Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ನಿಮ್ಮ ಖಾತೆ ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಹಣ ಮಾಯವಾಗುತ್ತೆ..! ಈ ಸ್ಕ್ಯಾಮ್ ಬಗ್ಗೆ ಇರಲಿ ಎಚ್ಚರ..!
ನಾವೀಗ ಎಲ್ಲಾ ವ್ಯವಹಾರಕ್ಕೂ ಆನ್‌ಲೈನ್, ಇಂಟರ್‌ನೆಟ್, ಮೊಬೈಲ್ ನೆಚ್ಚಿಕೊಂಡಿದ್ದೇವೆ. ನಮ್ಮ ದೈನಂದಿನ ಕೆಲಸಗಳಿಂದ ಹಿಡಿದು, ಹಣಕಾಸು ವ್ಯವಹಾರಗಳು ಕೂಡ ಈ ಗ್ಯಾಜೆಟ್ ಮೂಲಕ ನಡೆಯುತ್ತವೆ. ಹಾಗೆ ಇತ್ತೀಚಿಗೆ ವಂಚನೆ, ಮೋಸದಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸೈಬರ್ ಪ್ರಕರಣಗಳ ತಡೆಯುವುದು ಬಹುದೊಡ್ಡ ಸಮಸ್ಯೆಯಾಗಿ ರೂಪುಗೊಂಡಿದೆ.
ಭಾರತದಂತಹ ದೇಶದಲ್ಲಿ ಪ್ರತಿದಿನ ಸಾವಿರಾರು ಮಂದಿ ಡಿಜಿಟಲ್ ವಂಚನೆಗೆ ಒಳಗಾಗುತ್ತಿದ್ದಾರೆ. ಸ್ಕ್ಯಾಮರ್‌ಗಳು ಕೂಡ ದಿನಕ್ಕೊಂದು ಹೊಸ ವಿಧಾನದ ಮೂಲಕ ವಂಚಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ ಮೊಬೈಲ್ ಮೂಲಕವೇ ಅತೀ ಹೆಚ್ಚು ಸ್ಕ್ಯಾಮ್‌ಗಳು ವರದಿಯಾಗುತ್ತವೆ. ಲಿಂಕ್, ಆಪ್, ಫೇಕ್ ಐಡಿ, ನಕಲಿ ವ್ಯವಹಾರಗಳ ಮೂಲಕ ಸುಲಭವಾಗಿ ವಂಚಿಸಲಾಗುತ್ತಿದೆ.

ಈಗ ಹೊಸದೊಂದು ವಿಧಾನದಲ್ಲಿ ಈ ಸೈಬರ್ ಕಳ್ಳರು ನಿಮ್ಮ ಖಾತೆಯಲ್ಲಿ ಹಣಕ್ಕೆ ಕನ್ನ ಹಾಕುತ್ತಿರುವುದು ಎಲ್ಲರಲ್ಲೂ ಆಘಾತ ತಂದಿದೆ. ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಯ ಹಣವಿದೆ ಎಂಬುದನ್ನು ಮೊಬೈಲ್ ಮೂಲಕ ಈಗ ತಿಳಿಯಬಹುದು. ಆದ್ರೆ ಈ ರೀತಿ ಹಣ ಎಷ್ಟಿದೆ ಎಂದು ಪರಿಶೀಲಿಸುವಾಗ ಎಚ್ಚರಿಕೆ. ಏಕೆಂದರೆ ನೀವು ಹಣ ಎಷ್ಟಿದೆ ಎಂದು ಪರಿಶೀಲಿಸುವಾಗಲೇ ನಿಮ್ಮ ಖಾತೆಯಿಂದ ಹಣ ಎಗರಿಸುವ ಕಾರ್ಯ ಆಗುತ್ತಿದೆ.
ಯುಪಿಐ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಈ ರೀತಿಯ ವಂಚನೆ ಎಸಗಲಾಗುತ್ತಿದೆ. ಈ ಹೊಸ ವಿಧಾನದ ವಂಚನೆಯನ್ನು ಜಂಪ್ಡ್ ಡಿಪಾಸಿಟ್ ಸ್ಕ್ಯಾಮ್ ಎಂದು ಕರೆಯಲಾಗಿದೆ. ಆದರೆ ಈ ವಂಚನೆ ಕೇಸ್‌ನಲ್ಲಿ ನಿಮ್ಮ ಖಾತೆಗೆ ಮೊದಲು ಹಣ ಬಂದಿರುವಂತೆ ಸಂದೇಶ ಬರಲಿದೆ. ಆದ್ರೆ ಹಣ ನಿಮ್ಮ ಖಾತೆಗೆ ಬಂದಿದೆಯೇ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಲು ಮುಂದಾದರೆ ನಿಮ್ಮ ಖಾತೆಯಲ್ಲಿನ ಎಲ್ಲಾ ಹಣವು ಮಾಯವಾಗುತ್ತದೆ.
ಏನಿದು ಹೊಸ ವಂಚನೆ?
ಸೈಬರ್ ಅಪರಾಧಿಗಳು ನಿಮ್ಮ ಯುಪಿಐ ಪಿನ್ ತಿಳಿದುಕೊಳ್ಳಲು ದೊಡ್ಡ ಸ್ಕ್ಯಾಮ್ ಮಾಡುತ್ತಿರುವ ಪ್ರಕರಣವಿದು. ನಿಮ್ಮ ಮೊಬೈಲ್‌ಗೆ ಹಣ ಬಂದಿರುವ ನಕಲಿ ಸಂದೇಶ ಬರುತ್ತದೆ. ಇದನ್ನು ಸೈಬರ್ ಅಪರಾಧಿಗಳು ನಿಮ್ಮ ಗಮನ ಸೆಳೆಯಲು ಕಳುಹಿಸುತ್ತಾರೆ. ಅನಂತರ ನೀವು ಹಣ ಬಂದಿರುವುದು ನಿಜವೇ ಎಂದು ತಿಳಿಯಲು ಯುಪಿಐ ಆಪ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿದಾಗ ನಿಮ್ಮ ಖಾತೆಯಿಂದ ಹಣ ವಿಥ್ ಡ್ರಾ ಆಗಲು ಆರಂಭಿಸುತ್ತದೆ.
ಇದು ಸಾಧ್ಯವಾಗೋದು ಹೇಗೆ?
ನಿಮ್ಮ ಮೊಬೈಲ್‌ಗೆ ಮೊದಲೇ ಈ ಸೈಬರ್ ವಂಚಕರು ಲಿಂಕ್ ಕ್ಲಿಕ್ ಮಾಡುವ ಮೂಲಕ ಗೌಪ್ಯ ಆಪ್ ಅನ್ನು ಅಥವಾ ನಿಮ್ಮ ಮಾಹಿತಿ ಕಲೆಹಾಕುವ ಕೆಲಸ ಮಾಡಿರುತ್ತಾರೆ. ನೀವು ಯುಪಿಐ ಆಪ್‌ನಲ್ಲಿ ನಿಮ್ಮ ಗೌಪ್ಯ ಪಿನ್‌ಗಳ ನಮೂದಿಸಿದಾಗ ಅದು ಯಾವ ಸಂಖ್ಯೆ ಎಂಬುದನ್ನು ಅವರು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ತಕ್ಷಣ ಅವರು ನಿಮ್ಮ ಯುಪಿಐ ಪಿನ್ ಬಳಸಿ ನಿಮ್ಮ ಖಾತೆಯಲ್ಲಿನ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ.
ಇತ್ತೀಚಿಗೆ ತಮಿಳುನಾಡಿನಲ್ಲಿ ಈ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರ ಮೊಬೈಲ್‌ಗೆ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಅವರು ಬಳಿಕ ಖಾತೆಗೆ ಹಣ ಬಂದಿದೆ ಎಂಬ ಸಂದೇಶ ಓದಿದ್ದರು. ತಕ್ಷಣ ಇದನ್ನು ಪರಿಶೀಲಿಸಲು ಯುಪಿಐ ಆಪ್‌ಗೆ ಹೋಗಿ ತನ್ನ ಪಿನ್ ಎಂಟರ್ ಮಾಡಿದ್ದಾರೆ. ಇದಾದ ನಿಮಿಷದಲ್ಲಿ ಹಂತ ಹಂತವಾಗಿ ಅವರ ಖಾತೆಯಿಂದ ಹಣ ವರ್ಗಾವಣೆ ಆಗಿದೆ.
ಹೀಗಾಗಿ ಯಾವುದೆ ಲೀಂಕ್‌ಗಳು, ನಕಲಿ ಆಪ್‌ಗಳು, ಮೂರನೇ ಪಾರ್ಟಿ ಆಪ್, ಅನಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ಎಚ್ಚರಿಕೆ ವಹಿಸಬೇಕಿದೆ. ಇನ್ನು ಈ ರೀರಿ ಸಂದೇಶಗಳ ಸ್ವೀಕರಿಸಿದರೆ ತಕ್ಷಣ ಯುಪಿಐ ಪಿನ್ ನಮೂದಿಸಿ ಬ್ಯಾಲೆನ್ಸ್ ಚೆಕ್ ಮಾಡಬೇಡಿ. 15 ಅಥವಾ 20 ನಿಮಿಷದ ಬಳಿಕ ಯುಪಿಐ ವ್ಯಹವಾರ ಮಾಡುವುದು ಉತ್ತಮ.



Click it and Unblock the Notifications
