Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಎಐ ಬಳಸುತ್ತೀರಾ? ಎಚ್ಚರ ಅಪ್ಪಿತಪ್ಪಿಯೂ ಈ ಪ್ರಶ್ನೆಗಳ ಕೇಳಬೇಡಿ..!
ಜಗತ್ತು ಬಹಳ ವೇಗವಾಗಿ ಬೆಳವಣಿಯಾಗುತ್ತಿದೆ. ಅದರ ಜೊತೆಗೆ ತಂತ್ರಜ್ಞಾನಗಳು ಕೂಡ ವೇಗ ಪಡೆದುಕೊಂಡಿದೆ. ನಿಮ್ಮ ಎಲ್ಲಾ ಕೆಲಸಗಳಿಗೂ ಈಗ ತಂತ್ರಜ್ಞಾನಗಳು ಕಾಲಿಟ್ಟಿವೆ. ನೀವು ಯಾವುದೇ ಕೆಲಸವನ್ನು ತಂತ್ರಜ್ಞಾನದ ಸಹಾಯವಿಲ್ಲದೆ ಮಾಡಿ ಮುಗಿಸಲು ಸಾಧ್ಯವಿಲ್ಲ ಎಂಬ ಹಂತಕ್ಕೆ ಬಂದು ತಲುಪಿದ್ದೇವೆ. ಅದರಲ್ಲೂ ಈಗ ಎಐ ತಂತ್ರಜ್ಞಾನ ಇಡೀ ಜಗತ್ತಿನ ನಿದ್ದೆಗೆಡಿಸಿದೆ.
ಪ್ರತಿಯೊಂದು ವಿಚಾರದಲ್ಲೂ ಎಐ ತನ್ನ ಹೆಜ್ಜೆ ಇಟ್ಟಿದೆ. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲೂ ಎಐ ಮುಂದುವರೆದ ತಂತ್ರಜ್ಞಾನ ನೆರವು ನೀಡುತ್ತಿದೆ. ಸಣ್ಣ ಪುಟ್ಟ ಕೆಲಸದಿಂದ ಹಿಡಿದು ವಾಹನ ಚಲಾವಣೆ ವರೆಗೂ ಈಗ ಕೃತಕ ಬುದ್ದಿಮತ್ತೆ ಕೆಲಸ ಮಾಡುತ್ತಿದೆ. ಎಐ ಸಾವಿರಾರು ಕೋಟಿಯ ಉದ್ಯಮವಾಗಿ ಬೆಳೆದು ನಿಂತಿದೆ. ಸಮಾಜದಲ್ಲಿ ಪ್ರತಿಯೊಬ್ಬರು ಈಗ ಒಂದಲ್ಲಾ ಒಂದು ರೀತಿಯಲ್ಲಿ ಎಐ ಬಳಕೆ ಮಾಡುವುದು ನೋಡಬಹುದು.

ಇನ್ನು ನೀವು ಸಹ ಈ ಎಐ ತಂತ್ರಜ್ಞಾನವನ್ನು ಈಗ ಮೊಬೈಲ್‌ನಲ್ಲೇ ಬಳಸುತ್ತೀರಬಹುದು. ನೀವು ಬಹಳ ಸಮಯದಿಂದ ಈ ಎಐ ಬಳಸಿ ಹಲವು ರೀತಿಯ ಕೆಲಸವನ್ನು ಸುಲಭವಾಗಿಸಿರಬಹುದು. ಮತ್ತೆ ಕೆಲವರು ತಮಾಸೆಯಾಗಿ ಅಥವಾ ಮನೊರಂಜನಾ ಕೆಲಸಕ್ಕಾಗಿ ಬಳಸುತ್ತಿರಬಹುದು. ಅಚ್ಚರಿ ವಿಚಾರ ಏನೆಂದರೆ ಎಐ ಎಷ್ಟೇ ಮುಂದುವರೆದರು ಕೆಲವೊಂದು ಪ್ರಶ್ನೆಗಳು, ಸಮಸ್ಯೆಗಳನ್ನು ಬಗೆಹರಿಸಲು ಕಷ್ಟಪಡುತ್ತವೆ.
ಆದ್ರೆ ಕೆಲವೊಮ್ಮೆ ತಂತ್ರಜ್ಞಾನಗಳು ಕೂಡ ಜೀವನದಲ್ಲಿ ಹಾನಿ ಮಾಡುವ ಪ್ರಸಂಗ ಬಂದರೂ ಬರಬಹುದು. ಅದರಲ್ಲೂ ಆನ್‌ಲೈನ್ ಜಗತ್ತು ಇದೇ ನಿಯಮದಲ್ಲಿ ರೂಪುಗೊಂದಿದೆ. ನೀವು ಉತ್ತಮ ವಿಚಾರಗಳ ಪಡೆಯಲು ಬಳಸಿದರು ನಿಮಗೂ ಉತ್ತಮವಾಗಿರಲಿದೆ. ಆದ್ರೆ ಇಂಟರ್‌ನೆಟ್ ಅನ್ನು ಕೆಟ್ಟ ಕೆಲಸಗಳಿಗೆ ಬಳಸಿಕೊಂಡರೆ ನಿಮಗೂ ಸಮಸ್ಯೆ ತಪ್ಪಿದಲ್ಲ. ಇದು ಎಐಗೂ ಅನ್ವಯವಾಗುತ್ತಿದೆ.
ಎಐ ಬಳಿ ನೀವು ಏನೆ ಕೇಳಿದರೂ ಸ್ವಂತವಾಗಿ ಆಲೋಚಿಸಿ ಉತ್ತರ ನೀಡುತ್ತದೆ. ಆದ್ರೆ ಕೆಲವೊಂದು ವಿಚಾರವನ್ನು ನೀವು ಎಐ ಬಳಿಯೂ ಕೂಡ ಕೇಳುವಂತಿಲ್ಲ. ಹಾಗಾದ್ರೆ ನಾವು ಯಾವ ವಿಚಾರವನ್ನು ಎಐ ಬಳಿ ಕೇಳಬಾರದು? ಇದರಿಂದ ಯಾವ ಹಾನಿಯಾಗುತ್ತರೆ ಅನ್ನೋದನ್ನು ತಿಳಿದುಕೊಳ್ಳೋಣ.
ಹ್ಯಾಕ್ ಮಾಡುವುದು ಹೇಗೆ?
ಎಐ ಬಳಿ ನೀವು ಯಾವುದಾದರು ಕಂಪ್ಯೂಟರ್, ತಂತ್ರಾಂಶವನ್ನು ಹ್ಯಾಕ್ ಮಾಡುವುದು ಹೇಗೆ ಎಂಬ ಕುರಿತ ಪ್ರಶ್ನೆ ಕೇಳಬಾರದು. ಎಐ ಕೂಡ ಕಾನೂನು ಮಾರ್ಗಸೂಚಿಗಳ ಪಾಲಿಸಲಿದೆ. ಹೀಗಾಗಿ ಅಲ್ಲಿ ಉತ್ತರ ಸಿಗುವುದಿಲ್ಲ ಹಾಗೆ ನಿಮ್ಮ ಮೇಲೆ ಸರ್ಕಾರ ಕೂಡ ಕಣ್ಣಿಡುವ ಸಾಧ್ಯತೆಗಳಿರಬಹುದು.
ವೈದ್ಯಕೀಯ ಅಥವಾ ಕಾನೂನು ಸಲಹೆ
ಎಐನಲ್ಲಿ ನೀವು ಕಾಯಿಲೆಯ ಲಕ್ಷಣಗಳ ಕುರಿತಾಗಿ ಕೇಳಬಹುದು, ಆದರೆ ಕೆಲವೊಂದು ಕಾಯಿಲೆಗಳಿಗೆ ಯಾವ ಔಷಧಿ ಪಡೆಯಬೇಕು ಎಂಬುದನ್ನು ಕೇಳಿದರೆ ಅದು ಉತ್ತರ ನಿಡುವುದಿಲ್ಲ. ಉದಾಹರಣೆಗೆ ಮನೆಯಲ್ಲಿ ಹೆರಿಗೆ ಮಾಡಿಸುವುದು ಹೇಗೆ ಎಂದು ಕೇಳಿದರೆ ನಿಮಗೆ ಉತ್ತರ ಸಿಗುವುದಿಲ್ಲ. ಇನ್ನು ಕಾನೂನು ಹೋರಾಟ ಸಂಬಂಧವಾಗಿ ನೀವು ವಾದ ಮಂಡಿಸುವುದು ಹೇಗೆ ಎಂದು ಕೇಳಿದರು ಕೂಡ ಉತ್ತರ ಸಿಗುವುದಿಲ್ಲ.
ಅಪರಾಧ ಸಂಬಂಧಿ ಪ್ರಶ್ನೆಗಳು
ಎಐ ಮೂಲಕ ನೀವು ಕೆಲವು ಅಪರಾಧ ಕುರಿತ ಪ್ರಶ್ನೆಗಳ ಕೇಳುವುದು ಅಪರಾಧವಾಗಬಹುದು. ಉದಾಹರಣೆಗೆ ಆತ್ಮಹತ್ಯೆ ಕುರಿತು, ಕೊಲೆ ಮಾಡುವ ಕುರಿತ ಪ್ರಶ್ನೆಗಳ ಕೇಳಿದರೆ ಉತ್ತರ ಸಿಗುವುದಿಲ್ಲ.
ಭವಿಷ್ಯವಾಣಿಗಳ ಹೇಳುವುದಿಲ್ಲ
ಯಾವುದೇ ಎಐ ತಂತ್ರಾಂಶವು ಮುಂದೆ ನಡೆಯಲಿರುವ ಘಟನೆಗಳ ಕುರಿತಾಗಿ ಹೇಳುವುದಿಲ್ಲ. ನಾಳೆ ಏನೆಲ್ಲಾ ನಡೆಯಲಿದೆ ಎಂದರೆ ಸೂಕ್ತ ಉತ್ತರ ಬರುವುದಿಲ್ಲ ಆದರೆ ಈವೆಂಟ್‌ಗಳ ಕುರಿತಾಗಿ ಮಾಹಿತಿ ನೀಡಲಿದೆ.
ನಿಮ್ಮ ವೈಯಕ್ತಿಕ ಮಾಹಿತಿಗಳು
ನಿಮ್ಮ ಕುರಿತಾದ ವೈಯಕ್ತಿಕ ಮಾಹಿತಿಗಳ ಕುರಿತು ಎಐ ಉತ್ತರಿಸುವುದಿಲ್ಲ. ಹಾಗೆ ನಿಮ್ಮ ಫೋಟೋ, ವೈಯಕ್ತಿಕ ಮಾಹಿತಿಗಳನ್ನು ಅದು ಒದಗಿಸುವುದಿಲ್ಲ.



Click it and Unblock the Notifications