Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
60 ವರ್ಷ ಸ್ನಾನ ಮಾಡಿರದ ವ್ಯಕ್ತಿ ಸ್ನಾನ ಮಾಡಲು ಹೇಳಿದ ಗ್ರಾಮಸ್ಥರು, ಸ್ನಾನದ ಭಯದಲ್ಲಿಯೇ ಪ್ರಾಣಹೋಯ್ತಾ?
ವಿಶ್ವದ ಅತ್ಯಂತ ಕೊಳಕ ಮನುಷ್ಯ , ವರ್ಷಗಟ್ಟಲೆ ಸ್ನಾನ ಮಾಡದೇ ಇದ್ದ ಮನುಷ್ಯ ಕೊನೆಗೂ ಸ್ನಾನ ಮಾಡಲು ಒಪ್ಪಿಕೊಂಡಿದ್ದರು, ಅವರು ಕೊನೆಗೂ ಸ್ನಾನ ಮಾಡಲು ಒಪ್ಪಿಕೊಂಡಿದ್ದು ಸ್ನಾನ ಮಾಡುವ ಮುನ್ನ ಪ್ರಾಣ ಬಿಟ್ಟಿರುವುದು ವಿಪರ್ಯಾಸವೇ ಸರಿ.
ಎರಡು ದಿನ ಸ್ನಾನ ಮಾಡದಿದ್ದರೆ ನಿದ್ದೆ ಬರಲ್ಲ, ಆದರೆ ಈ ಮನುಷ್ಯ 60 ವರ್ಷದಿಂದ ಸ್ನಾನನೇ ಮಾಡಿಲ್ಲ. ಮೈಗೆ ಸೋಪು ಹಚ್ಚಿ ಸ್ನಾನ ಮಾಡದಿದ್ದರೂ ಬರಿ ನೀರಿನಲ್ಲಾದರೂ ಸ್ನಾನ ಮಾಡಿದ್ದಾರಾ? ಎಂದು ನೋಡುವುದಾದರೆ ಅದೂ ಇಲ್ಲ. ಆತನ ಮೈಗೆ ನೀರು ಬಿದ್ದು 60 ವರ್ಷವಾಗಿದೆ.

ಈತನ ಹೆಸರು ಅಮೌ ಹಾಜಿ, ಈತ ಸ್ನಾನ ಮಾಡದೆ ವಿಶ್ವದ ಅತ್ಯಂತ ಕೊಳಕ ಮನುಷ್ಯ ಅನಿಸಿಕೊಂಡಿದ್ದಾನೆ. ಇದನ್ನು ಭೇಟಿಯಾಗಲು ಹೋದ ಲೇಖಕರಿಗೆ ಈತನ ನೋಡಿ ಆಶ್ವರ್ಯವಾಗಿತ್ತಂತೆ, ಏಕೆಂದರೆ ಈತನ ಮೈ ನೋಡಿದರೆ ಯಾವುದೋ ಕಲ್ಲು ಬಂಡೆಯಂತೆ ಇತ್ತು, ತ್ವಚೆ ಒಣ ಭೂಮಿಯಂತೆ ಒರಟಾಗಿ ಇತ್ತು ಎಂದು ಬರೆದಿದ್ದಾರೆ.
ಹಾಜಿ ಮೈಗೆ ನೀರು ಬೀಳುವುದೆಂದರೆ ಭಯ
ಈತನಿಗೆ ಮೈಗೆ ನಿರು ಬಿದ್ದರೆ ಎಲ್ಲಿ ಹುಷಾರಿಲ್ಲದೆ ಆಗುತ್ತೀನೋ ಎಂಬ ಭಯ, ಹಾಗಾಗಿ ಸ್ನಾನನೇ ಮಾಡುತ್ತಿರಲಿಲ್ಲ, ಹೀಗೆ ಬರೋಬರಿ 6 ವರ್ಷಗಳನ್ನೇ ಕಳೆದ, ಅತ್ಯಂತ ಕೊಳಕು ಮೈ, ದುರ್ವಾಸನೆಯಿಂದ ಕೂಡಿದ ಈತನ ಸಮೀಪ ಜನ ಹೋಗುತ್ತಿರಲಿಲ್ಲ. ಆದರೂ ಈತ 90 ವರ್ಷ ಬದುಕಿದ್ದ ಎಂಬುವುದೇ ಅಚ್ಚರಿಯ ಸಂಗತಿ.
ತಾನು ಇರುವ ರೀತಿಯನ್ನು ಇಷ್ಟಪಡುತ್ತಿದ್ದ ಹಾಜಿ
ಮೊದ ಮೊದಲಿಗೆ ಆತನ ಜೊತೆಗೆ ಇದ್ದವರು ಆತನ ಬಳಿ ಸ್ನಾನ ಮಾಡುವಂತೆ ಹೇಳುತ್ತಿದ್ದರು, ಆದರೆ ಯಾರ ಮಾತನ್ನೂ ಕೇಳುತ್ತಿರಲಿಲ್ಲ, ಆತ ದುರ್ವಾಸನೆ ಬೀರಲಾರಂಭಿಸಿದಾಗ ಜನರು ದೂರಾದರು. ಕೆಲವರು ನೀನು ಸ್ನಾನ ಮಾಡಿ ಬಾ ಊಟ ಕೊಡ್ತೀನಿ ಎಂದು ಹೇಳಿದರೂ ಕೇಳುತ್ತಿರಲಿಲ್ಲ, ತಾನು ಕೊಳಕನಾಗಿಯೇ ಇರುವುದನ್ನು ಇಷ್ಟಪಟ್ಟಿದ್ದ.
ನೀರು ಮೈ ಮೇಲೆ ಬಿದ್ದರೆ ಕಾಯಿಲೆ ಬರುತ್ತೆ ಎಂಬ ಭಯ
ಕೆಲವರಿಗೆ ವಿಚಿತ್ರ ಭಯ ಇರುತ್ತದೆ, ನೀರು ಕಂಡರೆ ಭಯ, ಎತ್ತರ ಭಯ ಇದನ್ನು ಫೋಬಿಯಾ ಎಂದು ಹೇಳಲಾಗುವುದು, ಈತನಿಗೆ ಅಷ್ಟೆ ನೀರು ಕಂಡರೆ ಭಯ. ಹಾಗಾಗಿ ಸ್ನಾನ ಮಾಡುತ್ತಿರಲಿಲ್ಲ. ಈತ ಗೋಣಿ ಚೀಲದಲ್ಲಿ ಮಲಗುತ್ತಿದ್ದ, ಯಾರಾದರೂ ಈತನಿಗೆ ಸ್ನಾನ ಮಾಡು ಎಂದರೆ ಬೇಸರವಾಗುತ್ತಿತ್ತು.
ಈತನಿಗೆ ಸ್ನಾನ ಮಾಡಿಸಲು ಪಣತೊಟ್ಟು ಗ್ರಾಮಸ್ಥರು
ಈತನಿಗೆ ಸ್ನಾನ ಮಾಡಿಸಬೇಕೆಂದು ಆತ ಇದ್ದ ಇರಾನಿನ ದೇಜ್‌ಗಹ್ ಎಂಬ ಹಳ್ಳಿಯವರು ಈತನ ಬಳಿ ತುಂಬಾನೇ ಕೇಳಿಕೊಳ್ಳುತ್ತಾರೆ, ಆ ಊರಿನ ಹಿರಿಯರು ಬಂದು ಹೇಳುತ್ತಾರೆ, ಅಂತು ಈ ಕೊಳಕ ಮನುಷ್ಯ ಕೊನೆಗೂ ಸ್ನಾನ ಮಾಡಲು ಒಪ್ಪುತ್ತಾನೆ. ನಂತರ ನೋಡಿದರೆ ಆತನ ಸಾವಿನ ಸುದ್ದಿಗೆ ಊರಿಗೆ ತಿಳಿಯುತ್ತದೆ, ಸಾಯುವಾಗ 90 ವುಸ್ಸು ಸ್ನಾನ ಮಾಡುವ ಭಯದಿಂದಲೇ ಸತ್ತಿರಬಹುದು, ಇಲ್ಲದಿದ್ದರೆ ನೂರು ವರ್ಷ ಬದುಕುತ್ತಿದ್ದ ಎಂದು ಜನರು ಮಾತನಾಡಿಕೊಳ್ಳುತ್ತಾರೆ.
The Strange Life of Amou Haji ಎಂಬ ಡಾಕ್ಯೂಮೆಂಟರಿ ಕೂಡ ಇದೆ, ಅದರಲ್ಲಿ ಈತನ ಜೀವನದ ಬಗ್ಗೆ ಸಂಪೂರ್ಣ ಚಿತ್ರಣ ನೀಡಲಾಗಿದೆ.



Click it and Unblock the Notifications