Latest Updates
-
ನವರಾತ್ರಿ ಸಂಭ್ರಮ: ಕೇವಲ 30 ನಿಮಿಷದಲ್ಲಿ ಪರಿಸರಸ್ನೇಹಿ ಪೂಜಾ ಮಂಟಪ ಅಲಂಕರಿಸುವ ಸುಲಭ ಟಿಪ್ಸ್! -
ನವರಾತ್ರಿ ಉಪವಾಸ: ಗಾರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯಕರ ಡಯಟ್ ಪ್ಲಾನ್ ಇಲ್ಲಿದೆ -
ನವರಾತ್ರಿ ಗರ್ಬಾ ಡ್ರೆಸ್ ರೆಡಿ ಇಲ್ಲವೇ? ಬೆಂಗಳೂರು, ಮುಂಬೈ, ಅಹಮದಾಬಾದ್ನಲ್ಲಿ ಬಾಡಿಗೆಗೆ ಪಡೆಯಲು ಬೆಸ್ಟ್ ಸ್ಥಳಗಳು ಮತ್ತು ಟಿಪ್ಸ್ ಇಲ್ಲಿದೆ! -
ನವರಾತ್ರಿ ಉಪವಾಸದ ಆಯಾಸ, ಕಾಲು ನೋವು ಕಾಡ್ತಿದೆಯಾ? ಗರ್ಬಾ ಡ್ಯಾನ್ಸ್ಗೆ ಸಿದ್ಧರಾಗಲು ಇಲ್ಲಿದೆ 8 ನಿಮಿಷಗಳ ಮ್ಯಾಜಿಕ್ ವರ್ಕೌಟ್ -
ನವರಾತ್ರಿ ಗರ್ಬಾ ಸಂಭ್ರಮ: ನಕಲಿ ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆಡಿ! -
ದೆಹಲಿ AQI ಏರಿಕೆ: ಮನೆಯೊಳಗೆ 'ಏರ್ ಶೀಲ್ಡ್' ಸಿದ್ಧಪಡಿಸಿ, ಕೇವಲ 20 ನಿಮಿಷದಲ್ಲಿ ಧೂಳಿನಿಂದ ಬಚಾವಾಗಿ! -
ನವರಾತ್ರಿ ಹಬ್ಬದ ಸಂಭ್ರಮ: ಕುತ್ತು ಹಿಟ್ಟು, ಸಿಹಿ ತಿಂಡಿ ಕೊಳ್ಳುವಾಗ ಈ ತಪ್ಪು ಮಾಡಬೇಡಿ! -
ಶಾರ್ದೀಯ ನವರಾತ್ರಿ 2026: ಘಟಸ್ಥಾಪನೆ ಮುಹೂರ್ತ, ಬಣ್ಣಗಳ ಪಟ್ಟಿ ಮತ್ತು ಹಬ್ಬದ ಫ್ಯಾಷನ್ ಟಿಪ್ಸ್ ಇಲ್ಲಿದೆ! -
ಮಂಡಿ ನೋವಿನ ಚಿಂತೆಯೇ ಬೇಡ: ಗರ್ಬಾ ಆಡುವ ಮುನ್ನ ಈ 7 ನಿಮಿಷದ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು!
ಸಮುದ್ರ ತೀರದಲ್ಲಿ ಬ್ಲಡ್ ವರ್ಮ್ ಪತ್ತೆ..! ಈ ಹುಳುಗಳ ಬಗ್ಗೆ ನಿಮಗೆ ಗೊತ್ತಾ?
ನೀವು ಹಾಲಿವುಡ್ ಸಿನಿಮಾದಲ್ಲಿ ಚಿತ್ರ ವಿಚಿತ್ರ ಪ್ರಾಣಿಗಳು ಮಾನವರ ಮೇಲೆ ದಾಳಿ ಮಾಡುವುದನ್ನು ನಾವು ನೋಡಿದ್ದೇವೆ. ಅಲ್ಲಿ ಸಣ್ಣ ಸಣ್ಣ ಪ್ರಾಣಿಗಳು ದೈತ್ಯಾಕಾರದಲ್ಲಿ ಜೀವ ತಾಳುವುದು. ವಿಚಿತ್ರ ಪ್ರಾಣಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಅದ್ರಲ್ಲೂ ಕೆಲವೊಂದು ಸಿನಿಮಾಗಳಲ್ಲಿ ಬರುವ ಪ್ರಾಣಿಗಳು ಕನಸಿನಲ್ಲೂ ಕಾಡುತ್ತವೆ.
ನಾವು ಅನಾಕೊಂಡ ಹಾವಿನ ಸಿನಿಮಾ ನೋಡಿರುತ್ತೇವೆ. ಅದರಂತೆಯೇ ಬ್ಲಡ್ ವರ್ಮ್ ಎಂಬ ಸಣ್ಣ ಹುಳು ಸಿನಿಮಾದಲ್ಲಿ ದೊಡ್ಡದಾಗಿ ಮನುಷ್ಯರನ್ನೇ ತಿನ್ನುವ ಸಿನಿಮಾವನ್ನೂ ಸಹ ನೀವು ನೋಡಿರಬಹುದು. ಈ ಬ್ಲಡ್ ವರ್ಮ್ ಗಳೆಂದರೆ ಎರೆಹುಳುಗಳಂತಹ ಪ್ರಾಣಿಗಳು. ಆದ್ರೆ ಅವು ಮಾಂಸಹಾರಿಗಳಾಗಿವೆ.

ರಕ್ತವನ್ನು ಕುಡಿಯುವಂತಹ ಬ್ಲಡ್ ವರ್ಮ್ ಅನ್ನು ಕಡಲ ತೀರದಲ್ಲಿ ನೋಡಿರುವುದಾಗಿ ತಿಮಿಂಗಿಲ ವೀಕ್ಷಕರೊಬ್ಬರು ತಿಳಿಸಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಬ್ಲಡ್ ವರ್ಮ್ ನೋಡಿದ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಈ ಬ್ಲಡ್ ವರ್ಮ್‌ಗಳು ನೆಲದಡಿ ಜೀವಿಸುವ ಅಕಶೇರುಕಗಳು. ಆದರೆ ಈ ಬ್ಲಡ್ ವರ್ಮ್ ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಈ ಬ್ಲಡ್ ವರ್ಮ್ ಮೈ ಬಣ್ಣ ಹಾಗೂ ನೋಡಲು ಎರೆಹುಳುವಿನಂತೆ ಕಂಡುಬರುತ್ತದೆ. ಆದರೆ ಮೈ ಮೇಲೆ ಕೂದಲಿನ ಆಕೃತಿಯಲ್ಲಿ ಸಣ್ಣ ಸಣ್ಣ ರೆಕ್ಕೆಗಳಿರುತ್ತವೆ, ಜೊತೆಗೆ ಹಲ್ಲುಗಳಿರುವುದು ಮತ್ತೊಂದು ವಿಶೇಷ. ಈ ಹುಳುಗಳು ಒಮ್ಮೆ ಕಚ್ಚಿದರೆ ಅದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಇವು ಕಚ್ಚಿ ಹಿಡಿದು ರಕ್ತ ಹೀರಲು ಆರಂಭಿಸುತ್ತದೆ.
ಇವು ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಜಿಗಣೆ ರೀತಿಯಲ್ಲಿ ರಕ್ತ ಹೀರುತ್ತವೆ, ಆದರೆ ಜಿಗಣೆಗಳಿಗೆ ಹಲ್ಲುಗಳಿರುವುದಿಲ್ಲ. ಇವು ಹಲ್ಲುಗಳಿಂದ ಕೂಡಿರುತ್ತವೆ. ಹೀಗಾಗಿ ಮಾಂಸಕ್ಕೆ ಕಚ್ಚಿ ಹಿಡಿದು ರಕ್ತ ಹೀರುತ್ತವೆ. ಹೀಗಾಗಿ ಇವು ಅಪಾಯಕಾರಿಯಾಗಿದೆ. ಇದು ಒಂದು ಅಡಿ ಉದ್ದದ ವರೆಗೂ ಬೆಳೆಯುತ್ತವೆ. ಇವು ನೋಡಲು ಇಷ್ಟು ಭಯಾನಕವಾಗಿದ್ದರೂ ಎಂದು ಮಾನವರ ಮೇಲೆ ಎಂದಿಗು ದಾಳಿ ಮಾಡಿದ ಉದಾಹರಣೆಗಳಿಲ್ಲ.
ಆದರೆ ಮಾನವರು ಇವುಗಳನ್ನು ಅಧ್ಯಯನದ ದೃಷ್ಟಿಯಿಂದ ಅವುಗಳಿಂದ ಕಚ್ಚಿಸಿಕೊಂಡಿದ್ದಾರೆ. ಅಲ್ಲದೆ ಇವುಗಳಿಂದ ಕಚ್ಚಿಸಿಕೊಳ್ಳುವ ಸಾಹಸಕ್ಕೂ ಕೈ ಹಾಕಿದ್ದಾರೆ. ಸದ್ಯ ಈಗ ಕ್ಯಾಲಿಫೋರ್ನಿಯಾದಲ್ಲಿ ಈ ಬ್ಲಡ್ ವರ್ಮ್ ಪತ್ತೆಯಾಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ನೋಡಲು ಭಯಾನಕವಾಗಿದೆ. ಆದರೆ ಇದರಿಂದ ಅಪಾಯವಿಲ್ಲ.
Polychaeta ಎಂಬ ಅಕಶೇರುಕದ ವರ್ಗಕ್ಕೆ ಸೇರಿದ ಬ್ಲಡ್ ವರ್ಮ್ ಸಾಮಾನ್ಯವಾಗಿ ಆಳವಿಲ್ಲದ ನೀರಿನ ತಳದಲ್ಲಿ ಕಂಡುಬರುವ ಜಲವಾಸಿ ವಿಭಜಿತ ಹುಳುಗಳಾಗಿವೆ. ಹೆಚ್ಚಾಗಿ ಸಣ್ಣ ಕೊಳಗಳು ಮತ್ತು ಕೊಳಗಳಲ್ಲಿ ಕಂಡುಬರುತ್ತದೆ, ಅವುಗಳನ್ನು ಮೀನುಗಳು ಹಿಡಿದು ತಿನ್ನುತ್ತವೆ.
ಇವು ಚರ್ಮಕ್ಕೆ ಬಣ್ಣವನ್ನು ಹೊಂದಿಲ್ಲ ಅದು ರಕ್ತದ ಬಣ್ಣದಂತೆ ಕಾಣುತ್ತದೆ. ಹೀಗಾಗಿ ಈ ಬ್ಲಡ್ ವರ್ಮ್‌ನ ದೇಹದೊಳಗೆ ಏನೇನಿದೆ ಎಂಬುದು ಹಾಗೆ ನೋಡಬಹುದು. ಬ್ಲಡ್ ವರ್ಮ್ ತನ್ನ ತಲೆಯ ಮೇಲೆ ಸಣ್ಣ ಆಂಟೇನಾದಂತಹ ರಚನೆ ಹೊಂದಿರುತ್ತದೆ. ಇದನ್ನು ಪ್ಯಾರಾಪೋಡಿಯಾ ಎಂದು ಕರೆಯಲಾಗುತ್ತದೆ. ಇವುಗಳು ಹಲ್ಲುಗಳನ್ನು ಹೊಂದಿದ್ದರೂ ಈ ನಾಲ್ಕು ಹಲ್ಲುಗಳು ಗಟ್ಟಿಯಾಗಿರುವುದಿಲ್ಲ, ಅವು ಟೊಳ್ಳಾಗಿರುತ್ತದೆ. ಇವು ಸಹ ಬೇಟೆಯಾಡಿ ಕೊಲ್ಲುತ್ತವೆ. ಮನುಷ್ಯರಿಗೆ ಕಚ್ಚಿದರೆ ವಿಪರೀತ ನೀವು ಕಾಣಿಸಿಕೊಳ್ಳುತ್ತದೆ.
ಮತ್ತೊಂದು ಕಡೆ ಇವು ಸಣ್ಣ ಎರೆಹುಳುಗಳ ಹಿಡಿದು ತಿನ್ನುತ್ತವೆ. ಆದರೆ ಇವುಗಳನ್ನು ಮೀನು ಸಾಕಾಣಿಕೆದಾರರು ಬೆಳೆಸುತ್ತಾರೆ. ಮೀನುಗಳಿಗೆ ಇದು ಅತ್ಯಂತ ಅಗತ್ಯ ಪೋಷಕಾಂಶ ಭರಿತ ಆಹಾರವಾಗಿದೆ. 99% ಕ್ಕಿಂತ ಹೆಚ್ಚು ಮೀನುಗಳು ಅವುಗಳನ್ನು ಸೇವಿಸುವುದರಿಂದ ಅವುಗಳನ್ನು ಅಂತಿಮ ಮೀನು ಬೆಟ್ ಎಂದು ಪರಿಗಣಿಸಲಾಗುತ್ತದೆ. ಪ್ರೋಟೀನ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವ ಅವು ನಿಮ್ಮ ಮೀನುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.



Click it and Unblock the Notifications
