Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಟ್ಸಾಪ್‌ನಲ್ಲಿ ಬಹುದೊಡ್ಡ ಬದಲಾವಣೆ; ಬಳಕೆದಾರರಲ್ಲಿ ಹೊಸ ರೀತಿ ಆತಂಕ!
ಆನ್‌ಲೈನ್ ಯುಗದಲ್ಲಿ ಈಗ ಎಲ್ಲರು ಮೊಬೈಲ್ ಹಾಗೆ ಇಂಟರ್‌ನೆಟ್ ಬಳಸುವುದು ನೋಡಬಹುದು. ಅದ್ರಲ್ಲೂ ಇಂಟರ್‌ನೆಟ್ ಒಂದಿದ್ದರೆ ನೀವು ವಿಶ್ವದ ಮೂಲೆಯ ಯಾವುದೇ ವಿಚಾರವನ್ನು ಬೇಕಾದರು ಕೈ ಬೆರಳ ತುದಿಯಲ್ಲಿ ಪಡೆಯಬಹುದು. ಹಾಗೆ ಮೊಬೈಲ್‌ನಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಕೂಡ ಅಧಿಕವಾಗಿದೆ. ಬಹುತೇಕರು ವೈಯಕ್ತಿಕ ವಿಚಾರಗಳಿಗೆ, ವ್ಯವಹಾರದ ದೃಷ್ಟಿಯಿಂದ ವಾಟ್ಸಾಪ್ ಬಳಸುವುದು ನೋಡಬಹುದು.
ವಿಶ್ವದಾದ್ಯಂತ ಸುಮಾರು 300 ಕೋಟಿ ವಾಟ್ಸಾಪ್ ಬಳಕೆದಾರರು ಇದ್ದಾರೆ. ಹೀಗಾಗಿ ಇದೊಂದು ದೊಡ್ಡ ವ್ಯವಹಾರವಾಗಿದೆ. ಹಾಗೆ ಭಾರತದಲ್ಲಿ ಸುಮಾರು 50 ಕೋಟಿಗೂ ಅಧಿಕ ಮಂದಿ ವಾಟ್ಸಾಪ್ ಬಳಕೆದಾರರಿದ್ದಾರೆ. ಆದ್ರೆ ಈಗ ಕೇಂದ್ರ ಸರ್ಕಾರ ತರಲು ಹೊರಟಿಸುವ ಹೊಸ ನಿಯಮವೊಂದು ಹಲವರಿಗೆ ಸಮಸ್ಯೆ ತರಬಹುದು. ಹಾಗೆ ಹಲವರ ವಾಟ್ಸಾಪ್ ಅಕೌಂಟ್ ಬದಲಾಯಿಸಬೇಕಾಗಿ ಬರಬಹುದು.

ನೀವು ಹೊಸದಾಗಿ ವಾಟ್ಸಾಪ್ ಆರಂಭಿಸುವಾಗ ಒಂದು ಮೊಬೈಲ್ ನಂಬರ್ ನೀಡಬೇಕು ಅದಕ್ಕೆ ಬರುವ ಓಟಿಪಿ ಮೂಲಕ ವಾಟ್ಸಾಪ್ ಅಕೌಂಟ್ ಓಪನ್ ಮಾಡುವಿರಿ. ಇದೇ ರೀತಿಯಾಗಿ ಟೆಲಿಗ್ರಾಮ್ ಸಹ ಕೆಲಸ ಮಾಡುತ್ತದೆ. ಆದರೆ ನೀವು ಬಳಸಿದ ಈ ನಂಬರ್ ಅದೇ ಮೊಬೈಲ್‌ನಲ್ಲಿ ಇರಬೇಕು ಎಂಬ ನಿಯಮವೇನು ಇರಲಿಲ್ಲ. ನೀವು ವಾಟ್ಸಾಪ್‌ಗೆ ಬಳಸಿದ ನಂಬರ್ ರದ್ದಾದರೂ ಕೂಡ ವಾಟ್ಸಾಪ್ ಚಲಾಯಿಸಬಹುದಿತ್ತು.
ಒಮ್ಮೆ ಒಟಿಪಿ ಪಡೆದರೆ ಸಾಕು ಮತ್ತೆ ಮೊಬೈಲ್ ಬದಲಾಯಿಸಿದಾಗ ಮಾತ್ರವೇ ಒಟಿಪಿ ಬರುತಿತ್ತು. ಅಂದ್ರೆ ಒಮ್ಮೆ ವಾಟ್ಸಾಪ್‌ಗೆ ಬಳಸಿದ ನಂಬರ್ ಆ ಮೊಬೈಲ್‌ನಿಂದ ತೆಗೆದರು ಸಹ ವಾಟ್ಸಾಪ್ ಅನ್ನು ಅದೇ ನಂಬರ್‌ನಲ್ಲಿ ಬಳಸಲು ಅವಕಾಶವಿತ್ತು. ಇದು ಬಹಳಷ್ಟು ಸಮಸ್ಯೆಗಳಿಗೆ ಕಾರಣವಾಗಿತ್ತು. ಈಗ ಕೇಂದ್ರ ಸರ್ಕಾರ ಈ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದ್ದು, ವಾಟ್ಸಾಪ್‌ಗೆ 90 ದಿನಗಳ ಕಾಲಾವಕಾಶ ನೀಡಿದೆ.
ವಾಟ್ಸಾಪ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸುವ ಸೈಬರ್ ವಂಚಕರನ್ನು ಪತ್ತೆಹಚ್ಚಲು ಅಸಮರ್ಥತೆಯ ಬಗ್ಗೆ ಸರ್ಕಾರಿ ಅಧಿಕಾರಿಗಳು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ, ಇದು ಪ್ರಸ್ತುತ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಒಮ್ಮೆ ಮಾತ್ರ ಮೌಲ್ಯೀಕರಿಸಬೇಕಾಗುತ್ತದೆ, ನಂತರ ವಿವಿಧ ಸಾಧನಗಳಲ್ಲಿ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ. ಹಾಗೆ ನೀವು ವಾಟ್ಸಾಪ್ ವೆಬ್ ಬಳಸುತ್ತಿದ್ದರೆ ಒಮ್ಮೆ ಸ್ಕ್ಯಾನ್ ಮಾಡಿಕೊಂಡರೆ ತಿಂಗಳುಗಳ ಕಾಲ ಹಾಗೆಯೇ ಬಳಸಬಹುದು. ಅದು ಲಾಗ್‌ಔಟ್ ಆಗುವುದೇ ಇಲ್ಲ.
ಏನೆಲ್ಲಾ ನಿಯಮ ಬದಲಾವಣೆ?
ಸದ್ಯ ಈಗ ನೀವು ವಾಟ್ಸಾಪ್ ಬಳಸುತ್ತಿದ್ದೀರಿ ಎಂದಾದರೆ ಆ ಸಂಖ್ಯೆ ನಿಮ್ಮ ಮೊಬೈಲ್‌ನಲ್ಲಿ ಇರಬೇಕಾಗುತ್ತದೆ. ಅದಕ್ಕೆ ನೀವು ರೀಚಾರ್ಜ್ ಮಾಡಿಸಬೇಕಾಗುತ್ತದೆ. ಆ ನಂಬರ್ ನಿಷ್ಕ್ರಿಯವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಸಿಮ್ ಇಲ್ಲದೆ ವಾಟ್ಸಾಪ್ ಬಳಸಲು ಆಗುವುದಿಲ್ಲ. ಹಾಗೆ ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ಬಳಸುವುದಾದರೆ 6 ಗಂಟೆಗೊಮ್ಮೆ ಹೊಸ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಇದರಿಂದ ಬಹಳ ಸೆಕ್ಯೂರ್ ಬಳಕೆ ಮಾಡಿದಂತಾಗುತ್ತದೆ. ವಾಟ್ಸಾಪ್ ದುರ್ಬಳಕೆ ಸಹ ತಡೆಯಬಹುದಾಗಿದೆ.
ಸದ್ಯ ನೀವು ಬಹಳ ವರ್ಷದಿಂದ ಒಂದೇ ನಂಬರ್‌ನಲ್ಲಿ ವಾಟ್ಸಾಪ್ ಬಳಸಿ ನಂತರ ಆ ನಂಬರ್ ರದ್ದಾದರು ಕೂಡ ಅದೇ ನಂಬರ್ ಅಲ್ಲಿ ವಾಟ್ಸಾಪ್ ಬಳಸುತ್ತಿದ್ದರೆ ಇನ್ನು ಮುಂದೆ ಅದು ಸಾಧ್ಯವಾಗೋದಿಲ್ಲ. ಆಗಾಗ ನೀವು ವಾಟ್ಸಾಪ್ ಮೂಲಕ ಒಟಿಪಿ ಪಡೆದು ಲಾಗ್ಇನ್ ಆಗಬೇಕಾಗುತ್ತದೆ. ಸದ್ಯ ಈ ನಿಯಮ ರೂಪಿಸುವ ಸಲುವಾಗಿ ಸಮಯಾವಕಾಶ ಸಹ ನೀಡಲಾಗಿದೆ. ಇದು ಹಲವು ವಾಟ್ಸಾಪ್ ಬಳಕೆದಾರರಿಗೆ ಸಮಸ್ಯೆ ತರಬಹುದು. ಏಕೆಂದರೆ ಬಹಳ ವರ್ಷದಿಂದ ಬಳಸಿದ್ದ ನಂಬರ್ ಅವರ ಬಳಿ ಇಲ್ಲದಿದ್ದರೂ ಅದೇ ನಂಬರ್‌ನಲ್ಲಿ ವಾಟ್ಸಾಪ್ ಬಳಸುತ್ತಿರುವುದನ್ನು ಮುಂದುವರೆಸಿದ್ದರು, ಆದ್ರೆ ಈ ಅವಕಾಶದಿಂದ ಅವರು ವಂಚಿತರಾಗಲಿದ್ದಾರೆ.



Click it and Unblock the Notifications