Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹಿಂದೂ ಸಂಪ್ರದಾಯದಂತೆ ಕೃಷ್ಣನ ಭಕ್ತೆಯ ವಿವಾಹ: ಯಾರು ಈ ಕೃಷ್ಣ ಸುಂದರಿ ಗೊತ್ತಾ?
ಈಗ ಸೌಂದರ್ಯ ಅಂದರೆ ಬಿಳಿಗಾಗಿ ಕಾಣಿಸಬೇಕು. ಮುಖದಲ್ಲಿ ಒಂದೇ ಒಂದು ಕಲೆಯೂ ಇರಬಾರದು ಎನ್ನುವ ಕಾಲವಾಗಿದೆ, ಹೀಗಾಗಿ ಎಲ್ಲರೂ ಬಿಳಿಯಾಗಿ ಕಾಣಿಸಿಬೇಕು, ಸುಂದರವಾಗಿರಬೇಕು ಎನ್ನುವ ಆಸೆಯಲ್ಲೇ ಇರುತ್ತಾರೆ. ಆದ್ರೆ ಕಪ್ಪು ಕೂಡ ಸುಂದರವೇ ಎಂಬುದನ್ನು ನಾವೇ ಮರೆತಿರುತ್ತೇವೆ. ಅದರಲ್ಲೂ ನಾವು ಮದುವೆಯಾಗುವ ಹುಡುಗ ಅಥವಾ ಹುಡುಗಿ ಬಿಳಿಯಾಗಿರಬೇಕು ಎಂದು ಭಾವಿಸುವವರೇ ಹೆಚ್ಚು.
ಮದುವೆಯ ವಿಚಾರದಲ್ಲಿ ಕೆಲವೊಮ್ಮೆ ಅಚ್ಚರಿಗಳು ನಡೆಯುವುದು ನೋಡಬಹುದು. ಹಾಗೆ ಇಲ್ಲೊಬ್ಬಾಕೆ ಕೃಷ್ಣ ಸುಂದರಿಯ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಮನೆಯಲ್ಲಿ ಬಿಳಿಯಾಗಿ ಕಾಣಿಸಬೇಕೆಂದು ವಧು ಎಷ್ಟೆಲ್ಲಾ ಮೇಕ್ ಅಪ್ ಮಾಡಿಕೊಳ್ಳುವುದು ನೋಡಬಹುದು. ಆದ್ರೆ ಇಲ್ಲೊಬ್ಬಾಕೆಯ ಬಣ್ಣ ನೋಡಿ ಜನರು ಯಾರು ಈ ಕಪ್ಪು ಸುಂದರಿ ಎಂದು ಬೆರಗು ಗಣ್ಣಿನಿಂದ ನೋಡುವಂತಾಗಿದೆ.

ಹಾಗೆ ಕಪ್ಪು ಬಣ್ಣವನ್ನ ಅಲ್ಲಗೆಳೆಯುವ ಮಂದಿ ಕೂಡ ಈ ಯುವತಿಯ ಮದುವೆಯ ಫೋಟೋ ನೋಡಿ ಅಚ್ಚರಿ ಹೊರಹಾಕಿದ್ದಾರೆ. ಆಕೆ ವಿದೇಶದಲ್ಲಿ ನೆಲೆಸಿದ್ದರು ಭಾರತೀಯ ಅದರಲ್ಲೂ ಸನಾತನ ಸಂಸ್ಕೃತಿಯಂತೆ ವಿವಾಹವಾಗಿದ್ದಾಳೆ. ಕೃಷ್ಣನ ಮಹಾನ್ ಭಕ್ತೆಯಾಗಿರುವ ಆಕೆ ಕೆಂಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಳು, ಆಕೆಯ ಹುಡುಗ ಕೂಡ ಸುಂದರವಾದ ಭಾರತೀಯ ಉಡುಗೆಯಲ್ಲಿಯೆ ಕಾಣಿಸಿಕೊಂಡಿದ್ದಾನೆ.
ಈ ರೀತಿ ಕೃಷ್ಣ ಸುಂದರಿಯಾಗಿ ವಧುವಿನ ಶೃಂಗಾರದಲ್ಲಿ ಕಾಣಿಸಿಕೊಂಡಿದ್ದು ಶ್ಯಾಮ. ಆಕೆ ಶ್ರೀಕೃಷ್ಣನ ಪರಮ ಭಕ್ತೆ, ಶ್ರೀಕೃಷ್ಣನಿಗಾಗಿ ತನ್ನನ್ನು ಆರ್ಪಿಸಿಕೊಂಡಿರುವ ವಿಶೇಷವಾಗಿ ಕಾಣುವ ಭಕ್ತೆಯಾಗಿದ್ದಾಳೆ. ಕಾಸ್ಮೆಟಾಲಜಿಸ್ಟ್ ಆಗಿರುವ ಶ್ಯಾಮ ಪ್ರೇಮಿ ನಾಯರ್, ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿಂತಂತೆ ಹಂಚಿಕೊಂಡಿದ್ದಾರೆ. ಅವರು ಸನಾತನ ಸಂಸ್ಕತಿಯಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ಆಕೆಯ ಹಳದಿ ಕಾರ್ಯಕ್ರಮದಿಂದ ಹಿಡಿದು ಮದುವೆಯ ಪ್ರತಿಯೊಂದು ಆಚರಣೆಯೂ ಹಿಂದೂ ಸಂಸ್ಕೃತಿಯಂತೆಯೇ ನೆರವೇರಿದೆ. ಸೀರೆಯುಟ್ಟು, ಆಭರಣ ತೊಟ್ಟು ಸಿಂಗಾರಗೊಂಡ ಕೃಷ್ಣ ಸುಂದರಿ ಭಾರತೀಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾರೆ. ಆತ ಕೂಡ ಶ್ರೀಕೃಷ್ಭನ ಭಕ್ತ ಎಂದು ತಿಳಿದುಬಂದಿದೆ. ಈ ಇಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಆಕೆ ಮದುವೆಯ ಸಮಯದಲ್ಲಿ ಧರಿಸಿದ್ದ ಆಂಟಿಕ್ ಆಭರಣಗಳು ಕೂಡ ಗಮನ ಸೆಳೆದವು, ಮುತ್ತಿನ ಹಾರಗಳು, ಡಾಬು ಕೂಡ ಸೇರಿತ್ತು. ಅದಕ್ಕೆ ಸರಿಹೊಂದುವ ಕಿವಿಯೋಲೆಗಳು, ಮಠಪಟ್ಟಿ, ಕೆಂಪು ಬಣ್ಣದ ಬಳೆಗಳು ಕೂಡ ಆಕೆಯ ಸೌಂದರ್ಯ ಹೆಚ್ಚಿಸಿದವು. ಹಾಗೆ ಆಕೆ ಧರಿಸಿದ್ದ ಕೆಂಪು ಬಣ್ಣದ ಸೀರೆ ಬಂಗಾರ ಝರಿಯ ಮೂಲಕ ಆಕೆಯ ಸೌಂದರ್ಯ ಹೆಚ್ಚಿಸುವ ಕಾರ್ಯ ಮಾಡಿದವು.
ಹಾಗೆ ಆಕೆ ಅರಶಿಣ ಶಾಸ್ತ್ರ ಕಾರ್ಯಕ್ರಮದಲ್ಲಿ ಸುಂದರವಾದ ಹಳದಿ ಬಣ್ಣದ ಅನಾರ್ಕಲಿ ಧರಿಸಿದ್ದರು. ಅದನ್ನು ಹೂವಿನ ದುಪಟ್ಟಾ ಮತ್ತು ಗೆಂಡಾ ಫೂಲ್ (ಚೆಂಡು ಹೂವು) ಬಾರ್ಡರ್‌ನಿಂದ ಅಲಂಕರಿಸಲಾಗಿತ್ತು.
ಶ್ಯಾಮ ಸದ್ಯ ಆಫ್ರಿಕಾದಲ್ಲಿ ನೆಲೆಸಿದ್ದಾರೆ, ಆಕೆ ಇಸ್ಕಾನ್ ಅನುಯಾಯಿಯಾಗಿದ್ದು, ಶ್ರೀಕೃಷ್ಣನ ಅನುಯಾಯಿಯಾಗಿದ್ದಾಳೆ. ಆಕೆಯ ಮೈ ಬಣ್ಣ ಕೂಡ ಆಕೆ ಶ್ರೀಕೃಷ್ಣನ ಭಕ್ತೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿವೆ. ಆಕೆಯ ಈ ಮದುವೆಯ ಫೋಟೋಗಳು ಈಗ ವೈರಲ್ ಆಗಿದೆ, ಹಾಗೆ ಹಲವರ ಅಚ್ಚರಿಗೆ ಕಾರಣವಾಗಿದೆ. ಆಕೆಯ ಕೆಲಸ ಕಂಡು ಅಚ್ಚರಿ ಹೊರಹಾಕಿದ್ದಾರೆ. ಹಾಗೆ ಮೆಚ್ಚುಗೆ ಕೂಡ ಕೇಳಿಬಂದಿದೆ. ಆಕೆ ಕೃಷ್ಣನ ಜೀವನ ಹಾಗೂ ಸಾರವನ್ನು ಪಸರಿಸುವ ಕಾರ್ಯ ಮಾಡುತ್ತಿದ್ದು, ಭಾರತೀಯ ಸಂಸ್ಕೃತಿ ಹರಡಲು ಮುಂದಾಗಿರುವುದಕ್ಕೆ ಮೆಚ್ಚುಗೆ ಕೇಳಿಬಂದಿದೆ. ಈಗ ಆಕೆ ಮದುವೆಯ ಪೋಸ್ಟ್‌ಗೂ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾವಿರಾರು ಕೆಮೆಂಟ್‌ಗಳು ಬಂದಿವೆ. ಹಾಗೆ ಇಬ್ಬರು ಜೋಡಿಗೆ ಲಕ್ಷಕ್ಕೂ ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿ ಲೈಕ್ ಮಾಡಿದ್ದಾರೆ.



Click it and Unblock the Notifications
