Latest Updates
-
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ!
ಈ ರಾಶಿಯ ಪುರುಷರು ಬೆಸ್ಟ್ ಹಸ್ಪಂಡ್ ಲಿಸ್ಟ್‌ನಲ್ಲಿ ಮೊದಲಿಗಿರ್ತಾರಂತೆ!
ಮಹಿಳೆಯರಿಗೆ ತನ್ನ ಗಂಡನ ಬಗ್ಗೆ ನೂರಾರು ಆಸೆ, ಕನಸುಗಳಿರುತ್ತದೆ. ಹಾಗಂತ ಎಲ್ಲರೂ ಪರ್ಫೆಕ್ಟ್ ಪತಿ ಅನ್ನಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಪತಿ ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಕೂಡ ಪತ್ನಿಯರಿಗೆ ಕೆಲವೊಂದು ವಿಚಾರಗಳಲ್ಲಿ ಪತಿ ಬಗ್ಗೆ ದೂರುಗಳು ಇದ್ದೇ ಇರುತ್ತವೆ. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಯ ಪುರುಷರು ಬೆಸ್ಟ್ ಪತಿ ಅಂತ ಅನ್ನಿಸಿಕೊಳ್ತಾರಂತೆ. ಹಾಗಾದ್ರೆ ದ್ವಾದಶ ರಾಶಿಗಳಲ್ಲಿ ಯಾವ ರಾಶಿಯ ಪುರುಷರು ಬೆಸ್ಟ್ ಪತಿ ಸಾಲಿನಲ್ಲಿ ಮೊದಲಿಗೆ ನಿಲ್ತಾರೆ ಅನ್ನೋದನ್ನು ತಿಳಿಯೋಣ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಪುರುಷರು "ಪರ್ಫೆಕ್ಟ್ ಹಸ್ಬಾಂಡ್ ಮೆಟಿರಿಯಲ್" ಅಂತ ಹೇಳಲಾಗುತ್ತದೆ. ಇವರು ತಮ್ಮ ಪತ್ನಿಗೆ ಭಾವನಾತ್ಮಕವಾಗಿ ತುಂಬಾನೇ ಪ್ರೋತ್ಸಾಹ ನೀಡುತ್ತಾರೆ. ಅವರು ತಮ್ಮ ಪತ್ನಿಯನ್ನು ದುಃಖಿಯಾಗಿ ನೋಡೋದಕ್ಕೆ ಇಷ್ಟ ಪಡೋದಿಲ್ಲ. ಕರ್ಕಾಟಕ ರಾಶಿಯ ಪುರುಷರಲ್ಲಿ ಪೋಷಣೆ ಮಾಡುವ, ಭಾವನಾತ್ಮಕವಾಗಿ ಅರ್ಥೈಸುವ ಹಾಗೂ ಸೂಕ್ಷ್ಮ ಗುಣವಿದೆ. ಇದಕ್ಕಾಗಿ ಇವರು ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಮೊದಲಿಗಿರ್ತಾರೆ.

ತುಲಾ ರಾಶಿ
ತುಲಾ ರಾಶಿಯ ಪುರುಷರು ವಿಶಾಲ ಹೃದಯವನ್ನು ಹೊಂದಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯ ಪತಿ ನಿಮ್ಮ ಬಾಳ ಸಂಗಾತಿಯಾದರೆ ನೀವು ತುಂಬಾನೇ ಅದೃಷ್ಟವಂತರು. ಅವರು ನಿಮಗೆ ಕೊಡುವಷ್ಟು ಪ್ರೀತಿಯನ್ನು ಬೇರ್ಯಾರು ಕೊಡೋದಕ್ಕೆ ಸಾಧ್ಯವಿಲ್ಲ. ಈ ರಾಶಿಯ ಪುರುಷರು ಪತ್ನಿಯನ್ನು ತುಂಬಾನೇ ಪ್ರೀತಿ ಹಾಗೂ ಕಾಳಜಿ ಮಾಡುತ್ತಾರೆ. ಹೀಗಾಗಿ ಇವರು ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಇವರು ಎರಡನೇ ಸ್ಥಾನದಲ್ಲಿರ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಪುರುಷರು ತಮ್ಮ ಪತ್ನಿಯ ಜೊತೆಗೆ ಒಂದು ಭಾವನಾತ್ಮಕ ಬಾಂಡ್ ಹೊಂದಿರುತ್ತಾರೆ. ಒರ್ವ ಉತ್ತಮ ಪತಿಯಲ್ಲಿ ಇರಬೇಕಾದ ಎಲ್ಲಾ ಗುಣಗಳು ಇವರಲ್ಲಿ ಇರುತ್ತದೆ. ಬೇರೆ ರಾಶಿಯ ಪುರುಷರಿಗೆ ಹೋಲಿಕೆ ಮಾಡಿದ್ರೆ ಈ ರಾಶಿಯ ಪುರುಷರು ಪ್ರಾಮಾಣಿಕರು, ಪ್ರೋತ್ಸಾಹ ನೀಡುವ ಗುಣದವರು, ನಿಸ್ವಾರ್ಥಿಗಳು ಸಂಗಾತಿಯನ್ನು ರಕ್ಷಣೆ ಮಾಡುವ ಗುಣ ಇವರಲ್ಲಿರುತ್ತದೆ. ಹೀಗಾಗಿ ವೃಶ್ಚಿಕ ರಾಶಿಯ ಪುರುಷರು ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಮೂರನೇ ಸ್ಥಾನದಲ್ಲಿರುತ್ತಾರೆ.
ಮಕರ ರಾಶಿ
ಮಕರ ರಾಶಿಯ ಪುರುಷರು ಹೆಚ್ಚು ಪ್ರಾಯೋಗಿಕ ಮತ್ತು ವಾಸ್ತವಿಕವಾಗಿರುತ್ತಾರೆ. ಇವು ಎರಡು ಇವರಲ್ಲಿರುವ ಅದ್ಭುತ ಗುಣಗಳಾಗಿವೆ. ಇದರಿಂದ ಸ್ಥಿರ ದಾಂಪತ್ಯಕ್ಕೆ ತಳಪಾಯ ಹಾಕಲು ಸಾಧ್ಯವಾಗುತ್ತದೆ. ಈ ರಾಶಿಯ ಪುರುಷರು ಸಂಬಂಧವನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳೋದಿಲ್ಲ. ನಿಮ್ಮನ್ನು ಇವರು ರಾಣಿಯಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ಇವರು ಬೆಸ್ಟ್ ಪತಿ ಲಿಸ್ಟ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರ್ತಾರೆ.
ಮೀನ ರಾಶಿ
ಮೀನ ರಾಶಿಯ ಪುರುಷರು ಕೂಡ ಪತ್ನಿಯನ್ನು ತುಂಬಾನೇ ಪ್ರೀತಿಸುತ್ತಾರೆ ಹಾಗೂ ಅವರ ಕಾಳಜಿ ವಹಿಸುತ್ತಾರೆ. ಇವರು ಕೆಲವೊಂದು ಸಲ ತಮ್ಮ ತಾಳ್ಮೆ ಕಳೆದುಕೊಳ್ಳುತ್ತಾರೆ. ಆದರೆ ತಮ್ಮ ತಪ್ಪಿನ ಅರಿವಾದಾಗ ಮತ್ತೆ ಪತ್ನಿಯ ಬಳಿ ಬಂದು ತಪ್ಪು ಒಪ್ಪಿಕೊಳ್ಳುವ ಗುಣ ಹೊಂದಿದ್ದಾರೆ. ಪತ್ನಿಯನ್ನು ಇವರು ತುಂಬಾನೇ ಇಷ್ಟ ಪಡುತ್ತಾರೆ. ಹೀಗಾಗಿ ಇವರು ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಐದನೇ ಸ್ಥಾನದಲ್ಲಿರ್ತಾರೆ.
ವೃಷಭ ರಾಶಿ
ವೃಷಭ ರಾಶಿಯ ಪುರುಷರಿಗೆ ಜವಾಬ್ದಾರಿ ಹೆಚ್ಚು. ಇವರು ಸಂಪಾದನೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇದರಿಂದ ಇವರು ಐಷಾರಾಮಿ ಜೀವನ ನಡೆಸುತ್ತಾರೆ. ಮನೆ ಹಾಗೂ ಪತ್ನಿಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ವೃಷಭ ರಾಶಿಯ ಪತಿಗೆ ಜೊತೆಗೆ ನೀವು ಆರಾಮದಾಯಕ ಜೀವನ ನಡೆಸಬಹುದು. ಭಾವನಾತ್ಮಕವಾಗಿ ಇವರು ನಿಮಗೆ ಸಾಥ್ ನೀಡುತ್ತಾರೆ. ಕೆಲವೊಂದು ಸಲ ಪತ್ನಿ ಅವರಿಗೆ ಮಾರ್ಗದರ್ಶನ ನೀಡಬೇಕಾಗುತ್ತದೆ. ಇದರಿಂದ ನೀವು ಉತ್ತಮ ಪತಿಯಲ್ಲಿರುವ ಗುಣವನ್ನು ಹೊರ ತರಬಹುದುದಾಗಿದೆ. ಇವರು ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಆರನೇ ಸ್ಥಾನದಲ್ಲಿರ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯ ಪುರುಷರು ತಮ್ಮ ಪತ್ನಿಯನ್ನು ತುಂಬಾನೇ ಹಚ್ಚಿಕೊಂಡಿರುತ್ತಾರೆ. ಮನೆ ಹಾಗೂ ಕುಟುಂಬವೇ ಇವರ ಆಸ್ತಿ ಇದ್ದ ಹಾಗೆ. ಇವರು ನಿಮ್ಮನ್ನು ತುಂಬಾನೇ ಪ್ರೀತಿ ಮಾಡುತ್ತಾರೆ, ಪ್ರಾಮಾಣಿಕರಾಗಿರ್ತಾರೆ. ಆದರೆ ಪತ್ನಿಗೆ ಭಾವನಾತ್ಮಕವಾಗಿ ಸ್ಪಂದಿಸೋದು ಹೇಗೆ ಅನ್ನೋದು ಇವರಿಗೆ ಗೊತ್ತಿರೋದಿಲ್ಲ. ಹೀಗಾಗಿ ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಏಳನೇ ಸ್ಥಾನದಲ್ಲಿರ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯ ಪುರುಷರೊಂದಿಗೆ ಪತ್ನಿಯು ಭಾವನಾತ್ಮಕವಾಗಿ ಸಂಬಂಧ ಹೊಂದುವುದು ತುಂಬಾನೇ ಮುಖ್ಯವಾಗಿದೆ. ಇಲ್ಲದಿದ್ದರೆ ಅದನ್ನು ಅವರು ಬೇರೆ ಕಡೆ ಹುಡುಕುತ್ತಾರೆ. ಮಿಥುನ ರಾಶಿಯವರು ಪತ್ನಿಯೇ ತನಗೆ ಭಾವನಾತ್ಮಕವಾಗಿ ಸ್ಪಂದಿಸಲಿ ಎಂದು ಕಾಯುತ್ತಾರೆ. ಯಾವಾಗ ಪತ್ನಿಯಿಂದ ಭಾವನಾತ್ಮಕ ಪ್ರೋತ್ಸಾಹ ಸಿಗುವುದಿಲ್ಲವೋ ಆಗ ಬೇರೆ ಕಡೆ ವಾಲುತ್ತಾರೆ. ಆದರೆ ಇವರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿರ್ತಾರೆ. ಹೀಗಾಗಿ ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಎಂಟನೇ ಸ್ಥಾನದಲ್ಲಿರ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಪುರುಷರು ಜೀವನದಲ್ಲಿ ತುಂಬಾನೇ ಚೆನ್ನಾಗಿ ಸೆಟಲ್ ಆಗಿರುತ್ತಾರೆ. ಹಾಗಂತ ಪತ್ನಿ ಅವರ ಜೊತೆಗೆ ತುಂಬಾ ಚೆನ್ನಾಗಿರ್ತಾಳೆ ಎಂದು ಹೇಳೋದಿಕ್ಕಾಗೋದಿಲ್ಲ. ಆದರೆ ಇವರು ಪ್ರಾಮಾಣಿಕರು ಹಾಗೂ ಕುಟುಂಬವನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ಹೀಗಾಗಿ ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರ್ತಾರೆ.
ಮೇಷ ರಾಶಿ
ಪತ್ನಿಗೆ ಅಡ್ವೆಂಚರ್ ಎಂದರೆ ತುಂಬಾನೇ ಇಷ್ಟ ಇರುತ್ತದೆ. ಆದರೆ ಮೇಷ ರಾಶಿಯ ಪುರುಷರಿಗೆ ಅಡ್ವೆಂಚರ್ ಅಷ್ಟೊಂದು ಇಷ್ಟ ಆಗೋದಿಲ್ಲ. ಹೀಗಿದ್ದಾಗ ನಿಮಗೆ ಅವರ ಜೊತೆಗೆ ಎಂಜಾಯ್ ಮಾಡೋದಕ್ಕೆ ಆಗೋದಿಲ್ಲ. ಒಂದು ವೇಳೆ ಪತ್ನಿಯು ಅವರ ಗುಣವನ್ನೇ ಹೊಂದಿದ್ದರೆ ಪರವಾಗಿಲ್ಲ. ಕೆಲವೊಂದು ಪತ್ನಿಗಾಗಿ ಇವರು ಇಷ್ಟವಿಲ್ಲದಿದ್ದರೂ ಆ ಕೆಲಸ ಮಾಡುತ್ತಾರೆ. ಮೇಷ ರಾಶಿಯ ಪುರುಷರು ಬೇಸರ ಗೊಂಡಾಗ ಅಥವಾ ಖಿನ್ನತೆಗೆ ಒಳಗಾದಾಗ ಯಾರೊಂದಿಗೂ ಬೆರೆಯೋದಕ್ಕೆ ಇಷ್ಟ ಪಡೋದಿಲ್ಲ. ಹೀಗಾಗಿ ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಹತ್ತನೇ ಸ್ಥಾನದಲ್ಲಿರ್ತಾರೆ.
ಕುಂಭ ರಾಶಿ
ಕುಂಭ ರಾಶಿಯ ಪುರುಷರು ಬೆಸ್ಟ್ ಪತಿಯ ಲಿಸ್ಟ್‌ನಲ್ಲಿ ಕೊನೆಯ ಸ್ಥಾನದಲ್ಲಿ ಯಾಕಿರುತ್ತಾರೆ ಎಂದರೆ ಮೊದಲನೇಯದ್ದಾಗಿ ಇವರು ಸಂಗಾತಿಗೆ ಪ್ರಾಮಾಣಿಕರಾಗಿರೋದಿಲ್ಲ. ಎರಡನೇಯದಾಗಿ ಇವರು ಭಾವನಾತ್ಮಕ ಜೀವಿಗಳು ಅಲ್ಲ. ಇವರು ತಮ್ಮ ಭಾವನೆಗಳನ್ನು ಕೂಡ ಪತ್ನಿಯ ಜೊತೆಗೆ ಹಂಚಿಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ಬದಲಾಗಿ ಅವರು ಅಂದುಕೊಳ್ಳುತ್ತಾರೆ ನೀವು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತೀರಾ ಎಂದು. ಅವರು ಪ್ರೀತಿ ತೋರಿಸುತ್ತಾರೆ. ಆದರೆ ಅವರಿಗೆ ಅದನ್ನು ಯಾವ ರೀತಿ ಎಕ್ಸ್‌ಪ್ರೆಸ್ ಮಾಡೋದು ಅಂತ ಗೊತ್ತಾಗೋದಿಲ್ಲ.
ಧನು ರಾಶಿ
ಧನು ರಾಶಿಯ ಪುರುಷರು ಉತ್ಸಾಹದಿಂದಿರುತ್ತಾರೆ. ಪತ್ನಿಯನ್ನು ಖುಷಿ ಪಡಿಸೋದಕ್ಕೆ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಸಮಸ್ಯೆ ಏನೆಂದರೆ ಇವರಿಗೆ ಪ್ರೀತಿಯಲ್ಲಿ ಪ್ರಾಮಾಣಿಕತೆ ತೋರುವುದೇ ಕಷ್ಟ. ಹಾಗಂತ ಧನು ರಾಶಿಯ ಎಲ್ಲಾ ಪುರುಷರು ಮೋಸ ಮಾಡುತ್ತಾರೆ ಅಂತ ಹೇಳೋದಿಕ್ಕಾಗೋದಿಲ್ಲ. ಹೀಗಾಗಿ ಬೆಸ್ಟ್ ಪತಿ ಲಿಸ್ಟ್‌ನಲ್ಲಿ ಇವರು ಕೊನೆಯ ಸ್ಥಾನದಲ್ಲಿರುತ್ತಾರೆ.
ನಾವು ಹೇಳಿರೋ ಈ ಗುಣಗಳು ಆಯಾ ರಾಶಿಯ ಎಲ್ಲಾ ಪುರುಷರಲ್ಲೂ ಇರುತ್ತೆ ಅಂತ ಹೇಳೋದಿಕ್ಕಾಗಲ್ಲ. ಆದರೆ ಹೆಚ್ಚಿನ ಜನ ಇದೇ ಗುಣವನ್ನು ಹೊಂದಿರುತ್ತಾರೆ.



Click it and Unblock the Notifications
