Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮನೆಯಲ್ಲಿ ಪಕ್ಷಿ ಗೂಡು ಕಟ್ಟಿದರೆ ಶುಭವೇ? ಅದೃಷ್ಟದ ಸೂಚನೆಯೇ?
ಮನೆಯಲ್ಲಿ ಗಿಳಿಯೊಂದು ಗೂಡು ಕಟ್ಟಿ, ಮೊಟ್ಟೆ ಹಾಕಿದರೆ ತುಂಬಾನೇ ಸಂಭ್ರಮ ಅಲ್ವಾ? ಎಲ್ಲಾನಬಗೆಯ ಪಕ್ಷಿಗಳು ಮನೆಯಲ್ಲಿ ಬಂದು ಗೂಡು ಕಟ್ಟುವುದಿಲ್ಲ, ಪಾರಿವಾಳ, ಗುಬ್ಬಚ್ಚಿ ಈ ಬಗೆಯ ಕೆಲ ಪಕ್ಷಿಗಳಷ್ಟೇ ಮನುಷ್ಯ ವಾಸವಿರುವ ಮನೆಯಲ್ಲಿ ಗೂಡು ಕಟ್ಟುತ್ತವೆ. ಪಕ್ಷಿ ನಾವು ವಾಸವಿರುವ ಮನೆಯಲ್ಲಿ ಗೂಡು ಕಟ್ಟಿದರೆ ಶುಭ ಎಂದು ಹೇಳಲಾಗುವುದು. ನಿಜವಾಗಲು ಪಕ್ಷಿ ಗೂಡು ಕಟ್ಟಿದರೆ ಶುಭವೇ? ವೈದಿಕ ಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಪಕ್ಷಿ ಮನೆ ಮುಂದೆ ಗೂಡು ಕಟ್ಟಿದರೆ ಏನರ್ಥ?
ಕೆಲವರು ಪಕ್ಷಿ ಮನೆ ಮುಂದೆ ಗೂಡು ಕಟ್ಟಿದರೆ ಅದು ಹೇಸಿಗೆ ಮಾಡುತ್ತದೆ ಎಂದು ತೆಗೆದು ಎಸೆಯುತ್ತಾರೆ. ಆದರೆ ಪಕ್ಷಿಯೊಂದು ಬಂದು ಮನೆ ಮುಂದೆ ಗೂಡು ಕಟ್ಟದರೆ ಅದರಿಂದ ನಿಮಗೆ ಶುಭ ಉಂಟಾಗುತ್ತದೆ, ಅದು ಶುಭ ಉಂಟಾಗುತ್ತದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಪಕ್ಷಿ ಗೂಡು ಕಟ್ಟಿದರೆ ಅದೃಷ್ಟ ಲಕ್ಷ್ಮಿ ಬರಲಿದ್ದಾಳೆ ಎಂಬ ಸೂಚನೆಯಾಗಿದೆ ಎಂದು ಹೇಳಲಾಗುವುದು. ನಿಮ್ಮ ಸಂಪತ್ತು ಹೆಚ್ಚಾಗಲಿದೆ ಎಂಬ ನಂಬಿಕೆ ಇದೆ.
ಗುಬ್ಬಚ್ಚಿ ಗೂಡು ಮಾಡಿದರೆ 10 ಬಗೆಯ ವಾಸ್ತು ದೋಷ ನಿವಾರಣೆಯಾಗುವುದು
ಮನೆಯಲ್ಕಿ ಗುಬ್ಬಚ್ಚಿ ಗೂಡು ಕಟ್ಟಿದರೆ 10 ಬಗೆಯ ವಾಸ್ತು ದೋಷ ನಿವಾರಣೆಯಾಗುವುದು ಎಂದು ಹೇಳಲಾಗುವುದು.
ಮನೆಯಲ್ಲಿ ಗುಬ್ಬಚ್ಚಿ ಗೂಡು ಮಾಡುವುದು
ನಿಮ್ಮ ಮನೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟಿದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.ಗುಬ್ಬಚ್ಚಿ ಯಾರ ಮನೆಯಲ್ಲಿ ಗೂಡು ಕಟ್ಟುವುದೋ ಆ ಮನೆಗೆ ಸಂತೋಷ ಮತ್ತು ಸಮೃದ್ಧಿ ಹೆಚ್ಚುವುದು. ಇದು ಸಂಪತ್ತು ಆಗಮನದ ಸಂಕೇತವೆಂದು ಪರಿಗಣಿಸಲಾಗಿದೆ. ಗುಬ್ಬಚ್ಚಿ ಗೂಡು ಕಟ್ಟಿದರೆ ವಾಸ್ತು ದೋಷದ ದುಷ್ಪರಿಣಾಮಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುವುದು. .
ಮನೆಯಲ್ಲಿ ಪಾರಿವಾಳ ಗೂಡು ಮಾಡುವುದು
ಅಂದಹಾಗೆ ತುಂಬಾ ಮನೆಯಲ್ಲಿ ಪಾರಿವಾಳಗಳು ಗೂಡು ಕಟ್ಟುತ್ತವೆ. ಪಾರಿವಾಳ ಮನೆಯಲ್ಲಿ ಇರುವುದು ಮತ್ತು ಗೂಡು ಕಟ್ಟುವುದು ಎರಡನ್ನೂ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಪಾರಿವಾಳದ ಗೂಡು ಇದ್ದರೆ ಸಂತೋಷ ಮತ್ತು ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.
ಇವುಗಳು ಶುಭವಲ್ಲ
ಬಾವಲಿ ಗೂಡು
ಬಾವಲಿಗಳು ಮನೆಯ ಯಾವುದೇ ಭಾಗದಲ್ಲಿ ಗೂಡು ಕಟ್ಟಿದರೆ, ಅದು ತುಂಬಾ ಅಶುಭಕರ ಎಂದು ಭಾವಿಸಲಾಗುವುದು. ಬಾವಲಿ ಈ ರೀತಿ ಗೂಡು ಕಟ್ಟಿದರೆ ಅಹಿತರ ಘಟನೆ ನಡೆಯುವುದು ಎಂದು ಹೇಳಲಾಗುವುದು.
ಮನೆಯಲ್ಲಿ ಕಣಜ ಅಥವಾ ಜೇನುಗೂಡು ತಯಾರಿಸುವುದು-
ಜೇನುನೊಣಗಳು ಅಥವಾ ಕಣಜಗಳು ಮನೆಯ ಯಾವುದೇ ಸ್ಥಳದಲ್ಲಿ ಜೇನುಗೂಡುಗಳನ್ನು ಮಾಡಿದರೆ, ಅದು ಯಾರಿಗಾದರೂ ತೊಂದರೆ ಉಂಟುಮಾಡಬಹುದು. ಮನೆಯಲ್ಲಿ ಜೇನುಗೂಡು ಇರುವುದರಿಂದ, ಅಪಘಾತದ ಸೂಚನೆಯಾಗಿದೆ, ಇದನ್ನು ಮಂಗಳಕರವೆಂದು ಪರಿಗಣಿಸುವುದಿಲ್ಲ.



Click it and Unblock the Notifications
