Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ ರಾಶಿಯವರು ನಿಮಗೆ ಉತ್ತಮ ಬಾಳ ಸಂಗಾತಿಯಾಗುತ್ತಾರೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಪ್ರೇಮ ವಿವಾಹವಾಗುತ್ತಾರೆ. ಆದರೆ ಇನ್ನೂ ಅನೇಕ ಜನ ಅಪ್ಪ- ಅಮ್ಮ ಒಪ್ಪಿದ ವಧು/ವರರನ್ನೇ ವಿವಾಹವಾಗುವವರಿದ್ದಾರೆ. ಪ್ರೇಮ ವಿವಾಹ ಮತ್ತು ಮನೆಯವರು ಒಪ್ಪಿದ ವಿವಾಹ ಎರಡರಲ್ಲೂ ಬಿರುಕು ಉಂಟಾಗೋದನ್ನು ನಾವು ನೋಡಿರ್ತೀವಿ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯ ಮಹಿಳೆಯರನ್ನು ಮದುವೆಯಾದರೆ ಸುಖವಾಗಿರಬಹುದಂತೆ. ಹಾಗಾದ್ರೆ ಆ ರಾಶಿಯವರು ಯಾರು ಎಂಬುವುದನ್ನು ತಿಳಿಯೋಣ.
ಮಕರ ರಾಶಿ
ಮಕರ ರಾಶಿಯ ಮಹಿಳೆಯರಲ್ಲಿ ಸಮರ್ಥ, ಸಂಘಟಿತ ಹಾಗೂ ಪ್ರಾಯೋಗಿಕ ಗುಣವಿದೆ. ಇಂತಹ ಕೆಲಸವನ್ನು ಇವರ ಕೈಯಿಂದ ಮಾಡೋದಕ್ಕೆ ಸಾಧ್ಯವಿಲ್ಲ ಅಂತಿಲ್ಲ. ಪ್ರತಿಯೊಂದು ಕೆಲಸವನ್ನು ಇವರು ಮಾಡುತ್ತಾರೆ. ಇವರಿಗೆ ಕುಟುಂಬ ಹಾಗೂ ಸಂಸಾರದ ಬಗ್ಗೆ ಒಂದು ಒಳ್ಳೆಯ ದೃಷ್ಟಿಕೋನವಿದೆ. ಎರಡು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿ ಇವರಲ್ಲಿದೆ. ಇವರು ಒಂದು ಸಾರಿ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡೋ ಮಾತೇ ಇಲ್ಲ. ಈ ರಾಶಿಯವರು ಅಂದುಕೊಂಡದ್ದನ್ನು ಖಂಡಿತ ಸಾಧಿಸುತ್ತಾರೆ.

ಮಕರ ರಾಶಿಯವರು ಪತಿಗೆ ತಕ್ಕ ಪತ್ನಿ ಎನಿಸಿಕೊಳ್ಳುತ್ತಾರೆ. ಹಾಗೂ ಇವರದ್ದು ಪ್ರಾಮಾಣಿಕ ಪ್ರೀತಿ ಆಗಿರುತ್ತದೆ. ಇವರು ಸಂಬಂಧಕ್ಕೆ ಎಂದಿಗೂ ಅಗೌರವ ತೋರೋದಿಲ್ಲ. ಹಾಗೂ ಯಾವುದೇ ಕೆಲಸದಲ್ಲೂ ಸೋಮಾರಿತನ ಮಾಡೋದಿಲ್ಲ. ಈ ರಾಶಿಯ ಮಹಿಳೆಯರು ಮಹತ್ವಾಕಾಂಕ್ಷೆ ಹೊಂದಿದ್ದು ಇವರು ತಮ್ಮ ಪ್ರಾಮಾಣಿಕತೆ ಹಾಗೂ ಬಲವಾದ ನೀತಿಗಳೊಂದಿಗೆ ಜೀವನ ನಡೆಸುತ್ತಾರೆ. ಈ ರಾಶಿಯವರು ಪುರುಷರಿಗೆ ಖಂಡಿತ ಉತ್ತಮ ಜೀವನ ಸಂಗಾತಿಯಾಗುತ್ತಾರೆ.
ಮೀನ ರಾಶಿ
ಈ ರಾಶಿಯವರು ಸೃಜನಶೀಲ, ಸುಂದರ, ಅರ್ಥಗರ್ಭಿತ ಮಾತುಗಳನ್ನಾಡುವ ಗುಣವನ್ನು ಹೊಂದಿದ್ದಾರೆ. ಇವರು ಹೆಚ್ಚು ಭಾವನಾತ್ಮಕ ಜೀವಿಗಳಾಗಿರೋದಿಲ್ಲ. ಇವರಿಗೆ ಸರಿಯಾದ ಸಂಗಾತಿ ಸಿಕ್ಕರೆ ಅವರ ಜೊತೆಗೆ ಸುಂದರ ಜೀವನವನ್ನು ಕಳೆಯುತ್ತಾರೆ. ಮೀನರಾಶಿಯವರು ಯಾವುದೇ ವಿಚಾರವನ್ನು ಹೆಚ್ಚು ಆಳವಾಗಿ ಯೋಚಿಸಿ ಅದ್ರಲ್ಲಿ ನೋವು ಅನುಭವಿಸೋದಿಲ್ಲ. ಅವರು ತಮ್ಮ ಸಂಗಾತಿಯ ಬಳಿ ಯಾವುದೇ ಮುಚ್ಚು ಮರೆಯಿಲ್ಲದೇ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ.
ಇವರು ತಮ್ಮ ಸಂಗಾತಿಯನ್ನು ತುಂಬಾನೇ ಕೇರ್ ಮಾಡುತ್ತಾರೆ. ಹುಷಾರಿಲ್ಲದ ಸಮಯದಲ್ಲಿ ಪತಿಯನ್ನು ಮಗುವಿನಂತೆ ನೋಡಿಕೊಳಗಳ್ಳುವ ಗುಣ ಇವರಲ್ಲಿದೆ. ಇನ್ನೂ ಮಕ್ಕಳಿಗೂ ಒಳ್ಳೆಯ ಮೌಲ್ಯಗಳನ್ನು ನೀಡಿ ಬೆಳೆಸುತ್ತಾರೆ. ಪ್ರತಿ ಬಾರಿ ಇವರು ಸರಿಯಾದ ಮಾತನ್ನೇ ಆಡುತ್ತಾರೆ. ಪ್ರತಿಯೊಬ್ಬರಿಂದ ಗೌರವವನ್ನು ಪಡೆಯುತ್ತಾರೆ. ಮೀನ ರಾಶಿಯವರು ತಮ್ಮ ಕೆಲದಿಂದಲೇ ಮನೆಯವರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರನ್ನು ಮದುವೆಯಾದರೆ ನಿಮಗೆ ಒಂಟಿತನ ಕಾಡೋದೇ ಇಲ್ಲ. ಈ ರಾಶಿಯವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಇವರ ಜೊತೆಗಿದ್ದರೆ ನಿಮ್ಮ ಜೀವನ ಚೆನ್ನಾಗಿರುತ್ತದೆ. ವೃಶ್ಚಿಕ ರಾಶಿಯವರ ಗುಣ ಹೇಗೆಂದರೆ ಇವರು ಕೇವಲ ಒಂದು ವಿಚಾರಕ್ಕೆ ತೃಪ್ತಿ ಪಟ್ಟುಕೊಳ್ಳೋದಿಲ್ಲ. ಬೇರೆ ಬೇರೆ ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವ ಗುಣ ಇವರದ್ದಾಗಿರುತ್ತದೆ. ಇವರಿಗೆ ಬೇಕಾದುದನ್ನು ಪಡೆದುಕೊಳ್ಳುವವರೆಗೆ ಸುಮ್ಮನಿರೋದಿಲ್ಲ.
ಈ ರಾಶಿಯವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸೋದಕ್ಕೆ ಇಷ್ಟ ಪಡೋದಿಲ್ಲ. ಆದರೆ ತಮ್ಮ ಸಂಗಾತಿಯ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವ ಹೊಂದಿದ್ದಾರೆ. ಇವರು ಒಂದು ವಿಚಾರವನ್ನು ತಿಳಿದುಕೊಳ್ಳಲು ತುಂಬಾ ಉತ್ಸುಕತೆಯನ್ನು ತೋರುತ್ತಾರೆ. ಇನ್ನೂ ಸಂಗಾತಿಯ ನಂಬಿಕೆಗೆ ಎಂದಿಗೂ ಇವರು ಮೋಸ ಮಾಡೋದಿಲ್ಲ. ಪ್ರಮಾಣಿಕತೆ ಅನ್ನೋದು ಇವರಲ್ಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮದುವೆಯಾಗೋದಕ್ಕೆ ಈ ಮೂರು ರಾಶಿಯವರು ತುಂಬಾನೇ ಯೋಗ್ಯ ಅಂತ ಹೇಳಲಾಗಿದೆ. ಹಾಗಂತ ಬೇರೆ ರಾಶಿಯವರು ಉತ್ತಮ ಅಲ್ಲ ಅಂತ ನಾವು ಹೇಳುತ್ತಿಲ್ಲ. ನಮಗೆ ಹೊಂದಾಣಿಕೆಯಾಗುವ ಹುಡುಗಿ ಸಿಕ್ಕರೆ ಖಂಡಿತ ಜೀವನದಲ್ಲಿ ಖುಷಿಯಾಗಿರಬಹುದು.



Click it and Unblock the Notifications












