Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆ, ರಾಟ್ವೀಲರ್ ನಾಯಿ ಜೊತೆ ಕರಿ ಚಿರತೆಯ ಫ್ರೆಂಡ್‌ಶಿಪ್ : ವೀಡಿಯೋ ವೈರಲ್
ರಾಟ್ವೀಲರ್ ನಾಯಿ ಸಾಕಿದವರಿಗೆ ಅದರ ಗುಣ ಹೇಗಿರುತ್ತೆ ಎಂಬುವುದು ಗೊತ್ತಿರುತ್ತದೆ, ಬಲು ಜೋರಿನ ನಾಯಿಯದು. ಅದು ಮನೆಯಲ್ಲಿದ್ದರೆ ಅದು ಬೊಗಳಿದರೆ ಸಾಕು ಆ ಮನೆಯೊಳಗಡೆ ಹೆಜ್ಜೆ ಹಿಡಲು ಭಯವಾಗುತ್ತೆ, ಇನ್ನ ಅಪರಿಚಿತರು ಎದುರಿಗೆ ಬಂದರೆ ಸಿಗದೇ ಬಿಡುವ ರೋಷ ಅದರಲ್ಲಿರುತ್ತೆ, ಆದ್ದರಿಂದ ಆ ನಾಯಿ ಸಾಕಿರುವ ಯಜಮಾನನಿಗೆ ಒಂಥರಾ ಗತ್ತು. ಮನೆಯಲ್ಲಿ ಹುಲಿಯನ್ನೇ ಸಾಕಿಕೊಂಡಿದ್ದೇನೆ ಎಂಬ ಫೀಲ್.

ಇಲ್ಲೊಬ್ಬರು ರಾಟ್ವೀಲರ್ ನಾಯಿ ಜೊತೆ ಕರಿ ಚಿರತೆಯನ್ನು ಸಾಕಿದ್ದಾರೆ. ಅಷ್ಟಕ್ಕೂ ಅವರಿಗೆ ತಾವು ಸಾಕುತ್ತಿರುವುದು ಕರಿ ಚಿರತೆ ಎಂದು ಗೊತ್ತಿಲ್ಲದೆ ಸಾಕಿದ್ದಾರೆ. ಇದೀಗ ಆ ಯಜಮಾನಿಯ ಜೊತೆಗೆ ಕರಿ ಚಿರತೆ, ರಾಟ್ವೀಲರ್ ನಾಯಿ ಆಟ ಆಡುತ್ತಿರುವುದು, ಕರಿ ಚಿರತೆ-ರಾಟ್ವೀಲರ್ ಸ್ನೇಹದಿಂದ ಇರುವ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಆಕೆಗೆ ಆ ಕರಿಚಿರತೆ ಬೀದಿ ಬದಿಯಲ್ಲಿ ಸಿಗುತ್ತದೆ, ಪಾಪ ಆಕೆ ಅದನ್ನು ಬೆಕ್ಕೆಂದು ಯೋಚಿಸುತ್ತಾಳೆ. ತುಂಬಾ ಚಿಕ್ಕ ಮರಿಯಾಗಿರುತ್ತದೆ. ಮನೆಗೆ ತಂದು ಆರೈಕೆ ಮಾಡುತ್ತಾಳೆ. ಆ ಬೆಕ್ಕಿನ ಮರಿ ದಿನಗಳು ಉರುಳುತ್ತಿದ್ದಂತೆ ಎತ್ತರಕ್ಕೆ ಬೆಳೆಯಲಾರಂಭಿಸುತ್ತದೆ, ಆವಾಗ ಆಕೆಗೆ ತಾನು ಸಾಕಿರುವು ಕರಿ ಚಿರತೆ ಎಂಬುವುದು ಗೊತ್ತಾಗಿದೆ, ಆದರೆ ಅಷ್ಟೊತ್ತಿಗೆ ಆ ಪ್ರಾಣಿ ಸಾಕು ಪ್ರಾಣಿಯಷ್ಟೇ ಮೃದು ಸ್ವಭಾವದ ಪ್ರಾನಿಯಾಗಿ ಬದಲಾಗಿತ್ತು.
ಆಕೆ ತನ್ನ ಕೈ ಬೆರಳನ್ನು ಆ ಕರಿ ಚಿರತೆಯ ಬಾಯಿಯೊಳಗೆ ಇಟ್ಟರೂ ಕಚ್ಚುವುದಿಲ್ಲ. ಮನುಷ್ಯ-ಚಿರತೆ-ನಾಯಿಯ ಸ್ನೇಹದ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿದೆ.



Click it and Unblock the Notifications
