Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಬಿಟ್ ಕಾಯಿನ್ ಸಂಸ್ಥಾಪಕ ವಿಶ್ವದ 12ನೇ ಶ್ರೀಮಂತ..ಆದ್ರೆ ಆತನ ಸುಳಿವೇ ಇಲ್ಲ!!
ನೀವು ಇತ್ತೀಚಿಗ ಬಿಟ್ ಕಾಯಿನ್ ಹೆಸರು ಹೆಚ್ಚಾಗಿ ಕೇಳುತ್ತಿರಬಹುದು. ಅದ್ರಲ್ಲೂ ನೀವು ಟ್ರೇಡಿಂಗ್, ಷೇರು, ಮಾರುಕಟ್ಟೆ ಕುರಿತಾಗಿ ಗಮನ ಹರಿಸುವ ಮಂದಿಯಾಗಿದ್ದರೆ ಬಿಟ್ ಕಾಯಿನ್ ಬಗ್ಗೆ ಕೇಳಿಯೇ ಕೇಳಿರುತ್ತೀರಿ. ಬಿಟ್ ಕಾಯಿನ್ ಈಗ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಆದ್ರೆ ಬಿಟ್ ಕಾಯಿನ್ ಕುರಿತು ಹಿಂದಿನಿಂದಲೂ ಹತ್ತು ಹಲವು ರೀತಿಯ ನಿಗೂಢತೆಗಳು ಹುಟ್ಟಿಕೊಂಡಿರುವುದು ಸಹ ನೀವು ಗಮನಿಸಿರಬಹುದು.
ಜಗತ್ತಿನ ಮೊದಲ ಕ್ರಿಪ್ಟೋ ಕರೆನ್ಸಿಯನ್ನು ಕಂಡುಹಿಡಿದ ವ್ಯಕ್ತಿ ಈಗ ಜಗತ್ತಿನ 12ನೇ ಶ್ರೀಮಂತನಾಗಿದ್ದಾನೆ. ಆದ್ರೆ ಆ ಕುರಿತು ಇಂದಿಗೂ ಗೊಂದಲಗಳಿವೆ. ಆತ ಯಾರು? ಎಂಬ ರಹಸ್ಯ ಇನ್ನು ಹಾಗೆಯೇ ಉಳಿದಿದೆ. ಇನ್ನು ಈ ಬಿಟ್ ಕಾಯಿನ್ ಕುರಿತಾ ಸತ್ಯ ನಿಮಗೆ ತಿಳಿದರೆ ನಿಮಗೂ ಆಘಾತ ಉಂಟಾಗಲಿದೆ.

ಬಿಟ್‌ಕಾಯಿನ್ ಬಿಡುಗಡೆಯಾದ ಸುಮಾರು ಒಂದೂವರೆ ದಶಕದ ನಂತರ ಸತೋಶಿ ನಕಮೊಟೊ ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ, ಅಂದಾಜು $128.92 ಬಿಲಿಯನ್ (ರೂ.11 ಲಕ್ಷ ಕೋಟಿಗೂ ಹೆಚ್ಚು) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಕ್ರಿಪ್ಟೋ ಎಕ್ಸ್‌ಚೇಂಜ್ ಬಿಟ್‌ಸ್ಟ್ಯಾಂಪ್ ಪ್ರಕಾರ ನಕಮೊಟೊ ಸುಮಾರು 10.96 ಲಕ್ಷ ಬಿಟ್‌ಕಾಯಿನ್‌ಗಳನ್ನು ಹೊಂದಿದ್ದಾರೆಂದು ನಂಬಲಾಗಿದೆ.
ಆದ್ರೆ ನೀವು ಏನಾದರು ಒಂದು ಬಿಟ್ ಕಾಯಿನ್ ಹೊಂದಿದ್ದರೆ ಇಂದು ನೀವು ಕೂಡ ಶ್ರೀಮಂತರಾಗಿರುತ್ತಿದ್ರಿ. 2010ರಲ್ಲಿ ಕೇವಲ 50 ರೂಪಾಯಿ ವಿನಿಯೋಗಿಸಿದ್ದರೆ ಇಂದು ಅದೇ ಹಣ 1,00,48,889 ರೂಪಾಯಿ ಆಗಿರುತ್ತಿತ್ತು. ಹಾಗೆ ಇದರಿಂದ ನೀವು ಶ್ರೀಮಂತರಾಗಬಹುದಿತ್ತು, ಆದ್ರೆ ಈಗ ಬಿಟ್ ಕಾಯಿನ್ ಖರೀದಿಸಲು ನೀವು ಲಕ್ಷ ಲಕ್ಷ ರೂಪಾಯಿ ನೀಡಬೇಕಿದೆ.
ಬಿಟ್ ಕಾಯಿನ್ ಕಂಡು ಹಿಡಿದ ಈ ಸತೋಶಿ ನಕಮೊಟೊ ಯಾರು?
ಸತೋಶಿ ನಕಮೊಟೊ ಯಾರು ಎಂಬುದನ್ನು ಪತ್ತೆ ಮಾಡಲೆಂದೇ ಹಲವು ತನಿಖೆ ಮಾಡಲಾಗಿದೆ. ಹೆಚ್‌ಬಿಒ ಮಾಧ್ಯಮವು ಈ ಕುರಿತಾದ ಸಾಕ್ಷ್ಯಚಿತ್ರವನ್ನೇ ಹೊರತಂದಿತು. 'ಮನಿ ಎಲೆಕ್ಟ್ರಿಕ್: ದಿ ಬಿಟ್ ಕಾಯಿನ್ ಮಿಸ್ಟರಿ' ಎಂಬ ಡಾಕ್ಯೂಮೆಂಟರಿಯಲ್ಲಿ ಈ ಕುರಿತ ವಿಶ್ಲೇಷಣೆ ನೋಡಬಹುದು. ಒಂದು ಕಡೆ ಸಿನಿಮಾ ನಿರ್ಮಾಪಕ ಕಲೆನ್ ಹೊಬ್ಯಾಕ್ ಪೀಟರ್ ಕೆ. ಟಾಡ್ ಎಂಬ ವ್ಯಕ್ತಿ ಈ ಕ್ರಿಪ್ಟೋ ಕರೆನ್ಸಿಯ ಸೃಷ್ಟಿಕರ್ತ ಎಂದು ನಂಬಲಾಗಿದೆ. ಆದ್ರೆ ಇದಕ್ಕೆ ಪುರಾವೆಗಳಿಲ್ಲ.
ಈ ಸತೋಶಿ ನಕಮೊಟೊ 2011ರ ವರೆಗೂ ಆನ್‌ಲೈನ್‌ನಲ್ಲಿ ಸಕ್ರಿಯರಾಗಿದ್ದರು. ಆದ್ರೆ ಏಕಾಏಕಿ ಅವರು ಮರೆಯಾದರು. ಅವರು ಜಪಾನ್‌ನಲ್ಲಿ ನೆಲೆಸಿರುವ 37 ವರ್ಷದ ವ್ಯಕ್ತಿಯಾಗಿರಬಹುದು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಸತೋಶಿ ನಕಮೊಟೊ ವ್ಯಕ್ತಿ C++ನಲ್ಲಿ ಪ್ರವೀಣರಾಗಿದ್ದರು ಎಂದು ಕೂಡ ಹೇಳಲಾಗಿದೆ.
ಲೇಖಕ ಬೆಂಜಮಿನ್ ವ್ಯಾಲೇಸ್, ಮಾರ್ಚ್ 2025 ರಲ್ಲಿ ಪ್ರಕಟವಾದ 'ದಿ ಮಿಸ್ಟೀರಿಯಸ್ ಮಿಸ್ಟರ್ ನಕಮೊಟೊ: ಎ ಫಿಫ್ಟೀನ್-ಇಯರ್ ಕ್ವೆಸ್ಟ್ ಟು ಅನ್‌ಮಾಸ್ಕ್ ದಿ ಸೀಕ್ರೆಟ್ ಜೀನಿಯಸ್ ಬಿಹೈಂಡ್ ಕ್ರಿಪ್ಟೋ' ಎಂಬ ಪುಸ್ತಕದಲ್ಲಿ, ನಕಮೊಟೊ ಅವರನ್ನು "ಅಸ್ತಿತ್ವದಲ್ಲಿರಬಹುದಾದ ಅಥವಾ ಇಲ್ಲದಿರುವ ಅಸ್ಪಷ್ಟ ವ್ಯಕ್ತಿ" ಎಂದು ವಿವರಿಸಿದ್ದಾರೆ. ನಕಮೊಟೊ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅವರೂ ಇದ್ದಾರೆ.
2010ರಲ್ಲಿ ಬಿಟ್ ಕಾಯಿನ್ ದರ 1 ಡಾಲರ್ ಕೂಡ ಇರಲಿಲ್ಲ
ಆರಂಭದಲ್ಲಿ ಬಿಟ್‌ಕಾಯಿನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗ ಬಹಳ ದಿನಗಳ ವರೆಗೂ ಅದರ ಮೌಲ್ಯದಲ್ಲಿ ಬದಲಾವಣೆಯೇ ಆಗಿರಲಿಲ್ಲ. 1 ಡಾಲರ್‌ಗಿಂತಲೂ ಕಡಿಮೆಯಾಗಿತ್ತು. ಬಳಿಕ ಒಂದೆರಡು ವರ್ಷದಲ್ಲಿ ಮೌಲ್ಯ ವೃದ್ಧಿಸುತ್ತಾ ಸಾಗಿದ ಬಿಟ್ ಕಾಯಿನ್ ಈಗ ಲಕ್ಷಾಂತರ ರೂಪಾಯಿ ಮೌಲ್ಯ ಪಡೆದುಕೊಂಡಿದೆ.



Click it and Unblock the Notifications