Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಾಮೂಹಿಕವಾಗಿ ಊಟಕ್ಕೆ ತೆರಳಿದ ಬ್ಯಾಂಕ್ ಸಿಬ್ಬಂದಿ: ಫೋಟೋ ಡಿಲೀಟ್ ಮಾಡುವಂತೆ ಶಾಖೆಯ ಪ್ರತ್ಯುತ್ತರ
ಬ್ಯಾಂಕ್‌ಗಳು ಹೆಚ್ಚಾಗಿ ಗ್ರಾಹಕರಿಂದ ಟೀಕೆಗೆ ಒಳಗಾಗುತ್ತವೆ. ಏಕೆಂದರೆ ಅತ್ಯಧಿಕ ರಜೆಯ ಕಾರಣದಿಂದಾಗಿ ಹಾಗೂ ಗ್ರಾಹಕರಿಗೆ ಸರಿಯಾಗಿ ಸೇವೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಟೀಕೆಗೆ ಒಳಗಾಗುತ್ತಲೇ ಇರುತ್ತವೆ. ಅದರಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತದೆ.
ಈಗ ಒಂದು ವಿಚಿತ್ರ ಘಟನೆಯ ಮೂಲಕ ಸುದ್ದಿಯಾಗಿದೆ. ಎಸ್‌ಬಿಐ ಬ್ಯಾಂಕ್ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಹಲವು ಬಾರಿ ಅದರ ಗ್ರಾಹಕ ಸೇವೆಯ ಕಾರಣದಿಂದಾಗಿ ಸುದ್ದಿಯಾಗುತ್ತದೆ. ಅದರಲ್ಲೂ ಲಂಚ್ ಬ್ರೇಕ್ ಘಟನೆಗೆ ಸಂಬಂಧಿಸಿದಂತೆ ಎಸ್‌ಬಿಐ ಯಾವಾಗಲು ಟ್ರೋಲ್‌ಗೆ ಒಳಗಾಗುತ್ತೆ.

ಈಗಲೂ ಸಹ ಇಂತಹದ್ದೆ ಘಟನೆಯೊಂದು ನಡೆದಿದೆ. ಗ್ರಾಹಕರೊಬ್ಬರು ಎಸ್‌ಬಿಐ ಬ್ಯಾಂಕ್‌ನ ಫೋಟೋವನ್ನು ಹಂಚಿಕೊಂಡಿದ್ದು, ಬ್ಯಾಂಕ್‌ನಲ್ಲಿ ಒಬ್ಬರೇ ಒಬ್ಬರು ಸಿಬ್ಬಂದಿ ಇಲ್ಲದಿರುವುದು ಫೋಟೋದಲ್ಲಿ ಕಾಣಬಹುದು. ಈ ಪೋಸ್ಟ್ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರ ಗಮನ ಸೆಳೆದಿರುವುದಲ್ಲದೆ ಬ್ಯಾಂಕ್ ಸಹ ಈ ಫೋಟೋಗೆ ಪ್ರತಿಕ್ರಿಯಿಸಿದೆ.
ರಾಜಸ್ಥಾನದ ಪಾಲಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯೊಂದು ಗಮನ ಸೆಳೆದಿದ್ದು, ಇಡೀ ಸಿಬ್ಬಂದಿ ಏಕಕಾಲದಲ್ಲಿ ಮಧ್ಯಾಹ್ನ 3 ಗಂಟೆಗೆ ಊಟಕ್ಕೆ ತೆರಳಿದ್ದಾರೆ ಎಂದು ಗ್ರಾಹಕರೊಬ್ಬರು ಫೋಟೋ ತೆಗೆದು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದರು.
ಈ ಫೋಟೋ ನೋಡಿದ ಗ್ರಾಹಕರು ಹತಾಶೆಯನ್ನು ವ್ಯಕ್ತಪಡಿಸಿದ್ದರು, ಖಾಲಿ ಶಾಖೆಯ ಫೋಟೋವನ್ನು ಹಂಚಿಕೊಂಡ ಬಳಿಕ ಟೀಕೆ ಕೇಳಿಬಂದಿತ್ತು. ಎಸ್‌ಬಿಐ ಗ್ರಾಹಕರ ಸೇವೆಗಿಂತ ತಮ್ಮ ಸಿಬ್ಬಂದಿಯ ಸೇವೆಯೇ ಅಗತ್ಯ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದರು. ಈ ಫೋಟೋ ವೈರಲ್ ಆದ ಬಳಿಕ ಬ್ಯಾಂಕ್ ಪ್ರತಿಕ್ರಿಯಿಸಿದೆ.
'ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಆದಾಗ್ಯೂ, ಭದ್ರತಾ ಕಾರಣಗಳಿಂದ ಶಾಖೆಯ ಆವರಣದೊಳಗೆ ಛಾಯಾಗ್ರಹಣ/ವೀಡಿಯೋಗ್ರಫಿಯನ್ನು ನಿಷೇಧಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಇವುಗಳನ್ನು ದುರುಪಯೋಗಪಡಿಸಿಕೊಂಡರೆ ನೀವು ಜವಾಬ್ದಾರರಾಗಬಹುದು. ಆದ್ದರಿಂದ, ಸಾಮಾಜಿಕ ಮಾಧ್ಯಮಗಳಿಂದ ಈ ಫೋಟೋಗಳನ್ನು ತಕ್ಷಣ ತೆಗೆದು ಹಾಕುವಂತೆ ನಾವು ಶಿಫಾರಸು ಮಾಡುತ್ತೇವೆ ಇವುಗಳನ್ನು ತೆಗೆದುಹಾಕುವಂತೆ ನಾವು ಶಿಫಾರಸು ಮಾಡುತ್ತೇವೆ' ಎಂದು ಪ್ರತಿಕ್ರಿಯಿಸಿದೆ.
ಇದಕ್ಕೂ ಮೊದಲು ಫೋಟೋ ಪೋಸ್ಟ್ ಮಾಡಿದ್ದ ಗ್ರಾಹಕ 'ಇದು ಮಧ್ಯಾಹ್ನ 3 ಗಂಟೆಯಾಗಿತ್ತು ಮತ್ತು ವಿಪರ್ಯಾಸ ಇಡೀ ಸಿಬ್ಬಂದಿ ಊಟದಲ್ಲಿದ್ದರು. ಒಂದು ಕಡೆ ಎಸ್‌ಬಿಐ ನಮಗೆ ಯಾವುದೇ ಊಟದ ವಿರಾಮವಿಲ್ಲ ಎಂದು ಹೇಳುತ್ತದೆ ಮತ್ತು ಇಡೀ ಸಿಬ್ಬಂದಿ ಸಾಮೂಹಿಕವಾಗಿ ಊಟ ಮಾಡುತ್ತಿದ್ದರು. ಆತ್ಮೀಯ ಎಸ್‌ಬಿಐ, ಜಗತ್ತು ಕೂಡ ಸಂಪೂರ್ಣವಾಗಿ ಬದಲಾಗಬಹುದು ಆದರೆ ನಿಮ್ಮ ಸೇವೆಗಳು ಬದಲಾಗುವುದಿಲ್ಲ' ಎಂದು ಖಾರವಾಗಿ ಪೋಸ್ಟ್ ಮಾಡಿದ್ದರು.
'ನಮ್ಮ ಶಾಖೆಗಳಲ್ಲಿ ಸಿಬ್ಬಂದಿ ಊಟದ ಸಮಯಕ್ಕೆ ಯಾವುದೇ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಬದಲಿಗೆ ನಮ್ಮ ಗ್ರಾಹಕರಿಗೆ ಮುಂದುವರಿದ ಸೇವೆಗಳನ್ನು ವಿಸ್ತರಿಸುವುದನ್ನು ಖಚಿತಪಡಿಸಿಕೊಳ್ಳಲು ಶಾಖೆಗಳಲ್ಲಿ ಊಟದ ಸಮಯವನ್ನು ಸ್ಥಗಿತಗೊಳಿಸಲಾಗಿದೆ' ಎಂದು ಎಸ್‌ಬಿಐ ತಿಳಿಸಿದೆ.
ಈ ಪೋಸ್ಟ್‌ಗೆ ಬಳಕೆದಾರರು ಸಹ ಪ್ರತಿಕ್ರಿಯಿಸಿದರು. ಬ್ಯಾಂಕ್ ಸಿಬ್ಬಂದಿ ನಿಖರ ಊಟ ವಿರಾಮ ನೀಡಿ. ಅವರು ಆ ವಿರಾಮದಲ್ಲಿ ಮಾತ್ರ ಊಟ ಮಾಡಬೇಕು, ಗ್ರಾಹಕರು ಸಹ ಆ ಸಮಯದಲ್ಲಿ ಬ್ಯಾಂಕ್ ವ್ಯವಹಾರಕ್ಕೆ ಬರುವುದಿಲ್ಲ. ನೀವು ಊಟದ ವಿರಾಮ ಇಲ್ಲವೆಂದರೆ ಅವರು ಯಾವಾಗ ಬೇಕಾದರು ಊಟಕ್ಕೆ ತೆರಳುತ್ತಾರೆ ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.
ಊಟದ ಸಮಯ ಇಲ್ಲದಿದ್ದರೂ ಬ್ಯಾಂಕ್ ಸಿಬ್ಬಂದಿ ಒಟ್ಟಿಗೆ ಊಟಕ್ಕೆ ಹೋಗುತ್ತಾರೆ, ಇನ್ನು ಊಟದ ವಿರಾಮ ನಿಗದಿ ಮಾಡಿದರೆ ಅವರು ಮತ್ತಷ್ಟು ಸಮಯ ಊಟದ ವಿರಾಮದಲ್ಲಿಯೇ ಕಳೆಯುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.



Click it and Unblock the Notifications











