Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಆಡಂಬರ ಮದುವೆ ನಡುವೆ ಬೆಂಗಳೂರಿನ ಈ ಜೀರೋ ವೇಸ್ಟ್ ಮದುವೆ ವೀಡಿಯೋ ತುಂಬಾನೇ ಗಮನ ಸೆಳೆದಿದೆ
ಬೆಂಗಳೂರಿನಲ್ಲಿ ನಡೆದ ಜೀರೋ ವೇಸ್ಟ್ ಮದುವೆ ಇದೀಗ ಎಲ್ಲರ ಗಮನ ಸೆಳೆದಿದೆ, ಆಡಂಬರದ ಮದುವೆಗಳ ನಡುವೆ ಈ ರೀತಿಯ ಆದರ್ಶದ ಮದುವೆ ಬಗ್ಗೆ ಜನರು ತುಂಬಾನೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮದುವೆ ಎಂದರೆ ಆಡಂಬರವಾಗಿ ಮಾಡಬೇಕು ಎನ್ನುವವರ ಮಧ್ಯ ಭಿನ್ನ ಆಲೋಚನೆ
ಶ್ರಿಮಂತರು ತಮ್ಮಲ್ಲಿರುವ ಶೇ. 1ರಷ್ಟು ಹಣವನ್ನು ಮದುವೆಗೆ ಖರ್ಚು ಮಾಡುತ್ತಾರೆ, ಅದು ನಮಗೆ ತುಂಬಾನೇ ಆಡಂಬರವಾಗಿ ಕಾಣುತ್ತದೆ, ಉದಾಹರಣೆಗೆ ಮುಕೇಶ್ ಅಂಬಾನಿ ಮಕ್ಕಳ ಮದುವೆ.

ಆದರೆ ನಮ್ಮಂಥ ಮಧ್ಯಮವರ್ಗದವರು ಸೇವಿಂಗ್ಸ್ ಜೊತೆಗೆ ಉಸಿರಾಡಲು ಕಷ್ಟವಾಗುವಷ್ಟು ಸಾಲ ಮಾಡಿ ಮದುವೆ ಮಾಡುತ್ತೇವೆ, ನಮ್ಮ ಸುತ್ತ-ಮುತ್ತ ಇರುವವರು ಅಚ್ಚರಿ ಪಡಬೇಕು, ಆ ರೀತಿ ಮದುವೆ ಮಾಡ್ತೀನಿ ಎಂದು ಅದ್ಧೂರಿಯಾಗಿ ಮದುವೆ ಮಾಡ್ತೀನಿ ಎಂದು ಹೇಳಿ ಕೊನೆಗೆ ಸಾಲದಿಂದಾಗಿ ಇದ್ದ ಖುಷಿಯನ್ನು ಕಳೆದುಕೊಳ್ಳಬೇಕಾಗುತ್ತೆ.
ಆದರೆ ಬೆಂಗಳೂರಿನಲ್ಲಿ ಒಂದು ಮದುವೆಯಾಗಿದೆ, ಇದು ಜೀರೋ ವೇಸ್ಟ್ ಕಾನ್ಸೆಪ್ಟ್‌ನಲ್ಲಿ ಆದ ಮದುವೆ, ಈ ಮದುವೆಯಲ್ಲಿ ದುಡ್ಡು ಹಾಕಿದ ಒಂದು ವಸ್ತುವೂ ಹಾಳಾಗಬಾರದು ಎಂಬ ಕಾಳಜಿ ಜೊತೆಗೆ ಪರಿಸರ ಕಾಳಜಿ ಕೂಡ ಸೇರಿಕೊಂಡಿದೆ. ಈ ಮದುವೆಯಲ್ಲಿ ಪ್ಲಾಸ್ಟಿಕ್ ಬಳಸಿಲ್ಲ, ಇನ್ನು ಮಂಟಪಕ್ಕೆ ಬಾಳೆಗಿಡ, ಕಬ್ಬು ಇವುಗಳನ್ನು ಬಳಸಲಾಗಿದೆ, ಊಟವನ್ನು ಬಾಳೆ ಎಲೆಯಲ್ಲಿ ಬಡಿಸಲಾಗಿದೆ.
ಮಂಟಪ ಎಷ್ಟೊಂದು ಸೊಗಸಾಗಿದೆ
ಮಂಟಪವನ್ನು ಬಾಳೆ ದಿಂಡು ಹಾಗೂ ಕಬ್ಬು ಬಳಸಿ ಮಾಡಲಾಗಿದ್ದು ನೋಡಲು ಆಕರ್ಷಕವಾಗಿದೆ. ನಂತರ ಆ ಕಬ್ಬನ್ನು ದನಗಳಿಗೆ ಆಹಾರವನ್ನಾಗಿ ನೀಡಲಾಗಿದೆ. ಇನ್ನು ತಾಂಬೂಲ ಕೂಡ ಸೆಣಬಿನ ಕೈ ಚೀಲದಲ್ಲಿ ನೀಡಲಾಗಿದೆ. ಮಂಟಪವನ್ನು ತೆಂಗಿನ ಗರಿಯಿಂದ ಅಲಂಕರಿಸಲಾಗಿದೆ. ಅದರ ಮಾವಿನ ಎಲೆಯ ತೋರಣ... ಕುಡಿಯಲು ನೀರನ್ನು ಸ್ಟೀಲ್ ಲೋಟದಲ್ಲಿ ನೀಡಲಾಗಿದೆ. ಒಟ್ಟಿನಲ್ಲಿ ಈ ಮದುವೆಯನ್ನು ಪ್ಲಾಸ್ಟಿಕ್‌ರಹಿತವಾಗಿ ಮಾಡಲು ಎಲ್ಲಾ ಬಗೆಯ ಮುನ್ನೆಚ್ಚರಿಕೆವಹಿಸಿ ಈ ಮದುವೆ ಮಾಡಿದ್ದಾರೆ, ಇವರ ಪ್ಲ್ಯಾನಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.
ಮದುವೆಯಲ್ಲಿ ನೀಡುವ ಪ್ಲಾಸ್ಟಿಕ್ ಬಾಟಲಿಗೆ ಕಡಿವಾಣ ಹಾಕಿದರೆ ಒಳ್ಳೆಯದು
ಈಗ ಯಾವುದೇ ಸಮಾರಂಭಗಳಿಗೆ ಹೋದರೆ ನೀರಿನ ಬಾಟಲಿಯನ್ನು ನೀಡಲಾಗುವುದು. 1000 ಜನ ಸೇರುವ ಮದುವೆಯಲ್ಲಿ ಒಂದು 1500 ಬಾಟಲಿ ಬಳಕೆಯಾಗುವುದು, ಇಷ್ಟು ಪ್ಲಾಸ್ಟಿಕ್ ನಿಜವಾಗಲೂ ಪರಿಸರಕ್ಕೆ ಮಾರಕ, ಒಂದು ಮದುವೆಯಲ್ಲಿ ಪ್ಲಾಸ್ಟಿಕ್ ಬಾಟಲಿಯನ್ನು ನೀರು ನೀಡಿದಾಗ ಅದನ್ನು ನೋಡಿ ಮತ್ತೊರೂ ಅನುಸರಿಸುತ್ತಿದ್ದಾರೆ, ಆದರೆ ಇದರಿಂದ ಪರಿಸರಕ್ಕೆ ಉಂಟಾಗುತ್ತಿರುವ ನಷ್ಟದ ಬಗ್ಗೆ ಒಂದಿಷ್ಟೂ ಯೋಚಿಸುತ್ತಿಲ್ಲ.
ಊಟದ ತಟ್ಟೆ
ಪ್ಲಾಸ್ಟಿಕ್ ತಟ್ಟೆ ಬದಲಿಗೆ ಬಾಳೆಲೆಯಲ್ಲಿ ಆಹಾರ ಬಡಿಸಲಾಗಿದೆ. ಇದನ್ನು ದನಗಳಿಗೆ ನೀಡಬಹುದು, ಮಣ್ಣಿನಲ್ಲಿ ಬಿಸಾಡಿದರೆ ಮಣ್ಣಿಗೆ ಗೊಬ್ಬರ, ಬಾಳೆಲೆಯ ಆಹಾರ ರುಚಿ ಮಾತ್ರವಲ್ಲ, ಪರಿಸರಕ್ಕೆ ಹಾನಿ ಮಾಡುತ್ತಿಲ್ಲ ಎಂಬ ತೃಪ್ತಿ ಬೇರೆ.
ಪ್ರಜ್ಞಾವಂತ ಸಮಾಜ ಈ ಬಗ್ಗೆ ಯೋಚಿಸಬೇಕಾಗಿದೆ
ಹೌದು ನೀವು ನಿಮ್ಮ ಮನೆಯ ಮದುವೆಯಲ್ಲಿ ಈ ಬಗ್ಗೆ ಜಾಗ್ರತೆವಹಿಸಿದರೆ ಪರಿಸರಕ್ಕೆ ನಾವು ನೀಡುವ ದೊಡ್ಡ ಕೊಡಿಗೆಯಾಗಿದೆ. ಸ್ಟೀಲ್ ಲೋಟವನ್ನು ತೊಳೆದು ಇಡಬಹುದು, ಆದರೆ ಪ್ಲಾಸ್ಟಿಕ್ ಬಾಟಲಿ ಬಿಸಾಡುತ್ತೇವೆ, ಕೆಲವರು ಕಸದ ಬುಟ್ಟಿಗೆ ಕೂಡ ಹಾಕಲ್ಲ, ಸಿಕ್ಕಲ್ಲಿ ಬಿಸಾಡುತ್ತಾರೆ. ನಮ್ಮ ಪರಿಸರ ಯಾವ ರೀತಿ ಹಾಳಾಗುತ್ತಿದೆ ಅದರಿದಂದ ಉಂಟಾಗುತ್ತಿರುವ ತೊಂದರೆಗಳು ಇವುಗಳ ಬಗ್ಗೆ ನಮಗೆ ಈಗಾಗಲೇ ಗೊತ್ತಿದೆ. ಆದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದರೆ ಮುಂದೆ ಪ್ರಕೃತಿ ನೀಡುವ ಹೊಡೆತಕ್ಕೆ ಬದುಕುಳಿಯಲು ಸಾಧ್ಯವೇ. ಪರಿಸರ ದಿನಾಚರಣೆ ಜೂನ್5ಕ್ಕೆ ಮಾತ್ರ ಸೀಮಿತವಾಗಿರಬಾರದು, ಪ್ರತಿದಿನವೂ ಪ್ರಕೃತಿ ಬಗ್ಗೆ ಕಾಳಜಿವಹಿಸಬೇಕು.



Click it and Unblock the Notifications
