Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಪ್ರೀತಿಯ ನಾಟಕವಾಡುತ್ತಿದ್ದಾರಾ? ಹೊರಗಡೆ ಗರ್ಲ್ ಫ್ರೆಂಡ್ ಇದ್ದಾರಾ?
ಪ್ರತಿ ಬಿಗ್‌ಬಾಸ್ ಸೀಸನ್‌ನಲ್ಲೂ ಜೋಡಿಗಳಿರುತ್ತಾರೆ, ಕೆಲವರು ತಮ್ಮ ಗಮನ ಸೆಳೆಯಲು ಲವ್ ಎಂಬ ಪ್ಲೇ ಕಾರ್ಡ್ ಬಳಸಿದರೆಇನ್ನು ಕೆಲವರು ನಿಜವಾಗಲು ಪ್ರೀತಿ ಮಾಡಿದವರೂ ಇದ್ದಾರೆ. ಈ ಸೀಸನ್‌ನಲ್ಲಿ ಆ ರೀತಿ ಗಮನ ಸೆಳೆದ ಪ್ರಮುಖ ಜೋಡಿಯೆಂದರೆ ಕಾರ್ತಿಕ್ ಮತ್ತು ಸಂಗೀತಾ.
ಇಬ್ಬರು ಪ್ರೇಮಿಗಳು ಎಂದು ಒಪ್ಪಿಕೊಳ್ಳುತ್ತಿಲ್ಲ, ಅದರಲ್ಲೂ ಸಂಗೀತ ಒಪ್ಪಿಕೊಳ್ಳುತ್ತಿಲ್ಲ, ಆದರೆ ಇಬ್ಬರ ವರ್ತನೆ ಕೆಲವೊಮ್ಮೆ ನೋಡುವ ಒಬ್ಬರಿಗೊಬ್ಬರು ಇಷ್ಟಪಡುತ್ತಿದ್ದೀರಾ ಎಂಬ ಪ್ರಶ್ನೆ ಮೂಡುತ್ತದೆ. ಇವರಿಬ್ಬರ ಜೋಡಿ ಮೆಚ್ಚಿ ಫ್ಯಾನ್ಸ್ ಪೇಜ್ ಕೂಡ ಶುರು ಮಾಡಿದ್ದಾರೆ.. ಆದರೆ ಕಾರ್ತಿಕ್ 'ಲವ್' ಫೇಕ್? ಎಂಬ ಪ್ರಶ್ನೆ ವೀಕ್ಷಕರಲ್ಲಿ ಹುಟ್ಟಿಕೊಂಡಿದೆ.
ವೀಕ್ಷಕರ ಗಮನ ಸೆಳೆಯಲು ಮನೆಯೊಳಗಡೆ ಪ್ರೀತಿಯ ನಾಟಕವಾಡುತ್ತಿದ್ದಾರಾ ಕಾರ್ತಿಕ್?
ಇದುವರೆಗೆ ಅಂಥದ್ದೊಂದು ಡೌಟು ಯಾರಿಗೂ ಬಂದಿರಲಿಲ್ಲ, ಕಾರ್ತಿಕ್‌ಗೆ ಸಂಗೀತಾ ತುಂಬಾ ಇಷ್ಟ, ಆದ್ದರಿಂದ ಈ ಜೋಡಿ ಒಂದಾಗಲಿ ಎಂದೇ ಬಯಸಿದ್ದರು. ಆದರೆ ಕಾರ್ತಿಕ್ ಪ್ರೀತಿ ಹೆಸರಿನಲ್ಲಿ ಹೆಣ್ಮಕ್ಕಳ ಬದುಕಿನಲ್ಲಿ ಆಟ ಆಡುತ್ತಿದ್ದೀರಾ ಎಂಬ ಪ್ರಶ್ನೆ ನವೆಂಬರ್ 8ರ ಎಪಿಸೋಡ್ ನೋಡಿದಾಗ ಅನಿಸುವುದು. ಸ್ನೇಹಿತ್ ಹೇಳಿದ ಆ ಮಾತು ಕಾರ್ತಿಕ್ ಬಗ್ಗೆ ಇರುವ ಅಭಿಪ್ರಾಯವನ್ನೇ ಬದಲಾಯಿಸಿದೆ.

ಆಟದ ಭರದಲ್ಲಿ ಕಾರ್ತಿಕ್ ಬದುಕಿನಲ್ಲಿ ಮತ್ತೊಬ್ಬ ಹೆಣ್ಣು ಇದ್ದಾಳೆ ಎಂದು ಸುಳಿವು ಕೊಟ್ಟು ಸ್ನೇಹಿತ್
ಬಿಗ್‌ಬಾಸ್ ನಗಿಸುವ, ಕೋಪಗೊಳ್ಳುವಂತೆ ಮಾಡುವ, ಅಳಿಸುವ ಟಾಸ್ಕ್ ನೀಡಿತ್ತು, ಈ ಆಟದಲ್ಲಿ ಸ್ಪರ್ಧಿಗಳ ಆಟ ಆಡಿದ್ದಕ್ಕಿಂತ ಪರ್ಸನಲ್ ವಿಷಯ ಹೇಳಿ ಒಬ್ಬರಿಗೊಬ್ಬರು ಕೆಸರೆಸಿಕೊಂಡಿದ್ದು ಬಿಟ್ಟರೆ ಬೇರೇನೂ ಕಾಣಲಿಲ್ಲ. ಕಾರ್ತಿಕ್ನಿಗೆ ಅವಮಾನ ಬರುವಂತೆ ಮಾತನಾಡುತ್ತಾ ಸ್ನೇಹಿತ್ ' ನೀನ್ ಬಿಗ್‌ಬಾಸ್‌ಗೆ ಬರಲಿ ಅಂತ ಅಲ್ಲೊಬ್ಬಳು ಹರಕೆಹೊತ್ತು, ದೇವಾಸ್ಥಾನಗಳಿಗೆ ಹೋಗಿ ಪ್ರಾರ್ಥಿಸಿದರೆ ನೀನು ಇಲ್ಲಿ ಬಂದು ಲವ್ ಮಾಡ್ತೀಯ' ಎಂಬ ಮಾತನ್ನು ಹೇಳಿದರು. ಇದನ್ನು ಕೇಳಿದಾಗ ವೀಕ್ಷಕರಿಗೆ ಹಾಗಾದರೆ ಕಾರ್ತಿಕ್ ಬಿಗ್‌ಬಾಸ್ ಮನೆಯಲ್ಲಿ ಸಂಗೀತ ಜೊತೆ ಆ ರೀತಿ ವರ್ತಿಸುತ್ತಿರುವುದು ಗಮನ ಸೆಳೆಯುವುದಕ್ಕಾ? ಎಂಬ ಅನುಮಾನ ಮೂಡುತ್ತದೆ.
ಕಾರ್ತಿಕ್ ಕೂಡ ಈ ವಿಷಯ ಕ್ಲಿಯರ್ ಮಾಡಲಿಲ್ಲ
ಗೇಮ್ ನಂತರ ನೀನು ಮನೆಯೊಳಗಿನ ವಿಷಯ ಮಾತನಾಡಬೇಕಿತ್ತು, ಮನೆಯ ಹೊರಗಡೆಯ ವಿಷಯ ಏಕೆ ಬೇಕಿತ್ತು? ಎಂಬರ್ಥದಲ್ಲಿ ಮಾತನಾಡಿದರು, ಒಬ್ಬ ಫ್ರೆಂಡ್ ಆಗಿ ಹೇಳಿದ್ದೆ, ಗೇಮ್‌ನಲ್ಲಿ ಬಳಸುತ್ತೀಯ ಅಂತ ಗೊತ್ತಿರಲಿಲ್ಲ ಅಂತ ತುಂಬಾನೇ ಬೇಸರಗೊಂಡರು. ಆದರೆ ಮನೆಯ ಹೊರಗಡೆ ನನಗೆ ಅಂಥ ಯಾವ ಹೆಣ್ಣು ಜೊತೆ ಸಮಬಂಧ ಇಲ್ಲ ಅಂತ ಹೇಳಲೇ ಇಲ್ಲ. 8 ವರ್ಷದ ರಿಲೇಷನ್‌ಶಿಪ್ ಬ್ರೇಕ್ ಆಗಿತ್ತು ಅಂತ ಹೇಳಿದ್ದರು. ಆದರೆ ಮತ್ಯಾವ ಸಂಬಂಧದ ಬಗ್ಗೆ ಹೇಳಿರಲಿಲ್ಲ, ಆದರೆ ಸ್ನೇಹಿತ್ ಹಾಕಿದ ಬಾಂಬ್ ಕಾರ್ತಿಕ್ ಬುಡ ಅಲ್ಲಾಡಿಸಿದೆ. ಬಿಗ್‌ಬಾಸ್ ಮನೆಯಲ್ಲಿ ಯಾರಿಗೂ ಯಾವ ಸೀಕ್ರೆಟ್ ಹೇಳಬಾರದು ಎಂದು ಹೇಳುವ ಕಾರ್ತಿಕ್ ಆ ಹುಡುಗಿ ಬಗ್ಗೆ ಏನೂ ಹೇಳುತ್ತಿಲ್ಲ, ತನ್ನ ಪ್ರೀತಿಯ ನಾಟಕಕ್ಕೆ ಈ ರೀತಿ ಹೊಡೆತ ಬೀಳುತ್ತೆ ಎಂದು ಊಹಿಸಿರಲಿಲ್ಲ ಎಂದನಿಸುತ್ತೆ... ಹೊರಗಡೆ ಅವರಿಗಾಗಿ ಒಂದು ಹುಡುಗಿ ಕಾಯುತ್ತಿದ್ದರೆ ಕಾರ್ತಿಕ್ ಆಟ ನಾಟ್ ಒಕೆ....
ಪ್ರೀತಿಸಿದರೆ ಮಾತ್ರ ಫಿನಾಲೆಗೆ ಬರಬಹುದು ಎಂಬುವುದು ಸ್ಪರ್ಧಿಗಳ ಆಲೋಚನೆಯೇ?
ಮನೆಗೆ ಬಂದು ಕೆಲವು ದಿನಗಳು ಕಳೆದು ನಂತರ ಪ್ರೀತಿಯಾದರೆ ಸಹಜ. ದಿವ್ಯಾ-ಅರವಿಂದ್‌ರ ಕ್ಯೂಟ್ ಜೋಡಿ, ಅವರು ಬಿಗ್‌ಬಾಸ್ ಮನೆಯೊಳಗೆ ನಡೆದುಕೊಳ್ಳುತ್ತಿದ್ದ ರೀತಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು. ಅರವಿಂದ್ ಕೂಡ ತುಂಬಾನೇ ಡೀಸೆಂಟ್ ಆಗಿದ್ದರು. ಆದರೆ ಕಾರ್ತಿಕ್ ಮನೆಗೆ ಬಂದ ಒಂದೆರಡು ದಿನದಲ್ಲಿಯೇ ಸಂಗೀತಾಗೆ ಜೋಡಿ ಆಗಲು ಪ್ರಯತ್ನಿಸುತ್ತಿರುವುದು ಕಾಣುತ್ತಿತ್ತು. ಹಾಗಾದರೆ ಬಿಗ್‌ಬಾಸ್‌ಗೆ ಬಂದು ಯಾರನ್ನಾದರೂ ಪ್ರೀತಿಸುವ ನಾಟಕ ಆಡಬೇಕೆಂದು ಮೊದಲೇ ಫ್ಲ್ಯಾನ್ ಮಾಡಿ ಬಂದು ಅದರಂತೆ ಆಡುತ್ತಿದ್ದಾರೆಯೇ?
ಪ್ರೀತಿಸಿದರೆ ಮಾತ್ರ ವೀಕ್ಷಕರ ಗಮನ ಸೆಳೆಯಲು ಸಾಧ್ಯವೇ?
ಬಿಗ್‌ಬಾಸ್ ಬರುವುದು ಆಡುವುದಕ್ಕೆ, ಯಾರು ಚೆನ್ನಾಗಿ ಆಟ ಆಡುತ್ತಾರೋ ಅವರು ಮಾತ್ರ ಗೆಲ್ಲುತ್ತಾರೆ. ...



Click it and Unblock the Notifications
