Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಈ ವಸ್ತುಗಳು ಇದ್ದರೆ ಶುಭವಲ್ಲ!
ದಾಂಪತ್ಯ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯ ಬಾಳಿನಲ್ಲಿ ಅತೀ ಮುಖ್ಯವಾದ ಘಟ್ಟ. ದಾಂಪತ್ಯ ಜೀವನ ಚೆನ್ನಾಗಿದ್ದರೆ ಮಾತ್ರ ಒರ್ವ ವ್ಯಕ್ತಿಯ ಬಾಳಿನಲ್ಲಿ ಖುಷಿ, ನೆಮ್ಮದಿ ಹೆಚ್ಚಾಗೋದಕ್ಕೆ ಸಾಧ್ಯ. ಕೆಲವೊಂದು ಸಲ ವಾಸ್ತು ದೋಷವಿದ್ದರೂ ಕೂಡ ದಾಂಪತ್ಯದಲ್ಲಿ ಕಲಹಗಳು ನಡೆಯುವ ಸಾಧ್ಯತೆ ಇರುತ್ತದೆ. ಅದ್ರಲ್ಲೂ ಮುಖ್ಯವಾಗಿ ನಾವು ಮಲಗುವ ಕೋಣೆಯ ವಾಸ್ತು ಸರಿಯಾಗಿ ಇರಬೇಕು. ಇಲ್ಲದಿದ್ದರೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತದೆ.

ನಮ್ಮ ಮಲಗುವ ಕೋಣೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು. ಒಂದು ವೇಳೆ ಆ ವಸ್ತುಗಳು ಇದ್ದರೆ ನಿಮ್ಮ ದಾಂಪತ್ಯದಲ್ಲಿ ನೆಮ್ಮದಿ ಅನ್ನೋದೇ ಇರೋದಿಲ್ಲ. ಇದರಿಂದ ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಅಷ್ಟಕ್ಕೂ ಯಾವೆಲ್ಲಾ ವಸ್ತುಗಳು ಮಲಗುವ ಕೋಣೆಯಲ್ಲಿ ಇರಬಾರದು ಅನ್ನೋದನ್ನು ತಿಳಿಯೋಣ.
ಮಲಗುವ ಕೋಣೆಯಲ್ಲಿ ದೇವರ ಫೋಟೋ ಹಾಕಬೇಡಿ!
ನಿಮ್ಮ ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ದೇವರ ಚಿತ್ರಗಳನ್ನು ಹಾಕಬೇಡಿ. ಮಲಗುವ ಕೋಣೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಪ್ರತಿನಿಧಿಸುತ್ತದೆ. ಅಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಆದ್ದರಿಂದ ಶುಕ್ರ ಇರುವಲ್ಲಿ ದೇವತೆಗಳ ಉಪಸ್ಥಿತಿ ಅಂದರೆ ಗುರು ಗ್ರಹವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಬೃಹಸ್ಪತಿಯನ್ನು ಶುಕ್ರನಿಗೆ ವಿರುದ್ಧವಾಗಿರುವ ದೇವತೆಗಳ ಗುರು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಇಬ್ಬರನ್ನೂ ಒಟ್ಟಿಗೆ ಇಡಲಾಗುವುದಿಲ್ಲ.
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಇಡಬೇಡಿ!
ಜ್ಯೋತಿಷ್ಯದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ರಾಹು ಮತ್ತು ಶನಿ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಅವುಗಳನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಈ ಅಶುಭ ಗ್ರಹಗಳ ಕಾರಣದಿಂದಾಗಿ ನಿಮ್ಮ ವೈವಾಹಿಕ ಜೀವನದ ಮೇಲೆ ಅಶುಭ ಪರಿಣಾಮ ಬೀರುತ್ತಂತೆ. ಅದಕ್ಕಾಗಿಯೇ ನಿಮ್ಮ ಕೋಣೆಯಲ್ಲಿ ಕನಿಷ್ಠ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಇರಿಸಿ. ಈ ಗೆಜೆಟ್ ಗಳಿಂದಾಗಿ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಯಾವುದೇ ಅಡಚಣೆಯನ್ನು ಉಂಟುಮಾಡದಂತೆ ನೋಡಿಕೊಳ್ಳಿ.
ತಾಜ್ ಮಹಲ್ ಚಿತ್ರ ಹಾಕಬೇಡಿ!
ಮಲಗುವ ಕೋಣೆಯಲ್ಲಿ ಪ್ರೀತಿಯ ಸಂಕೇತವಾಗಿ ತಾಜ್ ಮಹಲ್‌ನ ಶೋಪೀಸ್ ಅಥವಾ ಚಿತ್ರವನ್ನು ಇಟ್ಟರೆ ಪರಸ್ಪರ ಪ್ರೀತಿಯ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇದು ನಿಮ್ಮ ತಪ್ಪು ತಿಳುವಳಿಕೆ. ವಾಸ್ತವವಾಗಿ ತಾಜ್ ಮಹಲ್ ಒಂದು ಸಮಾಧಿ. ಮತ್ತು ನಿಮ್ಮ ಮಲಗುವ ಕೋಣೆಯಲ್ಲಿ ಸಮಾಧಿಯ ಚಿತ್ರವನ್ನು ಹಾಕುವುದು ಸರಿಯಲ್ಲ. ಹೀಗಾಗಿ ಅಪ್ಪಿ-ತಪ್ಪಿಯೂ ಕೂಡ ಮಲಗುವ ಕೋಣೆಯಲ್ಲಿ ತಾಜ್ ಮಹಲ್ ಚಿತ್ರವನ್ನು ಹಾಕದಿರಿ.
ಕೋಣೆಯ ಬಣ್ಣಗಳ ಆಯ್ಕೆ!
ಮಲಗುವ ಕೋಣೆಯ ಗೋಡೆಗಳಿಗೆ ಮಂದ ಅಥವಾ ತೀಕ್ಷ್ಣವಾದ ಬಣ್ಣಗಳನ್ನು ಆಯ್ಕೆ ಮಾಡಬಾರದು. ತಿಳಿ ಹಸಿರು, ತಿಳಿ ನೀಲಿ ಅಥವಾ ನೇರಳೆ ಬಣ್ಣಗಳು ಅತ್ಯುತ್ತಮ ಆಯ್ಕೆಯಾಗಿದೆ. ಸುತ್ತಮುತ್ತಲಿನ ವಾತಾವರಣದಲ್ಲಿ ಆಧ್ಯಾತ್ಮಿಕ ಸಾಮರಸ್ಯವನ್ನು ಸೃಷ್ಟಿಸಲು ಶುದ್ಧ ಬಿಳಿ ಬಣ್ಣವು ಅತ್ಯುತ್ತಮವಾಗಿದೆ.
ಪ್ರಾಣಿಗಳ ಚಿತ್ರ ಹಾಕುವಾಗ ಜಾಗರೂಕರಾಗಿರಿ!
ಮಲಗುವ ಕೋಣೆಯಲ್ಲಿ ಪ್ರಾಣಿಗಳ ಕಾದಾಟ, ಬೇಟೆಯಾಡುವ ಸಿಂಹಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು ಮತ್ತು ಸತ್ತ ಪ್ರಾಣಿಗಳಾದ ಪಾರಿವಾಳ, ಹಾವುಗಳು, ಕಾಗೆ, ಗೂಬೆ ಮತ್ತು ರಣಹದ್ದುಗಳ ಚಿತ್ರಗಳನ್ನು ಮಲಗುವ ಕೋಣೆಯ ಗೋಡೆಗಳ ಮೇಲೆ ಎಂದಿಗೂ ನೇತುಹಾಕಬಾರದು.
ಕನ್ನಡಿ ಯಾವ ದಿಕ್ಕಿನಲ್ಲಿ ಇರಬೇಕು?
ಪ್ರತಿಯೊಬ್ಬರ ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದೇ ಇರುತ್ತದೆ. ಆದರೆ ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿ ಇದ್ದರೆ ಒಳ್ಳೆಯದಲ್ಲ. ಒಂದು ವೇಳೆ ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಅನಿವಾರ್ಯವಾದರೆ ಕನ್ನಡಿಯ ಸ್ಥಾನವು ಹಾಸಿಗೆಯ ಮೇಲೆ ಮಲಗುವಾಗ ನಿಮ್ಮ ಚಿತ್ರವನ್ನು ಪ್ರತಿಬಿಂಬಿಸದಂತಿರಬೇಕು.
ಮಲಗುವ ಕೋಣೆಯಲ್ಲಿ ಈ ಚಿತ್ರಗಳನ್ನು ಇಡದಂತೆ ಜಾಗರೂಕತೆ ವಹಿಸುವುದು ತುಂಬಾನೇ ಒಳ್ಳೆಯದು. ಇಲ್ಲದಿದ್ದರೆ ದಾಂಪತ್ಯದಲ್ಲಿ ನಿಮಗೆ ಅನೇಕ ರೀತಿಯ ತೊಂದರೆಗಳು ಎದುರಾಗಬಹುದು.



Click it and Unblock the Notifications