Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೀನುಗಾರರ ಬಲೆಗೆ ಬಿದ್ದ ಹಿಂದೆಂದೂ ಕಾಣದ ವಿಚಿತ್ರ ಜೀವಿ..! ವಿಡಿಯೋ ವೈರಲ್
ಈ ಭೂಮಿಯ ಮೇಲೆ ಎಷ್ಟೊಂದು ವಿಸ್ಮಯಗಳಿವೆ ಅನ್ನೋದನ್ನು ಮಾನವ ಇಂದಿಗೂ ಸರಿಯಾಗಿ ಪತ್ತೆ ಮಾಡಲು ಆಗಿಲ್ಲ. ನಿತ್ಯವೂ ಕುತೂಹಲಕಾರಿ, ನಿಗೂಢ ವಿವಾರಗಳು ಮುನ್ನಲೆಗೆ ಬಂದೇ ಬರುತ್ತವೆ. ಹಾಗೆ ಸಾಗರದಾಳದ ಕೌತುಕ ಕೂಡ ಇಂದಿಗೂ ಹೊಸ ಹೊಸ ವಿಚಾರಗಳನ್ನು ಹೊತ್ತು ತರುತ್ತಲೇ ಇರುತ್ತದೆ. ಸಾಗರ ಎಷ್ಟು ವಿಶಾಲವಾಗಿದೆಯೋ ಅಷ್ಟೇ ಕುತೂಹಲಗಳನ್ನು ತನ್ನಲ್ಲಿಟ್ಟುಕೊಂಡಿದೆ.
ಈಗ ರಷ್ಯಾದ ಮೀನುಗಾರರೊಬ್ಬರಿಗೆ ಸಿಕ್ಕಿರುವ ಸಮುದ್ರ ಜೀವಿಯೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಹಿಂದೆಂದು ನೋಡಿರದಂತಹ ಈ ಜೀವಿಯ ನೋಡಿ ಜನರು ಶಾಕ್‌ಗೆ ಒಳಗಾಗಿದ್ದಾರೆ. ಹಾಗೆ ಇದು ಸತ್ಯವೇ ಎಂದು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿದ್ದು ಏಲಿಯನ್ ಜೀವಿ ನೋಡಿದ ಮಂದಿ ಅಚ್ಚರಿಗೊಳಗಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅದರ ವೀಡಿಯೊವನ್ನು ಪೋಸ್ಟ್ ಮಾಡಿದ ಮೀನುಗಾರರು ಇದನ್ನು ಆಳ ಸಮುದ್ರದ ರೇ-ಫಿನ್ಡ್ ಮೀನು ಎಂದು ಗುರುತಿಸಿದ್ದಾರೆ. ಇದು ಕತ್ತಲೆ ತುಂಬಿರುವಷ್ಟು ಆಳವಾದ ಸಮುದ್ರದಲ್ಲಿ ವಾಸಿಸುತ್ತದೆ ಎಂದು ಹೇಳಲಾಗಿದೆ. ಆದ್ರೆ ಈ ರೀತಿಯ ಮೀನು ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಹಾಗೆ ಇದನ್ನು ಏಲಿಯನ್ ಜೀವಿ ಎಂದು ಅವರು ಕರೆದಿದ್ದಾರೆ.
ಇದನ್ನು ರೇ-ಫಿನ್ಡ್ ಜಾತಿಗೆ ಸೇರಿರುವ ಮೀನು ಎಂದಷ್ಟೇ ಹೆಸರಿಸಲಾಗಿದೆ. ಆದ್ರೆ ನಿಖರವಾಗಿ ಇದು ಯಾವ ಮೀನು, ಇದರ ಹೆಸರೇನು? ಇದರ ಆಹಾರವೇನು? ಎಷ್ಟು ವರ್ಷ ಹಳೆಯ ಜೀವಿ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ವೈರಲ್ ಆಗಿದ್ದು ವಿಚಿತ್ರ ಜೀವಿ ನೋಡಿದ ಮಂದಿ ಅಕ್ಷರಶಃ ಶಾಕ್ ಆಗಿದ್ದಾರೆ.
ಹಲವರು ಇದು ಅನ್ಯಗ್ರಹದಿಂದ ಬಂದು ಸಮುದ್ರದಾಳದಲ್ಲಿ ವಾಸಿಸುತ್ತಿರುವ ಜೀವಿ ಆಗಿದೆ ಎಂದಿದ್ದಾರೆ. ಇದಕ್ಕೆ ಹಲವರು ಸಮ್ಮತಿ ಕೂಡ ಸೂಚಿಸಿ ಲೈಕ್ ಮಾಡಿದ್ದಾರೆ. ಇಂತಹ ಜೀವಿ ಇಷ್ಟು ವರ್ಷ ಯಾರ ಕಣ್ಣಿಗೂ ಬೀಳದೆ ಹಾಗೆ ಎಲ್ಲಿಯೂ ಕಾಣಿಸದೆ ಹೇಗೆ ಬದುಕಿತ್ತು ಎಂಬ ಪ್ರಶ್ನೆ ಹಾಕಿದ್ದಾರೆ. '' ಇದು ನೀರಿನ ಅಡಿಯಲ್ಲಿ ವಾಸಿಸುವ ಸಣ್ಣ ಏಲಿಯನ್ ಜೀವಿ'' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ದೊಡ್ಡದಾದ ತಲೆಯನ್ನು ಹೊಂದಿರುವ ವಿಚಿತ್ರವಾಗಿ ಕಾಣಿಸುವ ಜೀವಿ ಇದಾಗಿದೆ. ಹಾಗೆ ನೀರಿನಿಂದ ಮೇಲೆ ಬಂದಾಗ ಅದು ಮತ್ತಷ್ಟು ದೊಡ್ಡದಾಗಿ ಕಾಣಿಸುತ್ತಿದೆ. ಜೆಲ್ಲಿ ಫಿಶ್‌ನಂತೆ ಕಂಡರೂ ಕೂಡ ಇದು ನೋಡಲು ಭಯ ಹುಟ್ಟಿಸುವಂತಿದೆ. ಹೀಗಾಗಿ ಜನರಿಗೂ ಇದು ಕುತೂಹಲಕಾರಿಯಾಗಿ ಕಾಣಿಸಿದೆ.
ಇನ್ನು ಅದೇ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಇಂತಹ ವಿಚಿತ್ರ ಸಮುದ್ರ ಜೀವಿಗಳ ಕುರಿತಂತೆ ಹತ್ತು ಹಲವು ಫೋಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಒಂದಕ್ಕಿಂತ ಒಂದು ಭಯ ಹುಟ್ಟಿಸುವಂತಿವೆ. ಹಾಗೆ ನೀವೆಂದು ನೋಡಿರದಂತಹ ವಿಚಿತ್ರ ಹಾಗೂ ಕೆಲವೊಂದು ನಂಬಲು ಅಸಾಧ್ಯವಾಗಿವೆ.



Click it and Unblock the Notifications
