Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಿಚ್ಚನ ಚಪ್ಪಾಳೆ ಡ್ರೋನ್ ಪ್ರತಾಪ್‌ಗೆ, ಅದಕ್ಕೆ ಡ್ರೋನ್ ಪ್ರತಿಕ್ರಿಯಿಸಿದ ರೀತಿ ಇನ್ನೂ ಮಾರ್ಮಿಕ
ಈ ವಾರದ ಕಿಚ್ಚನ ಚಪ್ಪಾಳೆ ಡ್ರೋನ್ ಪ್ರತಾಪ್‌ಗೆ ಸಿಕ್ಕಿದೆ. ಬಿಗ್‌ಬಾಸ್ ಸ್ಪರ್ಧಿಗಳು ಈ ವಾರ ಯಾರಿಗೆ ಕಿಚ್ಚನ ಚಪ್ಪಾಳೆ ದೊರೆಯುತ್ತದೆ ಎಂದು ಕುತೂಹಲದಿಂದ ಕಾಯುತ್ತಿರುತ್ತಾರೆ, ಸ್ಪರ್ಧಿಗಳು ಮಾತ್ರವಲ್ಲ,ವೀಕ್ಷಕರು ಕೂಡ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂದು ಕಾಯುತ್ತಾರೆ. ಕಿಚ್ಚನ ಚಪ್ಪಾಳೆಗೆ ಅಷ್ಟೊಂದು ಬೆಲೆಯಿದೆ, ಸುಮ್ಮನೆ ಚಪ್ಪಾಳೆ ಸಿಗುವುದಿಲ್ಲ, ಉತ್ತಮವಾಗಿ ವರ್ತಿಸಿದ ಸ್ಪರ್ಧಿಗಷ್ಟೇ ಕಿಚ್ಚನ ಚಪ್ಪಾಳೆ ಸಿಗುವುದು. ಕಳೆದ ಬಾರಿ ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆ ಒಂದು ವಸ್ತವಿಗೆ ಸಿಕ್ಕಿತ್ತು. ಆ ಚಪ್ಪಾಳೆ ಬಳೆಗೆ ಸಿಕ್ಕಿತ್ತು, ಇದನ್ನು ವೀಕ್ಷಕರು ತುಂಬಾನೇ ಖುಷಿ ಪಟ್ಟಿದ್ದರು.

ಈ ವಾರ ಕಿಚ್ಚನ ಚಪ್ಪಾಳೆಯನ್ನು ಪ್ರತಾಪ್ ಪಡೆಯುವ ಮೂಲಕ ಮನೆಮಂದಿಗೆ ದೊಡ್ಡ ಶಾಕ್ ಆಗಿದೆ. ಡ್ರೋನ್ ಪ್ರತಾಪ್ ಬಿಗ್‌ಬಾಸ್‌ಗೆ ಅಸಮರ್ಥ ಸ್ಪರ್ಧಿಯಾಗಿ ಬಂದವರು, ಅಸಮರ್ಥರಾಗಿದ್ದವರು ಸಮರ್ಥರಾದರೂ ಮೊದಲ ವಾರ ತುಂಬಾನೇ ಮಂಕಾಗಿದ್ದರು, ಅವರ ಆತ್ಮವಿಶ್ವಾಸ ಕೂಡ ತುಂಬಾ ಕಡಿಮೆಯಿದ್ದಂತೆ ಕಾಣುತ್ತಿತ್ತು, ಕಾರಣ ಬಿಗ್‌ಬಾಸ್‌ನ ಇತರ ಸ್ಪರ್ಧಿಗಳು ತಮಾಷೆ ಎಂದು ಪ್ರತಾಪ್ ಮನಸ್ಸಿಗೆ ನೋವುಂಟು ಮಾಡುತ್ತಿದ್ದರು.
ಪ್ರತಾಪ್ ಜೋರಾಗಿ ಪ್ರತಿಭಟಿಸದೆ ಬಾತ್‌ರೂಂಗೆ ಹೋಗಿ ಅತ್ತಿದ್ದರು. ಇದನ್ನು ನೋಡಿ ವೀಕ್ಷಕರಿಗೆ ಪ್ರತಾಪ್ ಮೇಲೆ ಅನುಕಂಪ ಮೂಡಿತ್ತು, ವೀಕೆಂಡ್‌ನಲ್ಲಿ ಸುದೀಪ್ ಅವರು ಪ್ರತಾಪ್ ಅವರನ್ನು ಓಪನ್ ಅಪ್ ಮಾಡುವ ಪ್ರಯತ್ನ ಮಾಡಿದಾಗ ಪ್ರತಾಪ್ ತುಂಬಾನೇ ಚೆನ್ನಾಗಿ ಡ್ಯಾನ್ಸ್ ಮಾಡುವ ಮೂಲಕ ವೀಕ್ಷಕರ ಮೆಚ್ಚುಗೆ ಪಡೆದರು. ಅಲ್ಲಿಂದ ಹೊರಗಡೆ ಪ್ರತಾಪ್ ಅವರನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಾಯ್ತು. ಅಲ್ಲಿಂದ ವಾರದಿಂದ ವಾರಕ್ಕೆ ತುಂಬಾನೇ ಚೆನ್ನಾಗಿ ಆಡುತ್ತಿದ್ದಾರೆ ಪ್ರತಾಪ್.
ಹೆಚ್ಚು ಕಿರುಚಾಡದೆ ಇರುವ ಪ್ರತಾಪ್‌ಗೆ ಬಿಗ್‌ಬಾಸ್‌ನಲ್ಲಿ ಲಕ್ ಕೂಡ ಜೊತೆಗಿದೆ
ಡ್ರೋನ್ ಪ್ರತಾಪ್ ಬಗ್ಗೆ ಕನ್ನಡಿಗರಲ್ಲಿ ಅಭಿಪ್ರಾಯವೇ ಭಿನ್ನವಾಗಿತ್ತು. ಸುಳ್ಳು ಹೇಳಿದರು ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ನಂತರ ಯಾರೂ ಡ್ರೋನ್ ಪ್ರತಾಪ್ ನಂಬಲು ಸಿದ್ಧರಲಿಲ್ಲ, ಆದರೆ ಪ್ರತಾಪ್ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವ ಹಾದಿಯಲ್ಲಿದ್ದರೆ, ಅವರು ಒಂದು ಕಂಪನಿ ಸ್ಥಾಪಿಸಿ ಡ್ರೋನ್ ಮೂಲಕ ರೈತರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಕೆಲವು ವೀಡಿಯೋಗಳನ್ನು ಹಾಕುತ್ತಿದ್ದರು.
ಡ್ರೋನ್ ಪ್ರತಾಪ್ ಬಿಗ್‌ಬಾಸ್‌ಗೆ ಬರ್ತಾ ಇದ್ದಾರೆ ಎಂದಾಗ ಈ ವ್ಯಕ್ತಿ ಇಲ್ಲಿಗೆ ಬಂದು ಏನು ಮಾಡುತ್ತಾನೆ ಎಂದು ಬಹುತೇಕರು ಭಾವಿಸಿದ್ದರು. ಆದರೆ ಈಗ ಬಿಗ್‌ಬಾಸ್‌ನಲ್ಲಿರುವ ಸ್ಪರ್ಧಿಗಳಲ್ಲಿ ಅತೀ ಹೆಚ್ಚಾಗಿ ವೀಕ್ಷಕರು ಇಷ್ಟಪಡುತ್ತಿರುವುದು ಡ್ರೋನ್ ಪ್ರತಾಪ್ ಆಟವನ್ನು. ಕಳೆದ ವಾರ ನಾಮಿನೇಷನ್ ಪಾಸ್ ಪಡೆಯುವ ಮೂಲಕ ನಾಮಿನೇಟ್ ಮಾಡುವ ಅಧಿಕಾರ ಪಡೆದರೆ ಈ ವಾರ ತಂಡದ ಕ್ಯಾಪ್ಟನ್ ಆದಾಗ ಅವರಿದ್ದ ತಂಡ ಗೆದ್ದು ನಾಮಿನೇಷನ್‌ನಿಂದ ಸ್ಪರ್ಧಿಗಳನ್ನು ಪಾರುಮಾಡುವ
ಅಧಿಕಾರ ಪಡೆದರು. ಇವರ ಅದೃಷ್ಟ ಮನೆಮಂದಿಗೆ ಹೊಟ್ಟೆ ಕಿಚ್ಚಾಗಿದ್ದು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.
ತಾನು ಕ್ಯಾಪ್ಟನ್ ಆಗಿದ್ದ ತಂಡದಲ್ಲಿ ಇತ್ತು ಒಡಕುಗಳು
ಸಿರಿಯವರು ನಡೆಸಿಕೊಡುವ ಟೀಂ ಒಗ್ಗಟ್ಟಿನಿಂದ ಇದ್ದರೆ ಪ್ರತಾಪ್ ಟೀಂನಲ್ಲಿ ಪ್ರತಿಯೊಬ್ಬರಿಗೂ ಅಸಮಧಾನ, ಆ ಅಸಮಧಾನದ ನಡುವೆಯೇ ಪ್ರತಾಪ್ ಕ್ಯಾಪ್ಟನ್ ಆದರು. ಇದರಿಂದ ಮೈಕಲ್‌ಗೆ ಬೇಸರವಾಗಿತ್ತು. ಕಾರ್ತಿಕ್-ಸಂಗೀತಾರ ನಡುವಿನ ಜಟಾಪಟಿ, ತನೀಷಾಗೆ ಪ್ರತಾಪ್ ಮೇಲೆ ಆದ ಅಸಮಧಾನ ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ವರ್ತಿಸುತ್ತಿದ್ದರಿಂದ ಅಂಥ ತಂಡವನ್ನು ಹೇಗೆ ನಡೆಸಿಕೊಂಡು ಹೋಗುತ್ತಾರೆ ಎಂಬ ಡೌಟು ಉಂಟಾಗಿತ್ತು. ಆದರೆ ಅಲ್ಲಿಯೂ ಪ್ರತಾಪ್ ಅವರಿಗೆ ಅದೃಷ್ಟ ಒಲಿದಿತ್ತು ಅವರ ತಂಡ ಜಯಗಳಿಸಿತ್ತು. ಅಲ್ಲದೆ ಒಮದು ಆಟದಲ್ಲಿ ಉಸ್ತವಾರಿ ನಡೆಸುತ್ತಿದ್ದಾಗ ತುಂಬಾನೇ ಚೆನ್ನಾಗಿ ಎಲ್ಲಿಯೂ ಮೋಸ ಆಗದಂತೆ ಆಡಿದ ಪ್ರತಾಪ್‌ಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದೆ.



Click it and Unblock the Notifications
