Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಕ್ರೈಸ್ಟ್ ಕಾಲೇಜ್ ಪ್ರೊಫೆಸರ್‌ಗೆ ಪ್ರಾಂಕ್ ಮಾಡಿದ ವಿದ್ಯಾರ್ಥಿಗಳು: ಸರ್ ರಿಯಾಕ್ಷನ್ ಮಾತ್ರ ಮಿಲಿಯನ್ಸ್ ಹಾರ್ಟ್ ಗೆದ್ದಿದೆ
ಬೆಂಗಳೂರಿನ ವಿದ್ಯಾರ್ಥಿಗಳು ತಮ್ಮ ಪ್ರೊಫೆಸರ್‌ಗೆ ಪ್ರಾಂಕ್ ಮಾಡಲು ಯೋಚಿಸುತ್ತಾರೆ, ಮಕ್ಕಳ ಪ್ರಾಂಕ್‌ಗೆ ಪ್ರೊಫೆಸರ್ ಕೊಟ್ಟ ರಿಯಾಕ್ಷನ್ ಇದೆಯಲ್ಲಾ? ಈ ರಿಯಾಕ್ಷನ್‌ಗೆ 35 ಮಿಲಿಯನ್ ವ್ಯೂವ್ಸ್ ಸಿಕ್ಕಿದೆ ಎಂದರೆ ತಮಾಷೆನಾ?"Pookie professor." ಎಂಬ ಕ್ಯಾಪ್ಷನ್ ಅಡಿಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದು ಈ ವೀಡಿಯೋ ವೈರಲ್ ಆಗಿದೆ.

ಆ ಪ್ರೊಫೆಸರ್ ಬಂದು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ನಡುವೆ ಜೋರು ಚರ್ಚೆ ನಡೆಯುತ್ತೆ, ಇದು ಪ್ರೊಫೆಸರ್ ಗಮನ ಸೆಳೆಯುತ್ತೆ, ಅಲ್ಲಗೆ ಅವರ ಪ್ಲ್ಯಾನ್ ವರ್ಕ್ ಆಯ್ತು ಎಂದು ಅವರಿಗೆ ಖುಷಿಯಾಗುತ್ತೆ. ಕ್ಲಾಸ್‌ರೂಂನಲ್ಲಿ ವಿದ್ಯಾರ್ಥಿಗಳ ವರ್ತನೆ ನೋಡಿ ಕೋಪಗೊಳ್ಳುವ ಬದಲಿಗೆ ಸಮಧಾನದಿಂದ ಅವರ ಬಳಿ ಏನು ವಿಷಯ? ಅಂತ ವಿಚಾರಿಸಿದಾಗ ಒಬ್ಬ ವಿದ್ಯಾರ್ಥಿನಿ ಇವರು ನನ್ನ ಮಾತು ಕೇಳುತ್ತನೇ ಇಲ್ಲ ("Sir, they are not even listening to me!") ಎಂದು ಹೇಳುತ್ತಾಳೆ.
you can sleep
ಹೀಗೆ ಹೇಳುವ ಮೂಲಕ ಪ್ರೊಫೆಸರ್‌ನ ಮತ್ತಷ್ಟು ಕನ್ಫ್ಯೂಸ್ ಮಾಡುವ ಪ್ರಯತ್ನ ಮಾಡುತ್ತಾಳೆ, ಅದಕ್ಕವರು ಏನು ವಿಷಯ ಎಂದು ಕೇಳಿದಾಗ ಇಂಗ್ಲಿಷ್‌ನಲ್ಲಿ 'You is sleep or you can sleep?' ಇದರಲ್ಲಿ ಯಾವುದು ಸರಿ ಎಂದು ಕೇಳುತ್ತಾಳೆ. ಅದಕ್ಕವರು you can sleep? ಎಂದು ಹೇಳುತ್ತಿದ್ದಂತೆ ಇಡೀ ಕ್ಲಾಸ್ ಮಲಗುವಂತೆ ನಟಿಸುತ್ತಾರೆ. ಆವಾಗ ಪ್ರೊಫೆಸರ್‌ಗೆ ಮಕ್ಕಳೇನೋ ಕಿತಾಪತಿ ಮಾಡುತ್ತಿದ್ದಾರೆ ಎಂದನಿಸುವುದು, ನೀವು ಸೋಷಿಯಲ್ ಎಕ್ಸ್‌ಪರಿಮೆಂಟ್ ಮಾಡ್ತಾ ಇದ್ದೀರಾ? ಎಂದು ಕೇಳುತ್ತಾರೆ, ನಂತರ I am there in reel ಎಂದು ಹೇಳುತ್ತಾ ಕೂತುಕೊಳ್ಳುವ ವೀಡಿಯೋ ವೈರಲ್ ಆಗುತ್ತಿದೆ, ಮಕ್ಕಳ ಪ್ರಾಂಕ್‌ಗೆ ಕೂಲ್ ಆಗಿ ರಿಯಾಕ್ಷನ್ ನೀಡಿದ ಪ್ರೊಫೆಸರ್ ವೀಡಿಯೋ ವೈರಲ್ ಆಗಿದೆ.
#WATCH The reaction of a professor in #Bengaluru's #ChristUniversity, to a prank pulled on him by the whole class has gone #viral and has amazed the internet. After all, how many professors give this kind of a reaction to a prank pulled on him/her? Watch the video to see... pic.twitter.com/n1ms0Smw2r
— Mojo Story (@themojostory) September 16, 2024
ಓದುಗರ ಗಮನಕ್ಕೆ (ಇಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್ ನಡುವಿನ ಸಂಭಾಷಣೆಯನ್ನು ಅವರು ಹೇಳಿದ ರೀತಿಯಲ್ಲಿ ನೀಡಿದ್ದೇವೆ, ನೀವು ನಿದ್ದೆ ಮಾಡಬಹುದು ಎಂಬುವುದನ್ನು ಇಂಗ್ಲಿಷ್‌ನಲ್ಲಿ ಹೇಳಬೇಕು, ಅದಕ್ಕೆ ಡೌಟು ಎಂದು ಪ್ರೊಫೆಸರ್‌ನ ಕೇಳುವುದು, ಒಂದು ತಪ್ಪು, ಒಂದು ಸರಿ ಹೇಳಿ ಇದರಲ್ಲಿ ಯಾವುದು ಸರಿ ಎಂದು ಕೇಳಿದಾಗ ಯು ಕ್ಯಾನ್ ಸ್ಲೀಪ್ ಎಂದು ಹೇಳುತ್ತಾರೆ, ಈ ಪ್ರಾಂಕ್ ವೀಡಿಯೋ ತುಂಬಾ ವೈರಲ್ ಆಗಿದೆ.
ಈ ವೀಡಿಯೋ ನೋಡಿದವರು ಪ್ರೊಫೆಸರ್ ಎಂದರೆ ಹೀಗಿರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ನಮ್ಮ ಪ್ರೊಫೆಸರ್ ಆದರೆ ಡಸ್ಟರ್‌ನಿಂದ ಪೆಟ್ಟ ಬೀಳುತ್ತಿತ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಏನೇ ಪ್ರೊಫೆಸರ್ ರಿಯಾಕ್ಷನ್ ಅಂತು ಮೆಚ್ಚಲೇಬೇಕು.
ಸರ್ ರಿಯಾಕ್ಷನ್ ನೋಡಿದರೆ ನಮ್ಮ ಮುಖದಲ್ಲಿಯೂ ನಗು ಮೂಡುತ್ತೆ
ಮೊದಲು ಮಕ್ಕಳು ಕ್ಲಾಸ್‌ನಲ್ಲಿ ಗಲಾಟೆ ಮಾಡಲಾರಂಭಿಸಿದಾಗ ಸಮಧಾನದಿಂದ ವಿಚಾರಿಸಿದ್ದು, ಇನ್ನು ಮಕ್ಕಳ ಡೌಟು ಅಂತೂ ಇನ್ನೂ ಸಿಲ್ಲಿ, ಅಷ್ಟು ದೊಡ್ಡ ಮಕ್ಕಳಿಗೆ ಇಷ್ಟೂ ಗ್ರಾಮರ್ ಗೊತ್ತಿಲ್ವಾ ಅನಿಸುವಷ್ಟು ಸಿಲ್ಲಿ ಪ್ರಶ್ನೆ, ಅದರೆ ಅದಕ್ಕೂ ಸಮಧಾನದಿಂದ ಉತ್ತರಿಸಿದ್ದಾರೆ. ಮಕ್ಕಳು ನಂತರ ರೀಲ್ಸ್ ಮಾಡುತ್ತಿದ್ದಾರೆ ಎಂದು ತಿಳಿದು ನಾನೂ ಇದ್ದೀನಿ ರೀಲ್ಸ್‌ನಲ್ಲಿ ಎಂದು ಹೇಳಿ ನಗುತ್ತಾ ಕೂರುತ್ತಾರೆ, ಈ ಸರ್ ಮಿಲಿಯನ್ ಹಾರ್ಟ್ಸ್ ಗೆದ್ದಿದ್ದಾರೆ.
ಈ ವೀಡಿಯೋ ನೋಡಿದಾಗ ನಿಮಗೂ ಇಷ್ಟವಾಗಿರಬೇಕು ಅಲ್ವಾ? ಪ್ಲ್ಯಾನ್ ಮಾಡಿದ ಮಕ್ಕಳಿಗೂ ಸರ್ ಕೂಲ್ ಆಗಿ ರಿಯಾಕ್ಷನ್ ಮಾಡ್ತಾರೆ ಅಂತ ಐಡಿಯಾ ಇರ್ಲಿಕ್ಕಿಲ್ಲ.



Click it and Unblock the Notifications