Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರೇಮಿಗಳ ದಿನಕ್ಕೆ ಬೆಸ್ಟ್ ಗಿಫ್ಟ್: 1 ಸಾವಿರ ರೂ. ಒಳಗೆ ಈ ಉಡುಗೊರೆ ಸಿಗುತ್ತೆ, ಬೆಸ್ಟ್ ಯಾವುದು ಗೊತ್ತಾ?
ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನ ಆಚರಿಸೋದು ನೋಡಬಹುದು. ಇಡೀ ವಾರ ಪ್ರೇಮಿಗಳಿಗಾಗಿ ಮೀಸಲಾಗಿರುವ ದಿನಗಳಿವೆ. ಒಂದೊಂದು ದಿನ ಒಂದೊಂದು ರೀತಿಯ ಆಚರಣೆಗಳ ನೋಡಬಹುದು. ವಿಶೇಷವಾಗಿ ಈ ವಾರದಲ್ಲಿ ಹಲವು ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಒಂದೊಂದು ದಿನ ಒಂದೊಂದು ಆಚರಣೆಯಲ್ಲಿ ಯುವ ಪ್ರೇಮಿಗಳು ಭಾಗಿಯಾಗೋದು ನೋಡಬಹುದು.
ಪ್ರತಿ ವರ್ಷ ಪ್ರಪಂಚದಾದ್ಯಂತದ ಜನರು ತಮ್ಮ ವಿಶೇಷ ವ್ಯಕ್ತಿ ಅಥವಾ ತಮ್ಮ ಪ್ರೀತಿಪಾತ್ರರೊಡನೆ ತಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಲು ಈ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನವಾಗಿ ಆಚರಿಸಿದರೂ ಅದಕ್ಕೂ ಮುನ್ನ ಒಂದು ವಾರ ಹಲವು ರೀತಿಯ ಆಚರಣೆಗಳ ಕಾಣಬಹುದು. ಹಾಗೆ ಈ ಸಮಯದಲ್ಲಿ ತಮ್ಮ ಪ್ರೀತಿ ಪಾತ್ರರ ಭೇಟಿಯಾಗುವುದು, ಗಿಫ್ಟ್ ನೀಡುವುದು, ಪ್ರೇಮ ನಿವೇದನೆ ಮಾಡಿಕೊಳ್ಳುವುದು ನೋಡಬಹುದು.

ಅದರೆ ಈ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಯಾವ ರೀತಿಯ ಗಿಫ್ಟ್ ನೀಡಬೇಕು ಎಂಬ ಗೊಂದಲದಲ್ಲಿ ನೀವಿದ್ದರೆ ನಾವಿಲ್ಲಿ ಕೇವಲ 1 ಸಾವಿರ ರೂಪಾಯಿ ಒಳಗೆ ಸಿಗುವಂತಹ ವಿಭಿನ್ನ ರೀತಿಯ ಗಿಫ್ಟ್‌ಗಳ ಕುರಿತಾಗಿ ಹೇಳಲಿದ್ದೇವೆ, ಇವನ್ನು ನೀವು ಗಿಫ್ಟ್ ಸೆಂಟರ್‌ನಿಂದ ಇಲ್ಲವೆ ಆನ್‌ಲೈನ್ ಶಾಪಿಂಗ್ ಆಪ್‌ಗಳ ಮೂಲಕ ಆರ್ಡರ್ ಮಾಡಿ ನಿಮ್ಮ ಪ್ರೀತಿ ಪಾತ್ರರಿಗೆ ಸರ್ಪ್ರೈಸ್ ನೀಡಬಹುದು.
ಸ್ಮಾರ್ಟ್ ಗ್ಯಾಜೆಟ್‌ಗಳು
ನಿಮ್ಮ ಪ್ರೀತಿಯ ಗೆಳಯ ಅಥವಾ ಗೆಳತಿಗೆ ಇಷ್ಟವಾಗುವಂತಹ ಸ್ಮಾರ್ಟ್ ಗ್ಯಾಜೆಟ್ ಅನ್ನು ಈ ಸಮಯದಲ್ಲಿ ಗಿಫ್ಟ್ ಆಗಿ ನೀವು ನೀಡಬಹುದು. ಅದ್ರಲ್ಲೂ ಸ್ಮಾರ್ಟ್ ಗ್ಯಾಜೆಟ್‌ಗಳು ಕೈಗೆಟುಕುವ ದರದಲ್ಲಿ ಸಿಗುತ್ತದೆ. ಹಾಗೆ ಆನ್‌ಲೈನ್‌ನಲ್ಲಿ ಪ್ರೇಮಿಗಳ ದಿನಕ್ಕೆಂದೇ ವಿಶೇಷ ಆಫರ್‌ನಲ್ಲಿ ಈ ಗಿಫ್ಟ್‌ಗಳು ಸಿಗುತ್ತವೆ, ಮುಖ್ಯವಾಗಿ ಸ್ಮಾರ್ಟ್ ವಾಚ್, ಸ್ಪೀಕರ್, ಬ್ಲೂಟೂತ್ ಹೆಡ್‌ಸೆಟ್, ಸ್ಮಾರ್ಟ್ ರಿಂಗ್, ಅನಾಲಾಗ್ ವಾಚ್ ಈ ಸಮಯದಲ್ಲಿ ಗಿಫ್ಟ್ ಆಗಿ ನೀಡಬಹುದು.
ಬಟ್ಟೆಗಳು
ನೀವು ಇಷ್ಟಪಟ್ಟ ವ್ಯಕ್ತಿಗೆ ಬಹಳ ಪ್ರಿಯವಾದ ಬಟ್ಟೆಯನ್ನು ಉಡುಗೊರೆಯಾಗಿ ನೀಡಬಹುದು. 1 ಸಾವಿರದೊಳಗೆ ಅಥವಾ ಸ್ವಲ್ಪ ದುಬಾರಿಯಾದರು ಉತ್ತಮ ಬ್ರಾಂಡ್ ಹಾಗೆ ಸ್ಟೈಲಿಶ್ ಆದ ಬಟ್ಟೆಯನ್ನು ಅವರಿಗೆ ನೀಡಬಹುದು. ಇದು ಸದಾ ಕಾಲ ನೆನಪಿನಲ್ಲಿ ಉಳಿಯುವ ಗಿಫ್ಟ್ ಎಂದು ಹೇಳಲಾಗುತ್ತದೆ.
ಫ್ಯಾನ್ಸಿ ಪೆಂಡೆಂಟ್ ಹಾಗೂ ಕೀ ಚೈನ್
ಆನ್‌ಲೈನ್ ಸ್ಟೋರ್ ಆಗಿರಲಿ ಅಥವಾ ಆಫ್‌ಲೈನ್ ಗಿಫ್ಟ್ ಸೆಂಟರ್‌ನಲ್ಲಿ ಎಲ್ಲರ ಗಮನ ಸೆಳೆಯುವುದು ಈ ಫ್ಯಾನ್ಸಿ ಪೆಂಡೆಂಟ್ ಹಾಗೂ ಕೀ ಚೈನ್‌ಗಳು. ಒಂದಕ್ಕಿಂತ ಒಂದು ಅದ್ಭುತ ಡಿಸೈನ್‌ನಿಂದ ಮಾಡಲಾಗಿರುವ ಇವುಗಳು ಎಲ್ಲರ ಗಮನ ಸೆಳೆಯುವುದು ಪಕ್ಕ. ಹಾಗೆ ಅದ್ರಲ್ಲೂ ಅಕ್ಷರಗಳು, ಹೆಸರುಗಳ ರಚನೆ ಇರುವ ಪೆಂಡೆಂಡ್, ಒಲೆಗಳನ್ನು ಗಿಫ್ಟ್ ಆಗಿ ನೀಡಬಹುದು.
ನಿಮ್ಮದೇ ಸ್ಮಾರ್ಟ್ ಆರ್ಟ್
ನಿಮ್ಮಿಬ್ಬರ ಫೋಟೋವನ್ನು ಬಳಸಿ ಈ ಹಿಂದೆ ಎಐ ಮೂಲಕ ನ್ಯಾನೋ ಬನಾನಾ ಅಥವಾ ಸ್ಮಾರ್ಟ್ ಆರ್ಟ್ ಮೂಲಕ ಚಿಕ್ಕ ಫ್ರೋಟೋ ಫ್ರೇಮ್ ಮಾಡಿಸಿರಬಹುದು. ಈಗ ಅದೇ ರೀತಿಯಾಗಿ ನಿಮ್ಮಿಬ್ಬರ ಫೋಟೋವನ್ನು ಬಳಸಿ ಚಿಕ್ಕ 3ಡಿ ಆರ್ಟ್ ಮಾಡಿ ಮನೆಗೆ ಕಳುಹಿಸುತ್ತಾರೆ. ಇಂತಹ ಹಲವು ವೆಬ್‌ಸೈಟ್‌ಗಳು ಈಗ ಈ ಕಾರ್ಯ ಮಾಡುತ್ತಿವೆ, ನೀವು ಕೂಡ ಇದನ್ನು ವಿಶೇಷ ಗಿಫ್ಟ್ ರೀತಿ ನೀಡಬಹುದು.
ಫೋಟೋ ಇರುವ ಲ್ಯಾಂಪ್
ನಿಮ್ಮದೇ ಫೋಟೋ ಇರುವಂತಹ ಲ್ಯಾಂಪ್ ಅನ್ನು ಸಹ ನೀಡಬಹುದು. ಇದು ಸ್ವಿಚ್ ಆನ್ ಮಾಡಿದಾಗ ಫೋಟೋ ಬಹಳ ಚೆನ್ನಾಗಿ ಹೊಳೆಯುತ್ತವೆ. ಇದನ್ನು ಪರ್ಸನಲ್ ಆಗಿ ಕಸ್ಟಮೈಸ್ ಮಾಡಿ ನೀಡುತ್ತಾರೆ. ಇದು ವ್ಯಾಲೆನ್‌ಟೈನ್ ದಿನಗಳಲ್ಲಿ ನೀಡಲು ಬೆಸ್ಟ್ ಗಿಫ್ಟ್ ಆಗಿರಲಿದೆ.



Click it and Unblock the Notifications