Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬಿಲ್ ಗೇಟ್ಸ್‌ಗೂ ಟೀ ಕುಡಿಸುವಷ್ಟು ಫೇಮಸ್ ಈತ..! 'ಡಾಲಿ ಚಾಯ್‌ವಾಲ' ಯಾರು ಗೊತ್ತಾ?
ಮೈಕ್ರೋಸಾಫ್ಟ್ ಎಂಬ ಸಾಫ್ಟ್‌ವೇರ್ ಕಂಪನಿಯ ಹೆಸರು ನೀವೆಲ್ಲ ಕೇಳುರುತ್ತೀರಿ. ಅದರ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಹೆಸರಂತು ನಮಗೆ ಚಿರಪರಿಚಿತ. ವಿಶ್ವದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವ ವ್ಯಕ್ತಿಯಾತ. ವಿಶ್ವದ ಶ್ರೀಮಂತ ಅಂದಮೇಲೆ ಐಷಾರಾಮಿ ಜೀವನಕ್ಕೇನು ಕೊರತೆಯಿಲ್ಲ. ಅವರು ಹೋದಲ್ಲಿ ಬಂದಲ್ಲಿ ಸುತ್ತ ಜನರು ಸೇರುವುದು, ಅವರು ಬಳಸುವ ವಸ್ತುಗಳು ಸಹ ಲಕ್ಷ ಲಕ್ಷ ಬೆಲೆ ಬಾಳುತ್ತವೆ.
ಇನ್ನು ಅವರ ಆಹಾರ ಸಹ ಅಷ್ಟೇ ಶ್ರೀಮಂತಿಕೆ ತೋರಿಸುತ್ತೆ. ಆದರೆ ಅಂಬಾನಿ ಪುತ್ರನ ವಿವಾಹದಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿರುವ ಮೈಕ್ರೋಸಾಫ್ಟ್ ಸಿಇಒ ಬಿಲ್ ಗೇಟ್ಸ್ ಭಾರತದ ಬೀದಿ ಬೀದಿ ಸುತ್ತುತ್ತಿದ್ದಾರೆ. ಶ್ರೀಮಂತ ಉದ್ಯಮಿಯಾಗಿದ್ದರೂ ಭಾರತದ ಸ್ಟ್ರೀಟ್ ಫುಡ್ ಸವಿಯಲು ಮುಂದಾಗಿದ್ದಾರೆ.

ಭಾರತದ ಸಹ ತನ್ನ ಸ್ಟ್ರೀಟ್ ಫುಡ್‌ನಿಂದಲೂ ಹೆಸರಾಗಿದೆ. ಈ ಆಹಾರ ಸವಿಯಲು ಎಲ್ಲರು ಇಷ್ಟಪಡುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳು, ಉದ್ಯಮಿಗಳು ಸಹ ಹೊರತಾಗಿಲ್ಲ. ಆದರೆ ಈಗ ಬಿಲ್ ಗೇಟ್ಸ್ ಭಾರತದಲ್ಲಿ ಬೀದಿ ಬದಿಯ ಚಹಾ ಸವಿದಿರುವುದು ಭಾರೀ ಸುದ್ದಿಯಾಗಿದೆ. ಹೌದು ಭಾರತದ ಪ್ರವಾಸದಲ್ಲಿರುವ ಬಿಲ್ ಗೇಟ್ಸ್ ಬೀದಿಯಲ್ಲಿ ತಳ್ಳುವ ಗಾಡಿಯ ಟೀ ಸವಿದಿದ್ದು, ಆ ವಿಡಿಯೋವನ್ನು ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ, ಗೇಟ್ಸ್ ಭಾರತದಲ್ಲಿನ ದೈನಂದಿನ ಜೀವನದಲ್ಲಿ ಕಂಡುಬರುವ ಹೊಸತನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ, "ಭಾರತದಲ್ಲಿ ನೀವು ಎಲ್ಲೆಡೆಯೂ ನೀವು ಹೊಸತನವನ್ನು ಕಾಣಬಹುದು - ಸರಳ ಕಪ್ ಚಹಾದ ತಯಾರಿಕೆಯಲ್ಲಿಯೂ ಸಹ!" "ಒಂದು ಚಾಯ್, ದಯವಿಟ್ಟು" ಎಂದು ಬರೆದುಕೊಂಡಿದ್ದಾರೆ. ಅವರಿಗೆ ಚಹಾಗಿಂತ ಚಹಾ ಮಾಡಿಕೊಡುವ ವಿಧಾನವೇ ಹೆಚ್ಚು ಇಷ್ಟವಾದಂತೆ ಕಾಣುತ್ತಿದೆ. ಇದಕ್ಕೆ ಕಾರಣವೂ ಇದೆ.
ಬಿಲ್‌ಗೇಟ್ಸ್‌ಗೆ ಚಹಾ ಮಾಡಿಕೊಟ್ಟಿದ್ದು ಯಾರು..?
ನೀವು ಸಾಮಾಜಿಕ ಜಾಲತಾಣ ಅಥವಾ ರೀಲ್ಸ್ ನೋಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಈ ಚಾಯ್‌ವಾಲ ನಿಮಗೂ ಚಿರಪರಿಚಿತ. ತನ್ನ ಚಿತ್ರ ವಿಚಿತ್ರ ಶೈಲಿಯಲ್ಲಿ ಟೀ ಮಾಡುವುದರಿಂದಲೇ ಆತ ಫೇಮಸ್, ಡಾಲಿ ಚಾಯ್‌ವಾಲ ಅಂತಾನೇ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಆತ ವಿಚಿತ್ರ ಮ್ಯಾನರಿಸಂ ಚಹಾ ಮಾಡುವುದಿಂದ ಹೆಸರಾಗಿದ್ದಾನೆ. ನಾಗ್ಪುರದಲ್ಲಿ ಈತನ ಅಂಗಡಿ ಇದ್ದು, ಡಾಲಿ ಚಹಾ ಕುಡಿಯಲು ಜನ ಸಾಲಿನಲ್ಲಿ ನಿಲ್ಲುತ್ತಾರೆ.
ದಿನವೊಂದಕ್ಕೆ ಆತ ಸಾವಿರಕ್ಕೂ ಹೆಚ್ಚು ಟೀ ಮಾರಾಟ ಮಾಡುತ್ತಾನೆ. ಆದರೆ ಆತ ಫೇಮಸ್ ಆಗಿದ್ದು ಟೀ ರುಚಿಯಿಂದಲ್ಲ. ಬದಲಿಗೆ ಆತ ಟೀ ಮಾಡಿ ಕೊಡುವ ಸ್ಟೈಲ್‌ನಿಂದ. ಹೌದು ಆತ ಎಲ್ಲರು ಮಾಡುವಂತೆ ಟೀ ಮಾಡುವುದಿಲ್ಲ. ಹಾಲಿನ ಪಾಕೆಟ್ ಹರಿಯುವುದರಿಂದ ಹಿಡಿದು ಟೀ ಹಾಕಿ ಕೊಡುವವರೆಗೂ ಆತ ವಿಚಿತ್ರವಾಗಿ ವರ್ತಿಸುತ್ತಾನೆ. ಕೆಲವರಿಗೆ ಆತ ಅಸಹ್ಯ ತರಿಸಬಹುದು. ಏಕೆಂದರೆ ಹಾವಿನ ರೀತಿ ನಾಲಿಗೆ ಹೊರಹಾಕುವುದು ರಜಿನಿಕಾಂತ್ ರೀತಿಯಲ್ಲಿ ಸಿಗರೇಟ್‌ಗೆ ಬೆಂಕಿ ಹಚ್ಚುವುದು ಸೇರಿ ಚಿತ್ರ ವಿಚಿತ್ರವಾಗಿ ಆತ ನಡೆದುಕೊಳ್ಳುವುದನ್ನು ಆತನ ವಿಡಿಯೋದಲ್ಲಿ ನೋಡಬಹುದು.
ಡಾಲಿ ಚಾಯ್‌ವಾಲನ ಹೆಸರೇ ಯಾರಿಗೂ ಗೊತ್ತಿಲ್ಲ.!
ವಿಚಿತ್ರ ಏನೆಂದರೆ ಡಾಲಿ ಚಾಯ್‌ವಾಲ ಎಂದು ಹೆಸರಿಟ್ಟುಕೊಂಡಿರುವ ಆತ ನಿತ್ಯ ಸಾವಿರಾರು ರೂಪಾಯಿ ದುಡಿಯುತ್ತಾನೆ. ಆತನ ವಿಡಿಯೋ ನೋಡಿಯೇ ಹಲವರು ಟೀ ಕುಡಿಯಲು ಆತನ ಹುಡುಕಿಕೊಂಡು ಹೋಗುತ್ತಾರೆ. ಆದರೆ ಈವರೆಗೆ ಆತನ ನಿಜವಾದ ಹೆಸರು ಏನು ಎಂಬುದೇ ತಿಳಿದಿಲ್ಲ. ಅಂಗಡಿಗೆ ಬರುವ ಗ್ರಾಹಕರು ಕೇಳಿದರೂ ಆತ ತನ್ನ ನಿಜವಾದ ಹೆಸರು ಹೇಳಿಲ್ಲವಂತೆ. ಸಾಮಾಜಿಕ ಜಾಲತಾಣದಲ್ಲೂ ಖಾತೆ ಹೆಸರು ಡಾಲಿ ಚಾಯ್‌ವಾಲ ಎಂದಷ್ಟೇ ಇಟ್ಟುಕೊಂಡಿದ್ದಾನೆ. ಆದರೆ ಬಿಲ್‌ಗೇಟ್ಸ್ ಎಂಟ್ರಿ ಮೂಲಕ ಆತ ಮತ್ತಷ್ಟು ಫೇಮಸ್ ಆಗಿರೋದಂತು ನಿಜ.



Click it and Unblock the Notifications
