Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಲಾಲಿಪಾಪ್ ಕಚ್ಚಿದರೆ ಸಾಂಗ್ ಕೇಳುತ್ತೆ; ರುಚಿಯ ಜೊತೆಗೆ ಇಂಪಾದ ಹಾಡು ಸಹ ಕೇಳಬಹುದು!
ಟೆಕ್ನಾಲಜಿ ಎಷ್ಟು ಮುಂದುವರೆಯುತ್ತಿದೆ ಅಂದ್ರೆ ನೀವು ಊಹಿಸುವುದಕ್ಕಿಂತ ವೇಗವಾಗಿ ಹರಡುತ್ತಿದೆ. ಹಾರುವ ಕಾರುಗಳು, ರೋಬೋಟ್‌ಗಳು, ಸ್ಮಾರ್ಟ್ ಗ್ಯಾಜೆಟ್‌ಗಳು, ಎಐ, ಡಿಜಿಟಲ್ ವಿಆರ್, ಎಐ ಗ್ಲಾಸ್ ಇನ್ನು ನೂರಾರು ಆವಿಷ್ಕಾರಗಳು ಈಗ ಎಲ್ಲೆಡೆ ಸುದ್ದಿಯಾಗುತ್ತಲೇ ಇವೆ. ಹಾಗೆ ಹಲವು ಹೊಸ ಹೊಸ ಆವಿಷ್ಕಾರಗಳು ಇನ್ನು ಪ್ರದರ್ಶನಗೊಳ್ಳುತ್ತಿದ್ದು ಮುಂದೆ ಅಚ್ಚರಿಯ ಫಲಿತಾಂಶಗಳ ತರಲಿವೆ.
ಸದ್ಯ ಈಗ ಲಾಸ್ ವೇಗಾಸ್‌ನಲ್ಲಿ ನಡೆದ CES (ಕನ್ಸೂಮರ್ ಟೆಕ್ನೋಲಜಿ ಅಸೋಸಿಯೇಷನ್) ಪ್ರದರ್ಶನದಲ್ಲಿ ಲಾಲಿಪಾಪ್ ಒಂದು ಎಲ್ಲರ ಗಮನ ಸೆಳೆದಿದೆ. ಬಹುದೊಡ್ಡ ಆವಿಷ್ಕಾರವಾಗಿ ಹೊರಹೊಮ್ಮಿದೆ. ಇದು ನಾವು ನೀವು ಸವಿಯುವ ಸಾಮಾನ್ಯ ಲಾಲಿಪಾಪ್ ಅಲ್ಲ ಬದಲಿಗೆ ಇದೊಂದು ವಿಶೇಷ ಹಾಗೆ ಸಂಗೀತ ನುಡಿಸುವ ಲಾಲಿಪಾಪ್ ಆಗಿದೆ.

ಹೌದು ನೀವು ಹೆಡ್‌ಫೋನ್ ಹಾಕುವುದು ಬೇಡ ಹಾಗೆ ಬೇರೆ ಯಾವುದೇ ಗ್ಯಾಜೆಟ್ ಕೂಡ ಬೇಕಾಗಿಲ್ಲ. ಸುಲಭವಾಗಿ ಈ ಲಾಲಿಪಾಪ್ ಒಮ್ಮೆ ಕಚ್ಚಿದರೆ ಸಾಕು ಸಂಗೀತ ಕೇಳಿಸುತ್ತದೆ. ಇಂತಹ ಅದ್ಭುತ ಆವಿಷ್ಕಾರ ನೋಡಿ ಜನರು ಬೆರಗಾಗಿದ್ದಾರೆ. ನೀವು ಚಿಕ್ಕವರಾಗಿದ್ದಾಗ ಒಂದು ಸಣ್ಣ ಕಡ್ಡಿಯ ತುದಿಯಲ್ಲಿ ವೃತ್ತಾಕಾರದ ಲಾಲಿಪಾಪ್ ಸವಿದಿರಬಹುದು. ಅದೇ ರೀತಿಯಲ್ಲಿ ಈ ಲಾಲಿಪಾಪ್ ಸಹ ಕಾಣಿಸಲಿದೆ.
ಆದರೆ ಈ ಲಾಲಿಪಾಪ್‌ನ ಒಳಗೆ ಗಾಳಿಯಲ್ಲಿ ಶಬ್ದದ ಬದಲು ಕಂಪನಗಳಾಗಿ ಧ್ವನಿಯನ್ನು ಕಳುಹಿಸಬಹುದಾದ ಸಣ್ಣ ಎಲೆಕ್ಟ್ರಾನಿಕ್ ಸಾಧನವಿದೆ. ನೀವು ಲಾಲಿಪಾಪ್ ಅನ್ನು ದವಡೆಯ ಮೂಲಕ ಕಚ್ಚಿದಾಗ ಅದರ ಕಂಪನವು ನೇರ ನರದ ಮೂಲಕ ಕಿವಿಗಳಿಗೆ ಚಲಿಸಲಿದೆ. ಇದನ್ನು ಮೂಳೆ ವಹನ ತಂತ್ರಜ್ಞಾನ ಎಂಬುದಾಗಿಯೂ ಕರೆಯಲಾಗುತ್ತದೆ. ಹಲವು ಕಡೆ ಕ್ರೀಡಾ ಹೆಡ್‌ಫೋನ್‌ಗಳಲ್ಲಿ ಈ ತಂತ್ರಜ್ಞಾನ ಬಳಸಲಾಗುತ್ತದೆ. ಇದರಲ್ಲಿ ಸಂಗೀತವು ನಿಮ್ಮ ಕಿವಿಯಲ್ಲಿ ಕೇಳುವ ಬದಲಾಗಿ ನೇರವಾಗಿ ತಲೆಯ ಒಳಗೆ ಕೇಳಿದಂತೆ ಭಾಸವಾಗುತ್ತದೆ.
ಈ ಎಲ್ಲಾ ಎಲೆಕ್ಟ್ರಾನಿಕ್ಸ್ ಗಳ ಮೇಲೆ ಸಿಹಿಯಾದ ಕ್ಯಾಂಡಿಯ ಲೇಪ ಮಾಡಲಾಗಿರುತ್ತದೆ. ಲಾಲಿಪಾಪ್‌ನ ಕಡ್ಡಿಯ ಭಾಗದಲ್ಲಿ ಸ್ವಿಚ್‌ನಂತಹ ಕಾರ್ಯ ಮಾಡುವ ಸಣ್ಣ ದುಂಡಾದ ವಿಭಾಗವಿದೆ. ಈ ಲಾಲಿಪಾಪ್ ಸವಿಯುವ ಮೊದಲು ಈ ಸ್ವಿಚ್ ಹ್ಯಾಂಡಲ್ ಅನ್ನು ಒತ್ತಬೇಕು. ಅನಂತರ ಹಲ್ಲಿನ ಸಹಾಯದಿಂದ ಲಾಲಿಪಾಪ್ ಅನ್ನು ಒಡೆದಾಗ ಸಂಗೀತ ಹೊರಬರುತ್ತದೆ. ಒಮ್ಮೆ ಈ ಲಾಲಿಪಾಪ್ ಸವಿದ ಬಳಿಕ ಕಡ್ಡಿಯಲ್ಲಿನ ಎಲೆಕ್ಟ್ರಾನಿಕ್ ಬೇಸ್ ಅನ್ನು ಮರುಬಳಕೆ ಸಹ ಮಾಡಬಹುದು.
ಈ ಲಾಲಿಪಾಪ್‌ನಿಂದ ಒಂದೇ ಹಾಡು ಕೇಳಿಬರುತ್ತದೆ. ಕ್ಯಾಂಡಿ ಒಮ್ಮೆ ಸವಿದರೆ ನೀವು ಟ್ರ್ಯಾಕ್ ಅನ್ನು ಬದಲಾಯಿಸು ಅಥವಾ ಮತ್ತೆ ಪ್ಲೇ ಮಾಡಲು ಸಾಧ್ಯವಿಲ್ಲ. ಈ ಪ್ರತಿ ಲಾಲಿಪಾಪ್‌ನ ಬೆಲೆ 800 ರೂಪಾಯಿ ಆಗಿದೆ. ಲಾಲಿಪಾಪ್‌ಗಳನ್ನು ಕಂಪನಿಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮತ್ತು ಬಹುಶಃ ಆಯ್ದ ಅಂಗಡಿಗಳಲ್ಲಿ ಮಾರಾಟ ಮಾಡುವ ನಿರೀಕ್ಷೆಯಿದೆ. ಈ ಲಾಲಿಪಾಪ್ ಅನ್ನು ಮೋಜಿನ ಕಾರಣಕ್ಕೆ ಬಳಸಬಹುದು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಹಾಗೆ ಹೊಸ ಗ್ಯಾಜೆಟ್‌ಗಳ ಬಗ್ಗೆ ಆಸಕ್ತಿ ಹೊಂದಿರುವ ಮಂದಿ ಇದನ್ನು ಬಳಸಲು ಮುಂದಾಗಬಹುದು.
ಹಾಗೆ ಈ ಕ್ಯಾಂಡಿ ಲಾಲಿಪಾಪ್ ವಿಶೇಷ ಆವಿಷ್ಕಾರ ಎಂದು ಪರಿಗಣಿಸುವುದು ದೂರದ ಮಾತಾಗಬಹುದು. ಇದಕ್ಕೂ ಮೊದಲು ಟೂತ್ ಬ್ರಷ್‌ನಲ್ಲೂ ಸಹ ಈ ರೀತಿಯ ಸಂಗೀತ ಹೊರಬರುವ ಟೆಕ್ನಾಲಜಿ ಹೊರಬಂದಿತ್ತು.



Click it and Unblock the Notifications