Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬುಧ ಸಂಚಾರದಿಂದ ಈ 3 ರಾಶಿಯವರಿಗೆ ಭದ್ರ ಮಹಾಪುರುಷ ರಾಜ ಯೋಗ
ವೈದಿಕ ಶಾಸ್ತ್ರಗಳ ಪ್ರಕಾರ ನವಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಕೆಲವೊಂದು ಗ್ರಹಗಳು ತಿಂಗಳಿಗೊಮ್ಮೆ ತಮ್ಮ ಸ್ಥಾನ ಬದಲಾಯಿಸಿದರೆ ಇನ್ನು ಕೆಲವು ಗ್ರಹಗಳು ಕೆಲವು ತಿಂಗಳಿಗೊಮ್ಮೆ ರಾಶಿ ಬದಲಾಯಿಸುತ್ತವೆ. ಗ್ರಹಗಳು ಹೀಗೆ ರಾಶಿ ಬದಲಾವಣೆ ಮಾಡಿದಾಗ ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಇರಲಿದ್ದು ರಾಶಿಗಳಲ್ಲಿ ಆ ಗ್ರಹಗಳ ಸ್ಥಾನಕ್ಕೆ ತಕ್ಕಂತೆ ಶುಭ ಅಥವಾ ಅಶುಭ ಫಲ ನೀಡುವುದು.

ಸಂವಹನ, ತರ್ಕ ಸಾಮಾರ್ಥ್ಯದ ಮೇಲೆ ಪ್ರಭಾವ ಬೀರುವ ಬುಧನು ಇದೀಗ ವೃಷಭ ರಾಶಿಯಲ್ಲಿ. ಇದೇ ಜೂನ್ 24ಕ್ಕೆ ವೃಷಭದಿಂದ ಮಿಥುನ ರಾಶಿಗೆ ಪ್ರವೇಶಿಸಲಿದೆ. ಈ ಬುಧ ಸಂಕ್ರಮಣದ ಸಮಯದಲ್ಲಿ'ಭದ್ರ ಮಹಾಪುರುಷ ರಾಜ್ಯೋಗ'ನಿರ್ಮಾಣವಾಗಲಿದೆ. ಈ ಭದ್ರ ಮಹಾಪುರುಷ ರಾಜ್ಯೋಗ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ 3 ರಾಶಿಗಳಂತೂ ಈ ಸಮಯದಲ್ಲಿ ತುಂಬಾನೇ ಪ್ರಯೋಜನ ಪಡೆಯಲಿದ್ದಾರೆ. ಆ ಮೂರು ರಾಶಿಯವರು ಇನ್ನು 17 ದಿನಗಳಲ್ಲಿ ಆ ಅದ್ಭುತ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ...
ಧನು ರಾಶಿ
ಭದ್ರ ಮಹಾಪುರುಷ ರಾಜ್ಯೋಗದ ಪ್ರಭಾವದಿಂದ ಧನು ರಾಶಿಯವರು ತುಂಬಾ ಅದ್ಭುತ ಪ್ರಯೋಜನ ಪಡೆಯಲಿದ್ದಾರೆ. ನೀವು ವೃತ್ತಿಯಲ್ಲಿ ಪ್ರಗತಿಯಾಗುವ ಸಾಧ್ಯತೆಗಳಿವೆ. ಈ ಸಮಯದಲ್ಲಿ, ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ವಿವಾಹಕ್ಕೆ ಹಲವಾರು ಸಂಬಂಧ ಹುಡುಕಿದರೂ ಸರಿ ಬರುತ್ತಿಲ್ಲ ಎಂದಾದರೆ ಈ ಅವಧಿಯಲ್ಲಿ ನಿಮ್ಮ ಚಿಂತೆ ದೂರಾಗಲಿದೆ. ಈ ಸಮಯದಲ್ಲಿ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ. ಇನ್ನು ವಿದೇಶಕ್ಕೆ ಹೋಗುವ ಕನಸು ಕಾಣುವವರು ಈಗಾಗಲೇ ಸಿದ್ಧತೆ ಮಾಡಿಕೊಳ್ಳಿ, ಏಕೆಂದರೆ ನಿಮ್ಮ ಆಸೆ ಭದ್ರ ಮಹಾಪುರುಷ ರಾಜ್ಯೋಗದ ಸಮಯದಲ್ಲಿ ಈಡೇರಿಲಿದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಲಾಭ ಗಳಿಸುತ್ತೀರಿ, ಉದ್ಯಮಿಗಳು ಒಳ್ಳೆಯ ಲಾಭ ಗಳಿಸುವಿರಿ.
ಕನ್ಯಾ ರಾಶಿ
ಮಿಥುನ ರಾಶಿಯಲ್ಲಿ ಬುಧ ಸಂಕ್ರಮಣವಾದಾಗ ಭದ್ರ ಮಹಾಪುರುಷ ರಾಜ್ಯೋಗದಿಂದ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸುತ್ತಿರುವವರು ಈ ಅವಧಿಯಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಬಹುದು. ಸ್ವಂತ ವ್ಯಾಪಾರ ಮಾಡುತ್ತಿರುವವರು ಉತ್ತಮ ಲಾಭ ಪಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಒಳ್ಳೆಯ ಬಡ್ತಿ ಪಡೆಯುವಿರಿ. ಈ ಅವಧಿಯಲ್ಲಿ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಪ್ರಗತಿ ಕಾಣುವುದರಿಂದ ಈ ಸಮಯ ನಿಮಗೆ ಅದೃಷ್ಟದ ಸಮಯವಾಗಿದೆ.
ಮಿಥುನ ರಾಶಿ
ಬುಧನು ಮಿಥುನ ರಾಶಿಗೆ ಪ್ರವೇಶಿಸಿದ ಕ್ಷಣದಿಂದ ನಿಮ್ಮ ರಾಶಿಯಲ್ಲಿ ಭದ್ರ ಮಹಾಪುರುಷ ರಾಜ್ಯೋಗ ಉಂಟಾಗುವುದರಿಂದ ನಿಮಗೆ ಈ ಅವಧಿ ತುಂಬಾ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ರಾಜಕೀಯದಲ್ಲಿ ಸಕ್ರಿಯರಾಗಿರುವವರು ಈ ತಿಂಗಳು ದೊಡ್ಡ ಹುದ್ದೆಯನ್ನು ಪಡೆಯಬಹುದು. ನೀವು ಯಾವುದೇ ಆಸ್ತಿ ಅಥವಾ ವಾಹನವನ್ನು ಖರೀದಿಸಬಹುದು. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯಬಹುದು.



Click it and Unblock the Notifications