Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಸುಳ್ಳು ಹೇಳಿಲ್ಲ ಎಂಬುವುದಕ್ಕೆ ಪುಷ್ಠಿ ನೀಡುತ್ತಿದೆ ಈ ವೀಡಿಯೋ
ಕಳೆದ ವಾರ ಬಿಗ್‌ಬಾಸ್‌ನಲ್ಲಿ ಡ್ರೋನ್ ಪ್ರತಾಪ್ ತಮ್ಮ ಜೀವನದಲ್ಲಿ ಮರೆಯಲಾಗದ ಕಹಿ ಘಟನೆಯ ಬಗ್ಗೆ ಹೇಳಿಕೊಳ್ಳುವಾಗ ನಾನು ಕ್ವಾರಂಟೈನ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ನನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡರು ಎಂಬ ಮಾತನ್ನು ಹೇಳಿದ್ದರು. ಯಾವ ಅಧಿಕಾರಿಯ ಹೆಸರನ್ನು ಎತ್ತಿ ಹೇಳದೆ ತನಗಾದ ಟಾರ್ಚರ್ ಬಗ್ಗೆ ಹೇಳಿಕೊಂಡಿದ್ದರು, ನನಗೆ ತಲೆತಲೆಗೆ ಹೊಡೆದಿದ್ದರು, ನಿನ್ನ ತಂಗಿಯನ್ನು ಯಾರು ಮದುವೆಯಾಗುತ್ತಾರೆ, ನೀನು ಮೆಂಟಲಿ ಅನ್‌ಸ್ಟೇಬಲ್ ಎಂದು ಬರೆದುಕೊಡು ಎಂದು ಟಾರ್ಚರ್ ನೀಡಿದ್ದರು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದರು. ಅದನ್ನು ನೋಡಿದ ವೀಕ್ಷಕರಿಗೆ ಡ್ರೋನ್ ಪ್ರತಾಪ್ ಮೇಲೆ ಸಿಂಪತಿ ಮತ್ತಷ್ಟು ಹೆಚ್ಚಾಯ್ತು.

ಆ ವಿಚಾರ ಹೊರಗಡೆ ಬೇರೆನೇ ತಿರುವು ಪಡೆಯಿತು
ಡ್ರೋನ್ ಬಿಗ್‌ಬಾಸ್‌ಗೆ ಬರುವ ಮುನ್ನ ಜನರಿಗಿದ್ದ ಅಭಿಪ್ರಾಯ ಅವರು ಬಿಗ್‌ಬಾಸ್‌ಗೆ ಬಂದ ತುಂಬಾ ಬದಲಾಗಿತ್ತು. ಆದರೆ ಅವರು ತಮಗಾದ ಅನುಭವವನ್ನು ಹೇಳಿ ಅತ್ತಾಗ ನಿಜವಾಗಲೂ ಅವರ ಬದುಕಿನಲ್ಲಿ ಆ ರೀತಿ ನಡೆಯಿತೇ ಅಥವಾ ಮೊದಲು ಜನರಿಗೆ ಸುಳ್ಳು ಹೇಳಿದಂತೆ ಈಗ ಅನುಕಂಪ ಬರಲಿ ಎಂದು ಸುಳ್ಳು ಹೇಳುತ್ತಿದ್ದಾರೆಯೇ ಎಂಬ ಅನುಮಾನ ಕೆಲವರಿಗೆ ಉಂಟಾಯಿತು.
ಕೆಲವರು ಡ್ರೋನ್ ಪ್ರತಾಪ್ ಅವರನ್ನು ಬೆಂಬಲಿಸಿದರೆ ಇನ್ನು ಕೆಲವರು ಖಂಡಿತ ಡ್ರೋನ್ ಸುಳ್ಳುಹೇಳುತ್ತಿದ್ದಾರೆ ಎಂದು ಹೇಳಲಾರಂಭಿಸಿದರು. ಇನ್ನು ಅವರು ಯಾವುದೇ ಅಧಿಕಾರಿಯ ಹೆಸರು ಹೇಳದೇ ಇದ್ದರು ಅವರನ್ನು ವಿಚಾರಣೆ ಮಾಡಿದ್ದ ಅಧಿಕಾರಿ ಮಾಧ್ಯಮಗಳ ಮುಂದೆ ಡ್ರೋನ್ ಅನ್ನು ನಾವು ಆ ರೀತಿ ನಡೆಸಿಕೊಂಡೇ ಇಲ್ಲ, ಅವರಿಗೆ ಭ್ರಮೆಯ ಕಾಯಿಲೆ ಇರಬಹುದು, ಅವರನ್ನು ಒಂದು ಒಳ್ಳೆಯ ಹೋಟೆಲ್‌ನಲ್ಲಿರಿಸಿ ವಿಚಾರಣೆ ಮಾಡಿದೆವು ಎಂದು ಹೇಳಿದರು.'
ಇದೆಲ್ಲಾ ನೋಡಿದಾಗ ಡ್ರೋನ್ ಬದಲಾಗಿದ್ದರೆ ಎಂದು ಅಂದುಕೊಂಡಿ, ಡ್ರೋನ್ ಮಾಸ್ಕ್ ಹಾಕಿ ಕೂತಿದ್ದಾರೆ. ಅವರು ಒಂದು ಅಧಿಕಾರಿಯ ಬಗ್ಗೆ ಮತ್ತೊಬ್ಬ ಅಧಿಕಾರಿ ಬಳಿ ಅವರು ನನಗೆ ನೀಡಿದ ಟಾರ್ಚರ್ ಬಗ್ಗೆ ಹೇಳುತ್ತಿದ್ದಾರೆ, ಅದರಲ್ಲಿ ಹೇಳಿರುವ ವಿಷಯಗಳು ಬಿಗ್‌ಬಾಸ್ ಮನೆಯೊಳಗೆ ಹೇಳಿದ ವಿಷಯಗಳೇ ಆಗಿದೆ. ಆದ್ದರಿಂದ ಡ್ರೋನ್ ಸುಳ್ಳು ಹೇಳಿಲ್ಲ ಎಂಬುವುದಕ್ಕೆ ಈ ವೀಡಿಯೋ ಪುಷ್ಠಿ ನೀಡುತ್ತಿದೆ.
ಸ್ಟಾರ್ ಆಗಿದ್ದ ಪ್ರತಾಪ್ ತಮ್ಮ ತಪ್ಪಿನಿಂದಲೇ ಜೀರೋ ಆದರು, ಆದರೆ ಒಳ್ಳೆಯ ಬದಲಾವಣೆ ಬಯಸುತ್ತಿದ್ದಾರೆ
ಒಂದು ಕಾಲದಲ್ಲಿ ಡ್ರೋನ್ ಪ್ರತಾಪ್ ಚಿಕ್ಕ ಹುಡುಗನನ್ನು ಇಡೀ ಕರ್ನಾಟಕ ಬೆರಗು ಕಣ್ಣಿನಿಂದ ನೋಡುತ್ತಿತ್ತು, ಯುವ ವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದರು. ಮಾತನಾಡಲು ನಿಂತರಂತೂ ಅವರು ಕಣ್ಣಿಗೆ ಕಟ್ಟಿದಂತೆ ಕತೆ ಹೇಳುತ್ತಿದ್ದರು, ಅವರು ಹೇಳಿದ ಕತೆಗಳೇ ಕೊನೆಗೆ ಅವರಿಗೆ ಮುಳುವಾಯಿತು. ಎತ್ತಿ ಮೆರೆಸಿದ ಸಮಾಜ ಅವರನ್ನು ದೊಪ್ಪೆಂದು ಕೆಳಕ್ಕೆ ಹಾಕಿತು. ಈ ಶಿಕ್ಷೆ ದೊರೆತಿದ್ದು ಪ್ರತಾಪ್ ಸ್ವತಃ ಕೈಯಾರೆ ಮಾಡಿದ ತಪ್ಪಿನಿಂದ. ಜನರ ಮುಂದೆ ದೊಡ್ಡ ವ್ಯಕ್ತಿಯಾಗಲು ಹೋಗಿ ಸುಳ್ಳುಗಾರ ಎಂದು ಕರೆಸಿಕೊಂಡ.
'ಅಲ್ಲಿಂದ ಡ್ರೋನ್ ಪ್ರತಾಪ್ ಅನೇಕ ಒಳ್ಳೆಯ ಕೆಲಸ ಮಾಡಲು ಪ್ರಯತ್ನ ಮಾಡಿದರೂ ಜನರು ಅವರನ್ನು ನಂಬಲು ಸಿದ್ಧವಿರಲಿಲ್ಲ. ಆದರೆ ಬಿಗ್‌ಬಾಸ್ ಎಂಬ ವೇದಿಕೆ ಅವರ ಬದುಕಿನಲ್ಲಿ ಪಾಸಿಟಿವಿಟಿ ಮೂಡಿಸಿದೆ. ಜನರು ಡ್ರೋನ್ ಪ್ರತಾಪ್ ಆಟವನ್ನು ಮೆಚ್ಚಿಕೊಂಡಿದ್ದಾರೆ, ಮನೆಯೊಳಗೆ ಅವರಿಗಾದ ಅವಮಾನ ನೋಡಿ ಸಿಂಪತಿ ತೋರಿಸಿದ್ದಾರೆ, ಮನೆಯೊಳಗಡೆ ಪ್ರತಾಪ್ ನಿಯಮಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ ಗಮನ ಸೆಳೆಯುತ್ತಾರೆ.
ಹೀಗಿರುವಾಗ ಕಳೆದ ವಾರ ಅವರು ತಮಗಾದ ಅನುಭವದ ಬಗ್ಗೆ ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಾಗ ಜನ ಅದನ್ನು ಸುಳ್ಳು ಎಂದು ಸಂಶಯಿಸಿದರು, ಆದರೆ ಈ ವೀಡಿಯೋ ಜನರ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಒಳ್ಳೆಯ ರೀತಿಯಲ್ಲಿ ಬದಲಾಗಿರುವ ಪ್ರತಾಪ್ ಮುಂದೆ ಹಾಗೇ ಇದ್ದರೆ ಖಂಡಿತ ಮತ್ತೆ ಜನ ಮೆಚ್ಚುಗೆ ಪಡೆಯುವುದು ಗ್ಯಾರಂಟಿ..



Click it and Unblock the Notifications