Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಚೀನಾದ ಆಕಾಶದಲ್ಲಿ ಕಂಡುಬಂತಾ 7 ಸೂರ್ಯ..? ಈ ವಿಡಿಯೋ ವೈರಲ್..!
ಆಕಾಶದಲ್ಲಿ ಏನೆಲ್ಲಾ ವಿಚಿತ್ರಗಳು ನಡೆಯುತ್ತವೆ ಅನ್ನೋದನ್ನ ನಾವು ಊಹಿಸಲು ಸಹ ಸಾಧ್ಯವಾಗುವುದಿಲ್ಲ. ಅಲ್ಲಿ ಅಷ್ಟೊಂದು ವಿಚಿತ್ರ ಘಟನೆಗಳು, ಅಚ್ಚರಿ ಮೂಡಿಸುವ ಘಟನೆಗಳು ನಡೆಯುತ್ತವೆ. ನಾವು ಆಕಾಶದಲ್ಲಿ ಹಲವು ರೀತಿಯ, ವಿಚಿತ್ರ ವಸ್ತುಗಳು ಕಂಡುಬಂದಿದ್ದ ವಿಡಿಯೋಗಳನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ವಿಡಿಯೋ ಈಗ ವೈರಲ್ ಆಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಆಕಾಶ ಕಾಯಗಳು, ಧೂಮಕೇತು, ಅನ್ಯಗ್ರಹ ಜೀವಿಗಳು ಹೀಗೆ ಒಂದಲ್ಲಾ ಒಂದು ವಿಶೇಷಗಳು ನಮಗೆ ಕಾಣಲು ಸಿಗುತ್ತವೆ. ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಒಂದಲ್ಲಾ 7 ಸೂರ್ಯ ಕಂಡುಬಂದ ವಿಚಿತ್ರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಇದೊಂದು ಅಚ್ಚರಿಯ ವಿಚಾರವಾಗಿದೆ.

ಚೀನಾದ ಆಗಸದಲ್ಲಿ ಈ ರೀತಿಯ ವಿಚಿತ್ರ ಘಟನೆ ವರದಿಯಾಗಿದೆ. ಅಲ್ಲಿನ ಆಕಾಶದಲ್ಲಿ 7 ಸೂರ್ಯನಂತಹ ರಚನೆ ಕಂಡುಬಂದಿರುವುದು ನಿಗೂಢತೆಗೆ ಕಾರಣವಾಗಿದೆ. Ms ವಾಂಗ್ ಎಂಬ ಮಹಿಳೆ ತನ್ನ ಫೋನ್‌ನಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾಳೆ, ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ವೀಡಿಯೊವು ಆಕಾಶದಲ್ಲಿ ಏಳು ಸೂರ್ಯನ ರಚನೆಯನ್ನು ತಿಳಿಸುತ್ತಿದೆ. ಆದರೆ ಈ ರೀತಿಯ ಸೂರ್ಯ ಸುಮಾರು 7 ನಿಮಿಷಗಳವರೆಗೂ ಆಕಾಶದಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ. ಆದರೆ ಇದೊಂದು ಕಾಸ್ಮಿಕ್ ಅದ್ಭುತ ಎಂದು ಕರೆಯಲಾಗುತ್ತದೆ. ಆದರೆ ಈ ವಿಚಿತ್ರ ಕಂಡು ಜನರು ಅಚ್ಚರಿಗೆ ಒಳಗಾಗಿದ್ದಾರೆ.
ಆದರೆ ಈ ರೀತಿ 7 ಸೂರ್ಯ ಕಂಡುಬರಲು ಸಾಧ್ಯವೇ ಇಲ್ಲ. ಅಲ್ಲಿ ಮೋಡದ ಪರಿಕಲ್ಪನೆ ಅಥವಾ ರಿಫ್ಲೆಕ್ಷನ್ ಇರಬಹುದು ಎಂದು ಸಹ ಶಂಕಿಸಲಾಗಿದೆ. ಆದರೆ ಈ ವಿಡಿಯೋ ನೋಡಿದ ಮಂದಿ ಮಾತ್ರ ಶಾಕ್ ಆಗಿದ್ದಾರೆ. ಈ ಭೂಮಿ ಮೇಲೆ ಇಷ್ಟೊಂದು ತಾಪಮಾನ ಏರಿಕೆಗೆ ಕಾರಣವಾಗಿದ್ದು ಇದೇ ಎಂದು ಬಳಕೆದಾರರೊಬ್ಬರು ತಮಾಷೆಯ ಮಾತು ಹೇಳಿದ್ದಾರೆ.
ಇನ್ನು ಈ 7 ಸೂರ್ಯನಿಗೂ ಚೀನಾದ ಒಂದು ಪುರಾತನ ಕಥೆಗೂ ಸಂಬಂಧವಿದೆಯಂತೆ. ಬಿಲ್ಲುಗಾರ ಹೌ ಯಿ ಎಂಬಾತ ಭೂಮಿಯನ್ನು ತಾಪಮಾನದಿಂದ ಕಾಪಾಡಲು 9 ಸೂರ್ಯನನ್ನು ಆತ ಹೊಡೆದು ಕೆಳಗೆ ಉರುಳಿಸಿದ್ದನಂತೆ. ಆದರೆ ಕೊನೆಯದಾಗಿ ಒಂದು ಸೂರ್ಯನ ಹಾಗೆಯೇ ಉಳಿಸಿದ್ದಂತೆ ಎಂದು ಚೀನಿ ಪುರಾಣ ಕಥೆಯೊಂದು ಹೇಳುತ್ತದೆ.
ಮತ್ತೆ ಕೆಲವರು ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದು, ಸೂರ್ಯ ನಿಜವಾಗಿಯೂ ಇಷ್ಟೊಂದು ಸಂಖ್ಯೆಯಲ್ಲಿ ಇದ್ದಾನೆಯೇ? ಇದು ಸಾಧ್ಯವಾಗಿದ್ದು ಹೇಗೆ? ಚೀನಾದಲ್ಲಿ ಮಾತ್ರ ಏಕೆ ಕಾಣಿಸಿತು ಎಂಬೆಲ್ಲಾ ಪ್ರಶ್ನೆ ಮಾಡಿದ್ದಾರೆ.
ಈ ವಿಡಿಯೋದ ಸತ್ಯತೆ ಏನು?
ಇದು ಅಚ್ಚರಿಗೆ ಕಾರಣವಾದರೂ ಈ ವಿಡಿಯೋದಲ್ಲಿ ಕಂಡುಬಂದ ಸೂರ್ಯನ ಹಿಂದೆ ಸಣ್ಣದಾದ ಒಂದು ಟ್ರಿಕ್ಸ್ ಇದೆ. ಹೌದು ಇಲ್ಲಿ ವಿಡಿಯೋ ಮಾಡುವಾಗ ಆಗಿರುವ ಸಣ್ಣ ಟ್ರಿಕ್ಸ್‌ನಿಂದ ನಮಗೆ ಏಳು ಸೂರ್ಯ ಕಾಣುತ್ತಿದ್ದಾನೆ. ಇದು ಎಡಿಟ್ ಮಾಡಲಾದ ವಿಡಿಯೋ ಅಲ್ಲ ಬದಲಿಗೆ ವಿಡಿಯೋ ಮಾಡುವಾಗಲೇ ಉಂಟಾಗಿರುವ ಸಣ್ಣ ಟ್ರಿಕ್ಸ್ ಆಗಿದೆ.
Recently, seven suns appeared in the sky in Sichuan, China, and the afterglow of the sunset reflected a picturesque sunset.#China 🇨🇳 #sichuan @China_Amb_India @Jingjing_Li pic.twitter.com/edFb9B37My
— 孙松.SunSong (@sunsong0909) August 20, 2024
ಈ ವಿಡಿಯೋವನ್ನ ಮಹಿಳೆ ಸೆರೆ ಹಿಡಿದಿರುವುದು ಆಸ್ಪತ್ರೆಯ ಕಿಟಕಿಯಿಂದ. ಆದರೆ ಈ ಕಿಟಕಿಗೆ ಹಾಕಲಾಗಿರುವ ಲೇಯರ್ಡ್ ಗ್ಲಾಸ್ ಮೂಲಕ ಸೂರ್ಯನ ಸೆರೆ ಹಿಡಿಯಲಾಗಿದೆ. ಹೀಗಾಗಿ ಅದರಲ್ಲಿ ಸೂರ್ಯನ ಪ್ರತಿಬಿಂಬವು 7 ಸೂರ್ಯದಂತೆ ಕಾಣುತ್ತಿದೆ. ಇದೊಂದು ಆಪ್ಟಿಕಲ್ ಇಲ್ಯೂಷನ್ ಎನ್ನಬಹುದು. ಗ್ಲಾಸ್‌ನ ಮೇಲಿನ ಬೆಳಕಿನ ವಕ್ರೀಭವನವೂ ಈ ರೀತಿಯ ವಿಶೇಷ ವಿದ್ಯಮಾನಕ್ಕೆ ಕಾರಣವಾಗುತ್ತದೆ, ಇದೇ ಪರಿಸ್ಥಿತಿಯಲ್ಲಿ ಮಹಿಳೆ ಗ್ಲಾಸ್‌ನ ಹಿಂಬದಿಯಿಂದ ವಿಡಿಯೋ ಸೆರೆ ಹಿಡಿದಿದ್ದು, ಅದರಲ್ಲಿ 7 ಸೂರ್ಯ ಕಂಡುಬಂದಿದೆ.



Click it and Unblock the Notifications
