Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉತ್ತರ ಪತ್ರಿಕೆ ಸರಿಯಾಗಿ ಓದದೆ ಮಾರ್ಕ್ಸ್ ಹಾಕುತ್ತಿರುವ ಶಿಕ್ಷಕಿ ವಿಡಿಯೋ: ಶಿಕ್ಷಕಿ ಸ್ಥಾನಕ್ಕೆ ಈಕೆ ಅರ್ಹಳೇ
ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದವರು ಶಿಕ್ಷಕರಾಗಲು ಸಾಧ್ಯವೇ? ಉತ್ತರ ಪತ್ರಿಕೆ ಓದದೆ ಮನಸ್ಸಿಗೆ ಬಂದಂತೆ ಮಾರ್ಕ್ಸ್ ಹಾಕುತ್ತಿರುವ ಶಿಕ್ಷಕಿಯ ವೀಡಿಯೋ ವೈರಲ್ ಆಗುತ್ತಿದೆ, ಆ ಶಿಕ್ಷಕಿ ಬಿಹಾರ ಮೂಲದವರು ಎಂದು ಹೇಳಲಾಗುತ್ತಿದೆ. X ಮಾಧ್ಯಮದಲ್ಲಿ ಶೇರ್ ಮಾಡಲಾದ ಈ ವೀಡಿಯೋ ನೋಡುವಾದ ನಮಗೇ ಟೆನ್ಷನ್ ಆಗುತ್ತೆ, ಮಕ್ಕಳ ಭವಿಷ್ಯದ ವಿಷಯದಲ್ಲಿ ಇಷ್ಟೊಂದು ನಿರ್ಲಕ್ಷ್ಯವೇ?

ಆ ರೂಂನಲ್ಲಿ ಎಲ್ಲಾ ಶಿಕ್ಷಕರು ಉತ್ತರ ಪತ್ರಿಕೆಯನ್ನು ತುಂಬಾ ಗಂಭೀರವಾಗಿ ನೋಡುತ್ತಿದ್ದಾರೆ, ಆದರೆ ಇವರು ಮಾತ್ರ ಉತ್ತರ ಪತ್ರಿಕೆಗೆ ಮಾರ್ಕ್ಸ್ ಹಾಕಿ ಮುಗಿಸುವ ಆತುರದಲ್ಲಿದ್ದಾರೆ, ಮಕ್ಕಳ ಭವಿಷ್ಯ ಏನಾದರು ಏನಂತೆ ನನಗೆ ಮಾತ್ರ ಸಂಬಳ ಸಿಕ್ಕರೆ ಸಾಕು ಎಂಬಂಥ ಧೋರಣೆ ಈಕೆಯದ್ದು, ಇಂಥ ಶಿಕ್ಷಕರು ಆ ವೃತ್ತಿಯಲ್ಲಿ ಇರುವುದಕ್ಕೆ ಅನರ್ಹರು, ಅವರನ್ನು ಕೆಲಸದಿಂದ ತೆಗೆದು ಹಾಕಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
पीपीयू एग्जाम का कॉपी जांचने का रील्स इंस्टाग्राम पर वायरल, मैडम पर FIR दर्ज। pic.twitter.com/GlnZhH4Yuk
— छपरा जिला 🇮🇳 (@ChapraZila) May 26, 2024
ಉತ್ತರ ಪತ್ರಿಕೆಯನ್ನು ಅಷ್ಟು ಬೇಗ ನೋಡಿ ಮಾರ್ಕ್ಸ್ ಹಾಕಲು ಅವರೇನು ರೋಬೋಟ್ ಅಲ್ವಲ್ಲ, ಸುಮ್ಮನೆ ಟಿಕ್ ಹಾಕಿ ಮಾರ್ಕ್ಸ್ ಹಾಕುತ್ತಿದ್ದಾರೆ. ಇವರ ಕೆಲಸವನ್ನು ಸರಿಯಾಗಿ ಗಮನಿಸಿಯೇ ವೀಡಿಯೋ ಹೊರ ಬಿಡಲಾಗಿದೆ. ಒಂದು ವೀಡಿಯೋದಲ್ಲಿ ಕುರ್ತಾದಲ್ಲಿ ಬಂದಿದ್ದಾರೆ, ಆವಾಗಲೂ ಅವರ ಉತ್ತರ ಪತ್ರಿಕೆಯ ಕಡೆ ನಿರ್ಲಕ್ಷ್ಯ ತೋರಿದ್ದಾರೆ, ಸರಿಯಾಗಿ ಓದದೆ ಮಾರ್ಕ್ಸ್ ಹಾಕಿದ್ದಾರೆ.
ಮಾರನೇಯ ದಿನ ಸೀರೆಯಲ್ಲಿ ಬಂದಿದ್ದಾರೆ, ಮೊದಲ ದಿನ ಇವರು ಉತ್ತರ ಪತ್ರಿಕೆ ನೋಡುವ ಸ್ಟೈಲ್ ನೋಡಿ ಮಾರನೇಯ ದಿನ ಕ್ಯಾಮರಾ ಇವರನ್ನೇ ಫೋಕಸ್ ಮಾಡಿದೆ, ಅವರು ಕ್ಯಾಮರಾ ಕಡೆಗೆ ನೋಡುತ್ತಾರೆ, ಆದರೆ ನನ್ನ ಕಳ್ಳತನ ಹೊರ ಹಾಕುತ್ತೆ ಎಂದು ಊಹಿಸಿರಲಿಲ್ಲ ಕಾಣುತ್ತೆ, ಒಂದಿಷ್ಟೂ ಓದದೆ ಉತ್ತರ ಪತ್ರಿಕೆಗೆ ಮಾರ್ಕ್ಸ್ ಹಾಕಿದ್ದಾರೆ.
पीपीयू एग्जाम का कॉपी जांचने का रील्स इंस्टाग्राम पर वायरल, मैडम पर FIR दर्ज। pic.twitter.com/pv14DIwKsA
— Educators of Bihar (@BiharTeacherCan) May 26, 2024
ಆ ಮಕ್ಕಳ ಒಂದು ವರ್ಷದ ಶ್ರಮ
ಮಕ್ಕಳು ಎಷ್ಟು ಕಷ್ಟ ಪಟ್ಟು ಓದುತ್ತಾರೆ, ಅದರಲ್ಲಿಯೂ ಈಗ 100ಕ್ಕೆ 100 ಅಂಕ ತೆಗೆಯುವ ಮಕ್ಕಳ ಸಂಖ್ಯೆಯೇ ಅಧಿಕವಿರುವುದರಿಂದ ಕಾಕೇಜಿನಲ್ಲಿ ಸೀಟ್ ಸಿಗಲು, ಸ್ಪರ್ಧಾತ್ಮಕ ಪರೀಕ್ಷೆಗೆ , ಮೆಡಿಕಲ್, ಎಂಜಿನಿಯರ್ ಹೀಗೆ ಯಾವುದೇ ವೃತ್ತಿಪರ ಕೋರ್ಸ್‌ಗಳಿಗೆ ಮಾರ್ಕ್ಸ್ ಅನ್ನು ಮಾನದಂಡ ಮಾಡಲಾಗುವುದು. ಇನ್ನು ಎಷ್ಟು ಮಾರ್ಕ್ಸ್ ತೆಗೆದರೂ ಸಾಲದ ಈ ಸಮಯದಲ್ಲಿ ಶಿಕ್ಷಕಿಯಾದ ಈಕೆ ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸಿದ್ದು ಎಷ್ಟು ಸರಿ, ಇಂಥವರಿಗೆ ತಕ್ಕ ಪಾಠ ಆಗಲೇಬೇಕು.
ಮಕ್ಕಳ ಭವಿಷ್ಯ ಬೆಳಗುವವನೇ ಗುರು
ಶಿಕ್ಷಕ ಹಾಗೂ ಮಕ್ಕಳ ಸಂಬಂಧ ತುಂಬಾನೇ ಸುಂದರವಾದ ಸಂಬಂಧ, ಶಿಕ್ಷಕ ಮಕ್ಕಳ ಯಶಸ್ವಿನಲ್ಲಿ ತನ್ನ ಯಶಸ್ವು ಕಾಣುತ್ತಾನೆ, ತಾನು ಕಲಿಸಿದ ಮಕ್ಕಳುಮ ಒಳ್ಳೆಯ ಮಾರ್ಕ್ಸ್ ತಗೊಂಡಾಗ ಹೆಮ್ಮೆಯಿಂದ ಬೀಗುತ್ತಾನೆ.
ಇಂಥ ನಿರ್ಲಕ್ಷ್ಯದಿಂದ ಮಕ್ಕಳಿಗೆ ಕಡಿಮೆ ಮಾರ್ಕ್ಸ್ ಬಂದು ಅವರು ಮನ ನೊಂದು ಅನಾಹುತರ ನಿರ್ಧಾರ ಮಾಡಿದರೆ?
ಎಷ್ಟೋ ಪ್ರಕರಣಗಳು ನಡೆದಿವೆ, ಫೇಲ್ ಆಯ್ತು ಎಂದು ದುಡುಕಿನ ನಿರ್ಧಾರ ಮಾಡಿ ನಂತರ ನೋಡಿದರೆ ಅವರಿಗೆ ಅಧಿಕ ಅಂಕ ಬಂದಿರುತ್ತದೆ, 81 ಬರೆಯುವಲ್ಲಿ 18 ಆಗಿರುತ್ತದೆ. ಹಾಗಾಗಿ ಶಿಕ್ಷಕರು ಮೌಲ್ಯಮಾಪನ ಮಾಡುವಾಗ ತುಂಬಾನೇ ಜಾಗ್ರತೆವಹಿಸಬೇಕು, ಕೈ ತಪ್ಪು ಆಗಬಾರದು, ಆಗುತ್ತೆ ಕೆಲವೊಮ್ಮೆ ಆದರೆ ಇವರದ್ದು ಮಾತ್ರ ಕೈತಪ್ಪು ಅಲ್ಲ ಮಹಾ ನಿರ್ಲಕ್ಷ್ಯ.
ಈ ವೀಡಿಯೋವನ್ನು Educators of Bihar ಎಂಬ ಸಾಮಾಜಿಕ ತಾಣದಲ್ಲಿ ಹಾಕಲಾಗಿದ್ದು ಇವರ ವೀಡಿಯೋಗಳು ವೈರಲ್ ಆಗಿವೆ.



Click it and Unblock the Notifications


