Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇರಳದಲ್ಲಿ ಕನ್ನಡತಿಯ ರಾಜಕೀಯ ಎಂಟ್ರಿ..! 7 ಭಾಷೆ ಮಾತನಾಡುವ ಈಕೆ ಯಾರು ಗೊತ್ತಾ?
ಭಾರತದಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಹೆಚ್ಚು ಗಮನ ಸೆಳೆಯುತ್ತಿರುವುದು ಅಭ್ಯರ್ಥಿಗಳ ಆಯ್ಕೆ. ಎಲ್ಲಾ ಪಕ್ಷಗಳು ಅಳೆದು ತೂಗಿ ತಮ್ಮ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದಾರೆ. ಈಗ ಕೇರಳದ ಓರ್ವ ಮಹಿಳಾ ಅಭ್ಯರ್ಥಿ ಇಡೀ ದೇಶದ ಗಮನ ಸೆಳೆದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆ ಪ್ರತಿನಿಧಿಸುತ್ತಿರುವ ಬಿಜೆಪಿ ಮಹಿಳಾ ಅಭ್ಯರ್ಥಿ ಅಶ್ವಿನಿ ಎಂಎಲ್ ಈಗ ಹೆಚ್ಚು ಚರ್ಚೆಯಾಗುತ್ತಿರುವ ಅಭ್ಯರ್ಥಿ. ಆಕೆ ಸುಲಲಿತವಾಗಿ 6 ಭಾಷೆಗಳನ್ನು ಮಾತನಾಡುವ ಸಾಮರ್ಥ್ಯ ಹೊಂದಿದ್ದು, ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಬಹುತೇಕ ನಿವಾಸಿಗಳು ಮೂರ್ನಾಲ್ಕು ಭಾಷೆಗಳನ್ನು ಸುಲಭವಾಗಿ ಮಾತನಾಡಬಲ್ಲರು. 'ಏಳು ಭಾಷೆಗಳ ನಾಡು' ಎಂದು ಕರೆಯಲ್ಪಡುವ ಕಾಸರಗೋಡಿನಲ್ಲಿ ಮಲಯಾಳಂ, ಕನ್ನಡ, ತುಳು ಮತ್ತು ಉರ್ದು ಭಾಷೆಗಳನ್ನು ಮಾತನಾಡುವವರು ವ್ಯಾಪಕವಾಗಿ ಕಾಣಸಿಗುತ್ತಾರೆ.

ಇದಲ್ಲದೇ ಕರ್ನಾಟಕದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕಾಸರಗೋಡಿನಲ್ಲಿ ಮರಾಠಿ, ಕೊಂಕಣಿ ಮತ್ತು ಬ್ಯಾರಿ ಮಾತನಾಡುವ ಜನರನ್ನು ಸಹ ಕಾಣಬಹುದು. 2011ರ ಜನಗಣತಿಯ ಪ್ರಕಾರ ಇಲ್ಲಿನ ಶೇ.82.07 ಜನರು ಮಲಯಾಳಂ, ಶೇ.4.02 ಕನ್ನಡ, ಶೇ.8.08 ತುಳು ಮತ್ತು ಶೇ.1.8 ಮರಾಠಿ ಮಾತನಾಡುತ್ತಾರೆ. ಸುಮಾರು 30,000 ಮತ್ತು 25,000 ಜನರು ಕ್ರಮವಾಗಿ ಉರ್ದು ಮತ್ತು ಕೊಂಕಣಿ ಮಾತನಾಡುತ್ತಾರೆ.
ಆರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ ಅಶ್ವಿನಿ
38 ವರ್ಷದ ಶಿಕ್ಷಕಿಯಾಗಿರುವ ಅಶ್ವಿನಿ 6 ಭಾಷೆಗಳನ್ನು ಸುಲಭವಾಗಿ ಮಾತನಾಡುತ್ತಾರೆ. ಮಲಯಾಳಂ, ಕನ್ನಡ, ತುಳು, ಉರ್ದು, ಕೊಂಕಣಿ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಇದರ ಜೊತೆ ಅವರಿಗೆ ಹಿಂದಿ ಮತ್ತು ಇಂಗ್ಲೀಷ್ ಕೂಡ ಚೆನ್ನಾಗಿ ಬರುತ್ತದೆ.
ಕರ್ನಾಟಕದಲ್ಲಿ ಬೆಳೆದ ಅಶ್ವಿನಿ
ಕರ್ನಾಟಕದಲ್ಲಿ ಹುಟ್ಟಿ ಬೆಳೆದು ತಮಿಳು ಮತ್ತು ಹಿಂದಿ ಮಾತನಾಡುವ ನೆರೆಹೊರೆಯವರ ನಡುವೆ ಬೆಳೆದ ಅಶ್ವಿನಿ ಬಾಲ್ಯದಿಂದಲೂ ಬಹು ಭಾಷೆಗಳಿಗೆ ತೆರೆದುಕೊಂಡಿದ್ದಾರೆ. ತಾನು ಮಲಯಾಳಿಯಾಗಿದ್ದರೂ, ಆಕೆಯ ಪೋಷಕರು ದಶಕಗಳ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದರು ಮತ್ತು ಮದುವೆಯಾದ ನಂತರ ಕೆಲವು ವರ್ಷಗಳ ಹಿಂದೆ ಕಾಸರಗೋಡಿಗೆ ಬಂದು ಅವರು ನೆಲೆಸಿದ್ದರು.
ಕಾಸರಗೋಡಿನಲ್ಲಿ ಕನ್ನಡ ಮಾತನಾಡುವವರು ಇದ್ದಾರೆ. ಆದರೆ ಅವರಿಗೂ ಸಹ ಮೂರ್ನಾಲ್ಕು ಭಾಷೆ ತಿಳಿದಿರುತ್ತದೆ. ಹೀಗಾಗಿ ಕಾಸರಗೋಡಿನಲ್ಲಿ ಯಾವ ಭಾಷೆಯನ್ನಾದರೂ ಮಾತನಾಬಹುದು. ಎಲ್ಲರಿಗೂ ಎಲ್ಲಾ ಭಾಷೆ ಚೆನ್ನಾಗಿ ಬರುತ್ತಿರುತ್ತದೆ. ಈಗ ಅಶ್ವಿನಿ ಅವರು ಪ್ರಚಾರಕ್ಕೆ ತೆರಳುವಾಗ ಮತದಾರರು ಯಾವ ಭಾಷೆ ಮಾತನಾಡುತ್ತಾರೋ ಅದೇ ಭಾಷೆಯಲ್ಲಿ ಅವರ ಬಳಿ ವ್ಯವಹರಿಸುತ್ತಾರೆ. ಹೀಗಾಗಿ ಅವರ ಭಾಷಾ ಜ್ಞಾನ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.
ಅಶ್ವಿನಿ ಯಾರು?
ಕೇರಳದ ಮಂಜೇಶ್ವರದ ಎಂಎಲ್ ಅಶ್ವಿನಿ ಶಾಲಾ ಶಿಕ್ಷಕಿಯಾಗಿದ್ದರು. ಆದರೆ ಪ್ರಧಾನಿ ಮೋದಿ ಅವರಿಂದ ಪ್ರಭಾವಿತರಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಮಟ್ಟದ ಸದಸ್ಯೆಯೂ ಹೌದು. ಆದರೆ, ಪಕ್ಷದ ನಾಯಕತ್ವವು ಅವರಿಗೆ ಕಾಸರಗೋಡು ಲೋಕಸಭಾ ಕ್ಷೇತ್ರವನ್ನು ನೀಡಿದೆ.
ಕನ್ನಡವನ್ನು ಮಾತೃಭಾಷೆಯಾಗಿಟ್ಟುಕೊಂಡು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಶ್ವಿನಿ ಕಾಸರಗೋಡಿನ ಸೊಸೆಯಾದಳು. ಕೇರಳದ ನಾಯಕರು ಮಲಯಾಳಂ ಅಥವಾ ತಮಿಳಿನಂತಹ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ, ಆದರೆ ಅವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುವುದಿಲ್ಲ.
ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಕ್ಷೇತ್ರದಲ್ಲಿ ಹೇಳಿಕೊಳ್ಳಿವಂತಹ ಮತ ಸಿಕ್ಕಿರಲಿಲ್ಲ. ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದೆ.



Click it and Unblock the Notifications