Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
427 ಕೋಟಿ ರೂಪಾಯಿಯ ಅಗ್ಗದ ಮದುವೆ!: ಬೆಜೋಸ್ ಮದುವೆ ಚೀಪ್ ಅಂದಿದ್ಯಾಕೆ?
ಅಮೇಜಾನ್ ಸಂಸ್ಥಾಪಕ, ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಜೆಫ್ ಬೆಜೋಸ್ ಮತ್ತೊಂದು ಮದುವೆ ಆಗಿದ್ದಾರೆ. ಬೆಜೋಸ್ ಮತ್ತು ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ವಿವಾಹ ಸಂಭ್ರಮ ಈಗ ಅಂತ್ಯಗೊಂಡಿದೆ. ವೆನಿಸ್‌ನ ದ್ವೀಪದಲ್ಲಿ ಅದ್ದೂರಿಯಾಗಿ ಇಬ್ಬರು ವಿವಾಹವಾದರು. ವಿಶ್ವದ ಪ್ರಮುಖ ಉದ್ಯಮಿಗಳು, ಜಾಗತಿಕ ಮಟ್ಟದ ನಾಯಕರು, ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಭಾಗಿಯಾಗಿದ್ದರು.
ಜೆಫ್ ಬೆಜೋಸ್ ವಿಶ್ವದ 4ನೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದಾರೆ. ಸಾವಿರಾರು ಕೋಟಿ ಅವರ ಆಸ್ತಿ ಮೌಲ್ಯ ಆಗಿದೆ. ಅವರ ವಿವಾಹದ ಸುದ್ದಿ ಹೊರ ಬೀಳುತ್ತಿದ್ದಂತೆ ಹಲವು ವಿಚಾರಗಳಿಂದ ಸುದ್ದಿಯಾಗಿತ್ತು. ಆದ್ರಲ್ಲೂ ಅದ್ದೂರಿತನಕ್ಕೆ ಸುದ್ದಿಯಾಗಿತ್ತು. ಆರಂಭದಲ್ಲಿ ಅವರ ಆಹ್ವಾನ ಪತ್ರಿಕೆ ಬಹಳ ಸರಳವಾಗಿದ್ದ ಕಾರಣ ಎಲ್ಲರಿಗೂ ಅಚ್ಚರಿಯಾಗಿತ್ತು.

ಆದ್ರೆ ಬರೋಬ್ಬರಿ 427 ಕೋಟಿ ರೂಪಾಯಿ ವೆಚ್ಚದ ಅದ್ದೂರಿಗೆ ಮದುವೆ ಈಗ ಹಲವು ಕಾರಣದಿಂದ ಚೀಪ್ ಎನಿಸಿಕೊಂಡಿದೆ. ಮದುವೆಗೆ ತೆರಳಿದ್ದ ಅತಿಥಿಗಳಿಂದಲೇ ಇಂತಹದೊಂದು ಮಾತುಗಳು ಕೇಳಿಬಂದಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 427 ಕೋಟಿ ರೂಪಾಯಿ ಅದ್ದೂರಿತನಕ್ಕೆ ಸಾಕ್ಷಿಯಾದರೂ ಕೂಡ ಅಲ್ಲಿನ ವ್ಯವಸ್ಥೆಗಳ ಕುರಿತಾಗಿ ಅತಿಥಿಗಳ ಮಾತುಗಳು ಇದು ಅದ್ದೂರಿ ಬದಲಾಗಿ ಚೀಪ್ ಮದುವೆ ಎಂಬ ಮಾತುಗಳು ಕೇಳಿಬರಲು ಕಾರಣವಾಗಿದೆ.
ಅವರ ಈ ವಿವಾಹ ಮೂರು ದಿನಗಳ ಸಂಭ್ರಮದಿಂದ ಕೂಡಿತ್ತು. ಇದಕ್ಕಾಗಿ ಅವರು 16ನೇ ಶತಮಾನದ ಐಷಾರಾಮಿ ಪಲಾಝೊ ಅಮನ್ ಹೋಟೆಲ್‌ನಲ್ಲಿ ತಂಗಿದ್ದರು ಇಲ್ಲಿ ತಲಾ ಉಪಹಾರದ ಖರ್ಚು ಬರೋಬ್ಬರಿ 1 ಲಕ್ಷ ರೂಪಾಯಿಗೂ ಹೆಚ್ಚು. ಆದ್ರೆ ಅವರ ಮದುವೆ ಊಹಿಸಿದಷ್ಟು ಆಡಂಬರವಾಗಿ ಕಾಣಲಿಲ್ಲ ಎಂದು ಹಲವರು ಹೇಳಿರುವುದು ನೋಡಬಹುದು.
ವೆನಿಸ್ ಒಂದು ದ್ವೀಪವಾಗಿದೆ ಅಲ್ಲಿ ಓಡಾಡಲು ಸಣ್ಣ ಸಣ್ಣ ಬೋಟ್‌ಗಳು ಬಿಟ್ಟರೆ ಬೇರೆ ಯಾವುದೇ ಸಂಪರ್ಕವಿಲ್ಲ. ಹೀಗಾಗಿ ಅಲ್ಲಿನ ಅತಿಥಿಗಳು ಹೊರ ಹೋಗಲು ಈ ಬೋಟ್‌ಗಳು ಆಶ್ರಯಿಸಬೇಕಾಯಿತು. ಒಂದು ಬೋಟ್‌ನಲ್ಲಿ ಹೆಚ್ಚು ಜನರು ಓಡಾಡುವಂತಿರಲಿಲ್ಲ. ಹಾಗೆ ಇದು ತೆರೆದ ಬೋಟ್ ಆಗಿತ್ತು. ಅಲ್ಲಿ ಬಿಸಿಲು ಕೂಡ ಹೆಚ್ಚು. ಹೀಗಾಗಿ ಅತಿಥಿಗಳು ವೆನಿಸ್‌ನಲ್ಲಿ ಸುತ್ತಾಡಲು ವ್ಯವಸ್ಥೆಯಿಲ್ಲದೆ ಪರದಾಡಿದ್ರು. ಮೂರು ದಿನಗಳ ಕಾಲ ಇಂತಹ ಸಮಸ್ಯೆಯನ್ನು ಅವರು ತಡೆದುಕೊಂಡಿರಬೇಕಾಯಿತು.
ವೆನಿಸ್‌ನಲ್ಲಿ ಒಂದು ಸಮುದಾಯದ ಗುಂಪು ಜೆಫ್ ಬೆಜೋಸ್ ವಿರುದ್ಧ ಪ್ರತಿಭಟನೆಗೆ ಇಳಿದರು. ಈ ವಿವಾಹ ಸಮಾರಂಭವು ವೆನಿಸ್‌ನ ಪರಿಸರಕ್ಕೆ ಹಾನಿ ಉಂಟು ಮಾಡಲಿದೆ. ಪ್ರವಾಸಿಗರು ಇಲ್ಲಿನ ಪರಿಸರಕ್ಕೆ ಹಾನಿ ಮಾಡಲಿದ್ದಾರೆ, ಹೀಗಾಗಿ ಬೆಜೋಸ್‌ಗೆ ಅವಕಾಶ ನೀಡಬಾರದು ಎಂದು ಬೋರ್ಡ್‌ಗಳ ಹಿಡಿದು ಪ್ರತಿಭಟನೆ ನಡೆಸಲಾಗಿತ್ತು.
ಹಾಗೆ ಮದುವೆಗೆ ತೆರಳಿದ್ದ ಅತಿಥಿಗಳಿಗೆ ನೀಡಲಾದ ಉಡುಗೊರೆ ಕೂಡ ಆಕರ್ಷಕವಾಗಿರಲಿಲ್ಲ ಎಂದು ದೂರಲಾಗಿದೆ. ಪತ್ರಕರ್ತ ರಾವ್ ಶುಟರ್ ಈ ಉಡುಗೊರೆಯು ಆಕರ್ಷಕವಾಗಿಲ್ಲ. ಇದು ಕಾರ್ಪೋರೇಟ್ ರೀಟ್ರೀಟ್ ಎಂದು ಕರೆದಿದ್ದಾರೆ. ಅಮೇಜಾನ್ ಸ್ಲೈಡ್‌ಗಳ ಹೊಂದಿರುವ ಆಟಿಕೆಯಂತಹ ಗಿಫ್ಟ್ ಇದಾಗಿತ್ತು. ಹೀಗಾಗಿ ಇದನ್ನು ಅಗ್ಗದ ಮದುವೆ ಎಂದು ಹಲವರು ಸಂಬೋಧಿಸಿದ್ದಾರೆ.
ಭಾರತದಿಂದ ಒಬ್ಬರಿಗೆ ಮಾತ್ರ ಆಹ್ವಾನ
ಇನ್ನು ವಿಶ್ವದ ಶ್ರೀಮಂತ ಉದ್ಯಮಿಯ ವಿವಾಹಕ್ಕೆ ಭಾರತದಿಂದ ಏಕೈಕ ಉದ್ಯಮಿಯ ಆಹ್ವಾನಿಸಲಾಗಿತ್ತು. ಅದು ಮುಖೇಶ್ ಅಂಬಾನಿ ಅನಿಲ್ ಅಂಬಾನಿ ಅಲ್ಲವೇ ಅಲ್ಲ, ಬದಲಿಗೆ ಮಹಿಳಾ ಕೈಗಾರಿಕೋದ್ಯಮಿ ನತಾಶಾ ಪೂನಾವಲ್ಲ ಅವರನ್ನು ಮಾತ್ರವೇ ಆಹ್ವಾನಿಸಲಾಗಿತ್ತು. ಅವರು ಫ್ಯಾಷನ್ ಯುಗದಲ್ಲಿ ಈಗ ಹೆಸರು ಮಾಡಿದ್ದಾರೆ. ಅವರು ನತಾಶಾ ವಿಲ್ಲು ಪೂನಾವಲ್ಲ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಆಗಿದ್ದಾರೆ. ಹಾಗೆ ಲಾರೆನ್ ಸ್ಯಾಂಚೆಜ್ ಅವರ ಸ್ನೇಹಿತೆಯಂತೆ. ಹೀಗಾಗಿ ಅವರನ್ನು ಮಾತ್ರ ಭಾರತದಿಂದ ಆಹ್ವಾನಿಸಲಾಗಿತ್ತು.



Click it and Unblock the Notifications