Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 19ಕ್ಕೆ ಬ್ಲೂ ಮೂನ್-ಸೂಪರ್ ಮೂನ್..! ನೋಡೋದು ಎಲ್ಲಿ..? ಯಾವ ಸಮಯ?
ಖಗೋಳ ವಿಜ್ಞಾನ ಅಂದರೇನೇ ಹೀಗೆ ಒಂದಲ್ಲಾ ಒಂದು ತುಕೂಹಲ ಮೂಡಿಸುತ್ತೆ. ಆಕಾಶದಲ್ಲಿ ನಡೆಯುವ ಒಂದೊಂದು ವಿಚಾರಗಳು ಸಹ ಕುತೂಹಲ ಮೂಡಿಸುತ್ತೆ. ಆಕಾಶದಲ್ಲಿ ಹುಣ್ಣಿಮೆ, ಅಮವಾಸ್ಯೆ, ಗ್ರಹಣ ಹೀಗೆ ಚಂದ್ರನ ಅಂಗಳದಲ್ಲಿ ಒಂದಲ್ಲಾ ಒಂದು ಕುತೂಹಲಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿಯೇ ಚಂದ್ರನ ಮೇಲೆ ವಿಜ್ಞಾನಿಗಳಿಗೆ ಎಂದಿಗೂ ಕುತೂಹಲ ಕಡಿಮೆ ಆಗಿಯೇ ಇಲ್ಲ.
ಇನ್ನು ಆಗಾಗ ಸಂಭವಿಸುವ ಬ್ಲೂ ಮೂನ್, ಸೂಪರ್ ಮೂನ್‌ಗಳು ಎಲ್ಲರ ಅಚ್ಚರಿಗೆ ಕಾರಣವಾಗುತ್ತದೆ. ಇನ್ನು ನಾವು ವರ್ಷ 4 ಸೂಪರ್ ಮೂನ್‌ಗಳ ನಿರೀಕ್ಷಿಸಬಹುದು. ಅದ್ರಲ್ಲಿ ಒಂದು ಆಗಸ್ಟ್ 19ರ ಸೋಮವಾರ ಜರುಗುತ್ತಿ. ಇದು ಬ್ಲೂನ್ ಮೂನ್ ಸೂಪರ್ ಮೂನ್ ಆಗಿರಲಿದೆ.

ನಾಸಾದ ಪ್ರಕಾರ ಚಂದ್ರನು ಭೂಮಿಗೆ ಸಮೀಪದಲ್ಲಿರುವಾಗ ಈ ಸೂಪರ್ ಮೂನ್ ವಿದ್ಯಮಾನ ಸಂಭವಿಸುತ್ತದೆ. ಸೂಪರ್‌ಮೂನ್ ಎಂಬ ಪದವನ್ನು ಖಗೋಳಶಾಸ್ತ್ರಜ್ಞ ರಿಚರ್ಡ್ ನೊಲ್ಲೆ ಅವರು 1979 ರಲ್ಲಿ ಮೊದಲ ಬಾರಿಗೆ ಬಳಸಿದ್ದರು. ಪೂರ್ಣ ಸೂಪರ್‌ಮೂನ್‌ಗಳನ್ನು ವರ್ಷದ ಪ್ರಕಾಶಮಾನವಾದ ಮತ್ತು ದೊಡ್ಡ ಹುಣ್ಣಿಮೆಗಳು ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಚಂದ್ರನಿಗಿಂತ ಸುಮಾರು ಶೇ.30 ರಷ್ಟು ಪ್ರಕಾಶಮಾನವಾಗಿ ಮತ್ತು ಶೇ.14 ರಷ್ಟು ದೊಡ್ಡದಾಗಿ ಕಾಣುತ್ತದೆ.
ಮತ್ತೊಂದೆಡೆ ಬ್ಲೂ ಮೂನ್‌ನಲ್ಲಿ ಚಂದ್ರನ ಗಾತ್ರ ದೊಡ್ಡದಾಗಿ ಇರುವುದಿಲ್ಲ ಜೊತೆಗೆ ಚಂದ್ರ ನೀಲಿ ಬಣ್ಣದಲ್ಲೂ ಕಾಣಿಸಿವುದಿಲ್ಲ. ಬ್ಲೂ ಮೂನ್ ಎಂದ ತಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣುತ್ತಾನೆ ಎಂದೆಲ್ಲಾ ಊಹಿಸಬೇಡಿ, ಒಂದೇ ತಿಂಗಳಿನಲ್ಲಿ ಹುಣ್ಣಿಮೆ ಎರಡು ಬಾರಿ ಬಂದರೆ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ಇದು ಆಗಸ್ಟ್ 19 ರಂದು ಗೋಚರಿಸುವ ಬ್ಲೂ ಮೂನ್ ಪ್ರಕಾರವಾಗಿದೆ. ಎರಡನೆಯ ವಿಧವು ಒಂದೇ ಕ್ಯಾಲೆಂಡರ್ ತಿಂಗಳಲ್ಲಿ ಎರಡನೇ ಹುಣ್ಣಿಮೆಯನ್ನು ಸೂಚಿಸುತ್ತದೆ. ಮೊದಲ ಬ್ಲೂ ಮೂನ್ 1528 ರಲ್ಲಿ ಕಾಣಿಸಿಕೊಂಡಿರುವ ಕುರಿತು ದಾಖಲೆಗಳವೆ. ಬ್ಲೂ ಮೂನ್ ಎಂಬ ವಿದ್ಯಮಾನ ಒಂದು ವರ್ಷದಲ್ಲಿ ಹಲವು ಬಾರು ಘೋಚರಿಸಬಹುದು.
ಬ್ಲೂ ಮೂನ್ ಎಂಬ ಹೆಸರು 'ದ್ರೋಹಿ ಚಂದ್ರ' ಎಂಬರ್ಥದ ಹಳೆಯ ಪದಗುಚ್ಛದಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಸುಮಾರು 1940 ರ ದಶಕದಲ್ಲಿ, ಎರಡು ಹುಣ್ಣಿಮೆಗಳೊಂದಿಗೆ ಒಂದು ತಿಂಗಳ ಎರಡನೇ ಹುಣ್ಣಿಮೆಯನ್ನು 'ಬ್ಲೂ ಮೂನ್' ಎಂದು ಕರೆಯಲಾಯಿತು.
ಬ್ಲೂ ಮೂನ್ ಹಾಗು ಸೂಪರ್ ಮೂನ್ ಯಾವಾಗ ವೀಕ್ಷಿಸಬಹುದು?
ಬ್ಲೂ ಮೂನ್ ಹಾಗೂ ಸೂಪರ್ ಮೂನ್ ಎರಡೂ ಆಗಸ್ಟ್ 19ರಂದು ನೋಡಬಹುದು, ಜಗತ್ತಿನ ಯಾವುದೇ ಮೂಲೆಯಿಂದ ಬೇಕಾದರೂ ಘೋಚರವಾಗಲಿದೆ. ಆದರೆ ಆಗಸ್ಟ್ ತಿಂಗಳಾದ ಕಾರಣ ಹಲವು ಕಡೆಗಳಲ್ಲಿ ಮೋಡವಿರುವುದರಿಂದ ಚಂದ್ರನ ಘೋಚರವಾಗುವುದು ಕಷ್ಟವಾಗುತ್ತದೆ. ಭಾರತದಲ್ಲಿ ಆಗಸ್ಟ್ 19ರ ರಾತ್ರಿ ಹಾಗೂ 20ರ ಮುಂಜಾನೆಯ ಸಮಯದಲ್ಲಿ ನೋಡಲು ಸಾಧ್ಯವಾಗುತ್ತದೆ.
ಯುರೋಪ್ ಮತ್ತು ಆಫ್ರಿಕಾದಲ್ಲಿರುವವರಿಗೆ, ಆಗಸ್ಟ್ 19 ರ ರಾತ್ರಿ ಸೂಪರ್ ಬ್ಲೂ ಮೂನ್ ಗೋಚರಿಸುತ್ತದೆ. ಇದು ಆಗಸ್ಟ್ 18 ರ ಸಂಜೆಯಿಂದ ಆಗಸ್ಟ್ 19 ರ ರಾತ್ರಿಯವರೆಗೆ ಮತ್ತು ಆಗಸ್ಟ್ 20 ರ ಮುಂಜಾನೆಯವರೆಗೆ ಪೂರ್ಣವಾಗಿ ಗೋಚರಿಸುತ್ತದೆ.ನಾಸಾ ಪ್ರಕಾರ ಚಂದ್ರ ಭೂಮಿಯಿಂದ 226,000 ಮತ್ತು 251,000 ಮೈಲಿ ದೂರದಲ್ಲಿದೆ, ವರ್ಷದಲ್ಲಿ ಎರಡರಿಂದ ಮೂರು ಬಾರಿ ಭೂ ಕಕ್ಷೆಯ ಸಮೀಪಕ್ಕೆ ಬರುತ್ತದೆ. ಹೀಗಾಗಿ ಚಂದ್ರನ ಗಾತ್ರ ದೊಡ್ಡದಾಗಿ ಗೋಚರಿಸುವುದು, ಇದನ್ನು ಸೂಪರ್‌ಮೂನ್ ಎಂದು ಕರೆಯಲಾಗುವುದು. ಸೂಪರ್‌ಮೂನ್ ಸಮಯದಲ್ಲಿ ಸೂರ್ಯ ಭೂಮಿಗೆ ಸುಮಾರು 30,000 ಕಿ. ಮೀ ಸಮೀಪವಾಗುತ್ತಾನೆ
ಕಳೆದ 2023ರಲ್ಲಿ ಜುಲೈ 3, ಆಗಸ್ಟ್ 1, ಆಗಸ್ಟ್ 31 ಹಾಗೂ ಸೆಪ್ಟೆಂಬರ್ 29ಕ್ಕೆ ಸೂಪರ್ ಮೂನ್ ಗೋಚರಿಸಿತ್ತು.



Click it and Unblock the Notifications


