Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
Bigg Boss Kannada: ಸೀಸನ್-12ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ..!
ಬಿಗ್ ಬಾಸ್ ರಿಲಿಯಾಟಿ ಶೋ ಎಲ್ಲಾ ಭಾಷೆಯಲ್ಲೂ ಸಕ್ಸಸ್‌ಫುಲ್ ಶೋ ಎಂದು ಹೆಸರು ಪಡೆದುಕೊಂಡಿದೆ. ಈಗ ಕನ್ನಡದಲ್ಲಿ 12ನೇ ಸೀಸನ್ ಕೂಡ ಆರಂಭವಾಗುತ್ತಿದೆ. ಇತ್ತೀಚಿಗೆ ನಟ ಹಾಗೂ ನಿರೂಪಕ ಕಿಚ್ಚ ಸುದೀಪ್ ಕೂಡ ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಬಾರಿಯ ಬಿಗ್ ಬಾಸ್ ನಿರೂಪಕರವಾಗಿ ಮುಂದುವರೆಯುವುದಾಗಿಯೂ ಹೇಳಿದ್ದರು. ಹಾಗೆ ಹಲವು ಅನುಮಾನಗಳಿಗೂ ಅವರು ಉತ್ತರಿಸಿದ್ದರು.
ಉಳಿದಂತೆ ಈ ಬಾರಿಯ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆ ಸೇರಲಿದ್ದಾರೆ ಎಂಬ ಕುತೂಹಲ ಮೂಡಿದೆ. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಕಿರುತೆರೆಯ ಸ್ಟಾರ್‌ಗಳು ಸೇರಿ ವಿವಾದ, ನೇಮ್, ಫೇಮ್ ಹುಟ್ಟು ಹಾಕಿರುವ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತಾರೆ. ಈ ಬಾರಿ ಕೂಡ ಅಚ್ಚರಿಯ ಮುಖಗಳು ಪರದೆ ಮೇಲೆ ಕಾಣಿಸಲಿವೆ ಎನ್ನಲಾಗುತ್ತಿದೆ.

ಬಿಗ್ ಬಾಸ್ ತಂಡದಿಂದ ಸ್ಪರ್ಧಿಗಳ ಆಯ್ಕೆ ಕೂಡ ಕೊನೆಯ ಹಂತ ತಲುಪಿದೆ ಎಂದು ತಿಳಿದುಬಂದಿದೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಯಾರೆಲ್ಲಾ ಸ್ಪರ್ಧಿಗಳು ಬಿಗ್‌ಬಾಸ್‌ಗೆ ತೆರಳಲಿದ್ದಾರೆ ಎಂಬ ಚರ್ಚೆ ಕೂಡ ಹುಟ್ಟುಕೊಂಡಿದೆ. ಹಾಗೆ ಹಲವು ಅಭಿಮಾನಿಗಳಿಗೆ ಇದು ಖುಷಿ ಕೊಟ್ಟಿದೆ. ಹಾಗೆ ಮತ್ತೆ ಕೆಲವು ಆಕಾಂಕ್ಷಿಗಳಿಗೆ ನಿರಾಸೆ ಸಹ ಮೂಡಿಸುತ್ತಿದೆ.
ಯಾರ ಮೇಲಿದೆ ಬಿಗ್ ಬಾಸ್ ಕಣ್ಣು
ವಿಜಯ್ ಸೂರ್ಯ: ಕಿರುತೆರೆಯಲ್ಲಿ ಬ್ಯೂಸಿಯಾಗಿರುವ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಈ ಬಾರಿ ಬಿಗ್‌ಬಾಸ್‌ಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ದೃಷ್ಟಿಬೊಟ್ಟು ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು ಬಿಗ್ ಬಾಸ್ ಸ್ಪರ್ಧಿಯಾಗುವ ಮುನ್ಸೂಚನೆ ಇದೆ. ಹಾಗೆ ಸ್ಪರ್ಧಿಗಳ ಪಟ್ಟಿಯಲ್ಲಿ ಅವರ ಹೆಸರು ಕೇಳಿಬರುತ್ತಿದೆ.
ಗಗನಾ: ಮಹಾನಟಿ ಮೂಲಕ ಮನೆ ಮಾತಾಗಿದ್ದ ಗಗನಾ ಹೆಸರು ಕೂಡ ಕೇಳಿಬರುತ್ತಿದೆ. ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಈಗ ಮನೆ ಮಾತಾಗುತ್ತಿರುವ ಅವರು ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗಿದೆ.
ಬಾಳು ಬೆಳಗುಂದಿ: ಸರಿಗಮಪ ರಿಯಾಲಿಟಿ ಶೋನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿಸಿದ್ದ ಬಾಳು ಬೆಳುಗುಂದಿ ಸಿಂಗರ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬಹುದು ಎಂದು ಅಂದಾಜಿಸಲಾಗಿದೆ.
ಧನುಷ್: ಪುಟ್ಟಕ್ಕನ ಮಕ್ಕಳು ಸೀರಿಯಲ್ ಖ್ಯಾತಿಯ ಧನುಷ್ ಬಿಗ್ ಬಾಸ್ ಮನೆ ಸೇರಬಹುದು ಎನ್ನಲಾಗಿದೆ. ಧಾರಾವಾಹಿ ಕೂಡ ಮುಗಿಯುವ ಹಂತ ತಲುಪಿದೆ ಎನ್ನಲಾಗಿದೆ.
ದೀಪಿಕಾ ಗೌಡ: ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಪಿಕಾ ಗೌಡ ಈ ಬಾರಿ ಬಿಗ್‌ಬಾಸ್‌ಗೆ ಎಂಟ್ರಿ ಕೊಡಬಹುದು ಎನ್ನಲಾಗಿದೆ. ಬಿಗ್‌ಬಾಸ್‌ನಲ್ಲಿ ಪ್ರತಿ ವರ್ಷವು ಕಾಮಿಡಿಗಾಗಿ ಒಂದಿಷ್ಟು ಸ್ಪರ್ಧಿಗಳು ಬಂದಿರುವುದು ನೋಡಬಹುದು.
ಪಾಯಲ್ ಚೆಂಗಪ್ಪ: ಅಮೃತಾಂಜನ್ ಸೇರಿ ಹಲವು ಕಿರು ಚಿತ್ರದಲ್ಲಿ ನಟಿಸಿರುವ ಪಾಯಲ್ ಚೆಂಗಪ್ಪ ಬಿಗ್ ಬಾಸ್‌ಗೆ ಬರಲಿದ್ದಾರೆ ಎನ್ನಲಾಗಿದೆ.
ಅಮೃತಾ ರಾಮಮೂರ್ತಿ: ಕುಲವಧು, ಕೆಂಡಸಂಪಿಗೆ, ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾದ ಅಮೃತಾ ರಾಮಮೂರ್ತಿ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಖಳನಟಿ ಪಾತ್ರಗಳಿಂದ ಗಮನ ಸೆಳೆದಿರುವ ಅವರು ಈ ಬಾರಿ ಬಿಗ್‌ಬಾಸ್‌ಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಅವರು ಹೆಣ್ಣು ಮಗುವಿಗೂ ಜನ್ಮ ನೀಡಿದ್ದಾರೆ.
ಸ್ವಾತಿ: ಕಿರುತೆರೆ ಹಿರಿಯ ನಟಿ ಸ್ವಾತಿ ಅವರು ಈ ಬಾರಿಯ ಬಿಗ್‌ಬಾಸ್ ಸೀಸನ್‌ಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಪಟ್ಟಿಯಲ್ಲಿ ಅವರ ಹೆಸರು ಕೂಡ ಕೇಳಿಬಂದಿದೆ. ಗಟ್ಟಿಮೇಳ, ಬ್ರಹ್ಮಗಂಟು ಧಾರಾವಾಹಿಗಳ ಮೂಲಕ ಅವರು ಜನಮನ್ನಣೆ ಗಳಿಸಿದ್ದಾರೆ.
ದವ್ಯಾ ವಸಂತ: ಯೂಟ್ಯೂಬ್ ಚಾನಲ್ ಮೂಲಕ ಈಗ ಹೆಸರಾಗಿರುವ ದಿವ್ಯ ವಸಂತ ಕೂಡ ಈ ಬಾರಿ ಬಿಗ್ ಬಾಸ್ ಬಾಗಿಲು ತಟ್ಟಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಹೆಸರುಗಳನ್ನು ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಇನ್ನು ಹಂಚಿಕೊಂಡಿಲ್ಲ. ಆದ್ರೆ ಇಂಟರ್‌ನೆಟ್‌ನಲ್ಲಿ ಈ ಹೆಸರುಗಳು ಕೇಳಿಬರುತ್ತಿವೆ.
ಇವರಲ್ಲದೆ ಇನ್ನಷ್ಟು ಹೆಸರುಗಳು ಕೂಡ ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಅದ್ರಲ್ಲೂ ಡಾ.ಬ್ರೋ, ಟೆಕ್ ಇನ್ ಕನ್ನಡ ಸಂದೀಪ್, ಗಾಯಕ ಸುನಿಲ್, ಕಾಮಿಡಿ ಕಿಲಾಡಿಗಳು ಸೂರಜ್, ಕುರಿ ಸುನಿಲ್, ರಾಧಾ ರಮಣ ಶ್ವೇತಾ ಆರ್ ಪ್ರಸಾದ್, ಸಮೀರ್ ಎಂಡಿ ಹೆಸರು ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ.



Click it and Unblock the Notifications
