Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ಮಾರ್ಚ್ ತಿಂಗಳಿನಲ್ಲಿ 14 ದಿನ ಬ್ಯಾಂಕ್‌ಗಳಿಗೆ ರಜೆ, ಯಾವೆಲ್ಲಾ ದಿನ ರಜೆಯಿದೆ?
ಮಾರ್ಚ್ ತಿಂಗಳಿನಲ್ಲಿ ನೀವು ಬ್ಯಾಂಕ್‌ಗೆ ಹೋಗಬೇಕೆಂದಿದ್ದರೆ ಈ ದಿನ ಬ್ಯಾಂಕ್ ಇದೆಯೇ ಎಂದು ತಿಳಿದುಕೊಂಡು ಹೋಗುವುದು ಒಳ್ಳೆಯದು, ಏಕೆಂದರೆ ಈ ದಿನ ಬರೋಬರಿ 14 ದಿನಗಳು ಬ್ಯಾಂಕ್ ರಜೆಯಲ್ಲಿ ಇರುತ್ತದೆ.
ವೀಕೆಂಡ್‌ಗಳು, ಮಹಾಶಿವರಾತ್ರಿ, ಹೋಳಿ ಹೀಗೆ ಹಲವು ಹಬ್ಬಗಳು ಇರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಈ ತಿಂಗಳು ರಜೆಯ ಖುಷಿ, ಬ್ಯಾಂಕ್‌ನಲ್ಲಿ ಕೆಲಸ ಇರುವವರಿಗೆ ಅಯ್ಯೋ ಬ್ಯಾಂಕ್ ಕ್ಲೋಸ್ ಇದೆಯೆಲ್ಲಾ ಎಂಬ ತಲೆನೋವು. ಬನ್ನಿ ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇರಲಿದೆ ಎಂದು ನೋಡೋಣ ಬನ್ನಿ:

ಮಾರ್ಚ್ 1: ಮಿಝೋರಾಂನ ಬ್ಯಾಂಕ್ ಕೆಲಸ ಮಾಡುವುದಿಲ್ಲ
ಮಾರ್ಚ್ 3: ಭಾನುವಾರ
ಮಾರ್ಚ್ 8: ಶುಕ್ರವಾರ, ಮಹಾಶಿವರಾತ್ರಿ
ಮಾರ್ಚ್ 9: 2ನೇ ಶನಿವಾರ
ಮಾರ್ಚ್ 10: ಭಾನುವಾರ
ಈ ವಾರ ಲಾಂಗ್ ವೀಕೆಂಡ್ ಇದೆ.
ಮಾರ್ಚ್ 17: ಭಾನುವಾರ
ಮಾರ್ಚ್ 22: ಬಿಹಾರ ದಿವಸ
ಮಾರ್ಚ್ 23: 2ನೇ ಶನಿವಾರ
ಮಾರ್ಚ್ 24: ಭಾನುವಾರ
ಮಾರ್ಚ್ 25: ಹೋಳಿ
ಮಾರ್ಚ್ 26: ಉತ್ತರ ಭಾರತದ ಕೆಲವು ಕಡೆ ಬ್ಯಾಂಕ್‌ಗಳಲ್ಲಿ ರಜೆ ಇರುತ್ತದೆ
ಮಾರ್ಚ್ 27: ಬಿಹಾರದಲ್ಲಿ ಬ್ಯಾಂಕ್ ರಜೆ
ಮಾರ್ಚ್ 29: ಗುಡ್ ಫ್ರೈಡೇ
ಮಾರ್ಚ್ 31: ಭಾನುವಾರ
ಹೀಗೆ ಮಾರ್ಚ್ ತಿಂಗಳಿನಲ್ಲಿ ಹಲವು ರಜೆ ಇರುವುದರಿಂದ ನೀವು ನಿಮ್ಮ ವಹಿವಾಟ ಅದಕ್ಕೆ ತಕ್ಕಂತೆ ಮೊದಲೇ ಪ್ಲ್ಯಾನ್ ಮಾಡುವುದು ಒಳ್ಳೆಯದು.
ಮಹಾ ಶಿವರಾತ್ರಿಯಂದು ಪೂಜೆಯನ್ನು ಈ ಶುಭ ಯೋಗದಲ್ಲಿ ಮಾಡಿ
300 ವರ್ಷಗಳ ಬಳಿ ಮಹಾಶಿವರಾತ್ರಿಯಂದು ಮಹಾ ಯೋಗ ಏರ್ಪಟ್ಟಿದೆ ಈ ಯೋಗ ಎಲ್ಲಾ ಸಮಯದಲ್ಲಿ ಉಂಟಾಗುವುದಿಲ್ಲ, ಈ ರೀತಿಯ ಯೋಗ ಉಂಟಾಗಿ 300 ವರ್ಷಗಳು ಕಳೆದಿದೆ, ಇದೀಗ ಈ ಶಿವರಾತ್ರಿಗೆ ಆ ಯೋಗ ಕೂಡಿ ಬಂದಿದೆ. ಈ ಅವಧಿಯಲ್ಲಿ ಶಿವ ಮಂತ್ರಗಳನ್ನು ಪಠಣೆ ಮಾಡುವುದರಿಂದ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು. ಶಿವಯೋಗ ಮಾರ್ಚ್ 7 ಮಧ್ಯರಾತ್ರಿ 12:46ರಿಂದ ಶಿವಯೋಗ ಉಂಟಾಗಲಿದೆ. ಸರ್ವರ್ಥ ಸಿದ್ಧಿ ಯೋಗ ಬೆಳಗ್ಗೆ 06:38ರಿಂದ 10:41ರವರೆಗೆ ಇರಲಿದೆ. ಈ ಅವಧಿಯಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಹಾಗೂ ಈ ಯೋಗದಲ್ಲಿ ನೀವು ಹೊಸ ಕಾರ್ಯಕ್ಕೆ ಕೈ ಹಾಕಿದರೆ ಯಶಸ್ಸು ಸಿಗುವುದು ಎಂದು ಹೇಳಲಾಗುವುದು.
ಹೋಳಿ: ಮಾರ್ಚ್ 25ರಂದು ಹೋಳಿ ಆಚರಿಸಲಾಗುವುದು. ಈ ಬಣ್ಣದ ಹಬ್ಬದಲ್ಲಿ ಪರಸ್ಪರ ಸ್ವೇಷ, ಅಸೂಯೆ ಎಲ್ಲಾ ಮರೆತು ಸ್ನೇಹಿತರು, ಸಂಬಂಧಿಕರ ಜೊತೆಗೆ ಬಣ್ಣದ ಹಬ್ಬ ಆಚರಿಸಲಾಗುವುದು. ಈ ಹಬ್ಬವನ್ನು ಆಚರಿಸಿ ಬದುಕು ಕೂಡ ಈ ರೀತಿ ಕಲರ್‌ಫುಲ್ ಆಗಿರಲಿ ಎಂದು ಶುಭ ಆರೈಕೆ ಮಾಡಲಾಗುವುದು. ಈ ಹಬ್ಬವನ್ನು ಉತ್ತರ ಭಾರತ, ದಕ್ಷಿಣ ಭಾರತ ಎಲ್ಲಾ ಕಡೆ ತುಂಬಾನೇ ಸಂಭ್ರಮದಿಂದ ಆಚರಿಸಲಾಗುವುದು.
ಗುಡ್‌ಫ್ರೈಡೇ
ಗುಡ್ ಫ್ರೈಡೆಯಂದು ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾಗಿದೆ. ಇದು ಈಸ್ಟರ್ ಭಾನುವಾರದ ಮೊದಲು ಬರುತ್ತದೆ. ಈ ವರ್ಷ 2024ರಲ್ಲಿ ಮಾರ್ಚ್ 29ರಂದು ಗುಡ್ ಫ್ರೈಡೇ ಆಚರಿಸಲಾಗುತ್ತಿದೆ. ಮಾನವ ಕುಲದ ಏಳಿಗೆಗಾಗಿ ಕಿಸ್ತನು ನೀಡಿರುವ ಬಲಿದಾನ ನೆನೆಯಲು ಗುಡ್ ಫ್ರೈಡೇ ಆಚರಿಸಲಾಗುವುದು. ಈ ದಿನ ಕ್ರೈಸ್ತ ಧರ್ಮದವರು ಉಪವಾಸ ಮಾಡಿ, ಕ್ರಿಸ್ತನಿಗಾಗಿ ಪ್ರಾರ್ಥಿಸುವರು. ಶಿಲುಬೇಗೆರಿಸಿದ ಬಳಿಕ ಕ್ರಿಸ್ತನ ಉದಯವನ್ನು ಆಚರಿಸುವುದಕ್ಕೆ ಈ ದಿನವು ಆರಂಭವಾಗಿದೆ. ಕ್ರೈಸ್ತರು ಗುಡ್ ಫ್ರೈಡೆಯನ್ನು ತುಂಬಾ ವಿಶೇಷ ದಿನವೆಂದು ಪರಿಗಣಿಸುವರು, ಈ ದಿನ ಉಪವಾಸ ಮಾಡಿ ಯೇಸುವಿನ ಪ್ರಾರ್ಥನೆ ಮಾಡುತ್ತಾರೆ.



Click it and Unblock the Notifications
