Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿದ್ರೆ ಮಾಡುತ್ತಲೇ ₹9 ಲಕ್ಷ ಗಳಿಸಿದ ಬೆಂಗಳೂರು ಯುವತಿ..! ಹೇಗೆ ಗೊತ್ತಾ?
ನಾವು ಜಗತ್ತಿನಲ್ಲಿ ಎಂತಹ ವಿಚಿತ್ರ ಹಾಗೂ ವಿಭಿನ್ನ ಕಾರಣಗಳು ಮತ್ತು ಕೆಲಸಗಳಿಂದ ಜನರು ಹಣ ಗಳಿಸುವುದನ್ನು ನೋಡಿದ್ದೇವೆ. ಹಣ ಯಾರಿಗೂ ಕೂಡ ಸುಮ್ಮನೆ ಸಿಗುವ ವಸ್ತು ಅಲ್ಲೇ ಅಲ್ಲ. ಅಲ್ಲಿ ಕಷ್ಟಪಡದೆ ಏನು ಸಿಗುವುದಿಲ್ಲ. ಆದ್ರೆ ಇಲ್ಲೊಬ್ಬ ಯುವತಿ ಮಾತ್ರ ಯಾವುದೇ ರೀತಿಯಲ್ಲಿ ಕಷ್ಟ ಪಡೆದೆ, ಬೆವರು ಸುರಿಸದೆ, ಕಲಸವನ್ನೇ ಮಾಡದೆ ಹಣ ಮಾಡುವ ದಾರಿ ಕಂಡುಕೊಂಡಿದ್ದಾಳೆ.
ಹಾಗಾದ್ರೆ ಕೆಲಸವನ್ನೇ ಮಾಡದೆ ಹಣ ಮಾಡುವ ದಾರಿ ಆದರೂ ಯಾವುದು? ಆಕೆ ಕೆಲಸ ಮಾಡದೆ ನಿದ್ರೆ ಮಾಡುತ್ತಲೇ 9 ಲಕ್ಷ ರೂಪಾಯಿ ದುಡಿದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾಳೆ. ಹೌದು ಆಕೆ ನಿತ್ಯ 8ರಿಂದ 9 ಗಂಟೆ ಮಲಗುವ ಮೂಲಕ 9 ಲಕ್ಷ ರೂಪಾಯಿ ಗಳಿಸಿದ್ದಾಳೆ. ಬೆಂಗಳೂರಿನ ಈ ಯುವತಿಯ ಕಾರ್ಯ ಈಗ ಭಾರೀ ವೈರಲ್ ಆಗಿದೆ.

ಹಾಗಾದ್ರೆ ಅದು ಯಾವ ಕೆಲಸ, ನಿದ್ರೆ ಮಾಡಿದರೆ ಹಣ ನೀಡುರುವವರು ಯಾರು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ ನೋಡಿ. ಇದೊಂದು ನಿದ್ರಿಸುವ ಸ್ಪರ್ಧೆ, ಗ್ರೇಟ್ ಇಂಡಿಯನ್ ಸ್ಲೀಪ್ ಎಂಬ ಸ್ಪರ್ಧೆಯನ್ನು ವೇಕ್ ಪಿಟ್ ಎಂಬ ಸಂಸ್ಥೆ ಆಯೋಜಿಸುತ್ತದೆ. ವೇಕ್ ಫಿಟ್ ಎಂಬುದು ಅತ್ಯುತ್ತಮ ಬೆಡ್‌ಗಳನ್ನು ತಯಾರಿಸುವ ಕಂಪನಿಯಾಗಿದೆ.
ಈ ಕಂಪನಿ ಆಯೋಜಿಸಿದ್ದ ಗ್ರೇಟ್ ಇಂಡಿಯನ್ ಸ್ಲೀಪ್ ಎಂಬ ಸ್ಪರ್ಧೆಯಲ್ಲಿ ಸಾಯಿಶ್ವರಿ ಪಾಟೀಲ್ ಎಂಬಾಕೆ ಸ್ಪೀಪಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟು ಆಯ್ಕೆ ಮಾಡಲಾಗಿದ್ದ 12 ಇಂಟರ್ನ್‌ಗಳಲ್ಲಿ ಪಾಟೀಲ್ ಕೂಡ ಒಬ್ಬರಾಗಿದ್ದರು. ಈ ಸ್ಪರ್ಧೆಯಲ್ಲಿ ಈ ವೇಕ್ ಫಿಟ್ ಸಂಸ್ಥೆಯ ಬೆಡ್‌ನಲ್ಲಿ ಮಲಗುವುದೇ ಸವಾಲು ಆಗಿದೆ. ಯಾರು ಎಷ್ಟು ಗಂಟೆ ನಿದ್ರಿಸುತ್ತಾರೆ, ಎಷ್ಟು ಗಾಢ ನಿದ್ರೆಗೆ ಜಾರುತ್ತಾರೆ, ಬೆಳಗ್ಗೆ ಎಷ್ಟು ಆಕ್ಟೀವ್ ಆಗುತ್ತಾರೆ, ನಿದ್ರೆಯಿಂದ ಅವರಲ್ಲಿ ಆಗಿರುವ ಬದಲಾವಣೆಯನ್ನು ಅವಲೋಕಿಸಲು ತೀರ್ಪುಗಾರರು ಕೂಡ ಇರುತ್ತಾರೆ.
ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರೀಮಿಯಂ ಹಾಸಿಗೆ ಮತ್ತು ಅವರ ನಿದ್ರೆಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸುಧಾರಿಸಲು ಟ್ರ್ಯಾಕರ್ ಅನ್ನು ನಿಡಲಾಗುತ್ತದೆ. ಸ್ಪರ್ಧಿಗಳು ತಮ್ಮ ನಿದ್ರೆಯ ಮಟ್ಟ, ಅವರ ನಿದ್ರೆ ಸುಧಾರಿಸಲು ತಜ್ಞರು ಸಲಹೆಗಳ ನೀಡುತ್ತಾರೆ. ಗ್ರೇಟ್ ಇಂಡಿಯನ್ ಸ್ಲೀಪ್‌ನಲ್ಲಿ ಈದು ಮೂರನೇ ಸೀಸನ್ ಆಗಿದೆ. ಈವರೆಗೆ 1 ಮಿಲಿಯನ್‌ಗಿಂತಲೂ ಹೆಚ್ಚು ಅರ್ಜಿದಾರರನ್ನು ಆಕರ್ಷಿಸಿದೆ. ಹಾಗು 51 ಇಂಟರ್‌ನಗಳಿಗೆ ಈಗಾಗಲೇ 63 ಲಕ್ಷ ರೂಪಾಯಿಯನ್ನು ವೇತನದಂತೆ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಭಾರತದಲ್ಲಿ ಲಕ್ಷಾಂತರ ಮಂದಿ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಅವರೆಲ್ಲರಿಗೂ ನಿತ್ಯ 8 ಗಂಟೆ ನಿದ್ರೆ ಮಾಡಲಾಗುತ್ತಲ್ಲವಂತೆ. ದೀರ್ಘ ಕೆಲಸದ ಸಮಯ, ಕಳಪೆ ನಿದ್ರೆಯ ವಾತಾವರಣ, ಒತ್ತಡ ಮತ್ತು ದೈಹಿಕ ಚಟುವಟಿಕೆಯ ಕೊರತೆ ಸೇರಿ ಇದಕ್ಕೆ ಹಲವು ಕಾರಣಗಳಿವೆ ಎಂದು ಸಂಸ್ಥೆ ತಿಳಿಸಿದೆ.
ಈ ಸ್ಪರ್ಧೆಯಲ್ಲಿ ವಿಜೇತಳಾಗಿ 9 ಲಕ್ಷ ರೂಪಾಯಿ ಗೆದ್ದ ಪಾಟೀಲ್ ನಿದ್ರೆ ಕುರಿತು ಮಾತನಾಡಿ, "ಉತ್ತಮ ಸ್ಕೋರ್ ಕಾಪಾಡಿಕೊಳ್ಳಲು, ನಿಮ್ಮ ನಿದ್ರೆ ಮತ್ತು ಎಚ್ಚರಗೊಳ್ಳುವ ಸಮಯಕ್ಕೆ ನೀವು ಸ್ಥಿರವಾಗಿರಬೇಕು, ಮೊಬೈಲ್ ಬಳಸದೆ ಇರುವುದು, ಟಿವಿಯಿಂದ ದೂರ ಇರುವುದು ಮಾಡಬೇಕು ಆದ್ರೆ ಇದೆಲ್ಲವೂ ಮಾಡುವುದು ಕಷ್ಟ. ಆದರೆ ಇದು ಒಳ್ಳೆಯ ಫಲಿತಾಂಶ ನೀಡುತ್ತದೆ ಎಂದಿದ್ದಾರೆ.
"ಈ ಇಂಟರ್ನ್‌ಶಿಪ್ ಶಿಸ್ತುಬದ್ಧ ಸ್ಲೀಪರ್ ಆಗುವುದು ಹೇಗೆ ಎಂದು ನನಗೆ ಕಲಿಸಿದೆ. ನನ್ನ ನಿದ್ರೆಯ ಮಾರ್ಕ್ಸ್ ಅನ್ನು ಸುಧಾರಿಸುವ ಆಲೋಚನೆ ಒತ್ತಡದಿಂದ ಕೂಡಿತ್ತು. ಆದ್ರೆ ನೀವು ನಿದ್ರೆಗೆ ಹೇಗೆ ತಯಾರಿ ನಡೆಸುತ್ತೀರಿ, ಆ ಪರಿಸರ ನಿಮ್ಮ ನಿದ್ರೆಯ ಗಾಢತೆ ನಿರ್ಧರಿಸುತ್ತದೆ ಎಂದು ಆಕೆ ತಿಳಿಸಿದ್ದಾಳೆ.



Click it and Unblock the Notifications
