Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಿಗ್‌ಬಾಸ್ 11 ಪ್ರೋಮೋ ಔಟ್: ಕಿಚ್ಚನಿಲ್ಲದ ಬಿಗ್‌ಬಾಸ್ ಶೋ ಹೇಗಿರಲಿದೆ?
ಬಿಗ್‌ಬಾಸ್ 11 ಶುರುವಾಗಲಿದೆ, ಈಗಾಗಲೇ ಇದರ ಬಗ್ಗೆ ಪಪ್ರೋಮೋ ಹೊರ ಬಂದಿದದ್ದು, ಆದರೆ ಬಿಗ್‌ಬಾಸ್ ಸೀಸನ್ 11ರಲ್ಲಿ ಕಿಚ್ಚ ಸುದೀಪ್ ನಿರೂಪಕರಾಗಿ ಇರುವುದಿಲ್ಲವೇ? ಏಕೆಂದರೆ ಪ್ರೋಮೋ ನೋಡಿದಾಗ ಅಲ್ಲಿ ಸುದೀಪ್ ಅವರು ಕಾಣಿಸುತ್ತಿಲ್ಲ, ಕಿಚ್ಚ ಸುದೀಪ್ ಅವರು ಇಲ್ಲದ ಬಿಗ್‌ಬಾಸ್ 11 ಹೇಗಿರಬಹುದು ಎಂಬ ಕುತೂಹಲ ಬಿಗ್‌ಬಾಸ್ ವೀಕ್ಷಕರಲ್ಲಿ ಮನೆ ಮಾಡಿದೆ.

ಬಿಗ್‌ಬಾಸ್ ಜರ್ನಿಯಲ್ಲಿ ನಾನು ಇರಲ್ಲ ಎಂಬುವುದನ್ನು ಸೂಕ್ಷ್ಮವಾಗಿ ತಿಳಿಸಿದ ಕಿಚ್ಚ ಸುದೀಪ್
ಇತ್ತೀಚೆಗೆ ಮಾಧ್ಯಮದವರ ಜೊತೆ ಮಾತನಾಡಿದಾಗ ತಮ್ಮ ಬಿಗ್‌ಬಾಸ್‌ನ 10 ವರ್ಷದ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ನಿರೂಪಣೆಯ ಹೊಣೆ ಹೊತ್ತ ಮೇಲೆ ಅ ಕೆಲಸ ಅಷ್ಟೊಂದು ಸುಲಭವಾಗಿರಲಿಲ್ಲವೆಂದೂ , ಬಿಗ್‌ಬಾಸ್ ಕಾರಣದಿಂದ ಕುಟುಂಬದವರಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ, ತಂದೆ-ತಾಯಿ ಜೊತೆಎ ಸಮಯ ಕಳೆಯಲು ಸಾಧ್ಯವಾಗುತ್ತಿರಲ್ಲ, ಗಂಟೆಗಟ್ಟಲೆ ನಿಂತೂಕೊಂಡೇ ಇರಬೇಕಾದ ಶ್ರಮ, ಪ್ರತಿಯೊಂದು ಎಪಿಸೋಡ್ ನೋಡಿ ವೀಕೆಂಡ್‌ಗೆ ತಯಾರಾಗುತ್ತಿದ್ದ ರೀತಿ ಈ ಬಗ್ಗೆ ಹೇಳುತ್ತಾ ಬಿಗ್‌ಬಾಸ್‌ಗೆ ಹೊಸ ಹೋಸ್ಟ್ ಸಿಗಲಿ ಎಂದು ಹಾರೈಸುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಸೀಸನ್‌ನಲ್ಲಿ ಕಿಚ್ಚ ಸುದೀಪ್ ಇರಲ್ಲ ಎಂದು ಈ ಮಾತುಗಳೇ ಖಚಿತ ಪಡಿಸುತ್ತೆ .
ಕಿಚ್ಚನಿಲ್ಲದ ಬಿಗ್‌ಬಾಸ್ ಊಹಿಸುವುದೇ ಕಷ್ಟ ಅಂತಿದ್ದಾರೆ ವೀಕ್ಷಕರು
ಕನ್ನಡದಲ್ಲಿ ಬಿಗ್‌ಬಾಸ್ ಅಷ್ಟೊಂದು ಜನಪ್ರಿಯ ಏಕೆ ಗಳಿಸಿಕೊಂಡಿದೆ ಎಂದರೆ ಅದಕ್ಕೆ ಆ ಕಾರ್ಯಕ್ರಮಕ್ಕೆ ಬರುವ ಸೆಲೆಬ್ರಿಟಿ ಸ್ಪರ್ಧಿಗಳಲ್ಲ, ಬದಲಿಗೆ ಒನ್ ಅಂಡ್ ಒನ್ಲಿ ಸುದೀಪ್, ಸುದೀಪ್ ಅವರ ವೀಕೆಂಡ್ ಕಾರ್ಯಕ್ರಮ ನೋಡಲೆಂದೇ ವೀಕ್ಷಕರು ತುದಿಗಾಲಿನಲ್ಲಿ ಕಾಯುತ್ತಿದ್ದರು. ವೀಕೆಂಡ್‌ನಲ್ಲಿ ಕಿಚ್ಚ ಬಂದು ತಪ್ಪು ಮಾಡಿದ, ಅತಿರೇಕದ ವರ್ತನೆ ತೋರಿದ ಸೆಲೆಬ್ರಿಟಿಗಳಿಗೆ ಕ್ಲಾಸ್ ತೆಗೆದುಕೊಳ್ಳುವ ರೀತಿ, ಸ್ಪರ್ಧಿಗಳ ಆಟ ನೋಡಿ ನೋಡುವ ಕಿಚ್ಚನ ಚಪ್ಪಾಳೆ ಹೀಗೆ ಎಲ್ಲವೂ ವಿಶೇಷವಾಗಿತ್ತು. ಕಿಚ್ಚ ಸುದೀಪ್ ಮಾತನಾಡುತ್ತಿದ್ದ ರೀತಿಯೇ ತುಂಬಾನೇ ಇಷ್ಟವಾಗುತ್ತೆ, ಅಲ್ಲದೆ ಮಾತುಗಳು ತುಂಬಾ ತೂಕದಿಂದ ಕೂಡಿರುತ್ತದೆ ಹೀಗಾಗಿಯೇ ಕಿಚ್ಚನ ಮಾತನ್ನು ಪ್ರತಿಯೊಬ್ಬರು ಮೆಚ್ಚಿಕೊಳ್ಳುತ್ತಾರೆ.
ಕೂಲ್ ಅಂಡ್ ಕ್ಲಾಸಿ ಲುಕ್‌ನಲ್ಇಯೂ ಗಮನ ಸೆಳೆಯುತ್ತಿದ್ದರು
ಪ್ರತಿ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರ ಡ್ರೆಸ್ಸಿಂಗ್ ತುಂಬಾನೇ ಗಮನ ಸೆಳೆಯುತ್ತಿತ್ತು, ಒಂದೊಂದು ಲುಕ್ ಕೂಡ ಅತ್ಯಾರ್ಷಕವಾಗಿರುತ್ತಿತ್ತು, ಅವರ ಪರ್ಸಾನಾಲಿಟಿಗೆ ಆ ಸ್ಟೈಲ್‌ಗಳು ಕೂಡ ತುಂಬಾನೇ ಸೂಟ್ ಅಗುತ್ತಿತ್ತು, ಹೀಗಾಗಿ ಪ್ರತಿ ವೀಕೆಂಡ್‌ನಲ್ಲಿ ಫ್ಯಾಷನ್ ಪ್ರಿಯರ ಗಮನವನ್ನೂ ಸೆಳೆಯುತ್ತಿದ್ದರೂ ಕಿಚ್ಚ.
ಬಿಗ್‌ಬಾಸ್ ನಿರೂಪಕರಲ್ಲಿಯೇ ಕಿಚ್ಚನ ನಿರೂಪಣೆ ತುಂಬಾನೇ ಸ್ಪೆಷಲ್ ಆಗಿರುತ್ತೆ ಎಂದರೆ ತಪ್ಪಾಗಲಾರದು
ಹಿಂದಿ, ಮಲಯಾಳಂ, ತಮಿಳು, ತೆಲುಗು ಈ ಭಾಷೆಗಳಲ್ಲಿ ಬಿಗ್‌ಬಾಸ್ ನೋಡುತ್ತಿದ್ದರೆ ಬಕನ್ನಡ ಬಿಗ್‌ಬಾಸ್‌ನ ನಿರೂಪಣೆ ಭಿನ್ನ ಹಾಗೂ ವಿಶೇಷ ಅನಿಸುವುದು, ಅದಕ್ಕೆ ಕಾರಣ ಕಿಚ್ಚ ಸುದೀಪ್‌ರ ಮಾತಿನ ವೈಖರಿ.
ಕಿಚ್ಚನಿಗೆ ರೀಪ್ಲೇಸ್ ಯಾರು?
ಸುದೀಪ್ ನಿರೂಪಣೆ ಮೆಚ್ಚಿಕೊಂಡಂತೆ ಬೇರೆ ಸೆಲೆಬ್ರಿಟಿಗಳು ಬಂದರೆ ವೀಕ್ಷಕರು ಇಷ್ಟಪಡುತ್ತಾರೆಯೇ? ಈ ಪ್ರಶ್ನೆ ಹಲವರಲ್ಲಿ ಇದೆ, ಬಿಗ್‌ಬಾಸ್ ಹೋಸ್ಟ್ ಆಗಿ ಸುದೀಪ್ ಅವರಿಗೆ ಪರ್ಯಾಯವಾಗಿ ಬೇರೆಯವರನ್ನು ಊಹಿಸುವುದು ಕೂಡ ವೀಕ್ಷಕರು ಇಷ್ಟಪಡುತ್ತಿರಲಿಲ್ಲ, ಇದೀಗ ಸುದೀಪ್ ಅವರೇ ಬಿಗ್‌ಬಾಸ್ ಮಾಡುತ್ತಿಲ್ಲ ಎಂದಿರುವಾಗ ಅವರ ಸ್ಥಾನ ತುಂಬುವವರು ಯಾರು ಎಂಬುವುದೇ ಬಿಗ್‌ಬಾಸ್ ವೀಕ್ಷಕರ ಸದ್ಯದ ಕುತೂಹಲ.... ಬದಲಾವಣೆ ಜಗದ ನಿಯಮ, ಇದನ್ನು ಒಪ್ಪಿಕೊಳ್ಳಲೇಬೇಕು, ಸುದೀಪ್ ಇಲ್ಲದ ಬಿಗ್‌ಬಾಸ್ ಶೋ ಬಗ್ಗೆ ನಿಮ್ಮ ಅಭಿಪ್ರಾಯವೇನು?



Click it and Unblock the Notifications
