Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಭೂಮಿ ಮೇಲೆ ಬದುಕಿದ್ದ ನೀಲಿ ಮಾನವರು..! ಈ ನಿಗೂಢ ಕಥೆ ಗೊತ್ತಾ?
ನೀವು ಹಾಲಿವುಡ್‌ನ ಸೂಪರ್ ಹಿಟ್ಟ ಸಿನಿಮಾ ಅವತಾರ್ ನೋಡಿದ್ದೀರಾ? ನೋಡಿಲ್ಲಾ ಅಂದ್ರೂ ಅದರ ಹೆಸರಂತು ಕೇಳಿರುತ್ತೀರಿ. ವಿಶ್ವದ ಸಿನಿ ಪ್ರಿಯರ ಮನಗೆದ್ದು ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿದ ಸಿನಿಮಾ ಅದು. ಆ ಸಿನಿಮಾದಲ್ಲಿ ಬರುವ ಪಾತ್ರಗಳು ನೀಲಿ ಬಣ್ಣದ ಮನುಷ್ಯರ ನೋಡಿರುತ್ತೀರಿ.
ಆದ್ರೆ ಈ ರೀತಿಯ ನೀಲಿ ಮಾನವರು ಭೂಮಿ ಮೇಲೂ ಇದ್ದರೂ ಎಂದರೆ ನಂಬುತ್ತೀರಾ? ಹೌದು ಈ ರೀತಿಯ ನೀಲಿ ಜನರ ಕುಟುಂಬವೊಂದು ಭೂಮಿ ಮೇಲೆ ಇತ್ತು. ಅಮೆರಿಕದ ಕೆಂಟುಕಿ ಪ್ರಾಂತ್ಯದಲ್ಲಿ ಕುಟುಂಬವೊಂದು ನೀಲಿ ಬಣ್ಣದ ಮೈ ಬಣ್ಣದಿಂದ ಹುಟ್ಟಿತ್ತು. ಕೆಂಟುಕಿಯ ಅಪ್ಪಲಾಚಿಯನ್ ಪರ್ವತ ಶ್ರೇಣಿಯಲ್ಲಿ ಈ ನೀಲಿ ಮೈ ಬಣ್ಣದ ಕುಟುಂಬ ನೆಲೆಸಿತ್ತು.

ಅಪಸಾಮಾನ್ಯ ಮೈ ಬಣ್ಣ ಹೊಂದಿದ್ದ ಇವರು ಸಾಮಾನ್ಯ ಜನರಿಂದ ಬೇರ್ಪಟ್ಟು ನೆಲೆನಿಂತರು. ಇದು ವೈದ್ಯಕೀಯ ಸಮುದಾಯವನ್ನೇ ಅಚ್ಚರಿಗೆ ದೂಡಿದ ಕಥೆಯಾಗಿತ್ತು. ಆದರೆ ಈ ವಿದ್ಯಮಾನದ ಹಿಂದೆ ವಿಜ್ಞಾನದ ಕಾರಣವೊಂದಿತ್ತು. ಫ್ಯೂಗೇಟ್‌ಗಳು ಮೆಥೆಮೊಗ್ಲೋಬಿನೆಮಿಯಾ ಎಂದು ಕರೆಯಲ್ಪಡುವ ಅಪರೂಪದ ಆನುವಂಶಿಕ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ಸಂಶೋಧಕರು ಕಂಡುಹಿಡಿದರು. ಈ ಸ್ಥಿತಿಯು ರಕ್ತದಲ್ಲಿ ಮೆಥೆಮೊಗ್ಲೋಬಿನ್‌ನ ಅಸಹಜ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಚರ್ಮವು ನೀಲಿ ಬಣ್ಣಕ್ಕೆ ತಿರುಗುತ್ತದೆ.
ಆದರೆ ಈ ಸಮುದಾಯದ ಒಂದು ಭಾಗ ಪ್ರತ್ಯೇಕತೆಗೆ ಒಳಗಾಗುತ್ತದೆ. ಅಂದರೆ ಹೊರ ಪ್ರಪಂಚದೊಂದಿಗೆ ಹಾಗೂ ಬಾಹ್ಯ ಡಿಎನ್‌ಎ ಜೊತೆ ಅವರ ನಂಟಿಲ್ಲದೆ ಸಮುದಾಯ ದೀರ್ಘಕಾಲದ ವರೆಗೂ ಈ ನೀಲಿ ಮೈಬಣ್ಣ ಹೊಂದಬೇಕಾಯಿತು. ಅಂತರ್ವಿವಾಹ ನಡೆಯದ ಹಿನ್ನೆಲೆಯಲ್ಲಿ ಅವರು ತಮ್ಮ ತಮ್ಮಲ್ಲೇ ಮದುವೆಯಾಗುತ್ತಿದ್ದರು. ಇದು ಅವರ ವೈಜ್ಞಾನಿಕ ಸಮಸ್ಯೆಗೆ ಜೊತೆಯಾಗಿ ಸಾಗಿಬರಲು ಕಾರಣವಾಯಿತು.
ಫುಗೇಟ್ ಕುಟುಂಬದ ಮದುವೆಯ ಮಾದರಿಗಳು ಆನುವಂಶಿಕ ಲಕ್ಷಣವನ್ನು ಮತ್ತಷ್ಟು ತೀವ್ರಗೊಳಿಸಿದವು. ಹೀಗಾಗಿ ಮೆಥೆಮೊಗ್ಲೋಬಿನೆಮಿಯಾ ಜೀನ್ ಅನ್ನು ಅವರ ಸಂತತಿಗೆ ರವಾನಿಸುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾದವು. ಇದು ಅವರ ವಂಶದಲ್ಲಿ ನೀಲಿ ಮೈಬಣ್ಣದ ಮಕ್ಕಳು ಹುಟ್ಟುವಿಕೆಯ ಸಾಧ್ಯತೆ ಹೆಚ್ಚುವಂತೆ ಮಾಡಿತ್ತು.
ಕೆಂಟುಕಿಯಲ್ಲಿ ಇನ್ನೂ ನೀಲಿ ಜನರು ಇದ್ದಾರೆಯೇ?
ಈಗಿನಂತೆ, ಮೆಥೆಮೊಗ್ಲೋಬಿನೆಮಿಯಾ ಸ್ಥಿತಿಯ ಕಾರಣದಿಂದಾಗಿ ನೀಲಿ ಮೈಬಣ್ಣದ ಜನರು ಎಂದು ಕರೆಯಲ್ಪಡುವ ಫುಗೇಟ್ ಕುಟುಂಬದ ನೇರ ವಂಶಸ್ಥರು ಇನ್ನೂ ಕೆಂಟುಕಿಯಲ್ಲಿ ವಾಸಿಸುತ್ತಿಲ್ಲ. ಅವರು ವಂಶಸ್ಥರಲ್ಲಿ ಈ ನೀಲಿ ಮೈಬಣ್ಣದ ಸಮಸ್ಯೆ ನಿವಾರಣೆಯಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಇಂದು ನೀಲಿ ಬಣ್ಣದ ಜನರು ಕಾಣಲು ಸಿಗುತ್ತಿಲ್ಲ ಎಂದು ವರದಿಯಾಗಿದೆ.
ಈ ವಂಶಸ್ಥರಿಂದಾಗಿಯೇ ಮೆಥೆಮೊಗ್ಲೋಬಿನೆಮಿಯಾ ಎನ್ನುವುದು ರಕ್ತದಲ್ಲಿ ಮೆಥೆಮೊಗ್ಲೋಬಿನ್‌ನ ಅಸಹಜ ಹೆಚ್ಚಳದ ಸ್ಥಿತಿಯಾಗಿ ನೀಲಿ ಬಣ್ಣ ಕಂಡುಬರುತ್ತದೆ ಎಂದು ತಿಳಿದುಬಂದಿತ್ತು. ವಿಜ್ಞಾನ, ಇತಿಹಾಸ ಮತ್ತು ಮಾನವ ಕುತೂಹಲ. ಅವರ ಕಥೆಯು ಕೇವಲ ಕುತೂಹಲವನ್ನು ಮೀರಿದೆ ಮತ್ತು ತಳಿಶಾಸ್ತ್ರ ಮತ್ತು ಪರಿಸರದ ನಡುವಿನ ಸೂಕ್ಷ್ಮವಾದ ಪರಸ್ಪರ ಕ್ರಿಯೆಯ ಸಂಕೇತವಾಗಿದೆ.
ಕೆಂಟುಕಿಯ ಈ ನೀಲಿ ಜನರು ಅಮೇರಿಕನ್ ಇತಿಹಾಸದಲ್ಲಿ ಒಂದು ಪ್ರತ್ಯೇಕ ಅಧ್ಯಾಯವಾಗಿ ಉಳಿದಿದ್ದಾರೆ. ಇವರ ಕುರಿತ ಹಲವು ಅಧ್ಯಯನಗಳು ಇಂದಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಅಚ್ಚರಿಗಳಿಗೆ ಕಾರಣವಾಗಿತ್ತು.



Click it and Unblock the Notifications
