದಾಗಿನಿಂದ ನಾಟಕ, ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇದೇ ಆಸೆಯೊಂದಿಗೆ ಅವರು ಮುಂಬೈಗೆ ಆಗಮಿಸಿದ್ದರು. ಆರಂಭದಲ್ಲಿ ಅವರು ನಟನೆಗಾಗಿ ಆಗಮಿಸದೆ ಇದ್ದರೂ, ಇಂದು ಮ್ಯಾಗಜಿನ್‌ನಲ್ಲಿ ಬಂದಿದ್ದ ಜಾಹೀರಾತು ಅವರನ್ನು ಮುಂಬೈಗೆ ಬರುವಂತೆ ಮಾಡಿತ್ತು.

ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದ ಸಂಸ್ಥೆಯೊಂದು ನವ ಯುವಕರ ಆಯ್ಕೆಗೆ ಮುಂದಾಗಿತ್ತು. ಈ ಸಮಯದಲ್ಲಿ ಮನೆಯವರನ್ನು ಒಪ್ಪಿಸಿದ ಧರ್ಮೇಂದ್ರ ಅವರು ಮುಂಬೈ ಆಗಮಿಸಿದರು. ಹಾಗೆ ಆಡಿಷನ್ ನೀಡಲು ಮುಂದಾದರು. ಅಲ್ಲಿಂದ ಅವರ ಅದೃಷ್ಟವೇ ಬದಲಾಯಿತು. 1960ರಲ್ಲಿ ಅವರು ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡರು.


ಧರ್ಮೇಂದ್ರ ನಟನೆಯ ಸೂಪರ್ ಹಿಟ್ ಸಿನಿಮಾಗಳು

ತಮ್ಮ ಮೊದಲ ಸಿನಿಮಾ 'ದಿಲ್ ಭಿ ತೇರಾ ಹಮ್ ಭಿ ತೇರೆ ಮಿಲಿ' ಅವಕಾಶ ಗಿಟ್ಟಿಸಿಕೊಂಡರು. ಇದಾದ ಬಳಿಕ ಹತ್ತಾರು ಸಿನಿಮಾಗಳು ಒಂದೇ ವರ್ಷದಲ್ಲಿ ತೆರೆಗೆ ಬರುತ್ತಿದ್ದವು ಅದ್ರಲ್ಲಿ ಶೋಲೆ, ಸೀತಾ ಔರ್ ಗೀತಾ, ಚುಪ್ಕೆ ಚುಪ್ಕೆ, ಶರಾಬಿ ಮತ್ತು ರಾಜಾ ಜಾನಿ ಸೂಪರ್ ಸಿನಿಮಾ ಎನಿಸಿಕೊಂಡವು. ಹಾಗೆ ಫೂಲ್ ಔರ್ ಪತ್ತರ್, ಯಾದೋಂಕಿ ಬಾರಾತ್ ಮತ್ತು ಧರಮ್ ವೀರ್ ಸಿನಿಮಾಗಳು ಅವರ ಸಿನಿ ಪಯಣದಲ್ಲಿ ವಿಶೇಷ ಸಿನಿಮಾಗಳಾಗಿ ಉಳಿದವು. ಧರ್ಮೇಂದ್ರ ಅವರು ತಮ್ಮ ವೃತ್ತಿ ಜೀವನದಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ಹಲವು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.


ಧರ್ಮೇಂದ್ರ ಒಟ್ಟು ಆಸ್ತಿ ಎಷ್ಟು?

ಧರ್ಮೇಂದ್ರ ಅವರು ಮುಂಬೈ ಬರುವಾಗ ಅವರ ಆಸ್ತಿಯೇ ಇರಲಿಲ್ಲ. ಆದ್ರೆ ಈಗ ಅವರು ಬರೋಬ್ಬರಿ 450 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಲೋನಾವಾಲ ಬಳಿ ಧರ್ಮೇಂದ್ರ ಅವರಿಗೆ ಸೇರಿದ 100 ಎಕರೆ ಫಾರ್ಮ್‌ಹೌಸ್ ಇದೆ. ಮಹಾರಾಷ್ಟ್ರದಲ್ಲಿ ಸುಮಾರು ₹17 ಕೋಟಿ ಬೆಲೆಯ ಸ್ಥಿರಾಸ್ತಿ ಹೊಂದಿದ್ದಾರೆ. 88 ಲಕ್ಷದ ಕೃಷಿ ಭೂಮಿ, ಹಾಗೂ ₹52 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಮೇಲೆ ಹೂಡಿಕೆ ಕೂಡ ಮಾಡಿದ್ದಾರೆ. ಹಾಗೆ ಮುಂಬೈನಲ್ಲಿ ಸ್ವಂತ ಮನೆ ಸಹ ಇದೆ.

English summary

Bollywood Actor Dharmendra Passes Away; List Of Super Hit Movies Of Dharmendra

Dharmendra was admitted to Breach Candy Hospital in Mumbai earlier this month. He was brought home on November 12 after his health improved.
Story first published: Monday, November 24, 2025, 15:02 [IST]
X
Desktop Bottom Promotion