Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಪ್ರತಾಪ್ ಬುದ್ಧಿವಂತಿಕೆ ನೋಡಿ ಬಿಗ್‌ಬಾಸ್ ಸ್ಪರ್ಧಿಗಳು ಫುಲ್ ಶಾಕ್
ಬಿಗ್‌ಬಾಸ್ ಕನ್ನಡ ಸೀಸನ್ 10ರ ಅಕ್ಟೋಬರ್ 30ರ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಮನೆಮಂದಿಗೆ ಚಳ್ಳೆಹಣ್ಣು ತಿನಿಸಿರುವ ರೀತಿ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಡ್ರೋನ್ ಪ್ರತಾಪ್ ಬುದ್ಧಿವಂತಿಕೆ ನೋಡಿ ಬಿಗ್‌ಬಾಸ್ ಮನೆಮಂದಿ ಫುಲ್ ಶಾಕ್. ಡ್ರೋನ್ ಪ್ರತಾಪ್ ನಾವು ಊಹಿಸಿದಂತೆ ಅಲ್ವೇ ಅಲ್ಲ ಎಂಬುವುದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಪ್ರತಾಪ್.
ಈ ವಾರದ ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ಭಿನ್ನವಾಗಿದೆ. ಬಲೂನ್ ಒಡೆದು ಅದರಲ್ಲಿ ಯಾರಿಗೆ ಪಾಸ್ ಸಿಗುವುದೋ ಅವರು ನಾಮಿನಾಟ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಈ ಆಟದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ರಾಶಿ ಬಲೂನ್‌ಗಳನ್ನು ಒಡೆದರು, ಆದ್ರೂ ಅವರಲ್ಲಿ ಪ್ರತಾಪ್‌ಗೆ ಬಿಟ್ಟು ಬೇರೆ ಯಾರಿಗೂ ಪಾಸ್ ಸಿಗಲಿಲ್ಲ, ಸಂಗೀತ, ಸ್ನೇಹಿತ್, ವಿನಯ್ ಪಾಸ್ ಇರುವ ಬಾಲ್ ಒಡೆದರೂ ಅವರು ಗಮನಿಸದೆ ಹೋದ್ರು, ಆದರೆ ಪ್ರತಾಪ್ ಮಾತ್ರ ಗಮನ ನೀಡಿ ಹುಡುಕಿದ್ದರು, ಆದ್ದರಿಂದ ಪಾಸ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ನಂತರ ನಡೆದಿದ್ದೇ ರೋಚಕ ಟ್ವಿಸ್ಟ್
ಪ್ರತಾಪ್ ಒಂದು ಚೀಟಿಯನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರು, ಆದರೆ ಅದನ್ನು ಕಾರ್ತಿಕ್ ಕಿತ್ತುಕೊಂಡಿದ್ದರು, ಬಿಗ್‌ಬಾಸ್ ಚೀಟಿ ಸಿಕ್ಕಿದವರು ಅದನ್ನು ತೋರಿಸಲು ಹೇಳಿದಾಗ ಬಿಗ್‌ಬಾಸ್ ಮಂದಿ ಫುಲ್‌ಶಾಕ್, ಪ್ರತಾಪ್ ಬಳಿ 3 ಚೀಟಿಯಿತ್ತು. ಎಲ್ಲರೂ ಬಾಯ್ಬಿಟ್ಟು ಪ್ರತಾಪ್ ನೋಡುತ್ತಿದ್ದರು.... ಪ್ರತಾಪ್‌ಗೆ ನಾಲ್ಕು ಚೀಟಿ ಸಿಕ್ಕಿತ್ತು, ಆದರೆ ನನ್ನಿಂದ ಕಿತ್ತುಕೊಳ್ಳಬಹುದು ಎಂದು ತಲೆ ಓಡಿಸಿದ ಪ್ರತಾಪ್ ಮೂರು ಚೀಟಿ ಮೈಕ್ ಬ್ಯಾಗ್‌ನಲ್ಲಿ ಇಟ್ಟು ಒಂದು ಜೇಬ್‌ನಲ್ಲಿ ಇಟ್ಟಿದ್ದರು, ಅದನ್ನೇ ಕಾರ್ತಿಕ್ ಕಿತ್ತುಕೊಂಡಿದ್ದು. ಈ ಎಪಿಸೋಡ್‌ನಲ್ಲಿ ಪ್ರತಾಪ್ ತಮ್ಮ ಬುದ್ಧಿವಂತಿಕೆಯಿಂದ ಪ್ರೇಕ್ಷಕರ ಮನ ರಂಜಿಸಿದ್ದಾರೆ.
ಶಕ್ತಿಯಿಂದ ಸಾಧ್ಯವಾಗದಿದ್ದರೂ ಯುಕ್ತಿಯಿಂದ ಇತರ ಸ್ಪರ್ಧಿಗಳಿಗೆ ಚಳ್ಳೆಹಣ್ಣು ತಿನಿಸಿದ್ದಾರೆ. ಬಿಗ್‌ಬಾಸ್ ಬಳಿ ಘೋಷಣೆ ಮಾಡಿದ ಬಳಿಕ ಪ್ರತಾಪ್ ಬಳಿಯಿಂದ ಚೀಟಿ ಕಿತ್ತು ಗೇಮ್ ಚೇಂಜ್ ಮಾಡುವ ಜೋಶ್‌ನಲ್ಲಿದ್ದ ವಿನಯ್‌ಗಂತೂ ಅದು ಸಾಧ್ಯವಿಲ್ಲ ಎಂದು ಬಿಗ್‌ಬಾಸ್ ಹೇಳಿದಾಗ ನಿರಾಸೆಯಾಗಿದೆ. ಅಲ್ಲದೆ ಪ್ರತಾಪ್ ನಾಮಿನೇಟ್ ಮಾಡುವ ಹಕ್ಕನ್ನು 5 ಮಹಿಳಾ ಸ್ಪರ್ಧಿಗಳಿಗೆ ನೀಡುವ ಮೂಲಕ ಬಿಗ್‌ಬಾಸ್ ಮನೆಯ ಆಟಕ್ಕೆ ರೋಚಕ ತಿರುವು ತಂದಿದ್ದಾರೆ. ಪ್ರಾರಂಭದಲ್ಲಿ ಸಿಂಪತಿ ಮೂಲಕ ಗಮನ ಸೆಳೆದಿದ್ದ ಪ್ರತಾಪ್ ಇತ್ತೀಚಿನ ದಿನಗಳಲ್ಲಿ ಆಟದ ಮೂಲಕ ಗಮನ ಸೆಳೆದು ತಮ್ಮ ಫ್ಯಾನ್ ಫಾಲೋವಿಂಗ್ ಹೆಚ್ಚಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ 10ನೇ ಸೀಸನ್‌ಗೆ ಬಂದ ಎಲ್ಲಾ ಸ್ಪರ್ಧಿಗಳಲ್ಲಿ ಹೊರಗಡೆ ತುಂಬಾನೇ ಗಮನ ಸೆಳೆದಿರುವ ಸ್ಪರ್ಧಿಯೆಂದರೆ ಡ್ರೋನ್ ಪ್ರತಾಪ್. ಒಂದು ಕಾಲದಲ್ಲಿ ಡ್ರೋನ್ ಪ್ರತಾಪ್ ಅನ್ನು ತುಂಬಾ ಮೆಚ್ಚುಗೆಯಿಂದ ನೋಡುತ್ತಿದ್ದರು. ದೊಡ್ಡ-ದೊಡ್ಡ ಸೆಲೆಬ್ರಿಟಿಗಳೆಲ್ಲಾ ಡ್ರೋನ್ ಪ್ರತಾಪ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಆದರೆ ನಂತರ ಅವರು ಎದುರಿಸಿದ ಅವಮಾನವಿದೆಯೆಲ್ಲಾ.... ಡ್ರೋನ್ ಪ್ರತಾಪ್ ಎಂಬ ವ್ಯಕ್ತಿಯನ್ನು ಸೋಷಿಯಲ್ ಮೀಡಿಯಾ, ಮಾಧ್ಯಮಗಳು ರೋಸ್ಟ್ ಮಾಡಿದ್ದೇ ಮಾಡಿದ್ದು... ಬಿಗ್‌ಬಾಸ್‌ಗೆ ಬರುವವರೆಗೆ ಡ್ರೋನ್ ಪ್ರತಾಪ್ ಏನೇ ಹೇಳಿದರೂ ಟ್ರೋಲ್ ಮಾಡುತ್ತಿದ್ದರು, ಆದರೆ ಬಿಗ್‌ಬಾಸ್‌ಗೆ ಬಂದ ಮೇಲೆ ಡ್ರೋನ್ ಪ್ರತಾಪ್ ಲಕ್ ಬದಲಾಗಿದೆ. ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಕನ್ನಡಿಗರು ಅತೀ ಹೆಚ್ಚಿನ ಸಪೋರ್ಟ್ ಮಾಡುತ್ತಿರುವುದು ಡ್ರೋನ್ ಪ್ರತಾಪ್‌ಗೆ.



Click it and Unblock the Notifications