Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈ ತಿಂಗಳಿನಲ್ಲಿದೆ ಭದ್ರ ರಾಜಯೋಗ: ಈ 3 ರಾಶಿಯವರಿಗೆ ಅದೃಷ್ಟದ ಬೆಂಬಲವಿದೆ
ಅಕ್ಟೋಬರ್ 1ಕ್ಕೆ ಬುಧವು ಕನ್ಯಾ ರಾಶಿಯನ್ನು ಪ್ರವೇಶಿಸಿದೆ. ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿದೆ. ಬುಧ ನಮ್ಮ ಬುದ್ಧಿವಂತಿಕೆ ಹಾಗೂ ಸಂವಹನದ ಮೇಲೆ ಪ್ರಭಾವ ಬೀರುತ್ತದೆ. ಕನ್ಯಾ ರಾಶಿಯ ಅಧಿಪತಿ ಬುಧ, ಇದೀಗ ಬುಧ ತಾನು ಅಧಿಪತಿಯಾಗಿರುವ ರಾಶಿಯಲ್ಲಿಯೇ ಇದೆ. ಇದರಿಂದ ಭದ್ರ ರಾಜ ಯೋಗ ಉಂಟಾಗಿದೆ. ಈ ಭದ್ರ ರಾಜ ಯೋಗದಿಂದಾಗಿ ಕೆಲವು ರಾಶಿಯವರಿಗೆ ರಾಜಯೋಗ ನಡೆಯುತ್ತಾ ಇದೆ , ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡೋಣ:

ಭದ್ರ ರಾಜ ಯೋಗ ಯಾವಾಗ ರೂಪುಗೊಳ್ಳುತ್ತದೆ?
ಯಾವಾಗ ಬುಧ ತಾನು ಅಧಿಪತಿಯಾಗಿರುವ ರಾಶಿಗೆ ಸಂಚರಿಸಿದಾಗ ಅಥವಾ ಕನ್ಯಾ ಅಥವಾ ಮಿಥುನ ರಾಶಿಯಲ್ಲಿ 1ನೇ, 4ನೇ, 7ನೇ, 10ನೇ ಮನೆಯಲ್ಲಿದ್ದಾಗ ಭದ್ರ ರಾಜ ಯೋಗ ಏರ್ಪಡುತ್ತದೆ. ಇದೀಗ ಈ ತಿಂಗಳಿನಲ್ಲಿ ಭದ್ರ ರಾಜ ಉಂಟಾಗುವುದು.
ಈ ಭದ್ರ ರಾಜ ಯೋಗದಿಂದಾಗಿ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ, ಈ ಅವಧಿಯಲ್ಲಿ ಈ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತಾರೆ, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಮೀನ ರಾಶಿ:
ಭದ್ರರಾಜ ಯೋಗದಿಂದಾಗಿ ಮೀನ ರಾಶಿಯವರಿಗೆ ಈ ಸಮಯದ ಅದೃಷ್ಟದ ಸಮಯವಾಗಿದೆ. ಆರ್ಥಿಕವಾಗಿ ತುಂಬಾನೇ ಪ್ರಗತಿ ಕಾಣುವಿರಿ. ಪ್ರೇಮಿಗಳು ಮದುವೆ ಮೂಲಕ ತಮ್ಮ ಬಾಂಧವ್ಯ ಗಟ್ಟಿಯಾಗಿಸಲು ಮನಸ್ಸು ಮಾಡಬಹುದು. ವೈವಾಹಿಕ ಜೀವನ ತಂಬಾ ಚೆನ್ನಾಗಿರಲಿದೆ. ಕುಟುಂಬದಲ್ಲಿ ಸಂತೋಷ ವಾತಾವರಣ ಇರಲಿದೆ. ಆಸ್ತಿ, ವಾಹನ ಖರೀದಿಸುವ ಸಾಧ್ಯತೆ. ಈ ಭದ್ರ ರಾಜ ಯೋಗದಿಂದಾಗಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಮಿಥುನ ರಾಶಿ
ಭದ್ರ ರಾಜ ಯೋಗದಿಂದಾಗಿ ಮಿಥುನ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಬ್ಯುಸ್‌ನೆಸ್‌ನಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯನ್ನು ಕಾಣುವಿರಿ. ಈ ಅವಧಿ ಹೊಸ ಉದ್ಯಮ ಮಾಡಲು, ಆಸ್ತಿ ಖರೀದಿಸಲು ಉತ್ತಮವಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಭದ್ರ ರಾಜ ಯೋಗವಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ಆಸ್ತಿ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಸ್ಟಾಕ್ ಮಾರ್ಕೆಟ್‌ನಲ್ಲಿ ತೊಡಗಿಸಿಕೊಂಡವರು ಈ ಅವಧಿಯಲ್ಲಿ ಉತ್ತಮ ಲಾಭ ಕಾಣುವಿರಿ. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಉತ್ತಮವಾಗಲಿದೆ.
ಜಾತಕದಲ್ಲಿ ಭದ್ರ ಯೋಗದ ಪ್ರಭಾವ
* ಜಾತಕದಲ್ಲಿ ಭದ್ರ ಯೋಗವಿದ್ದರೆ ಅದೃಷ್ಟದ ಬಾಗಿಲು ತೆರೆಯಲಿದೆ.
* ಈ ಅವಧಿಯಲ್ಲಿ ಪ್ರಸಿದ್ಧಿಯನ್ನು ಪಡೆಯುವಿರಿ
* ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ.
* ಈ ಸಮಯದಲ್ಲಿ ಕೆಲಸ, ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ.
* ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿರುತ್ತದೆ. ನಿಮ್ಮಲ್ಲಿರುವ ಗೊಂದಲಗಳು ದೂರಾಗುವುದು.
* ಸಂವಹನ ಕೌಶಲ್ಯ ತುಂಬಾ ಚೆನ್ನಾಗಿರುತ್ತದೆ.
* ಈ ಯೋಗದಿಂದಾಗಿ ಆರೋಗ್ಯ ಉತ್ತಮವಾಗಿರುತ್ತದೆ.
* ಭದ್ರರಾಜ ಯೋಗದಿಂದಾಗಿ ಸೌಕರ್ಯಗಳು ಹೆಚ್ಚಾಗುವುದು.
* ಈ ಅವಧಿಯಲ್ಲಿ ಮಾಡುವ ಪ್ರಯಾಣದಿಂದ ಲಾಭ ಗಳಿಸುವಿರಿ.
* ಹಣಕಾಸು, ಮಾಧ್ಯಮ, ವ್ಯಾಪಾರ, ಮಾರಾಟ, ಮಾರ್ಕೆಟಿಂಗ್ ಮತ್ತು ಬರವಣಿಗೆಗೆ ಸಂಬಂಧಿಸಿದ ವೃತ್ತಿಗಳಲ್ಲಿ ಉತ್ತಮ ಸಾಧನೆ ಮಾಡಬಹುದು. ರಾಜಕಾರಣಿಗಳ ಪ್ರಸಿದ್ಧಿ ಹೆಚ್ಚಾಗಲಿದೆ.



Click it and Unblock the Notifications