Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
BigBoss Kannada11: ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ..! ಈಕೆ ಯಾರು ಗೊತ್ತಾ?
BigBoss Kannada11: ಬಿಗ್ ಬಾಸ್ ಕನ್ನಡ ಸೀಸನ್ 12 ರ ಗ್ರ್ಯಾಂಡ್ ಓಪನಿಂಗ್ ಇಂದು ಸಂಜೆ ನಡೆಯುತ್ತಿದೆ. ಈಗಾಗಲೇ 11 ಸೀಸನ್ ಯಶಸ್ವಿಯಾಗಿ ಮುಗಿಸಿದ್ದು, ಈ ಬಾರಿಯ ಸೀಸನ್ ಕೂಡ ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ. ಆದರೆ ಈ ಬಾರಿಯ ಬಿಗ್ ಬಾಸ್ ಹೊಸ ರೀತಿಯಾಗಿ, ಹೊಸ ಆಯಾಮದಲ್ಲಿ ಇರಲಿದೆ ಎಂದು ಹೇಳಲಾಗಿದೆ.
ಇಷ್ಟು ಬಾರಿಯ ಸೀಸನ್ ವಿಶೇಷತೆಗಳಿಂದ ತುಂಬಿರಲಿದೆ ಎಂದು ಹೇಳುತ್ತಿರುವಾಗಲೇ ಈ ಬಾರಿ ಸೀಸನ್ ಆರಂಭಕ್ಕೂ ಮುನ್ನವೇ ಸ್ಪರ್ಧಿಗಳ ಹೆಸರು ರಿವೀಲ್ ಮಾಡಲಾಗಿದೆ. ಮೂವರು ಸ್ಪರ್ಧಿಗಳು ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಇಷ್ಟು ಬಾರಿಯ ಸೀಸನ್‌ನಲ್ಲಿ ಬಿಗ್ ಬಾಸ್ ಮನೆಗೆ ಯಾರು ಹೋಗುತ್ತಾರೆ ಅನ್ನೋದು ಅಂದಿನ ಸಂಚಿಕೆಯಲ್ಲಿ ಮಾತ್ರವೇ ತಿಳಿಯುತ್ತಿತ್ತು, ಆದ್ರೆ ಈ ಬಾರಿ ಮೊದಲೇ ರಿವೀಲ್ ಮಾಡಲಾಗಿದೆ.

ಮೊದಲು ನಟ ಕಾಕ್ರೋಚ್ ಸುಧಿ, ಸೀರಿಯಲ್ ನಟಿ ಮಂಜು ಭಾಷಿಣಿ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿರುವ ಮಲ್ಲಮ್ಮ ಸಹ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿಕೊಟ್ಟಿದ್ದಾರೆ. ಇದರಲ್ಲಿ ಮಲ್ಲಮ್ಮನ ಆಯ್ಕೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹಾಗಾದ್ರೆ ಈ ಮಲ್ಲಮ್ಮ ಯಾರು? ಆಕೆಯ ಹಿನ್ನಲೆ ಏನು ಗೊತ್ತಾ?
ನೀವು ಸಾಮಾಜಿಕ ಜಾಲತಾಣ ಅದ್ರಲ್ಲೂ ವಿಶೇಷವಾಗಿ ಇನ್ಸ್‌ಸ್ಟಾಗ್ರಾಮ್ ರೀಲ್ಸ್ ಬಳಕೆದಾರರಾಗಿದ್ದರೆ ಮಲ್ಲಮ್ಮನ ವಿಡಿಯೋಗಳ ನೋಡಿದರಬಹುದು. ಪ್ರತಿ ಬಾರಿಯ ಬಿಗ್‌ಬಾಸ್‌ನಲ್ಲು ಉತ್ತರ ಕರ್ನಾಟಕ ಮಂದಿಯೊಬ್ಬರಿಗೆ ಅವಕಾಶ ನೀಡಲಾಗುತ್ತದೆ. ಅದರಂತೆ ಈ ಬಾರಿ ಮಲ್ಲಮ್ಮನ ಆಯ್ಕೆ ನೋಡಬಹುದು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಣ್ಣ ಹಳ್ಳಿ ಮಲ್ಲಮ್ಮನ ಸ್ವಂತ ಊರು. ಆದ್ರೆ ದಿನಗೂಲಿ ಕೆಲಸವನ್ನು ಅರಸಿಕೊಂಡು ಅವರು ಬೆಂಗಳೂರು ಮಹಾನಗರಕ್ಕೆ ಬಂದವರು. ಆರಂಭದಲ್ಲಿ ಸಣ್ಣ ಪುಟ್ಟ ವಿಡಿಯೋಗಳನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಅವರ ಖಾತೆಯನ್ನು ಬೇರೆಯೊಬ್ಬರು ನಿರ್ವಹಿಸುತ್ತಿದ್ದರು.
ಮಲ್ಲಮ್ಮ ಅವರ ವಿಡಿಯೋಗಳು ವೈರಲ್ ಆಗುತ್ತಿದ್ದವು. ಅದ್ರಲ್ಲು ಅವರ ಭಾಷೆ, ನೇರ ನುಡಿಯ ಕೆಲವು ವಿಡಿಯೋ ವೈರಲ್ ಆಗಿದ್ದವು. ಮಲ್ಲಮ್ಮ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ 1.69 ಲಕ್ಷ ಫಾಲವರ್ಸ್ ಇದ್ದಾರೆ. ಹಾಗೆ ಯೂಟ್ಯೂಬ್‌ನಲ್ಲಿ 16 ಸಾವಿರ ಮಂದಿ ಚಂದಾದಾರರಿದ್ದಾರೆ.
ಮಾತಿನ ಮೂಲಕವೇ ಅವರು ಸುದ್ದಿಯಾಗುತ್ತಿದ್ದರು. ಬಿಗ್‌ಬಾಸ್‌ಗೂ ಕೂಡ ಮಾತೇ ಬಂಡವಾಳ ಆಗಿರಲಿದೆ. ಆದ್ರೆ ಬಿಗ್‌ಬಾಸ್‌ನಲ್ಲಿ ಘಟಾನುಘಟಿ ಯುವ ಪಡೆಯ ನಡುವೆ ಮಲ್ಲಮ್ಮ ಹೇಗೆ ಹೊಂದಿಕೊಳ್ಳಲಿದ್ದಾರೆ. ಮಲ್ಲಮ್ಮ ಎಷ್ಟು ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ನೆಲೆಸಲಿದ್ದಾರೆ ಹಾಗೆ ಮಲ್ಲಮ್ಮ ಹೇಗೆ ಟಾಸ್ಕ್ ನಿರ್ವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಬಿಗ್ ಬಾಸ್ 12ರ ವಿಶೇಷತೆ ಏನು?
ಈ ಬಾರಿಯ ಬಿಗ್ ಬಾಸ್ ಹಿಂದಿನ ಎಲ್ಲಾ ಸೀಸನ್‌ಗಿಂತ ಹೆಚ್ಚು ವಿಶೇಷವಾಗಿದ್ಯಂತೆ. ಈ ಬಾರಿ Expect the Unexpected ಎಂಬ ಥೀಮ್ ಮೂಲಕ ಟ್ವಿಸ್ಟ್‌ಗಳಿಂದಲೇ ತುಂಬಿರಲಿದೆ ಎಂದು ಹೇಳಲಾಗಿದೆ. ಈ ಬಾರಿಯ ಬಿಗ್ ಬಾಸ್ ಮನೆ ಕೂಡ ಬಹಳ ದೊಡ್ಡದಾಗಿದೆ. ಹಾಗೆ ಹಲವು ರೀತಿಯ ವಿಶೇಷತೆಗಳಿಂದ ತುಂಬಿರಲಿದೆ.
ಈ ಮನೆಯೊಳಗೆ ಮೈಸೂರು ಅರಮನೆ, ದಸರಾ, ಹೊಯ್ಸಳ, ಬೇಲೂರು-ಹಳೆಬೀಡಿನ ಶಿಲ್ಪಗಳು, ಯಕ್ಷಗಾನ, ಭರತ ನಾಟ್ಯ, ಡೊಳ್ಳು ಕುಣಿತ ಹೀಗೆ ಕರ್ನಾಟಕದ ಅನೇಕ ಸಂಸ್ಕೃತಿಯ ರೂಪಕಗಳನ್ನು ಕಲಾತ್ಮಕವಾಗಿ ಬಿಡಿಸಲಾಗಿದೆ.



Click it and Unblock the Notifications
